ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ದೇವರ ಸ್ಥಾನವನ್ನು ನೀಡಲಾಗಿದೆ. ಸಾಮಾನ್ಯವಾಗಿ ಹಿಂದೂ ಪ್ರತಿಯೊಬ್ಬರ ಮನೆಯಂಗಳದಲ್ಲಿ ತುಳಸಿ ಗಿಡವನ್ನು ಕಾಣಬಹುದು, ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ತುಳಸಿ ಗಿಡವನ್ನು ಬೆಳೆಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳು ಇವೆ. ಹಾಗಾದರೆ ತುಳಸಿ ಗಿಡದ ವಿಧಗಳು ಹಾಗೂ ತುಳಸಿ ಸೇವನೆಯಿಂದ ಉಂಟಾಗುವ ಪ್ರಯೋಜನದ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಪ್ರಾಚೀನ ಕಾಲದಿಂದಲೂ ಭಾರತೀಯರು ತುಳಸಿಗಿಡಕ್ಕೆ ಮಹತ್ವ ನೀಡುತ್ತಾ, ಪೂಜಿಸುತ್ತಾ ಬಂದಿದ್ದಾರೆ. ಮಹಾಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎಂದು ಪೂಜಿಸುತ್ತಾರೆ. ತುಳಸಿಯಲ್ಲಿ ಎರಡು ವಿಧ ಇದೆ. ಒಂದು ರಾಮ ತುಳಸಿ ಇನ್ನೊಂದು ಕೃಷ್ಣ ತುಳಸಿ ಎಂದು. ರಾಮ ತುಳಸಿ ಸ್ವಲ್ಪ ತಿಳಿಹಸಿರು ಬಣ್ಣದಲ್ಲಿರುತ್ತದೆ ಮತ್ತು ಕೃಷ್ಣ ತುಳಸಿ ಡಾರ್ಕ್ ಗ್ರೀನ್ ಬಣ್ಣದಲ್ಲಿ ಇರುತ್ತದೆ. ಕೃಷ್ಣ ತುಳಸಿಯ ಸುವಾಸನೆ ಹೆಚ್ಚು ಸುವಾಸನೆಯನ್ನು ಹೊಂದಿದೆ ಎಲ್ಲರಿಗೂ ಇಷ್ಟವಾಗುತ್ತದೆ ಹಾಗೂ ಕೃಷ್ಣ ತುಳಸಿಯ ಪರಿಮಳ ಇಡಿ ಮನೆಯ ತುಂಬಾ ಇರುತ್ತದೆ. ಇನ್ನು ರಾಮ ತುಳಸಿಯ ಪರಿಮಳ ಸ್ವಲ್ಪ ಇರುತ್ತದೆ, ಹತ್ತಿರ ಇದ್ದರೆ ಮಾತ್ರ ತುಳಸಿ ಪರಿಮಳ ನಿಮಗೆ ತಿಳಿಯುತ್ತದೆ.
ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಬಹಳ ಒಳ್ಳೆಯದು. ತುಳಸಿ ಗಿಡದಿಂದ ಹಲವಾರು ಪ್ರಯೋಜನಗಳು ನಮಗೆ ಸಿಗುತ್ತದೆ. ಆಯುರ್ವೇದದಲ್ಲಿ ತುಳಸಿ ಸಸ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ, ಅನೇಕ ಔಷಧಿಗಳಲ್ಲಿ ತುಳಸಿಯನ್ನು ಬಳಸುತ್ತಾರೆ. ಹಲವು ಖಾಯಿಲೆಗೆ ತುಳಸಿಯನ್ನು ಬಳಸುತ್ತಾರೆ. ಈ ಎರಡು ತುಳಸಿಯೂ ಹೆಚ್ಚು ಔಷಧೀಯ ಗುಣವನ್ನು ಹೊಂದಿದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಜಾಗ ಇದ್ದರೆ ಎರಡು ತುಳಸಿ ಗಿಡವನ್ನು ಬೆಳೆಸಿ. ಒಂದು ವೇಳೆ ಮನೆಯಲ್ಲಿ ಜಾಗ ಇಲ್ಲವಾದರೆ ಕೃಷ್ಣ ತುಳಸಿಯನ್ನು ಮನೆಯಲ್ಲಿ ಬೆಳೆಸಿದರೆ ಬಹಳ ಒಳ್ಳೆಯದು.
ತುಳಸಿಯಲ್ಲಿ ಮಧುಮೇಹ ನಿವಾರಣೆ ಮಾಡುವ ಗುಣವಿದೆ ಎಂಬುದು ಸಾಬೀತಾಗಿದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ತುಳಸಿ ಹೊಂದಿದೆ. ನಿಯಮಿತವಾಗಿ ತುಳಸಿಯಿಂದ ಮಾಡಿದ ಟೀಯನ್ನು ಕುಡಿಯಬೇಕು. ಆರಂಭಿಕ ಹಂತದ ಕ್ಯಾನ್ಸರ್ ಹೆಚ್ಚಿನ ಪರಿಣಾಮ ಬೀರದಂತೆ ತಡೆಯುತ್ತದೆ. ನಿಯಮಿತವಾಗಿ ತುಳಸಿ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ತುಳಸಿ ಸೇವನೆಯಿಂದ ಚರ್ಮದ ಮೇಲೆ ಉಂಟಾಗುವ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಅತಿಯಾದ ಒತ್ತಡಕ್ಕೆ ಒಳಗಾದವರು ನಿಯಮಿತವಾಗಿ ತುಳಸಿ ಚಹಾವನ್ನು ಕುಡಿಯಬೇಕು. ಜ್ವರ, ಕೆಮ್ಮು, ನೆಗಡಿಯನ್ನು ತುಳಸಿ ಸೇವನೆಯಿಂದ ಸುಧಾರಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮನೆಯಲ್ಲಿ ಜಾಗವಿದ್ದರೆ ತುಳಸಿ ಗಿಡವನ್ನು ತಪ್ಪದೆ ಬೆಳೆಸಿ.