ನಟ ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ ವಿಭಿನ್ನ ನಟನಾ ಶೈಲಿಯಿಂದ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ ರಶ್ಮಿಕಾ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ನಂತರ ಮನಸ್ತಾಪದ ಕಾರಣದಿಂದ ಎಂಗೇಜ್ಮೆಂಟ್ ಮುರಿದುಕೊಂಡರು. ನಂತರ ಅವರು ಮದುವೆಯ ಬಗ್ಗೆ ಆಗಾಗ ಸುದ್ದಿಯಲ್ಲಿರುತ್ತಿದ್ದಾರೆ. ಇದೀಗ ರಮ್ಯಾ ಅವರಿಗೆ ಅಭಿಮಾನಿಯೊಬ್ಬರು ನೀವು ರಕ್ಷಿತ್ ಶೆಟ್ಟಿ ಅವರನ್ನು ಏಕೆ ಮದುವೆ ಆಗಬಾರದು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ರಮ್ಯಾ ಅವರು ಏನು ಉತ್ತರ ನೀಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸ್ಯಾಂಡಲ್ ವುಡ್ ನ ಬ್ಯೂಟಿ ಕ್ವೀನ್ ರಮ್ಯಾ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಮೃತಧಾರೆ, ತನನಂತನನಂ, ದತ್ತ, ಆಕಾಶ, ಬೊಂಬಾಟ್, ಅಮೃತಧಾರೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟರಾದ ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಸುದೀಪ್ ಮೊದಲಾದವರೊಂದಿಗೆ ರಮ್ಯಾ ಅವರು ನಟಿಸಿದ್ದಾರೆ. ರಮ್ಯಾ ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿಸಿ 18 ವರ್ಷಗಳು ಕಳೆದರೂ ಇಂದಿಗೂ 18ರ ಹರೆಯದಂತೆ ಕಾಣುವ ಸುಂದರಿ ಅವರು. ನಂತರ ಅವರು ರಾಜಕೀಯಕ್ಕೆ ಪ್ರವೇಶಿಸಿ ಸಿನಿಮಾಗಳಲ್ಲಿ ನಟಿಸಲಿಲ್ಲ. ಇದೀಗ ಅವರು ಮಾಲ್ಡೀವ್ಸ್ ನಲ್ಲಿ ತಮ್ಮ ಪ್ರೀತಿಯ ಪೆಟ್ ಗಳೊಂದಿಗೆ ಕಾಲಕಳೆಯುತ್ತಿದ್ದಾರೆ. ನಟ ರಕ್ಷಿತ್ ಶೆಟ್ಟಿ ರಶ್ಮಿಕಾ ಅವರೊಂದಿಗೆ ಎಂಗೇಜ್ಮೆಂಟ್ ಬ್ರೇಕಪ್ ಮಾಡಿಕೊಂಡ ನಂತರ ಅವರ ಮದುವೆ ಬಗ್ಗೆ ಆಗಾಗ ಹೊಸ ಹೊಸ ಸುದ್ದಿಯನ್ನು ಕೇಳುತ್ತಿದ್ದೇವೆ. ಅದರಂತೆ ರಮ್ಯಾ ಅವರೊಂದಿಗೆ ರಕ್ಷಿತ್ ಶೆಟ್ಟಿ ಅವರು ಮದುವೆಯಾಗುತ್ತಾರಾ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಮ್ಯಾ ಅವರು ದೂರದ ದೇಶದಲ್ಲಿ ಇದ್ದರೂ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಅವರು ಕೂಲ್ ಆಗಿ ಉತ್ತರಿಸುತ್ತಾರೆ ಅದರಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಹೌದು ಅಭಿಮಾನಿಯೊಬ್ಬರು ರಮ್ಯಾ ಅವರಿಗೆ ನೀವ್ಯಾಕೆ ರಕ್ಷಿತ್ ಶೆಟ್ಟಿ ಅವರನ್ನು ಮದುವೆಯಾಗಬಾರದು ಎಂದು ಕೇಳಿದ್ದಾರೆ.

ಅಭಿಮಾನಿ ಈ ರೀತಿಯ ಪ್ರಶ್ನೆ ಕೇಳುವುದಕ್ಕೆ ಒಂದು ಕಾರಣವಿದೆ. ಈ ಹಿಂದೆ ರಕ್ಷಿತ್ ಶೆಟ್ಟಿ ಅವರಿಗೆ ನಿಮ್ಮ ಆಲ್ ಟೈಮ್ ಕ್ರಶ್ ಯಾರು ಎಂದು ಕೇಳಿದಾಗ ರಕ್ಷಿತ್ ಶೆಟ್ಟಿ ಅವರು ರಮ್ಯಾ ಎಂದು ಉತ್ತರ ಹೇಳಿದ್ದರು. ಅಷ್ಟೆ ಅಲ್ಲದೆ ಅವನೆ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆದ ನಂತರ ರಮ್ಯಾ ಅವರು ರಕ್ಷಿತ್ ಶೆಟ್ಟಿ ಅವರಿಗೆ ವಿಶ್ ಮಾಡಿದ್ದರು ಆಗ ರಕ್ಷಿತ್ ಶೆಟ್ಟಿ ಅವರು ರಮ್ಯಾ ಅವರಿಗೆ ಮತ್ತೆ ಯಾವಾಗ ಬರ್ತೀರಾ ಸಿನಿಮಾರಂಗಕ್ಕೆ ಎಂದು ಕೇಳಿದಾಗ ನೀವು ಅವಕಾಶ ಕೊಟ್ಟಾಗ ಎಂದು ಫನ್ನಿ ಉತ್ತರ ನೀಡಿದ್ದರು ನಟಿ ರಮ್ಯಾ. ಇದನ್ನೆಲ್ಲ ಗಮನಿಸಿದ ಅಭಿಮಾನಿಯೊಬ್ಬರು ಈ ರೀತಿ ರಮ್ಯಾ ಅವರಿಗೆ ಪ್ರಶ್ನೆ ಕೇಳಿದ್ದಾರೆ ಅದಕ್ಕೆ ರಮ್ಯಾ ಅವರು ಎಷ್ ಟ್ಯಾಗ್ ಹಾಕಿ ರಕ್ಷಿತ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಮುಗುಳು ನಕ್ಕಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಇದಕ್ಕೆ ರಕ್ಷಿತ್ ಶೆಟ್ಟಿ ಅವರು ಏನು ಹೇಳಿಲ್ಲ. ಬಹುಶಃ ಅವರಿಗೆ ಏನು ಹೇಳಬೇಕು ಎಂದು ತಿಳಿದಿಲ್ಲ ಅಥವಾ ರಶ್ಮಿಕಾ ಅವರೊಂದಿಗೆ ಬ್ರೇಕಪ್ ಆದ ನಂತರ ಲವ್ ಲೈಪ್ ಬೇಡ ಎಂದು ನಿರ್ಧರಿಸಬಹುದು. ರಕ್ಷಿತ್ ಶೆಟ್ಟಿ ಅವರು ಯಾರನ್ನು ಮದುವೆಯಾಗುತ್ತಾರೆ ಎನ್ನುವುದನ್ನು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅವರು ಯಾರನ್ನು ಮದುವೆಯಾಗುತ್ತಾರೆ ಎಂದು ಕಾದು ನೋಡಬೇಕು. ಒಟ್ಟಿನಲ್ಲಿ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಅವರಿಗೆ ಹೆಚ್ಚು, ಹೆಚ್ಚು ಅವಕಾಶಗಳು ಸಿಗಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!