ರಾಜ್ಯ ಕಂದಾಯ ಇಲಾಖೆಯಲ್ಲಿ 3000 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ನಾವು ಈ ಲೇಖನದ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸರ್ವೇ ಸೆಟಲ್​ಮೆಂಟ್​ & ಲ್ಯಾಂಡ್​ ರೆಕಾರ್ಡ್ಸ್​ ಕರ್ನಾಟಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3000 ಲೈಸೆನ್ಸ್ಡ್​​ ಲ್ಯಾಂಡ್​ಲಾರ್ಡ್ಸ್​ ಹುದ್ದೆಗಳು ಖಾಲಿ ಇದ್ದು, ಪಿಯುಸಿ, ಡಿಪ್ಲೋಮಾ, ಬಿಇ, ಬಿ.ಟೆಕ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್​,ಐಟಿಐ ಪೂರ್ಣಗೊಳಿಸಿರಬೇಕು. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಆಹ್ವಾನ ಮಾಡಿದ ಸಂಸ್ಥೆಯ ಹೆಸರು ಸರ್ವೇ ಸೆಟಲ್​ಮೆಂಟ್​ ಮತ್ತು ಲ್ಯಾಂಡ್​ ರೆಕಾರ್ಡ್ಸ್​ ಕರ್ನಾಟಕ.

ಹುದ್ದೆಯ ಹೆಸರು ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ . ಒಟ್ಟು ಖಾಲಿ ಇರುವ ಹುದ್ದೆಗಳು 3,000 ಆಗಿದ್ದು, ಉದ್ಯೋಗ ಮಾಡಬೇಕಾದ ಸ್ಥಳ ಕರ್ನಾಟಕ. ಹುದ್ದೆಯ ಬಗ್ಗೆ ಮಾಹಿತಿಯಾಗಿ ಕರ್ನಾಟಕದಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ನೋಡುವುದಾದರೆ, ಬಾಗಲಕೋಟೆ- 60, ಬಳ್ಳಾರಿ-27, ಬೆಳಗಾವಿ-112, ಬೆಂಗಳೂರು-65, ಬೆಂಗಳೂರು ನಗರ-12,
ಬೀದರ್-13, ಚಾಮರಾಜನಗರ-50, ಚಿಕ್ಕಮಗಳೂರು-112 ಚಿತ್ರದುರ್ಗ-93, ದಕ್ಷಿಣ ಕನ್ನಡ-66, ದಾವಣಗೆರೆ-183 ಧಾರವಾಡ-59, ಗದಗ-46, ಗುಲ್ಬರ್ಗಾ-12, ಹಾಸನ-136,

ಹಾವೇರಿ-229, ಕೊಡಗು-100, ಕೋಲಾರ-137, ಕೊಪ್ಪಳ-66
ಮಂಡ್ಯ-195, ಮೈಸೂರು-136, ರಾಯಚೂರು-54 ರಾಮನಗರ-155, ತುಮಕೂರು-334, ಶಿವಮೊಗ್ಗ-೧೩೭ ಉಡುಪಿ-131, ಉತ್ತರ ಕನ್ನಡ-101, ಬಿಜಾಪುರ-76 ಯಾದಗಿರಿ-45, ಚಿಕ್ಕಬಳ್ಳಾಪುರ-39 ಮತ್ತು ವಿಜಯನಗರ-29 ಹುದ್ದೆಗಳು ಖಾಲಿ ಇರುತ್ತವೆ.ಇನ್ನೂ ಅರ್ಜಿ ಸಲ್ಲಿಕೆ ವಿಧಾನ ಹೇಗೆ ಎಂದು ನೋಡುವುದಾದರೆ, ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಹಾಗೇ ಪ್ರಮುಖ ದಿನಾಂಕಗಳನ್ನು ನೋಡುವುದಾದರೆ, ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 01/12/2021 ಆಗಿದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/12/2021 ಆಗಿರುತ್ತದೆ.

ವಿದ್ಯಾರ್ಹತೆ:ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್​, ಐಟಿಐ ಪೂರ್ಣಗೊಳಿಸಿರಬೇಕು.ಅನುಭವ:ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಭೂ ಮಾಪನ ಕಂದಾಯ ವ್ಯವಸ್ಥೆಯಲ್ಲಿ ಮತ್ತು ಭೂ ದಾಖಲೆಗಳ ಇಲಾಖೆಗಳಲ್ಲಿ ಅಥವಾ ಭಾರತೀಯ ಸಮೀಕ್ಷೆ ಅಥವಾ ಸರ್ಕಾರಿ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.

ಇತರೆ ಶುಲ್ಕ: ಟ್ರೇನಿಂಗ್​ ಶುಲ್ಕ-5,000 ರೂ.
ಲೈಸೆನ್ಸ್​ ಶುಲ್ಕ-3,000 ರೂ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಎಷ್ಟು ಎಂದು ನೋಡುವುದಾದರೆ, ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ65 ವರ್ಷದೊಳಗಿರಬೇಕು. ವೇತನ ಎಷ್ಟು ಎಂದು ನೋಡುವುದಾದರೆ, ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರವಾಗಿ ವೇತನವನ್ನು ನೀಡಲಾಗುತ್ತದೆ. ಅರ್ಜಿ ಶುಲ್ಕ:ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1,000 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಹಾಗೆಯೇ ಇನ್ನೂ ಆಯ್ಕೆಯ ಪ್ರಕ್ರಿಯೆ ಹೇಗೆ ಎಂದು ನೋಡುವುದಾದರೆ, ಆನ್​ಲೈನ್ ಟಟೆಸ್ಟ್, ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!