ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್‌ಕುಮಾರ್‌ ಅವರ ಜೊತೆ ಹತ್ತಿರದ ಒಡನಾಟ ಇಟ್ಟುಕೊಳ್ಳುವ ಅವಕಾಶ ಸಿಕ್ಕಿದ್ದು ಕೆಲವೇ ಮಂದಿಗೆ ಮಾತ್ರ. ಅಂಥವರಲ್ಲಿ ನಟ ಜಗ್ಗೇಶ್‌ ಕೂಡ ಒಬ್ಬರು. ಅಣ್ಣಾವ್ರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಜಗ್ಗೇಶ್‌ ಅವರ ನೆನಪಿನ ಪುಟಗಳಲ್ಲಿ ನೂರಾರು ಸಂಗತಿಗಳು ಅಚ್ಚಾಗಿವೆ. ನವರಸ ನಾಯಕ ಜಗ್ಗೇಶ್ ಅವರಿಗೆ ವರನಟ ಡಾ. ರಾಜ್‍ಕುಮಾರ್ ಅವರ ಬಗ್ಗೆ ಇರುವ ಅಪಾರ ಪ್ರೀತಿ ಅಥವಾ ಅಭಿಮಾನದ ಬಗ್ಗೆ ಆಗಾಗ ಒಂದಲ್ಲಾ ಒಂದು ವಿಷಯವನ್ನು ಹಂಚಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ. ಅಲ್ಲದೇ ಜಗ್ಗೇಶ್ ಅವರ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಅವರಿಗೆ ಸ್ಪೂರ್ತಿ ಮತ್ತು ಪ್ರೇರಣಯಾದವರು ಕೂಡಾ ಅಣ್ಣಾವ್ರು ಎಂಬುದು ಕೂಡಾ ವಾಸ್ತವ. ಜಗ್ಗೇಶ್ ಅವರು ಬಹಳಷ್ಟು ಸಮಯವನ್ನು ಡಾ.ರಾಜ್‍ಕುಮಾರ್ ಅವರ ಜೊತೆ ಕಳೆದಿದ್ದರಿಂದ ಅವರು ಅಣ್ಣಾವ್ರನ್ನು ಬಹಳಷ್ಟು ಹತ್ತಿರದಿಂದ ಬಲ್ಲವರಾಗಿದ್ದರು, ಅಣ್ಣಾವ್ರ ನಡೆ, ನುಡಿ, ಜೀವನ ಮೌಲ್ಯಗಳು ಕೂಡಾ ಜಗ್ಗೇಶ್ ಅವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದ್ದವು. ಡಾಕ್ಟರ್ ರಾಜಕುಮಾರ್ ಅವರ ಜೊತೆಗಿನ ಒಡನಾಟದ ನೆನಪುಗಳಲ್ಲಿ ಆ ಪೈಕಿ ಒಂದನ್ನು ಈಗ ಅವರು ಹಂಚಿಕೊಂಡಿದ್ದಾರೆ. ಏನೂ ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಾಜ್‌ಕುಮಾರ್‌ ಅವರದ್ದು ತುಂಬ ಸರಳ ವ್ಯಕ್ತಿತ್ವ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಎಷ್ಟೇ ಹಣ ಇದ್ದರೂ ಕೂಡ ಅವರು ಅನಗತ್ಯವಾಗಿ ಯಾವುದನ್ನೂ ಪೋಲು ಮಾಡುತ್ತಿರಲಿಲ್ಲ. ಹಾಗಾಗಿ ಅವರು ಬಳಸುತ್ತಿದ್ದ ವಸ್ತುಗಳ ಬಗ್ಗೆ ಜನರಿಗೆ ಸದಾ ಕುತೂಹಲ ಇದ್ದೇ ಇರುತ್ತಿತ್ತು. ಅಣ್ಣಾವ್ರು ನೋಡುತ್ತಿದ್ದ ಟಿವಿಯ ಕುರಿತಾಗಿ ಜಗ್ಗೇಶ್‌ ಒಂದು ಘಟನೆಯನ್ನು ಮೆಲುಕು ಹಾಕಿದ್ದಾರೆ. ಅಣ್ಣಾವ್ರ ಜೊತೆಗೆ ಅನೇಕ ಸವಿ ನೆನಪುಗಳನ್ನು ಹೊಂದಿರುವ ನಟ ಜಗ್ಗೇಶ್ ಅವರು ಆಗಾಗ ಅಂತಹ ಕೆಲವು ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಕೂಡಾ ಉಂಟು. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಅವರು ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅಣ್ಣಾವ್ರ ನೆಚ್ಚಿನ ಟಿವಿ ಯ ಕುರಿತಾಗಿ ಕೆಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಡಾ.ರಾಜ್ ಅವರು ಬಹಳ ಇಷ್ಟಪಟ್ಟು ಕೊಂಡಿದ್ದ ಟಿವಿ ಯ ಕುರಿತಾಗಿ ಕೆಲವು ವಿಷಯಗಳನ್ನು ಜಗ್ಗೇಶ್ ಅವರು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಜಗ್ಗೇಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ.

ಜಗ್ಗೇಶ್ ಅವರು ತಮ್ಮ ಟ್ವೀಟ್ ನಲ್ಲಿ, “ರಾಜಣ್ಣನ favorite TV ನಾನು ರಾಜಣ್ಣನ ನೋಡಲು ಅವರ ಮನೆಗೆ ಹೋದಾಗ ಅಣ್ಣ ಅವರ hal lನಲ್ಲಿ ಎರಡುಕನಸು ಚಿತ್ರದ ಹಾಡು ಎಂದೆದು ನಿನ್ನನು ಮರೆತು ಹಾಡು ನೋಡುತ್ತ ಆ ಸನ್ನಿವೇಶ ಊಟದ break ನಂತರ ತೆಗೆದದ್ದು ಎಂದು ನಿಕರವಾಗಿ ನೆನೆದು ಹೇಳಿದ್ದರು! ಅಣ್ಣನ Tvಯ ಚಿತ್ರ ನಾನು ಯಾವಾಗಲೋ ತೆಗೆದು ಇಟ್ಟಿದ್ದೆ ಅದು ಇಂದು ನನಗೆ ಸಿಕ್ಕಿತು! ಅಣ್ಣನ TV. ” ಎಂದು ಬರೆದುಕೊಂಡು ಆ ನೆನಪನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಜಗ್ಗೇಶ್‌ ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷ ಪೂರ್ಣಗೊಂಡಿದೆ. ಈ ಸುದೀರ್ಘ ಜರ್ನಿಯಲ್ಲಿ ಅವರಿಗೆ ಅಣ್ಣಾವ್ರೇ ಮಾದರಿ. ‘ರಾಜ್‌ಕುಮಾರ್‌ ಅವರಿಂದ ನಾವು ಎಷ್ಟೋ ವಿಚಾರಗಳನ್ನು ಕಲಿತಿದ್ದೇವೆ. ಕುಟುಂಬ, ಭಾಷೆ, ಸಿನಿಮಾ ಎಂದರೇನು ಎಂಬುದನ್ನೆಲ್ಲ ಅವರಿಂದ ನೋಡಿ ಕಲಿಯಬೇಕು. ನನ್ನೊಳಗೆ ಅವರ ಬಗ್ಗೆ ಪ್ರೀತಿ ಇಂದಿಗೂ ಇದೆ. ಅವರು ಹೇಳಿದ ಎಲ್ಲ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇನೆ’ ಎಂದಿದ್ದರು ಜಗ್ಗೇಶ್‌.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!