ಯುವ ಸಮೂಹದಲ್ಲಿ ಡೇಟಿಂಗ್ ಕುರಿತು ಆಸಕ್ತಿಗಳು ಹೆಚ್ಚಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಹಲವು ಆ್ಯಪ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿಯೇ ಜಾಗತಿಕವಾಗಿ ಸಾಕಷ್ಟು ಖ್ಯಾತಿಯನ್ನುಗಳಿಸಿಕೊಂಡಿರುವ ಟಿಂಡರ್ ಹೆಸರಿನ ಡೇಟಿಂಗ್ ಆ್ಯಪ್ ಹೆಚ್ಚು ಖ್ಯಾತಿಯನ್ನು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಯುವ ಸಮುಹ ಹೆಚ್ಚಿನ ಪ್ರಮಾಣದಲ್ಲಿ ಟಿಂಡರ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಟಿಂಡರ್ ಆ್ಯಪ್ ಬಳಕೆ ಮಾಡಿ ಮೋಸ ಹೋದ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಕ್ಷಣಿಕ ಸುಖಕ್ಕಾಗಿ ಪ್ರಾಣವನ್ನೆ ಕಳೆದುಕೊಂಡ ಘಟನೆ ನಡೆದಿದೆ.

ಹಣದ ಅವಶ್ಯಕತೆ ಇರುವ ಅದೆಷ್ಟೋ ಯುವತಿಯರು ತಮ್ಮ ಸೌಂದರ್ಯವನ್ನೇ ಬಂಡವಾಳವಾಗಿ ಇಟ್ಟುಕೊಂಡು ಅದೆಷ್ಟೋ ಯುವಕರ ಜೀವನ ಹಾಳು ಮಾಡುತ್ತಿದ್ದಾರೆ. ಇಷಾರಾಮಿ ಬದುಕಿನ ಆಸೆಗೆ ಬಿದ್ದು ಈ ಡೇಟಿಂಗ್ ಆ್ಯಪ್ ಮೂಲಕ ದುಡ್ಡಿರುವ ಶ್ರೀಮಂತ ಯುವಕರ ಜೊತೆ ಸಂಪರ್ಕ ಬೆಳೆಸಿ ಅವರಿಂದ ಲಕ್ಷಾಂತರ ಹಣ ದೋಚಿ ಪರಾರಿಯಾಗಿದ್ದಾರೆ. ಅಂಥವರಲ್ಲಿ ಈ ಪ್ರಿಯಾ ಸೇಠ್ ಸಹ ಒಬ್ಬಳು. ಈಕೆ ತನ್ನ ಸೌಂದರ್ಯದಿಂದ ಸಾವಿರಾರು ಜನರಿಗೆ ಮೋಸ ಮಾಡಿದ್ದಾಳೆ.

ಪ್ರಿಯಾ‌ ಸೇಠ್ ಎಂಬ ಅಪೂರ್ವ ಸುಂದರಿ ಹುಡುಗಿಯನ್ನು ನೋಡಿದಾಗ ಎಂಥ ಹುಡುಗರೂ ಮನಸೋಲುತ್ತಾರೆ ಆದರೆ ಈ ಸೌಂದರ್ಯದ ಹಿಂದೆ ಯಾರು ಊಹೆ ಮಾಡದಂತಹ ಕ್ರೌರ್ಯ ಅಡಗಿದೆ. ಆಕೆಯ ಲಾವಣ್ಯದ ಪ್ರಭೆಯಲ್ಲಿ ಮನಸೋತು ಮರುಳಾಗಿ ಅವಳ ಹಿಂದೆ ಹೊರಟರೆ ಹೋದವರ ಗತಿ ಅಷ್ಟೆ. ರಾಜಸ್ಥಾನದ ಈ 27 ವರ್ಷದ ಆಕರ್ಷಕ ಯುವತಿ ಟಿಂಡರ್ ಎನ್ನುವ ಸುಪ್ರಸಿದ್ದ ಆನ್ಲೈನ್ ಡೇಟಿಂಗ್ ಆ್ಯಪ್ ನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಹುಡುಗರನ್ನು ಆನ್ಲೈನ್‌ ಡೇಟಿಂಗ್ ನೆಪದಲ್ಲಿ ವಂಚಿಸಿದ್ದಾಳೆ.

ಅಲ್ಲದೇ ಅದರಲ್ಲಿ ಒಂದು ಕೋಲ್ಡ್ ಬ್ಲೆಡೆಡ್ ಹತ್ಯೆಯನ್ನು ಕೂಡ ಎಸಗಿ ಆನ್ಲೈನ್ ಮೂಲಕ ವೇಶವಾಟಿಕೆ, ಮನಿ‌ ಲ್ಯಾಂಡಿಂಗ್, ಹನಿಟ್ಯ್ರಾ ಪ್ ಗಳಂತಹ ದಂಧೆಗಳ ಮೇನ್ ಕಿಲ್ಲಿಂಗ್ ಆಗಿ ಅಕ್ರಮ ನಡೆಸಿ ಪೋಲೀಸರ ಅತಿಥಿ ಆಗಿದ್ದಾಳೆ. 10-20 ಸಾವಿರಗಳ ಸಂಬಳ ಕೊಟ್ಟು ಅದಕ್ಕಾಗಿಯೇ ದೇಶ ವಿದೇಶಗಳ ಮೂಲೆ ಮೂಲೆಗಳಲ್ಲಿ ಆಕರ್ಷಕ ಹಾಗೂ ಚಿಕ್ಕ ವಯಸ್ಸಿನ ಯುವತಿಯರನ್ನು ಹಣದ ಆಮೀಷ ಒಡ್ಡಿ ಈ ದಂಧೆಯ ಕೀಲಿಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ‌ ನಿಪುಣರಾದ ಕೆಲವು ಯುವತಿಯರು ಈ ದಂಧೆಯ ಆಳ‌ ಹರಿವುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ತಾವೇ ಈ ದಂಧೆಯ ರೂವಾರಿಗಳಾಗಿ ಸುಲಭವಾಗಿ ಲಕ್ಷಾಂತರ ರೂ. ಹಣಗಳನ್ನು ಗಳಿಸುತ್ತಾರೆ.

ಅಂತಹ ಚಾಲಾಕಿಗಳಲ್ಲಿ ರಾಜಾಸ್ಥಾನದ ಈ ಪ್ರಿಯಾ ಸೇಠ್ ಕೂಡ ಒಬ್ಬಳು. ಸಾಧರಣ ಕುಟುಂಬದಿಂದ ಮೇಲೆ ಬಂದ ಇವಳು ತನ್ನ ಸೌಂದರ್ಯದ ಮೋಹದ ಬಲೆ ಬೀಸಿ ಆನ್ಲೈನ್ ಡೇಟಿಂಗ್ ಆ್ಯಪ್‌ನಿಂದ ಸಾವಿರಾರು ಹಣವಂತ ಯುವಕರನ್ನು ಮೋಡಿ ಮಾಡಿ ಆ ಒಂದು ಅಕ್ರಮದಿಂದ ಕೋಟಿಗಟ್ಟಲೆ‌ ಹಣ ಸಂಪಾದಿಸುತ್ತಾಳೆ. ಈಕೆ ಯಾರು ಯಾವ ರೀತಿ ಆನ್ಲೈನ್ ನಲ್ಲಿ ಅಕ್ರಮ ಮಾಡುತ್ತಿದ್ದಳು ಈ ದಂಧೆಯಲ್ಲಿ ಒಂದು ಹತ್ಯೆಯನ್ನು‌ ಮಾಡಿ ಇಂದು ತನ್ನ ಸಹಚರರೊಂದಿಗೆ ಜೈಲು ಪಾಲಾಗಿದ್ದಾಳೆ. ಮೊದಲಿಗೆ ಈ ಘಟನೆ ನಡೆದಿದ್ದು 2018 ರಲ್ಲಿ, ರಾಜಸ್ಥಾನ ಮೂಲದ ಪ್ರಿಯ ಸೇಠ್‌‌ ಒಂದು ಹಳ್ಳಿಯವಳು. ಇವರ ತಂದೆ ಒರ್ವ ಸಾಧಾರಣ ಕಾಲೇಜಿನ ಶಿಕ್ಷಕರಾಗಿದ್ದರು. ಇವಳು ಮಧ್ಯಮವರ್ಗದ ಕುಟುಂಬದವಳಾಗಿದ್ದು ಸಿರಿವಂತಿಕೆಯ ಮೋಹಕ್ಕೆ ಬಿದ್ದಿದ್ದಳು, ಈಕೆಗೆ ಭವ್ಯ ಮಹಲ್ ನಲ್ಲಿ, ಕಾರ್, ಲಾಡ್ಜ್ ಗಳಲ್ಲಿ ಮೋಜು‌ಮಸ್ತಿ ಮಾಡಲು ಬಹಳ ಆಸೆ ಇತ್ತು. ಈ ಆಸೆಗಳನ್ನೆಲ್ಲ ಅವಳ ಕುಟುಂಬದ ಸ್ಥಿತಿಗತಿ ಬೆಂಬಲಿಸುತ್ತಿರಲಿಲ್ಲ.

ಈ ಹಳ್ಳಿಯಲ್ಲಿ ಇದ್ದರೆ ಸಿಟಿ‌ ಜೀವನವನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ತಿಳಿದು ಅವಳು ತನ್ನ ತಂದೆಗೆ ಜೈಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತೇನೆ ಎಂದು ತಿಳಿಸುತ್ತಾಳೆ. ಇವಳು ಸಿರಿವಂತಿಕೆಯ ಮೋಹ ಹೊಂದಿದ್ದರೂ ಕೂಡ ಓದಿನಲ್ಲಿ ಪ್ರತಿಭಾವಂತೆ. ಪಿಯು ತರಗತಿಯಲ್ಲಿ ರಾಂಕ್ ವಿದ್ಯಾರ್ಥಿಯಾಗಿದ್ದಳು. ಅದೇ ಕಾರಣಕ್ಕಾಗಿ ತಂದೆ ಜೈಪುರದಲ್ಲಿ ವಿದ್ಯಾಭ್ಯಾಸ ನಡೆಸಲು ಕಳುಹಿಸಿದರು. ಪ್ರಿಯ ಜೈಪುರಕ್ಕೆ ಬಂದು‌ ಹುಡುಗಿಯರ ಹಾಸ್ಟೆಲ್ ನಲ್ಲಿ ಸೇರಿಕೊಳ್ಳುತ್ತಾಳೆ.

ಅವಳ ಓದಿನ ಹಾಗೂ ವೈಯಕ್ತಿಕ ಖರ್ಚಿಗಾಗಿ ಅವಳ ತಂದೆ ತಿಂಗಳಿಗೆ ಹದಿನೈದು ಸಾವಿರ ರೂ.ಗಳನ್ನು ಕಳುಹಿಸುತ್ತಿದ್ದರು. ವೈಭವದ ಜೀವನಕ್ಕೆ ಮೋಹಗೊಂಡ‌ ಇವಳಿಗೆ ಆ ಹಣ ಸಾಕಾಗುತ್ತಿರಲಿಲ್ಲ. ಆದರೆ ಅವಳ ತಂದೆ ಹೆಚ್ಚಿನ ಹಣ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಸಿಟಿಯಲ್ಲಿ ಅನೇಕ ಯುವಕ ಯುವತಿಯರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದವರನ್ನು ನೋಡಿ ಪ್ರಿಯಾಳ ಕಣ್ಣು ಕುಕ್ಕಿತು. ಅವರೆಲ್ಲರ ಹಾಗೆ ಬ್ಯ್ರಾಂಡೆಡ್ ಬಟ್ಟೆ, ವಾಚ್ ಗಳನ್ನು ಧರಿಸಿ ಓಡಾಡಬೇಕು ಎಂಬ ಆಸೆಯಿತ್ತು, ಇದರಿಂದ ಓದಿನ ಜೊತೆ ಹೆಚ್ಚಿನ ಹಣ ಸಂಪಾದಿಸಲು ಯೋಚಿಸುತ್ತಾಳೆ.

ಇದಕ್ಕಾಗಿ ಈ ಡೇಟಿಂಗ್ ಆ್ಯಪ್ ನಲ್ಲಿ ತನ್ನ ಖಾತೆ ತೆರೆದು ಅನೇಕ ಜನರಿಗೆ ಮೋಸ ಮಾಡುತ್ತಾಳೆ. ತನ್ನ ಹಾಗೆ ಹಣದ ಅವಶ್ಯಕತೆ ಇರುವ ಅನೇಕ ಹುಡುಗಿಯರನ್ನು ಈ ದಂಧೆಗೆ ಇಳಿಸಿ ಅವರಿಗೆ ಕಮಿಷನ್ ನೀಡುತ್ತಾಳೆ. ಹೀಗೆ ಪ್ರಿಯಾ ಸೇಠ್ ಸಾವಿರಾರು ಪುರುಷರನ್ನು ವಂಚಿಸಿದ್ದಾರೆ ಮತ್ತು ವೇಶ್ಯಾವಾಟಿಕೆ, ಎಟಿಎಂ ಲೂಟಿ, ಸುಲಿಗೆ, ಸುಳ್ಳು ಅತ್ಯಾಚಾರ ಬೆದರಿಕೆಗಳು ಮತ್ತು ಇತರ ಅಪರಾಧಗಳ ಜೊತೆಗೆ ಹನಿ ಟ್ರ್ಯಾಪ್‌ಗಳ ಆರೋಪ ಹೊತ್ತಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಜೈಪುರ-ದೆಹಲಿ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಸೂಟ್‌ಕೇಸ್‌ನಲ್ಲಿ ಶವವನ್ನು ತುಂಬಿ ಹೋಗಿದ್ದಕ್ಕಾಗಿ 27 ವರ್ಷದ ಮಹಿಳೆಯನ್ನು ಆಕೆಯ ಇಬ್ಬರು ಸಹಚರರೊಂದಿಗೆ ಪೊಲೀಸರು ಬಂಧಿಸಿದ್ದಾರೆ.

ಡೇಟಿಂಗ್ ಆ್ಯಪ್ ‘ಟಿಂಡರ್’ ಮೂಲಕ 27 ವರ್ಷದ ದುಶ್ಯಂತ್ ಶರ್ಮಾ ಅವರನ್ನು ಮೂವರು ಹೇಗೆ ಬಲೆಗೆ ಬೀಳಿಸಿದ್ದಾರೆ ಎಂಬುದನ್ನು ಆ ಸಮಯದಲ್ಲಿ ವರದಿಗಳು ಬಹಿರಂಗಪಡಿಸಿವೆ. ಡೇಟಿಂಗ್ ಅಪ್ಲಿಕೇಶನ್ ಮೂಲಕ ಭೇಟಿಯಾದ ನಂತರ ಶರ್ಮಾ ಪ್ರಿಯಾಳ ರಾಡಾರ್‌ಗೆ ಬಂದಿಳಿದನು ಮತ್ತು ಅವನು ಮಿಲಿಯನೇರ್ ಎಂದು ಹೇಳಿಕೊಂಡು ಅವಳಿಗೆ ಸುಳ್ಳು ಹೇಳಿದನು. ದಂಧೆಯ ಕಿಂಗ್‌ಪಿನ್ ಪ್ರಿಯಾ ನಂತರ ತನ್ನ ಪಾಲುದಾರರಾದ ದೀಕ್ಷಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಸಹಾಯದಿಂದ ದುಶ್ಯಂತ್‌ನನ್ನು ಅಪಹರಿಸಿದಳು.

ಅವನ ತಂದೆಯನ್ನು ವಿಮೋಚನೆಗಾಗಿ ಕೇಳಿದಾಗ, ಮೂವರು ದುಶ್ಯಂತ್ ಸಣ್ಣ-ಸಮಯದ ವ್ಯಾಪಾರಿ ಮತ್ತು ಅವನು ಹೊಂದಿದ್ದಾನೆಂದು ಹೇಳಿಕೊಳ್ಳುವ ರೀತಿಯ ಹಣವನ್ನು ಹೊಂದಿಲ್ಲ ಎಂದು ಅರಿತುಕೊಂಡರು. ನಂತರ ಅದೇ ದಿನ ಮಧ್ಯಾಹ್ನ ಮಗನನ್ನು ಚಾಕುವಿನಿಂದ ಇರಿದು ಕೊಂದಿರುವುದಾಗಿ ಹೇಳದೆ ಸಂತ್ರಸ್ತನ ತಂದೆಯಿಂದ 3 ಲಕ್ಷ ರೂ. ಪಡೆದು ದೆಹಲಿ-ಜೈಪುರ ಹೆದ್ದಾರಿಯ ಪಕ್ಕದಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ ದುಶ್ಯಂತ್ ಶವವನ್ನು ಪೊಲೀಸರು ವಶಪಡಿಸಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆತನ ಶವ ಪತ್ತೆಯಾದ ಹತ್ತು ಗಂಟೆಗಳಲ್ಲಿ ಪೊಲೀಸರು ದುಶ್ಯಂತ್ ಹಂತಕರನ್ನು ಬಂಧಿಸಿದ್ದರು.

ಹಣವೇ ಮುಖ್ಯ ಮಾನವತೆಗೆ ಬೆಲೆಯೇ ಇಲ್ಲ ಎಂಬಂತಿದ್ದ ಪ್ರಿಯ ಮತ್ತು ಆಕೆಯ ಸಂಗಡಿಗರು ತಮಗೆ ಸುಳ್ಳು ಹೇಳಿ ಮೋಸ ಮಾಡಿದ ದುಷ್ಯಂತ ಶರ್ಮನನ್ನು ದಾರುಣವಾಗಿ ಹತ್ಯೆಗೈದರು. ನಿಮ್ಮಲ್ಲಿ ಯಾರಾದರೂ ಈ ಡೇಟಿಂಗ್ ಆ್ಯಪ್ ಬಳಸುತ್ತಿದ್ದರೆ ಅಥವಾ ಬಳಸಬೇಕೆಂದು ಅಂದುಕೊಂಡಿದ್ದರೆ ಇಂತಹವರ ಬಲೆಗೆ ಬಿದ್ದಿರಿ ಎಚ್ಚರಿಕೆ ಇರಲಿ. ನೀವು ಕೂಡ ಇಂತವರ ಬಲೆಗೆ ಬೀಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!