ಮೋಹಕ ತಾರೆ ರಮ್ಯಾ ಜೊತೆ ಇರುವ ಈ ಹುಡುಗ ಯಾರು ಗೊತ್ತಾ? ರಮ್ಯಾ ಕೊಟ್ಟ ಉತ್ತರ ಹೇಗಿತ್ತು ನೋಡಿ

0 0

ಸ್ಯಾಂಡಲ್ ವುಡ್ ನ ಮೋಹಕ ತಾರೆ, ಪ್ರತಿಭಾವಂತ ನಟಿ, ರಮ್ಯಾ. ವಜ್ರೇಶ್ವರಿ ಕಂಬೈನ್ಸ್ ಮೂಲಕ ಸಿನಿ ಜರ್ನಿ ಅರಂಭಿಸಿದ ದಿವ್ಯಾ ಸ್ಪಂದನ ಆನ್‌ ಸ್ಕ್ರೀನ್ ಹೆಸರನ್ನು ರಮ್ಯಾ ಎಂದು ಬಲಾಯಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಜೊತೆ ಕೆಲಸ ಮಾಡಿದ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸಿನಿಮಾರಂಗದಿಂದ ದೂರ ಸರಿದರು. ಕೆಲವು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ರಮ್ಯಾ ಬಳಿಕ ರಾಜಕೀಯ ಕ್ಷೇತ್ರಕ್ಕೂ ಗುಡ್ ಬೈ ಹೇಳಿದರು. ಹೀಗೆ ರಾಜಕೀಯ ಸೇರಿದ ಮೇಲೆ ಹಲವಾರು ವಿಚಾರಗಳಲ್ಲಿ ಸುದ್ದಿಯಾಗುತ್ತಿದ್ದ ರಮ್ಯ ಕೆಲವು ದಿನಗಳ ನಂತರ ಹುಡುಗನ ಜೊತೆಯಲ್ಲಿನ ಫೋಟೋ ಶೇರ್ ಮಾಡುವ ಮೂಲಕ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಮ್ಯಾ ಕೆಲವು ತಿಂಗಳು ನಿಗೂಢವಾಗಿ ವಾಸಿಸುತ್ತಿದ್ದರು. ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ, ಹೇಗಿದ್ದಾರೆ ಎನ್ನುವ ಬಗ್ಗೆ ಸುಳಿವು ಕೂಡ ನೀಡಿರಲಿಲ್ಲ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ರಮ್ಯಾ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಇದೀಗ ಸ್ಯಾಂಡಲ್ ವುಡ್ ಮಂದಿಯ ಜೊತೆ ಮತ್ತೆ ಸಂಪರ್ಕಕ್ಕೆ ಬಂದಿರುವ ರಮ್ಯಾ ಮತ್ತೆ ಸಕ್ರೀಯರಾಗಿದ್ದಾರೆ. ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಸಂತಸ ಹೆಚ್ಚಿಸುತ್ತಿರುತ್ತಾರೆ. ಅಪ್ಪು ನಿಧನದ ಬಳಿಕ ಬೆಂಗಳೂರಿಗೆ ಬಂದಿದ್ದ ರಮ್ಯಾ ಬಳಿಕ ಹೆಚ್ಚಾಗಿ ಕರ್ನಾಟಕದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಲ್ಲದೇ ಸ್ಯಾಂಡಲ್ ವುಡ್ ನ ಅನೇಕ ಸಿನಿಮಾಗಳಿಗೆ ಸಾಥ್ ನೀಡುತ್ತಿದ್ದಾರೆ. ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ಹಿಂದಿರುಗುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ರಮ್ಯಾ ಯಾವಾಗ ತೆರೆಮೇಲೆ ಬರ್ತಾರೆ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ಅನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಿ ಆನಂದಿಸಲು ಕಾಯುತ್ತಿದ್ದ ಅಭಿಮಾನಿಗಳಿಗೆ ರಮ್ಯಾ ಇತ್ತೀಚಿಗಷ್ಟೆ ಶೇರ್ ಮಾಡಿದ್ದ ಫೋಟೋ ಅಚ್ಚರಿ ಮೂಡಿಸಿತ್ತು.

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗದಲ್ಲಿ ನಿಧಾನವಾಗಿ ತೊಡಗಿಸಿಕೊಳ್ತಿದ್ದಾರೆ. ಅದಷ್ಟೇ ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿಯೂ ಸಖತ್ ಆಕ್ಟಿವ್ ಇದ್ದಾರೆ. ರಮ್ಯಾ ಸಿಂಗಲ್ ಫೋಟೋ ಹಾಕಿದ್ರು ಅದು ದೊಡ್ಡಮಟ್ಟದಲ್ಲಿ ಸುದ್ದಿ ಆಗಿ ಬಿಡುತ್ತೆ. ಇತ್ತೀಚಿಗಷ್ಟೇ ರಮ್ಯಾ ಒಂದು ಫೋಟೋ ಶೇರ್ ಮಾಡಿದ್ರು. ಫೋಟೊ ಈ ಟಾಕ್ ಆಫ್ ದಿ ಟೌನ್ ಆಗಿದೆ. ಅಷ್ಟಕ್ಕೂ ಈ ಫೋಟೋ ವೈರಲ್ ಆಗೋದಕ್ಕೆ ಕಾರಣ ರಮ್ಯಾ ಬರಿ ಸಿಂಗಲ್ ಪೋಟೋ ಶೇರ್ ಮಾಡಿಲ್ಲ. ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹುಡುಗನೊಬ್ಬನ ಜೊತೆಗಿನ ಫೋಟೋ ಹಂಚಿಕೊಂಡಿದ್ದರು.

ಆ ಫೋಟೋದಲ್ಲಿ ಹುಡುಗ ಮತ್ತು ಅವರು ತುಂಬಾ ಆತ್ಮೀಯರಾಗಿದ್ದ ಕಾರಣಕ್ಕಾಗಿ ಫೋಟೋ ಸುತ್ತ ನಾನಾ ರೀತಿಯ ಗಾಸಿಪ್ ಗಳು ಎದ್ದಿದ್ದವು. ಆ ಹುಡುಗನು ರಮ್ಯಾ ಅವರ ಸ್ನೇಹಿತನಾ? ಹೊಸ ಪ್ರೇಮಿಯಾ? ಸಂಬಂಧಿಕನಾ? ಹೀಗೆ ನಾನಾ ರೀತಿಯ ಚರ್ಚೆಗಳು ನಡೆದಿದ್ದವು. ಅಷ್ಟೇ ಅಲ್ಲದೆ ರಮ್ಯ ಮದುವೆ ಆಗುವ ಹುಡುಗ ಇರಬಹುದು ಅಂತೆಲ್ಲಾ ಗಾಸಿಪ್ ಹರಡಿತ್ತು ಆದ್ರೆ ಆ ಹುಡುಗ ಮತ್ಯಾರು ಅಲ್ಲ ರಮ್ಯಾ ಅವ್ರ ಬೆಸ್ಟ್ ಫ್ರೆಂಡ್ ಅನ್ನೋದನ್ನ ರಮ್ಯ ತಿಳಿಸಿದ್ದಾರೆ.

ಆ ಹುಡುಗನ ಜೊತೆಗಿರುವ ರಮ್ಯಾ ಅವರು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಹುಡುಗ ಯಾರು ಎನ್ನುವುದನ್ನು ಸ್ವತಃ ರಮ್ಯಾ ಅವರೇ ಹೇಳಬೇಕು. ಈ ಗುಟ್ಟು ರಟ್ಟು ಮಾಡಬೇಕು ಎಂದೆಲ್ಲ ಅಭಿಮಾನಿಗಳು ಕೇಳಿದ್ದರು. ಆದರೂ, ರಮ್ಯಾ ಮೂರ್ನಾಲ್ಕು ದಿನದಿಂದ ಸುಮ್ಮನೆ ಇದ್ದರು. ಆ ಹುಡುಗ ಯಾರು? ಯಾಕಾಗಿ ಆ ಫೋಟೋ ತಗೆಸಿಕೊಳ್ಳಲಾಗಿದೆ ಎನ್ನುವ ಗುಟ್ಟು ಹಾಗೆಯೇ ಇತ್ತು. ಕೊನೆಗೂ ರಮ್ಯಾ ಇಂದು ಬಾಯ್ಬಿಟ್ಟಿದ್ದಾರೆ.

ಕೆಲವರು ಆ ಹುಡುಗನ ಸಿಕ್ರೇಟ್ ಬಯಲು ಮಾಡಲು ಬೆನ್ನು ಹತ್ತಿದ ವಿಷಯ ತಿಳಿಯುತ್ತಿದ್ದಂತೆಯೇ ಆ ಹುಡುಗನ ಹೆಸರು, ಅವನು ಯಾರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಸಣ್ಣದೊಂದು ಫೋಟೋ ಇಷ್ಟು ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದಕ್ಕೆ ಅವರು ಸೊಟ್ಟಗೆ ನಕ್ಕಿದ್ದಾರೆ. ಜೊತೆಗೆ ಆ ಹುಡುಗನ ವಿಷಯವನ್ನು ಹಂಚಿಕೊಂಡಿದ್ದಾರೆ. ಹುಡುಗನ ಕುರಿತು ಟ್ವಿಟ್ ಮಾಡಿರುವ ರಮ್ಯಾ ‘ಆ ಹುಡುಗನ ಹೆಸರು ವಿಹಾನ್. ನನ್ನ ಸ್ಟೈಲೀಶ್ ಹುಡುಗ. ಆ ಹುಡುಗನ ಕುರಿತಾದ ನಿಮ್ಮ ಕುತೂಹಲವನ್ನು ಪ್ರೀತಿಸುತ್ತೇನೆ’ ಎಂದು ಕೂಲ್ ಆಗಿ ಉತ್ತರ ಕೊಟ್ಟು, ಅಚ್ಚರಿ ಮೂಡಿಸಿದ್ದಾರೆ.

Leave A Reply

Your email address will not be published.