ರೈತರು ಬೇಳೆ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಪಡೆಯೋದು ಹೇಗೆ ತಿಳಿಯಿರಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ಬಹಳಷ್ಟು ಜನ ರೈತಬಾಂಧವರು ತೊಂದರೆಗೀಡಾಗಿದ್ದಾರೆ. ಭಾರತದಾದ್ಯಂತ ಒಂದು ವರ್ಷ ರೈತರು ತಾವು ಕಷ್ಟಪಟ್ಟು ಬೆವರುಹರಿಸಿ ಬೆಳೆದಂತಹ ಬೆಳೆಯನ್ನು ಮಳೆಗೆ ಕಳೆದುಕೊಂಡಿದ್ದಾರೆ ಬೆಳೆದ ಬೆಳೆ ಇನ್ನೇನು ಕೈಗೆ ಬರಬೇಕು ದುಡ್ಡು ಸಿಗಬೇಕು ದುಡ್ಡು ಬರುತ್ತಿದ್ದ ಹಾಗೆ ಸಾಲವನ್ನು ತೀರಿಸಬೇಕು ಅಥವಾ ಇನ್ಯಾವುದೋ ಕಾರ್ಯಕ್ಕೆ ಹಣವನ್ನು ಬಳಸಬೇಕು ಎಂದುಕೊಂಡಿರುವವರಿಗೆ ಬಹುದೊಡ್ಡ ನಷ್ಟವುಂಟಾಗಿದೆ.

ಈಗ ತಾವೇನು ಮಾಡಬೇಕು ಎಂಬ ಗೊಂದಲ ರೈತರಲ್ಲಿ ಉಂಟಾಗಿದೆ. ಸಾಮಾನ್ಯವಾಗಿ ಎರಡು ಆಯ್ಕೆಗಳು ಮುಂದಿವೆ ಒಂದು ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಇನ್ಸೂರೆನ್ಸ್ ಅಥವಾ ಬೆಳೆವಿಮೆಯನ್ನು ಕೊಂಡುಕೊಂಡಿದ್ದೇನೆ ಎಂಬುದು ಒಂದು, ಇನ್ನೊಂದು ಯಾವುದೇ ರೀತಿಯ ಬೆಳೆ ವಿಮೆ ಯನ್ನು ಕಂಡುಕೊಂಡಿಲ್ಲ ಹಾಗಾದರೆ ಏನು ಮಾಡಬೇಕು.

ಒಂದು ವೇಳೆ ನೀವು ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೇಳೆವಿಮೆಯನ್ನು ತೆಗೆದುಕೊಂಡಿಲ್ಲ ಏನು ಮಾಡಬೇಕು ಎಂದರೆ, ಇಲ್ಲಿ ಅದಕ್ಕೆ ಮೂರು ವಿಧಗಳು ಬರುತ್ತವೆ ಒಂದು ನಿಮ್ಮ ತಾಲೂಕಿನಲ್ಲಿ ತುಂಬಾ ಬೆಳೆ ಹಾನಿಯಾದಾಗ ನಿಮ್ಮ ತಾಲೂಕಿನ ಶಾಸಕರು ಸ್ವತಃ ತಾವೇ ಉತ್ಸಾಹದಿಂದ ಸರ್ಕಾರದ ಜೊತೆ ಮಾತನಾಡಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಕರೆದುಕೊಂಡು ಬಂದು ಸಮೀಕ್ಷೆಯನ್ನು ಮಾಡಿ

ನಮ್ಮ ತಾಲೂಕಿನ ಎಲ್ಲಾ ರೈತರಿಗೂ ತೊಂದರೆಯಾಗಿದೆ ಎಂದು ಹೇಳಿ ಅವರು ಆ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದರೆ ನಿಮ್ಮ ತಾಲೂಕನ್ನು ನೆರೆ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದರೆ ನಿಮ್ಮ ತಾಲೂಕಿನಲ್ಲಿ ಎಲ್ಲರೂ ಯಾವ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂದು ಅಂದಾಜನ್ನು ಮಾಡಿ ಸರ್ಕಾರ ಒಂದು ಎಕರೆಗೆ ಇಂತಿಷ್ಟು ಪರಿಹಾರ ಎಂದು ಘೋಷಣೆ ಮಾಡುತ್ತದೆ ಆಗ ಪರಿಹಾರ ಧನ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ಇನ್ನು ನಿಮ್ಮ ಸಂಪೂರ್ಣ ತಾಲೂಕಿಗೆ ಯಾವುದೇ ಸಮಸ್ಯೆಯಾಗಿಲ್ಲ ಕೇವಲ ನಿಮ್ಮ ಹಳ್ಳಿಗೆ ಮಾತ್ರ ಸಮಸ್ಯೆ ಆಗಿದೆ ಎಂದರೆ ಅಥವಾ ನಿಮ್ಮ ಊರಿನ ಒಂದಷ್ಟು ರೈತರಿಗೆ ಸಮಸ್ಯೆ ಆಗಿದೆ ಎಂದರೆ ಆಗ ನೀವೆಲ್ಲ ಒಟ್ಟಾಗಿ ನಿಮ್ಮ ಶಾಸಕರು ನಿಮ್ಮ ತಹಶೀಲ್ದಾರರಿಗೆ ವರದಿಯನ್ನು ಸಲ್ಲಿಸಬೇಕು ನಿಮಗೆ ಯಾವ ರೀತಿ ತೊಂದರೆ ಆಗಿದೆ ಎಂದು ಅವರಿಗೆ ತಿಳಿಸಿ ಅವರನ್ನು ಕರೆದುಕೊಂಡು ಬಂದು ಸಮೀಕ್ಷೆಯನ್ನು ಮಾಡಿಸಬೇಕು.

ಅವರು ಸಮೀಕ್ಷೆಯನ್ನು ಮಾಡಿ ಯಾವ ರೈತರಿಗೆ ನಷ್ಟ ಉಂಟಾಗಿದೆ ಎಷ್ಟು ಎಕರೆ ಬೆಳೆ ಹಾನಿಯಾಗಿದೆ ಯಾವ ಬೆಳೆ ಹಾನಿಯಾಗಿದೆ ಇದೆಲ್ಲದರ ಮಾಹಿತಿಯನ್ನು ಪಡೆದುಕೊಂಡು ಅದನ್ನು ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಅವರು ಅದನ್ನ ಸರ್ಕಾರಕ್ಕೆ ಕಳುಹಿಸಿ ಸರ್ಕಾರದಿಂದ ಪರಿಹಾರ ಧನ ಬರಬೇಕು. ಇಲ್ಲಿಯೂ ಕೂಡ ಅಲ್ಲಿಯ ಶಾಸಕರು ಅಥವಾ ಎಂಪಿ ಅವರ ಪಾತ್ರ ಸಹಾಯ ಕೂಡ ಮುಖ್ಯವಾಗಿರುತ್ತದೆ ಇದು ಸರಳವಾಗಿ ಆಗುವಂತದ್ದು.

ಇನ್ನೊಂದು ಆಯ್ಕೆ ನಿಮಗೆ ಮಾತ್ರ ಬೆಳೆ ಹಾನಿಯಾಗಿದೆ ನಿಮ್ಮ ಅಕ್ಕಪಕ್ಕದವರಿಗೆ ಒಂದಿಬ್ಬರಿಗೆ ಮಾತ್ರ ಬೆಳೆಹಾನಿಯಾಗಿದೆ ಎಂದಾಗ ಎಷ್ಟು ಬೆಳೆ ನಷ್ಟವಾಗಿದೆ ಎಂಬುದರ ಫೋಟೋವನ್ನು ತೆಗೆದುಕೊಂಡು ನಿಮ್ಮ ಊರಿನ ಗ್ರಾಮಲೆಕ್ಕಿಗರ ಬಳಿ ಹೋಗಬೇಕು ಅಲ್ಲಿ ನೀವು ನೆರೆ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು

ಆ ಗ್ರಾಮಲೆಕ್ಕಿಗರು ಅಲ್ಲಿನ ರೆವಿನ್ಯೂ ಇನ್ಸ್ಪೆಕ್ಟರ್ ಮೂಲಕ ಮತ್ತೊಂದು ಅಸೆಸ್ಮೆಂಟ್ ಅನ್ನ ಮಾಡುತ್ತಾರೆ ಅದು ಮುಗಿದ ನಂತರ ವರದಿಯನ್ನು ತಹಶೀಲ್ದಾರ್ ಅವರಿಗೆ ಒಪ್ಪಿಸುತ್ತಾರೆ ಅವರು ಅಲ್ಲಿಯ ತೋಟಗಾರಿಕೆ ಕೃಷಿ ಇಲಾಖೆ ಅಧಿಕಾರಿಗಳು ಎಲ್ಲರೂ ಸೇರಿ ಈ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸುತ್ತಾರೆ ಅವರು ಅದನ್ನು ಸರ್ಕಾರಕ್ಕೆ ಕಳಿಸುತ್ತಾರೆ ಆಗ ನಿಮಗೆ ಸರ್ಕಾರದಿಂದ ಪರಿಹಾರದಲ್ಲಿ ಸಿಗುತ್ತದೆ.

ನಮ್ಮ ದೇಶದಲ್ಲಿ ಈ ರೀತಿಯ ಬೆಳೆ ಹಾನಿಗಳಿಗೆ ಸ್ವಯಂ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ಅವಕಾಶ ಇಲ್ಲ ಆದರೆ ಸರ್ಕಾರದ ಬೇರೆ ಬೇರೆ ಇಲಾಖೆಗಳಿಗೆ ಇದರ ಕುರಿತು ನಿರ್ಣಯವನ್ನು ತೆಗೆದುಕೊಂಡು ವರದಿಯನ್ನು ತಯಾರಿಸಿ ರೈತರಿಗೆ ಕೊಡಬೇಕಾದಂತಹ ಪರಿಹಾರವನ್ನು ಕೊಡುವಂತಹ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಆದರೆ ಅಲ್ಲಿರುವ ರೆವಿನ್ಯೂ ಇನ್ಸ್ಪೆಕ್ಟರ್ ಗ್ರಾಮ ಲೆಕ್ಕಿಗರು ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಇರುವ ಅಧಿಕಾರಿಗಳು ಕೆಲಸವನ್ನು ಮಾಡಬೇಕಾಗಿದೆ. ಎಲ್ಲರಿಗೂ ತಿಳಿದಿರುವಂತೆ ಬಹಳಷ್ಟು ರೈತರು ಬೆಳೆಯನ್ನು ಕಳೆದುಕೊಂಡು ನೊಂದಿದ್ದಾರೆ.

ನಾವು ಮೇಲೆ ತಿಳಿಸಿರುವ ಮೂರು ರೀತಿಯಲ್ಲಿ ನಿಮಗೆ ನಷ್ಟವಾಗಿದ್ದರೆ ಅಂದರೆ ನಿಮ್ಮ ತಾಲೂಕಿಗೆ ನಿಮ್ಮ ಹಳ್ಳಿಗೆ ಅಥವಾ ನಿಮಗೆ ಮಾತ್ರ ನಷ್ಟ ಉಂಟಾಗಿದ್ದರೆ ಸರ್ಕಾರದಿಂದ ಪರಿಹಾರ ಧನವನ್ನು ಪಡೆಯುವುದಕ್ಕಾಗಿ ನಾವು ಮೇಲೆ ತಿಳಿಸಿರುವ ಕ್ರಮಗಳನ್ನು ಅನುಸರಿಸಿ. ಒಂದು ವೇಳೆ ನೀವು ಪಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆಯನ್ನು ಮಾಡಿಸಿಕೊಳ್ಳದಿದ್ದರೆ ಅದನ್ನ ಮಾಡಿಸಿಕೊಳ್ಳಿ. ಆಗ ಈ ತರದ ತೊಂದರೆಗಳ ಆದಾಗ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *