ಸೂರ್ಯನ ಶಾಖಕ್ಕೆ ಮತ್ತು ಬಿಸಿಲಿನ ತಾಪಕ್ಕೆ ಜನ ಬರಗಾಲ ಅನುಭವಿಸುವಂತೆ ಆಗುತ್ತಿದೆ. ಹನಿ ನೀರಿಗೂ ಪರದಾಡುವಂತಾಗಿದೆ. ಅದರಲ್ಲಿ ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಜನರು ಟ್ಯಾಂಕರ್ ಗಾಡಿಗಳ ಮೊರೆ ಹೋಗುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ ₹ 2,000 ದಿಂದ ₹ 3,000 ಹಣ ನೀಡಬೇಕಾಗಿದೆ.

ಇನ್ನು ನೀರಿನ ಅಭಾವ ಸೃಷ್ಟಿ ಆಗಿರುವ ಕಾರಣ ಜನರು ಹಣ ನೀಡಿ ಕ್ಯಾನ್ ನೀರನ್ನು ಖರೀದಿ ಮಾಡಿ ಅದನ್ನು, ಉಪಯೋಗ ಮಾಡುತ್ತಿದ್ದಾರೆ. ಕೃಷಿಗೆ ಸಂಬಂಧಿಸಿದಂತೆ ಪಂಪ್ ಸೆಟ್’ಗಳಲ್ಲಿ ನೀರಿನ ಮಟ್ಟ ಕುಸಿದಿದೆ ಹಾಗೂ ಅಂತರ್ಜಲದ ಮಟ್ಟ ತೀರಾ ಕೆಳಗೆ ಹೋಗಿದೆ.

ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಗಳು ಉಂಟಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಪ್ರಕಾರ ರಾಜ್ಯದಲ್ಲಿ ಇನ್ನು ಒಂದರಿಂದ ಒಂದುವರೆ ತಿಂಗಳು ಬಿಸಿಲು ಇದೆ ರೀತಿ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ 5°c ( ಡಿಗ್ರಿ ಸೆಲ್ಸಿಯಸ್ ) ತಾಪಮಾನ ಹೆಚ್ಚಾಗಲಿದೆ ಎಂದು ತಿಳಿಸಿದೆ. ಈ ವರ್ಷ ಉತ್ತರ ಕರ್ನಾಟಕ ಭಾಗದ ಕಡೆ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಬರುತ್ತದೆ.

ಅಲ್ಲದೆ ದಕ್ಷಿಣ ಕರ್ನಾಟಕದ ಕಡೆ ಸಾಮಾನ್ಯ ಮಳೆ ಸುರಿಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಬೆಳಗಾವಿಯಲ್ಲಿ ಗಾಳಿ ಸಹಿತ ಮಳೆ ಬಂದು ಬಾಳೆ ಕೃಷಿ ಹಾಳಾಗಿದೆ. ಇದರೊಂದಿಗೆ ರಾಜ್ಯದ ಕೆಲವೇ ಕೆಲವು ಭಾಗದಲ್ಲಿ ಈ ತಿಂಗಳು ಮಳೆ ಸುರಿದಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹೊಸ ವರ್ಷ ಆಗಿರುವ ಕಾರಣ ಯುಗಾದಿ ನಂತರ ಏಪ್ರಿಲ್ 13 ನೇ ತಾರೀಖಿನಿಂದ ವರ್ಷದ ಹೊಸ ಮಳೆ ಶುರುವಾಗಲಿದ್ದು ಮೊದಲನೇ ಮಳೆ ರಾಜ್ಯಕ್ಕೆ ಬರುವುದೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂಗಾರು ಮಳೆ ಕಳೆದ ವರ್ಷಕ್ಕಿಂತ ಒಂದು ವಾರ ಮುಂಚಿತವಾಗಿ ರಾಜ್ಯಕ್ಕೆ ಕಾಲು ಇಡುತ್ತಿದೆ. ಮುಂಗಾರು ಪೂರ್ವ ಮಳೆಯು ರಾಜ್ಯಕ್ಕೆ ಅಷ್ಟೇನೂ ವರದಾನವಾಗಿ ಪರಿಣಮಿಸುವುದಿಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಕೃಷಿ ಭೂಮಿ ಹೊಂದಿರುವ ರೈತರು ಮಳೆಗಾಲದ ಸಮಯದಲ್ಲಿ ಕೃಷಿ ಹೊಂಡ ಇಂಗು ಗುಂಡಿ ಮತ್ತು ಹೊಲಗಳಲ್ಲಿ ಬದು ನಿರ್ಮಾಣ ಮಾಡುವ ಮೂಲಕ ಮಳೆಗಾಲದಲ್ಲಿ ಸುರಿಯುವಂತೆ ನೀರನ್ನು ಅವರ ಜಮೀನಿನಲ್ಲಿಯೇ ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸಿಕೊಂಡರೆ ಮುಂದಿನ ದಿನಗಳಲ್ಲಿ ಕೃಷಿ ಮಾಡಲು ಮತ್ತು ನೀರಾವರಿ ಕೃಷಿ ಮಾಡಲು ನೀರು ದೊರಕುತ್ತದೆ.

ಇಲ್ಲವಾದರೆ ಅಂತರ್ಜಲ ಮಟ್ಟ ಪ್ರತಿವರ್ಷ ಕುಸಿದು ಕೃಷಿ ಚಟುವಿಕೆಗಳಿಗೆ ಸಮಸ್ಯೆಯಾಗಿ ಕಾಡಬಹುದು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷವೂ ಜಮೀನುಗಳಲ್ಲಿ ಕೃಷಿ ಬದು ನಿರ್ಮಾಣ ಮತ್ತು ಇಂಗುಂಡಿ ನಿರ್ಮಾಣ ಮಾಡಲು ಸಾವಿರಾರು ರೂಪಾಯಿಗಳಷ್ಟು ಸಹಾಯಧನವನ್ನು ನೀಡುತ್ತಿದ್ದು ಅದನ್ನು ಕೃಷಿಕರು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕಿದೆ.

Leave a Reply

Your email address will not be published. Required fields are marked *