ಕೇಂದ್ರ ರೈಲ್ವೆ ನೇಮಕಾತಿ ಕೋಶವು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆಯನ್ನು ಹೊರಡಿಸಿದೆ. ಕೇಂದ್ರ ರೈಲ್ವೆಯಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಲಾಗಿರುವ ಈ ಕೆಳಗಿನ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಇಲ್ಲಿ ನೀವು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎನ್ನುವುದನ್ನು ಸಹ ಈ ಲೇಖನದ ಮೂಲಕ ತಿಳಿಯಬಹುದು.
ಕೇಂದ್ರ ರೈಲ್ವೆಯ ನೇಮಕಾತಿ ವಿಭಾಗವು ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಒಟ್ಟು ಐದು ಕ್ಲಸ್ಟರ್ಗಳಿಗೆ ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಪ್ರೆಂಟಿಸ್ ಹುದ್ದೆಗಳ ನೇಮಕ ಈ ರೀತಿಯಾಗಿರುತ್ತದೆ. ಮುಂಬೈ ಕ್ಲಸ್ಟರ್ ಅಪ್ರೆಂಟಿಸ್ ಹುದ್ದೆಗಳು ಇಲ್ಲಿ ಒಟ್ಟೂ 1767 ಹುದ್ದೆಗಳು ಖಾಲಿ ಇವೆ. ಭುಸವಲ್ ಕ್ಲಸ್ಟರ್ ನಲ್ಲಿ ನಾಲ್ಕುನೂರ ಇಪ್ಪತ್ತು, ಪುಣೆ ಕ್ಲಸ್ಟರ್ ನಲ್ಲಿ ನೂರಾ ಐವತ್ತೆರಡು ಹುದ್ದೆಗಳು, ನಾಗ್ಪುರ್ ಕ್ಲಸ್ಟರ್ನಲ್ಲಿ 114, ಸೋಲಾಪುರ್ ಕ್ಲಸ್ಟರ್ನಲ್ಲಿ ಎಪ್ಪತ್ತೊಂಭತ್ತು ಹುದ್ದೆಗಳು ಖಾಲಿ ಇದ್ದು ಒಟ್ಟೂ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 2532 ಆಗಿರುತ್ತದೆ .ಈ ಹುದ್ದೆಗಳನ್ನು ವಿವಿಧ ಟ್ರೇಡ್ಗಳ ಅಡಿಯಲ್ಲಿ ನೇಮಕ ಮಾಡಲಾಗುತ್ತದೆ.
ಇನ್ನೂ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಏನಿವೆ ಎಂದು ನೋಡುವುದಾದರೆ, ಮೊದಲಿಗೆ ಅರ್ಜಿ ಸಲ್ಲಿಸುವುದು ಆನ್ಲೈನ್ ಮೂಲಕ ಆಗಿರುವುದು. ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ 06-02-2021 ಆಗಿದ್ದು ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 05-03-2021 ರ ಸಂಜೆ 5 ಗಂಟೆವರೆಗೆ ಸಮಯವಿದೆ.
ಇನ್ನೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ವಿದ್ಯಾರ್ಹತೆ ಎನು ಎಂದು ನೋಡುವುದಾದರೆ ಅಭ್ಯರ್ಥಿಗಳು ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಶೇಕಡ 50 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಾಸ್ ಮಾಡಿರಬೇಕು, ಇದರ ಜೊತೆಗೆ ಸಂಬಂಧಿತ ಟ್ರೇಡ್ಗಳಲ್ಲಿ ಐಟಿಐ ಪಾಸ್ ಮಾಡಿರಬೇಕು. ಹಾಗೂ ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಶುಲ್ಕ 100 ರೂಪಾಯಿಯನ್ನು ಪಾವತಿಸಬೇಕು. ಈ ಶುಲ್ಕವನ್ನು ಆನ್ಲೈನ್ ಮೂಲಕ ಕೂಡಾ ಪಾವತಿಸಬಹುದು.
ಹುದ್ದೆಯ ಹೆಸರು ಮತ್ತು ಹುದ್ದೆಗಳ ವಿವರ ನೋಡುವುದಾದರೆ ವಿವಿಧ ಟ್ರೇಡ್ ಅಪ್ರೆಂಟಿಸ್ ಹುದ್ದೆ ವಿವರ ಕೇಂದ್ರ ರೈಲ್ವೆಯ ಆರ್ಆರ್ಸಿ ಅಧಿಸೂಚನೆ ಪ್ರಕಟಣೆ ಮಾಡಿದ ದಿನಾಂಕ 2021-02-06 ಆಗಿದ್ದು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆ ದಿನಾಂಕ ಮಾರ್ಚ್ ಐದು 5/03/2021 ಆಗಿರುತ್ತದೆ. ಉದ್ಯೋಗ ವಿಧ ತಾತ್ಕಾಲಿಕ ಉದ್ಯೋಗ ಕ್ಷೇತ್ರ ರೈಲ್ವೆ ಉದ್ಯೋಗ ವೇತನ ನೋಡುವುದಾದರೆ ತಿಂಗಳಿಗೆ ಎಂಟರಿಂದ ಹತ್ತು ಸಾವಿರ ಸಂಬಳ ಪಡೆಯಬಹುದು.
ಸಂಸ್ಥೆಯ ಹೆಸರು ಕೇಂದ್ರ ರೈಲ್ವೆ ಆಗಿದ್ದು ಈ ಸಂಸ್ಥೆಯ ವೆಬ್ಸೈಟ್ ವಿಳಾಸ ಇಲ್ಲಿದೆ. https://www.rrccr.com/Home/ಹೋಂ ಇನ್ನೂ ಉದ್ಯೋಗ ಸ್ಥಳ ಎಲ್ಲಿ ಎಂದು ನೋಡುವುದಾದರೆ , ವಿಳಾಸ ಮುಂಬೈ
ಸ್ಥಳ ಮುಂಬೈ ಪ್ರದೇಶ ಮಹಾರಾಷ್ಟ್ರ
ಅಂಚೆ ಸಂಖ್ಯೆ400010
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು https://www.rrccr.com ಗೆ ಭೇಟಿ ನೀಡಬಹುದು.