Rahu transit in Pisces 2023: ಶೀಘ್ರದಲ್ಲಿ ರಾಹು ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ ರಾಹುವಿನ ಸ್ಥಾನ ಬದಲಾವಣೆಯು ಕೆಲವು ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ 12 ರಾಶಿಗಳಲ್ಲಿ ರಾಹುವಿನ ಸಂಚಾರದಿಂದ ಕೆಟ್ಟ ಪರಿಣಾಮವನ್ನು ಎದುರಿಸುವ ನಾಲ್ಕು ರಾಶಿಗಳು ಯಾವುವು ಹಾಗೂ ಈ ನಾಲ್ಕು ರಾಶಿಯವರ ಮೇಲೆ ಯಾವೆಲ್ಲಾ ಪರಿಣಾಮವನ್ನು ರಾಹು ಬೀರಲಿದ್ದಾನೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಪ್ರತಿಯೊಂದು ಗ್ರಹವು ಅದರ ನಿರ್ದಿಷ್ಟ ಸಮಯ ಮುಗಿದ ಕೂಡಲೆ ಇನ್ನೊಂದು ಸ್ಥಾನಕ್ಕೆ ಸಾಗುತ್ತದೆ ಮತ್ತು ಎಲ್ಲ ರಾಶಿ ಚಕ್ರಗಳ ಚಿಹ್ನೆಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ರಾಹುವನ್ನು ನೆರಳು ಗ್ರಹ ಎಂದು ಪರಿಗಣಿಸಲಾಗಿದೆ. ರಾಹುವಿನಿಂದ ಆರ್ಥಿಕ ತೊಂದರೆ, ದೈಹಿಕ ತೊಂದರೆ, ಮಾನಸಿಕ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು ತನ್ನ ಪ್ರಸ್ತುತ ರಾಶಿಯಿಂದ ಹೊರಬರಲಿದ್ದಾನೆ ಅಕ್ಟೋಬರ್ 30ನೇ ತಾರೀಖಿನಂದು ಮೀನ ರಾಶಿಯನ್ನು ಪ್ರವೇಶ ಮಾಡುತ್ತಾನೆ ಮೀನ ರಾಶಿಯನ್ನು ಆಳುವ ಗ್ರಹ ಗುರು ಗ್ರಹ. ಕೆಲವು ರಾಶಿ ಚಕ್ರಗಳ ಚಿಹ್ನೆಗಳಿಗೆ ರಾಹುವಿನ ಸ್ಥಾನ ಬದಲಾವಣೆಯು ಅಶುಭಕರವಾಗಿದೆ. ರಾಹು ಸಂಕ್ರಮಣದ ಸಮಯದಲ್ಲಿ ಕೆಲವು ರಾಶಿಯವರು ಜಾಗರೂಕತೆಯಿಂದ ಇರಬೇಕಾಗುತ್ತದೆ.

ರಾಹು ಮೀನ ರಾಶಿಗೆ ಪ್ರವೇಶಿಸಿದ ನಂತರ ಕಟಕ ರಾಶಿಯವರು ಕೈಗೊಂಡ ಕೆಲಸದಲ್ಲಿ ವೈಫಲ್ಯತೆ ಕಾಣುತ್ತದೆ, ವ್ಯಾಪಾರ ಮಾಡುತ್ತಿರುವ ಕಟಕ ರಾಶಿಯವರಿಗೆ ನಷ್ಟ ಉಂಟಾಗುತ್ತದೆ. ಉದ್ಯೋಗ ಮಾಡುತ್ತಿರುವ ಕಟಕ ರಾಶಿಯವರಿಗೆ ಹೊಸ ಬದಲಾವಣೆ ಆಗುತ್ತದೆ ಅಲ್ಲದೆ ಈ ರಾಶಿಯರು ಕೆಲಸದ ಒತ್ತಡದಲ್ಲಿ ಅಧಿಕಾರಿಗಳ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮನಸ್ತಾಪ ಕಂಡುಬರುತ್ತದೆ ಇದರಿಂದ ಕೆಲಸ ಮಾಡಲು ಈ ರಾಶಿಯವರಿಗೆ ಕಷ್ಟವಾಗುತ್ತದೆ. ಪತಿ ಪತ್ನಿಯರ ನಡುವೆ ಕೆಲವು ವಿಚಾರಗಳಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ

ಕಟಕ ರಾಶಿಯವರು ವೈವಾಹಿಕ ಸಂಬಂಧ ವೃತ್ತಿ ಹಾಗೂ ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕು. ರಾಹುವಿನ ಸ್ಥಾನ ಬದಲಾವಣೆಯಿಂದ ಸಿಂಹ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕೈಗೊಂಡ ಕೆಲಸಗಳನ್ನು ಯಶಸ್ವಿಯಾಗಿಸಲು ಬಹಳ ಕಷ್ಟ ಪಡಬೇಕಾಗುತ್ತದೆ. ಸಿಂಹರಾಶಿಯ ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಿಂಹ ರಾಶಿಯವರ ವೈವಾಹಿಕ ಜೀವನ ಅಷ್ಟೊಂದು ಉತ್ತಮವಾಗಿರುವುದಿಲ್ಲ, ಪತಿ ಪತ್ನಿಯರ ನಡುವೆ ಅನ್ಯೋನ್ಯತೆ ಇದ್ದರೂ ಸಣ್ಣ ಪ್ರಮಾಣದಲ್ಲಿ ಆದರೂ ಕಿರಿಕಿರಿ ಇರುತ್ತದೆ. ಈ ರಾಶಿಯವರು ವ್ಯಾಪಾರದಲ್ಲಿ ಹೂಡಿಕೆ ಮಾಡುವುದಿದ್ದರೆ ಹೆಚ್ಚು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

Rahu transit in Pisces 2023

ರಾಹುವಿನ ಸಂಚಾರದಿಂದ ಕನ್ಯಾ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಕನ್ಯಾ ರಾಶಿಯವರಿಗೆ ಅತಿ ಹೆಚ್ಚು ಕೋಪವಿರುತ್ತದೆ ಅವರು ಕೋಪವನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಆರ್ಥಿಕತೆಯ ವಿಷಯದಲ್ಲಿ ಕನ್ಯಾ ರಾಶಿಯವರಿಗೆ ಅಷ್ಟೇನೂ ಉತ್ತಮವಾಗಿಲ್ಲ ರಾಹುವಿನ ಸಂಚಾರ ಕನ್ಯಾ ರಾಶಿಯವರು ಕೈಗೊಳ್ಳುವ ಕೆಲಸದ ಮೇಲೆ ಪರಿಣಾಮ ಬೀರುತ್ತದೆ, ಕೆಲಸ ಮಾಡುವ ಸ್ಥಳದಲ್ಲಿ ವಾತಾವರಣ ಹದಗೆಡಬಹುದು, ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ಕನ್ಯಾ ರಾಶಿಯವರು ಹೋಗುತ್ತಾರೆ. ಕನ್ಯಾ ರಾಶಿಯ ಕೌಟುಂಬಿಕ ಜೀವನದಲ್ಲಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಸಂಗಾತಿಯೊಂದಿಗೆ ಮನಸ್ತಾಪ ಕಂಡುಬರುತ್ತದೆ

ಇದರಿಂದ ಮಾನಸಿಕ ನೆಮ್ಮದಿ ಪೂರ್ಣವಾಗಿ ಹಾಳಾಗುತ್ತದೆ ಆದ್ದರಿಂದ ಮಾತನಾಡುವಾಗ ಯೋಚಿಸಿ ಮಾತನಾಡಿ. ರಾಹು ಮೀನ ರಾಶಿಯಲ್ಲಿ ಆಗಮಿಸುವುದರಿಂದ ಮೀನ ರಾಶಿಯವರಿಗೆ ಹೆಚ್ಚು ನೋವಿನ ಸಮಯವಾಗಿದೆ. ಮೀನ ರಾಶಿಯವರು ತಮ್ಮ ಗುರಿಯನ್ನು ಸಾಧಿಸಲು ಬಹಳ ಶ್ರಮ ಪಡಬೇಕಾಗುತ್ತದೆ ಕೈಗೊಂಡ ಕೆಲಸಗಳು ಯಶಸ್ಸಾಗುವುದಿಲ್ಲ. ಮೀನ ರಾಶಿಯವರು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಮೀನ ರಾಶಿಯ ವಿದ್ಯಾರ್ಥಿಗಳು ಹೆಚ್ಚು ಜಾಗರೂಕರಾಗಿರಬೇಕು. ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಲು ಈ ಸಮಯದಲ್ಲಿ ಮೀನ ರಾಶಿಯ ವಿದ್ಯಾರ್ಥಿಗಳು ಹೆಚ್ಚು ಓದಬೇಕಾಗುತ್ತದೆ.

ಮೀನ ರಾಶಿಯವರು ಉದ್ಯೋಗ ಹಾಗೂ ಹಣಕಾಸಿನ ಬಗ್ಗೆ ಬಹಳ ಜಾಗರೂಕತೆಯಿಂದ ಇರಬೇಕು ಕೆಲಸ ಕಳೆದುಕೊಳ್ಳುವ ಭೀತಿ ಇದೆ. ಕಟಕ ಸಿಂಹ ಕನ್ಯಾ ಮೀನಾ ರಾಶಿಯವರು ರಾಹುವಿನ ಸಂಚಾರದಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ ಆದ್ದರಿಂದ ಈ ನಾಲ್ಕು ರಾಶಿಯವರು ವೃತ್ತಿ ದಾಂಪತ್ಯ ಉದ್ಯೋಗ ಹಣಕಾಸಿನ ವಿಷಯದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕಾಗುತ್ತದೆ. ಈ ರಾಶಿಯವರು ರಾಹುವಿನ ಮಂತ್ರವನ್ನು ಜಪಿಸಿದರೆ ಸ್ವಲ್ಪಮಟ್ಟಿಗೆ ಕಷ್ಟದಿಂದ ದೂರಾಗಬಹುದು. ದೇವರನ್ನು ನಂಬಿ ದೇವರ ಆರಾಧನೆ ಮಾಡುವ ಮೂಲಕ ರಾಹುವಿನಿಂದ ಉಳಿಯಬಹುದಾಗಿದೆ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *