Health tips For Bed Room ಮನೆ ಎನ್ನುವುದು ಕೇವಲ ಸುಂದರವಾಗಿರುವುದಲ್ಲದೆ ನಾವು ಮನೆಯಲ್ಲಿ ಯಾವ ಯಾವ ಜಾಗದಲ್ಲಿ ಏನೇನು ಇಟ್ಟಿರುತ್ತೇವೆ ಎನ್ನುವುದು ಕೂಡ ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹಳೆಯ ಕಾಲದ ಸಂಪ್ರದಾಯದ ವಿರುದ್ಧವಾದ ಕೆಲಸಗಳನ್ನು ಮಾಡುತ್ತಾರೆ. ನಮ್ಮ ಸಂಪ್ರದಾಯದಲ್ಲಿ ಹಿರಿಯರು ಪಾಲಿಸಿಕೊಂಡು ಬಂದ ನಿಯಮಗಳು ನಮ್ಮ ಜೀವನಕ್ಕೆ ಕನ್ನಡಿ ಆಗಿತ್ತು ಆದರೆ ನಾವುಗಳು ಆಧುನಿಕ ಪದ್ಧತಿಯನ್ನು ಆಚರಿಸಲು ಹೋಗಿ ಕೆಲವು ಅನಾಹುತಗಳನ್ನು ಮಾಡಿಕೊಳ್ಳುತ್ತೇವೆ. ಮನೆಯ ಮಲಗುವ ಕೋಣೆಯಲ್ಲಿ ಯಾವೆಲ್ಲಾ ವಸ್ತುಗಳು ಇರಬೇಕು ಯಾವೆಲ್ಲಾ ವಸ್ತುಗಳನ್ನು ಇಡಬಾರದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ

ಮನೆಯಲ್ಲಿ ಮಲಗುವ ಕೋಣೆಯಲ್ಲಿ ಅದರಲ್ಲೂ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡಲೇಬಾರದು. ಗಂಡ ಹೆಂಡತಿ ಮಲಗುವ ಮಂಚದ ಕೆಳಗೆ ಐರನ್ ಬಾಕ್ಸ್ ಅಥವಾ ಯಾವುದೆ ಕಾರಣಕ್ಕೂ ಕಬ್ಬಿಣದ ವಸ್ತುಗಳನ್ನು ಇಡಬಾರದು. ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಕ್ರೂರ ಪ್ರಾಣಿಗಳ ಫೋಟೊ ಅಂದರೆ ಚಿರತೆ ಇಂತಹ ಕಾಡು ಪ್ರಾಣಿಯ ಫೋಟೋಗಳನ್ನು ಇಡಬಾರದು. ಮನೆಯಲ್ಲಿ ಸಾಮಾನ್ಯವಾಗಿ ನೋಡಲು ಸುಂದರವಾಗಿ ಕಾಣಬೇಕೆಂದು ಅಕ್ವೇರಿಯಂನ್ನು ಇಟ್ಟುಕೊಳ್ಳುತ್ತಾರೆ ಆದರೆ ಅಕ್ವೇರಿಯಂನ್ನು ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಇಡಲೇಬಾರದು

ಮನೆಯ ಬೇರೆ ಹಾಲ್ ನಲ್ಲಿ ಇಡಬಹುದು. ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಅವರು ಮಲಗಲು ಎರಡು ಭಾಗವಾದ ಹಾಸಿಗೆಯನ್ನು ಬಳಸಬಾರದು ಇಬ್ಬರು ಒಂದೆ ಹಾಸಿಗೆಯಲ್ಲಿ ಮಲಗಬೇಕು. ಕೆಲವರು ಬೇಡವಾದ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಮಂಚದ ಕೆಳಗೆ ಅಥವಾ ಹಾಸಿಗೆ ಕೆಳಗೆ ಇಟ್ಟುಕೊಂಡಿರುತ್ತಾರೆ ಈ ತಪ್ಪನ್ನು ಮಾಡಲೇಬಾರದು ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಇರುವುದಿಲ್ಲ.

ಮನೆಯಲ್ಲಿ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಯಾವುದೆ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು. ಮನೆಯಲ್ಲಿ ಮಲಗುವ ಕೋಣೆಯಲ್ಲಿ ಎಲೆಕ್ಟ್ರಿಕ್ ಸಾಮಾನುಗಳು, ಬೇಡವಾದ ಸಾಮಾನುಗಳು, ಕಬ್ಬಿಣದ ಸಾಮಾನುಗಳನ್ನು ಇಡಲೇಬಾರದು ಇದು ಗಂಡ ಹೆಂಡತಿ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಇಬ್ಬರ ನಡುವೆ ಮನಸ್ತಾಪ ಕಲಹಗಳು ಉಂಟಾಗುತ್ತದೆ. ಮಲಗುವ ಕೋಣೆಯಲ್ಲಿ ದಿಮ್ಮಿನ ಕವರ್, ಬೆಡ್ ಶೀಟ್, ಕರ್ಟನ್, ವಾಲ್ ಪೇಪರ್ ಇತರ ಅಲಂಕಾರಿಕ ವಸ್ತುಗಳು ಕಪ್ಪು, ಬೂದು ಕಂದು ಬಣ್ಣದಲ್ಲಿ ಇರಲೆಬಾರದು ಈ ಬಣ್ಣಗಳನ್ನು ಬಿಟ್ಟು ಬೇರೆ ಬಣ್ಣಗಳಲ್ಲಿ ಇರಬಹುದು. ಮಲಗುವ ಕೋಣೆಯಲ್ಲಿ ಗುಲಾಬಿ ಕಿತ್ತಳೆ ನೀಲಿ ಹಳದಿ ಬಣ್ಣದ ವಸ್ತುಗಳನ್ನು ಇಡಬಹುದು ಇದರಿಂದ ಗಂಡ ಹೆಂಡತಿಯ ಮನಸ್ಸು ಶಾಂತ ರೀತಿಯಲ್ಲಿ ಇರುತ್ತದೆ. ಮನೆಯಲ್ಲಿ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಆದಷ್ಟು ಕನ್ನಡಿಯನ್ನು ಇಡಬಾರದು ಒಂದು ವೇಳೆ ಇಟ್ಟರು ಹಾಸಿಗೆ ಕಾಣುವಂತೆ ಕನ್ನಡಿಯನ್ನು ಇಡಬಾರದು.

Health tips For Bed Room

ಮನೆಯಲ್ಲಿ ಮುಳ್ಳಿನ ಗಿಡಗಳನ್ನು ಸುಂದರವಾಗಿ ಕಾಣಲು ಶೋರೂಪದಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೆ ಕಾರಣಕ್ಕೂ ಮುಳ್ಳಿನ ಗಿಡಗಳನ್ನು ಇಡಬಾರದು ಅದು ಪ್ಲಾಸ್ಟಿಕ್ ಆದರೂ ಸರಿ. ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಮಲಗಲು ಮರದ ಮಂಚವನ್ನು ಬಳಸಿದರೆ ಉತ್ತಮ ಗಂಡ ಹೆಂಡತಿಯ ಭಾಂದವ್ಯವು ಮರದಂತೆ ಗಟ್ಟಿಯಾಗಿರುತ್ತದೆ. ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಟಿವಿಯನ್ನು ಇಡಬಾರದು ಇತ್ತೀಚಿನ ದಿನಗಳಲ್ಲಿ ಹಾಲ್ ಗೆ ಒಂದು ಟಿವಿ ಮಲಗುವ ಕೋಣೆಯಲ್ಲಿ ಒಂದು ಟಿವಿಯನ್ನು ಇಟ್ಟುಕೊಳ್ಳುತ್ತಾರೆ ಆದರೆ ಇದು ಸರಿಯಲ್ಲ ನಮ್ಮ ಸಂಪ್ರದಾಯದಲ್ಲಿ ಈ ರೀತಿ ಇಟ್ಟುಕೊಳ್ಳುವುದು ಸಹ ತಪ್ಪಾಗಿದೆ ಹಾಗೆಯೆ ಇದು ಮನೆಗೆ ಹಾಗೂ ದಾಂಪತ್ಯಕ್ಕೆ ಒಳ್ಳೆಯದಲ್ಲ.

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಚಾರ್ಜರ್ ಪುಸ್ತಕ ಫೈಲ್ ಹೀಗೆ ಕೆಲಸಕ್ಕೆ ಸಂಬಂಧಪಟ್ಟ ವಸ್ತುಗಳಿದ್ದರೆ ಅವುಗಳಿಗೆ ಪ್ರತ್ಯೇಕ ಜಾಗ ಮಾಡಿ ಅಲ್ಲಿಯೆ ಇಡಿ ಕೋಣೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು. ಕೆಲವರ ಮನೆಯಲ್ಲಿ ಹೊಲಿಗೆ ಮಷೀನ್ ಇರುತ್ತದೆ ಹೊಲಿಯಲು ಸುಲಭವಾಗುತ್ತದೆ ಎಂದು ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ಹೊಲಿಗೆ ಮಷೀನ್ ಅನ್ನು ಮಲಗುವ ಕೋಣೆಯಲ್ಲಿ ಇಡಬಾರದು ಏಕೆಂದರೆ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಸೂಜಿ ಚಾಕು ಕತ್ತರಿ ಬ್ಲೇಡ್ ಇಂತಹ ಹರಿತವಾದ ವಸ್ತುಗಳನ್ನು ಇಡಲೇಬಾರದು ಇದು ಒಳ್ಳೆಯದಲ್ಲ. ಒಟ್ಟಿನಲ್ಲಿ ಮನೆಯ ಯಾವ ಯಾವ ಜಾಗದಲ್ಲಿ ಏನೇನು ಇರಬೇಕೊ ಅವುಗಳನ್ನ ಅಲ್ಲಿಯೆ ಇಡಬೇಕು ಎಲ್ಲೆಂದರಲ್ಲಿ ಇಟ್ಟರೆ ನಮ್ಮ ಜೀವನಕ್ಕೆ ನಾವೆ ಸಮಸ್ಯೆಗಳನ್ನು ತಂದುಕೊಳ್ಳುತ್ತೇವೆ ಈ ಮಾಹಿತಿ ಉಪಯುಕ್ತ ಮಾಹಿತಿಯಾಗಿದ್ದು ಹಾಗೂ ಅಪರೂಪದ ಮಾಹಿತಿಯಾಗಿದ್ದು ತಪ್ಪದೆ ನೀವು ಓದಿ ಓದಿದ ನಂತರ ನಾಲ್ಕು ಜನರಿಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *