ದೊಡ್ಮನೆ ಇಡೀ ಕನ್ನಡ ಚಿತ್ರರಂಗಕ್ಕೆ ಮಾದರಿಯಾಗಿರುವಂತಹ ಮನೆ ಅದು. ದೊಡ್ಮನೆಯಿಂದಲೇ ಅದೆಷ್ಟೋ ಜನ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ನಟ ದರ್ಶನ್ ಅವರಿಂದ ಹಿಡಿದು ಪ್ರತಿಯೊಬ್ಬರೂ ಕೂಡ ನಾವು ದೊಡ್ಮನೆಯ ಋಣ ತೀರಿಸಬೇಕು ಎನ್ನುವ ಮಾತನಾಡುತ್ತಾರೆ.
ದೊಡ್ಮನೆಯ ಪ್ರತೀ ಸದಸ್ಯರು ಕೂಡ ಮಾದರಿಯಾಗಿ ಬದುಕುತ್ತಿದ್ದಾರೆ ದೊಡ್ಮನೆಗೆ ಸಂಬಂಧಿಸಿದಂತೆ ವಿವಾದಗಗಳು ಕಪ್ಪುಚುಕ್ಕೆ ಇಲ್ಲವೇ ಇಲ್ಲ. ಅದಕ್ಕೆ ಕಾರಣ ದೊಡ್ಮನೆಗೆ ಬರುವಂತಹ ಪ್ರತಿಯೊಬ್ಬರೂ ಕೂಡ ಸೊಸೆಯಂದಿರಾಗಿರಬಹುದು ಅಥವಾ ದೊಡ್ಮನೆಯ ಮೊಮ್ಮಕ್ಕಳಾಗಿರಬಹುದು ಎಲ್ಲೂ ಯಾವುದೇ ವಿವಾದಕ್ಕೆ ಗುರಿಯಾಗುವುದಿಲ್ಲ. ಇವತ್ತು ನಾವು ನಿಮಗೆ ಅದೇ ದೊಡ್ಮನೆಯ ಓರ್ವ ಸದಸ್ಯರ ಬಗ್ಗೆ ತಿಳಿಸಿಕೊಡುತ್ತೇವೆ.
ಸಾಮಾನ್ಯವಾಗಿ ದೊಡ್ಮನೆಯ ಸದಸ್ಯರ ಬಹುತೇಕ ವಿಷಯಗಳು ಎಲ್ಲರಿಗೂ ತಿಳಿದಿರುತ್ತದೆ ಆದರೆ ರಾಘವೇಂದ್ರ ರಾಜಕುಮಾರ್ ಅವರ ಹೆಂಡತಿಯಾಗಿರುವಂತಹ ಮಂಗಳಮ್ಮನವರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ರಾಘವೇಂದ್ರ ರಾಜಕುಮಾರ್ ಅವರು ಯಾವಾಗಲೂ ಹೇಳುತ್ತಿರುತ್ತಾರೆ ನಾನು ನನ್ನ ಹೆಂಡತಿಯಲ್ಲಿ ತಾಯಿಯನ್ನು ನೋಡುತ್ತಿದ್ದೇನೆ ನನ್ನ ಹೆಂಡತಿ ನನಗೆ ತಾಯಿಯ ರೂಪದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ ಎಂದು. ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳಮ್ಮ ಪ್ರೀತಿಸಿ ಮದುವೆಯಾಗಿರುವವರು ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ
ನಂತರ ಬರುತ್ತಾ ಬರುತ್ತಾ ರಾಘವೇಂದ್ರ ರಾಜಕುಮಾರ್ ಅವರ ಸಿನಿಮಾಗಳು ಕೂಡ ಅಷ್ಟು ಯಶಸ್ವಿಯಾಗುವುದಿಲ್ಲ ಅದರಿಂದ ರಾಘವೇಂದ್ರ ರಾಜಕುಮಾರ್ ಅವರು ಕೂಡ ಬೇಸರಗೊಳ್ಳುತ್ತಾರೆ ಆಗ ರಾಘವೇಂದ್ರ ರಾಜಕುಮಾರ್ ಅವರಿಗೆ ಎಲ್ಲ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡಿದವರು ಮಂಗಳಮ್ಮನವರು. ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗುತ್ತದೆ ಸಿಂಗಾಪುರಕ್ಕೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ ಅವರ ಆರೋಗ್ಯದಲ್ಲಿ ಪದೇಪದೇ ಏರುಪೇರಾಗುತ್ತಾ ಇರುತ್ತದೆ ಸದ್ಯ ಅವರು ಫಿಸಿಯೊಥೆರಪಿಯನ್ನು ಪಡೆದುಕೊಳ್ಳುವ ಮೂಲಕ ನಮ್ಮ ನಡುವೆ ಇದ್ದಾರೆ.
ರಾಘವೇಂದ್ರ ರಾಜಕುಮಾರ್ ಅವರ ಜೊತೆ ಎಲ್ಲಾ ಸಂದರ್ಭದಲ್ಲೂ ನಿಂತವರು ಮಂಗಳಮ್ಮ ಅವರು. ಅವರ ಬಗ್ಗೆ ಕೆಲವು ವಿಚಾರಗಳನ್ನು ನಾವಿಂದು ತಿಳಿದುಕೊಳ್ಳೋಣ. ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳಮ್ಮ ಅವರು ಪ್ರೀತಿಸಿ ಮದುವೆಯಾದವರು. ರಾಜಕುಮಾರ್ ಅವರ ಮನೆಯಲ್ಲಿ ಎಲ್ಲರಿಗೂ ಶರತ್ತನ್ನು ವಿಧಿಸಿದ್ದರು ನೀವೆಲ್ಲರೂ ಮದುವೆಯಾದ ನಂತರವೇ ಸಿನಿಮಾರಂಗಕ್ಕೆ ಕಾಲಿಡಬೇಕು ಎಂದು. ಶಿವರಾಜ್ ಕುಮಾರ್ ಅವರು ಸಿನಿಮಾರಂಗಕ್ಕೆ ಹೋಗುವುದು ರಾಜಕುಮಾರ್ ಅವರಿಗೆ ಇಷ್ಟವಿರಲಿಲ್ಲ
ಅವರು ಉತ್ತಮ ಶಿಕ್ಷಣವನ್ನು ಪಡೆದು ಬೇರೆ ಯಾವುದಾದರೂ ಕೆಲಸವನ್ನು ಮಾಡಲಿ ಎಂದು ಅವರು ಆಸೆ ಪಟ್ಟಿದ್ದರು. ಆದರೆ ಶಿವರಾಜಕುಮಾರ್ ಅವರು ಕೂಡ ಸಿನಿಮಾರಂಗಕ್ಕೆ ಕಾಲಿಡುತ್ತಾರೆ ಅದಕ್ಕೂ ಮೊದಲು ಗೀತಾ ಅವರನ್ನು ವಿವಾಹವಾಗುತ್ತಾರೆ. ಅದೇ ರೀತಿ ಪುನೀತ್ ರಾಜಕುಮಾರ್ ಅವರು ಕೂಡ ಮದುವೆಯಾದಮೇಲೆ ಸಿನಿಮಾರಂಗಕ್ಕೆ ತೆರಳುತ್ತಾರೆ. ರಾಘವೇಂದ್ರ ರಾಜಕುಮಾರ್ ಅವರು ವೈದ್ಯರಾಗಬೇಕು ಎಂಬ ಆಸೆಯನ್ನು ರಾಜಕುಮಾರ್ ಅವರು ಹೊಂದಿದ್ದರು.
ಗಾಜನೂರಿನಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟಿಸಿ ಜನರಿಗೆ ಉಚಿತ ಚಿಕಿತ್ಸೆಯನ್ನು ಕೊಡಬೇಕು ಎಂದು ಆಲೋಚಿಸಿ ಅದೇ ಪ್ರಕಾರವಾಗಿ ರಾಘವೇಂದ್ರ ರಾಜಕುಮಾರ್ ಅವರಿಗೆ ಶಿಕ್ಷಣವನ್ನು ಕೊಡಿಸುತ್ತಾರೆ ಆದರೆ ರಾಘವೇಂದ್ರ ರಾಜಕುಮಾರ್ ಅವರು ಅದನ್ನು ಪೂರ್ತಿಗೊಳಿಸುವುದಿಲ್ಲ. ಅವರಿಗೂ ಕೂಡ ಸಿನಿಮಾ ರಂಗದ ಬಗ್ಗೆ ವಿಶೇಷವಾದ ಒಲವಿರುತ್ತದೆ ಕಾರಣ ಅವರು ಬಾಲನಟನಾಗಿ ಒಂದೆರಡು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದರು
ಅನಂತರ ಸಿನಿಮಾರಂಗಕ್ಕೆ ಬರಬೇಕೆಂದು ಅವರು ಕೂಡ ಆಸೆಯನ್ನ ಪಡುತ್ತಿರುತ್ತಾರೆ. ಶಿವರಾಜ್ ಕುಮಾರ್ ಅವರ ಮದುವೆ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದವರು ಮಂಗಳಮ್ಮನವರು ಆಗ ರಾಘವೇಂದ್ರ ರಾಜಕುಮಾರ್ ಅವರ ಕಣ್ಣಿಗೆ ಬೀಳುತ್ತಾರೆ. ಆ ಕ್ಷಣದಲ್ಲಿಯೇ ರಾಘವೇಂದ್ರ ರಾಜಕುಮಾರ್ ಅವರು ತಾನು ಮದುವೆಯಾಗುವುದು ಇದೇ ಹುಡುಗಿಯನ್ನು ಎಂದು ನಿರ್ಧಾರವನ್ನು ಮಾಡುತ್ತಾರೆ. ಅದಾದ ನಂತರ ಅವರಿಗೆ ತಿಳಿಯುತ್ತದೆ ಇದು ಅವರ ಅತ್ತಿಗೆಯ ತಂಗಿ ಅಂದರೆ ಗೀತಾ ಶಿವರಾಜ್ ಕುಮಾರ್ ಅವರ ತಂಗಿ ಮಂಗಳಮ್ಮನವರು ಅಂದರೆ ಗೀತಾ ಶಿವರಾಜ್ ಕುಮಾರ್ ಅವರ ತಾಯಿಯ ತಂಗಿಯ ಮಗಳಾಗಿರುತ್ತಾರೆ.
ಆಗ ರಾಘವೇಂದ್ರ ರಾಜಕುಮಾರ್ ಅವರಿಗೆ ಇದರಿಂದ ಸ್ವಲ್ಪ ಧೈರ್ಯ ಬರುತ್ತದೆ ಮನೆಯಲ್ಲಿ ಸುಲಭವಾಗಿ ಕೇಳಬಹುದು ತಕ್ಷಣ ಒಪ್ಪಿಕೊಳ್ಳುತ್ತಾರೆ ಎಂದುಕೊಳ್ಳುತ್ತಾರೆ. ಮಂಗಳಮ್ಮ ನವರ ಬಳಿ ಹೋಗಿ ಇದೇ ವಿಚಾರವಾಗಿ ಮಾತನಾಡುತ್ತಾರೆ ಮಂಗಳಮ್ಮನವರು ಕೂಡ ರಾಘವೇಂದ್ರ ರಾಜಕುಮಾರ್ ಅವರನ್ನು ಒಪ್ಪಿಕೊಳ್ಳುತ್ತಾರೆ. ನಂತರ ರಾಘವೇಂದ್ರ ರಾಜಕುಮಾರ್ ಅವರು ಈ ವಿಷಯವನ್ನು ಮನೆಯವರಿಗೆ ತಿಳಿಸುತ್ತಾರೆ ಮನೆಯವರು ಒಪ್ಪಿಕೊಳ್ಳುತ್ತಾರೆ.
ಮದುವೆಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಅದ್ದೂರಿಯಾಗಿ ಮದುವೆಯಾಗುತ್ತದೆ ನಂತರ ಮಂಗಳಮ್ಮ ನವರು ಹಂತಹಂತವಾಗಿ ಸಂಪೂರ್ಣವಾಗಿ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿಯಾಗಿ ಶಿವರಾಜ್ ಕುಮಾರ್ ಅವರ ಹೆಂಡತಿಯಾದಂತಹ ಗೀತಾ ಅವರೊಂದಿಗೂ ಪುನೀತ್ ರಾಜಕುಮಾರ್ ಅವರ ಹೆಂಡತಿಯಾದಂತಹ ಅಶ್ವಿನಿ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ.
ರಾಘವೇಂದ್ರ ರಾಜಕುಮಾರ್ ಅವರು ನಟನೆಯಿಂದ ಹಿಂದೆ ಸರಿದಾಗ ಮಂಗಳಮ್ಮನವರು ಅವರ ಬೆಂಬಲಕ್ಕೆ ನಿಲ್ಲುತ್ತಾರೆ ಪದೇಪದೇ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಹದಗೆಡುತ್ತಿರುತ್ತದೆ ಆ ಪರಿಸ್ಥಿತಿಯಲ್ಲಿ ಅವರ ಜೊತೆ ನಿಲ್ಲುತ್ತಾರೆ ಅವರ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತಾರೆ ಆ ಕಾರಣದಿಂದಾಗಿಯೇ ರಾಘವೇಂದ್ರ ರಾಜಕುಮಾರ್ ಅವರು ನಮ್ಮ ನಿಮ್ಮ ನಡುವೆ ಓಡಾಡಿಕೊಂಡು ಇದ್ದಾರೆ.
ಮಂಗಳಮ್ಮ ಅವರು ತಮ್ಮ ಕುಟುಂಬಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅವರು ನೇರವಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳದಿದ್ದರೂ ಕಾರ್ಯಕಾರಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಇಬ್ಬರು ಗಂಡು ಮಕ್ಕಳಾದ ವಿನಯ ರಾಜಕುಮಾರ್ ಹಾಗೂ ಯುವ ರಾಜಕುಮಾರ್ ಅವರನ್ನು ಕೂಡ ಸರಿಯಾದ ರೀತಿಯಲ್ಲಿ ಬೆಳೆಸಿದ್ದಾರೆ. ಒಟ್ಟಾರೆಯಾಗಿ ದೊಡ್ಮನೆ ತಕ್ಕನಾದ ಸೊಸೆ ಮಂಗಳಮ್ಮನವರು ಎನಿಸಿಕೊಂಡಿದ್ದಾರೆ ಆ ಪ್ರಕಾರವಾಗಿಯೇ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ.