ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾ , ಕನ್ನಡದ ಚಾನೆಲ್ ಒಂದರನ್ನು ಉತ್ತುಂಗಕ್ಕೆ ಏರಿಸಿದ ರಾಘವೇಂದ್ರ ಹುಣಸೂರು ಅವರ ಮದುವೆಯ ಸುಂದರ ಕ್ಷಣಗಳು ಮತ್ತು ಅವರ ಜೀವನದ ಕುರಿತು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇವರು ಕನ್ನಡ ಕಿರುತೆರೆ ರೂಪರೇಷೆಯನ್ನು ಬದಲಿಸಿ ಹೊಸ ರೂಪರೇಷೆಯನ್ನು ಕೊಟ್ಟವರು. ಇವರು ಮೂಲತಃ ಮೈಸೂರಿನವರಾಗಿದ್ದು ಹುಣಸೂರು ಇವರ ಉರು. ಹುಟ್ಟಿದ್ದು ಅಕ್ಟೋಬರ್ 15, 1985 ರಲ್ಲಿ. ಚಿಕ್ಕ ವಯಸ್ಸಿನಲ್ಲಿ ನಾಟಕ ಚರ್ಚೆ ಆಸಕ್ತಿ ಹಿಂದಿದ್ದ ಇವರು ಶಾಲಾ-ಕಾಲೇಜಿನಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದವರು. ಇದೆ ಆಸಕ್ತಿಯಿಂದ ಲ್ಯಾಂಡ್ ಆದರೂ ಸ್ಟಾರ್ ಸುವರ್ಣದಲ್ಲಿ ಎಕ್ಸಿಕ್ಯೂಟಿಂಗ್ ಪ್ರೋಡಿಸರ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ ಅದೇ ಚಾನಲ್ ನಲ್ಲಿ ಉನ್ನತ ಮಟ್ಟಕ್ಕೆ ಬೆಳೆದು ತೋರಿಸಿದರು. ಇಡೀ ದಕ್ಷಿಣ ಭಾರತದಲ್ಲಿ ಕಿರುತೆರೆಯಲ್ಲಿ ಕನ್ನಡ ಸ್ಮಾಲ್ ಸ್ಕ್ರೀನ್ ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದವರು ಬೇರಾರೂ ಅಲ್ಲ, ಅವರು ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವ ರಾಘವೇಂದ್ರ ಹುಣಸೂರ್ ಅವರು ಎಂದರೆ ತಪ್ಪಾಗಲಾರದು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ರಾಘವೇಂದ್ರ ಹುಣಸೂರು ಅವರು ನಿರ್ಮಿಸಿದಂತಹ ಪ್ಯಾಟೆ ಹುಡುಗಿ ಹಳ್ಳಿ ಲೈಫು, ಸೈ, ಹಳ್ಳಿ ಹೈದ ಪ್ಯಾಟೆಗ್ ಬಂದ, ನೀನಾ ನಾನಾ, ಕನ್ನಡದ ಕೋಟ್ಯಾಧಿಪತಿ ಹೀಗೆ ಹಲವಾರು ಸೂಪರ್ ಕಾರ್ಯಕ್ರಮಗಳನ್ನೂ ನೀಡುತ್ತಾ ಬಂದರು.

ನಂತರ 2014 ರಲ್ಲೀ ಜೀ ಕನ್ನಡ ಪ್ರೋಗ್ರಾಮ್ ಹೆಡ್ ಆಗಿ ಸೇರಿಕೊಂಡು ಸದ್ಯ ಅಲ್ಲಿನ ಬಿಸಿನೆಸ್ ಹೆಡ್ ಕೂಡಾ ರಾಘವೇಂದ್ರ ಹುಣಸೂರು ಆಗಿದ್ದಾರೆ. ಇವರ ಸಾರಥ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಸಹ ಜನರಿಗೆ ಚಿರಪರಿಚಿತ ಮತ್ತು ಸಾಕಷ್ಟು ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ಸಹ ನಂಬರ್ ಒನ್ ಸ್ಥಾನ ಪಡೆದಿವೆ. ಕಮಲಿ , ಪಾರು , ಗಟ್ಟಿಮೇಳ , ಜೊತೆ ಜೊತೆಯಲಿ ಹೀಗೆ ಒಳ್ಳೆ ಧಾರಾವಾಹಿಗಳನ್ನು ಹಾಗೂ ಸರಿಗಮಪ, ಡ್ರಾಮಾ ಜೂನಿಯರ್, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ವೀಕೆಂಡ್ ವಿತ್ ರಮೇಶ್ ಅಂತಹ ರಿಯಾಲಿಟಿ ಶೋಗಳು ಕೂಡಾ ರಾಘವೇಂದ್ರ ಹುಣಸೂರು ಅವರ ಸಾರ್ಥ್ಯದಲ್ಲಿ ಮೂಡಿಬರುತ್ತಿದೆ.

ಹೀಗೆ ತಮ್ಮ ಕಾರ್ಯಕೌಶಲ್ಯತೆಯಿಂದ ಕನ್ನಡ ಚಾನಲ್ ಅನ್ನು ಎತ್ತರಕ್ಕೆ ಕೊಂಡೊಯ್ಯುವಂತೆ ಸಾಧನೆ ಮಾಡಿ ತೋರಿಸಿದರು. ಹೀಗೆ ಸಾಧನೆ ಮಾಡಿದ ರಾಘವೇಂದ್ರ ಹುಣಸೂರು ಅವರು 4 ಮಾರ್ಚ್ 2016 ರಲ್ಲಿ ಸ್ಪೂರ್ತಿ ಬೈರಪ್ಪ ಎಂಬವರ ಜೊತೆ ವಿವಾಹ ಆಗಿದ್ದಾರೆ. ಇವರ ಮದುವೆಯ ಸಂಭ್ರಮದ ಕ್ಷಣದಲ್ಲಿ ಸಾಕಷ್ಟು ಸಿನಿತಾರೆಯರು, ಬಂಧುಗಳು ಸ್ನೇಹಿತರು ಭಾಗವಹಿಸಿದ್ದು ಯಾವ ಯಾವ ಕಲಾವಿದರು ಬಂದು ಶುಭ ಹಾರೈಸಿದ್ದಾರೆ ಎಂಬುದನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!