ಅಣ್ಣ ತಂಗಿ ಖ್ಯಾತಿಯ ರಾಧಿಕಾ ಅವರು ಯಾರಿಗೆ ತಾನೇ ಗೊತ್ತಿಲ್ಲ. ಅವರು ನಟನೆಯ ಜೊತೆಗೆ ಉತ್ತಮ ಡ್ಯಾನ್ಸ್ ಕೂಡಾ ಮಾಡುತ್ತಾರೆ. ರಾಧಿಕಾ ಅವರು ಕುಮಾರಸ್ವಾಮಿ ಅವರನ್ನು ಮದುವೆಯಾಗಿ ರಾಧಿಕಾ ಕುಮಾರಸ್ವಾಮಿ ಆದರು. ಅವರಿಗೆ ಒಬ್ಬಳು ಮುದ್ದಾದ ಮಗಳಿದ್ದಾಳೆ. ರಾಧಿಕಾ ಅವರನ್ನು ಕುಮಾರಸ್ವಾಮಿ ಅವರು ಮದುವೆಯಾದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜಕೀಯ ಮಾತ್ರವಲ್ಲದೆ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಮೊದಲಿನಿಂದಲೂ ಅವರಿಗೆ ಸಿನಿಮಾ ಎಂದರೆ ಅಚ್ಚುಮೆಚ್ಚು ಅದಕ್ಕಾಗಿ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿದ್ದಾರೆ. ಈ ಸಂಸ್ಥೆಯ ಮೂಲಕ ಚಿತ್ರ ರಂಗಕ್ಕೆ ಒಳ್ಳೆಯ ಚಿತ್ರಗಳನ್ನು ನೀಡಿದ್ದಾರೆ. ಅವರ ಮಗ ನಿಖಿಲ್ ಸಹ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಅವರ ಪತ್ನಿಯ ಹೆಸರು ಅನಿತಾ ಕುಮಾರಸ್ವಾಮಿ. ಅವರು ಮೊದಲೇ ಮದುವೆಯಾಗಿದ್ದರೂ ಸಹ ರಾಧಿಕಾ ಅವರನ್ನು ಮದುವೆಯಾಗುತ್ತಾರೆ. ಚಂದ್ರ ಚಕೋರಿ, ಮನೆ ಮಗಳು, ಅಣ್ಣ ತಂಗಿ, ತವರಿಗೆ ಬಾ ತಂಗಿ ಮೊದಲಾದ ಹಿಟ್ ಸಿನಿಮಾದಲ್ಲಿ ನಟಿಸಿದ ರಾಧಿಕಾ ಅವರು ಕುಮಾರ ಸ್ವಾಮಿ ಅವರಿಗೆ ಪರಿಚಯವಾದರು ನಂತರ ಸ್ನೇಹ ಪ್ರೀತಿಯಾಯಿತು. ನಂತರ ರಾಧಿಕಾ ಅವರು ಗರ್ಭಿಣಿಯಾದರು ಅವರನ್ನು ಮೂರು ವರ್ಷ ವಿದೇಶಕ್ಕೆ ಕಳುಹಿಸಲಾಯಿತು. ನಂತರ ಅವರು ಕರ್ನಾಟಕಕ್ಕೆ ಬರುತ್ತಾರೆ.

ರಾಧಿಕಾ ಅವರಿಗೆ ಹೆಣ್ಣು ಮಗಳು ಹುಟ್ಟುತ್ತಾಳೆ. ಅವರಿಗೆ ಮಗಳು ಇರುವುದನ್ನು ನೋಡಿದ ಜನರು ರಾಧಿಕಾ ಅವರಿಗೆ ಕೇಳುತ್ತಾರೆ ಆದರೆ ರಾಧಿಕಾ ಅವರು ತಮ್ಮ ಗಂಡನ ಹೆಸರನ್ನು ಹೇಳುವುದಿಲ್ಲ. ರಾಧಿಕಾ ಅವರು ತಮ್ಮ ಹೆಸರಿಗೆ ರಾಧಿಕಾ ಕೆ ಸ್ವಾಮಿ ಎಂದು ಸೇರಿಸಿಕೊಳ್ಳುತ್ತಾರೆ ಆಗ ಜನರಿಗೆ ಅನುಮಾನ ಬರುತ್ತದೆ ಅಲ್ಲದೇ ರಾಧಿಕಾ ಅವರು ಕುಮಾರಸ್ವಾಮಿ ಅವರೊಂದಿಗೆ ಇರುವ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಕುಮಾರಸ್ವಾಮಿ ಅವರು ಭಾರತದ 1955 ರ ಹಿಂದೂ ವಿವಾಹ ಕಾಯಿದೆಯ ಪ್ರಕಾರ ಕಾನೂನು ಬಾಹಿರ ವಿವಾಹದ ಆರೋಪವನ್ನು ಎದುರಿಸುತ್ತಾರೆ. ಮಾಧ್ಯಮಗಳು ರಾಧಿಕಾ ಕುಮಾರಸ್ವಾಮಿ ಅವರ ವಿವಾಹದ ಬಗ್ಗೆ ವರದಿ ಮಾಡಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗುತ್ತದೆ.

ಕುಮಾರಸ್ವಾಮಿ ಅವರಿಗೆ ಈಗಾಗಲೇ ಮದುವೆಯಾಗಿದ್ದು ರಾಧಿಕಾ ಅವರೊಂದಿಗೆ ಎರಡನೇ ಮದುವೆಯಾಗಿರುತ್ತದೆ ಅದು ಕಾನೂನು ಉಲ್ಲಂಘನೆಯಾಗಿರುತ್ತದೆ. ಆದರೂ ಮುಖ್ಯ ನ್ಯಾಯಮೂರ್ತಿಗಳಾದ ವಿಕ್ರಮ ಜಿತ್ ಸೇನ್ ನೇತೃತ್ವದ ಕರ್ನಾಟಕದ ಹೈ ಕೋರ್ಟಿನ ವಿಭಾಗೀಯ ಪೀಠವು ಸಾಕ್ಷಿಯ ಕೊರತೆಯಿಂದ ಈ ಕೇಸ್ ಅನ್ನು ವಜಾ ಮಾಡುತ್ತದೆ. ಕೆಲವರು ರಾಧಿಕಾ ಹಾಗೂ ಕುಮಾರಸ್ವಾಮಿ ಅವರು ಚೆನ್ನಾಗಿದ್ದಾರೆ ಎಂದು ಹೇಳುತ್ತಾರೆ ಇನ್ನು ಕೆಲವರು ಅವರಿಬ್ಬರ ಸಂಬಂಧ ಮುರಿದುಬಿದ್ದಿದೆ ಎಂದು ಹೇಳುತ್ತಾರೆ ಸರಿಯಾದ ಮಾಹಿತಿ ತಿಳಿದಿಲ್ಲ. ಒಟ್ಟಿನಲ್ಲಿ ರಾಧಿಕಾ ಹಾಗೂ ಕುಮಾರಸ್ವಾಮಿ ಇವರ ನಡುವೆ ಬಹಳ ವಯಸ್ಸಿನ ಅಂತರವಿದೆ. ರಾಧಿಕಾ ಅವರ ಮಗಳು ನೋಡಲು ಮುದ್ದಾಗಿದ್ದಾಳೆ ಅವಳ ಬರ್ತ್ ಡೇಯಲಿ ಕುಮಾರಸ್ವಾಮಿ ಅವರು ಇದ್ದ ಫೋಟೊ ವೈರಲ್ ಆಗಿದೆ ನಂತರದ ದಿನಗಳಲ್ಲಿ ಅವರು ಸಿನಿಮಾದಲ್ಲಿ ನಟಿಸಲಿಲ್ಲ. ಒಟ್ಟಿನಲ್ಲಿ ರಾಧಿಕಾ ಅವರು ತಮ್ಮ ಮಗಳೊಂದಿಗೆ ಸಂತೋಷವಾಗಿ ಇರಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *