ರಚಿತಾ ರಾಮ್ ಇವರು ಕನ್ನಡ ನಟಿಯರಲ್ಲಿ ಒಬ್ಬರು. ಇವರು ಬುಲ್ ಬುಲ್ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲು ಧಾರಾವಾಹಿಯಲ್ಲಿ ನಟಿಸಿದ್ದರು. ರಚಿತಾ ರಾಮ್ ಅವರನ್ನು ಒಂದು ಚಾನಲ್ ಗೆ ಕರೆದು ಸಂಭಾಷಣೆ ನಡೆಸಲಾಗಿತ್ತು. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇವರನ್ನು ನ್ಯೂಸ್ ಫಸ್ಟ್ ಕನ್ನಡ ಚಾನಲ್ ನವರು ಮಾತುಕತೆಗಾಗಿ ಕರೆಸಿದ್ದರು. ಆಗ ಚಾನಲ್ ನವರು ನೀವು ಸಿಟ್ಟು ಬಂದಾಗ ಬಳಸುವ ಶಬ್ದ ಯಾವುದು ಎಂದು ಕೇಳಿದಾಗ ಅವರು ನಿನ್ನಜ್ಜಿ ಎಂಬ ಶಬ್ದವನ್ನು ಬಳಸುತ್ತೇನೆ ಎಂದು ಹೇಳಿದರು. ನಂತರದಲ್ಲಿ ನಿಮಗೆ ಯಾರ ಮೇಲಾದರೂ ಲವ್ ಎಟ್ ಫಸ್ಟ್ ಸೈಟ್ ಆಗಿದೆಯಾ ಎಂದು ಕೇಳಿದಾಗ ಹೌದು ಎಂದು ರಚಿತಾ ರಾಮ್ ಅವರು ಹೇಳಿದರು. ಯಾರು ಎಂದು ಕೇಳಿದರೆ ಅದನ್ನೆಲ್ಲ ಹೇಳಲಾಗುವುದಿಲ್ಲ ಎಂದು ಹೇಳಿದರು.

ನಾನು ಯಾವಾಗಲೂ ಆಕ್ಟಿವ್ ಆಗಿರಲು ಬಯಸುತ್ತೇನೆ. ನನ್ನ ಹುಡುಗರು ಆಕ್ಟಿವ್ ಆಗಿರಬೇಕೆಂದು ಬಯಸುತ್ತೇನೆ. ಸೆಟ್ ನಲ್ಲಿ ಹುಡುಗರು ಏಕ್ಟೀವ್ ಆಗಿರದಿದ್ದರೆ ನನಗೆ ಸಿಟ್ಟು ಬರುತ್ತದೆ. ಆದರೆ ಆಗ ಹುಡುಗರಿಗೆ ಹೀಗೆ ಮಾಡಿ ಹಾಗೆ ಮಾಡಿ ಎಂದು ಒತ್ತಾಯ ಹೇರುವುದಿಲ್ಲ. ಯಾರಾದರೂ ತುಂಬಾ ಲೇಜಿಯಾಗಿದ್ದರೆ ನನಗೆ ಸಿಟ್ಟು ಬರುತ್ತದೆ. ಯಾರಾದರೂ ನಂಬರ್ ಕೇಳಿದರೆ ನಾನು ಕೊಡುವುದೇ ಇಲ್ಲ. ಏಕೆಂದರೆ ನನ್ನ ನಂಬರ್ ನನಗೇ ನೆನಪಿರುವುದಿಲ್ಲ. ಹಾಗಾಗಿ ಯಾರಾದರೂ ಹೊಸ ನಂಬರ್ ನಿಂದ ಮೆಸೇಜ್ ಗಳು ಬಂದರೆ ಬ್ಲಾಕ್ ಮಾಡುತ್ತೇನೆ.

ನಾನು ರಾಜಕೀಯಕ್ಕೆ ಬರುವ ಆಲೋಚನೆ ನನಗಿಲ್ಲ. ನಾನು ರಾಜಕೀಯಕ್ಕೆ ಬಂದರೆ ಹಲವಾರು ಬದಲಾವಣೆಗಳನ್ನು ತರಬೇಕಿದೆ. ಬದಲಾವಣೆಗಳನ್ನು ತರುತ್ತೇನೆ. ನಾನು ಶೇಕಡಾ100ಷ್ಟು ಸಿಂಗಲ್ ಆಗಿದ್ದೇನೆ. ನನಗೆ ಸುಳ್ಳು ಹೇಳುವುದು ಇಷ್ಟ ಆಗುವುದಿಲ್ಲ. ಸತ್ಯವನ್ನೇ ಯಾವಾಗಲೂ ಹೇಳುತ್ತೇನೆ. ಹಾಗಾಗಿ ಸುಳ್ಳನ್ನು ಯಾವಾಗಲೂ ಹೇಳುವುದಿಲ್ಲ. ಎಲ್ಲರನ್ನೂ ನಂಬಿ ನಂಬಿ ಈಗ ಪಾಠ ಕಲಿತಿದ್ದೇನೆ. ಹಾಗಾಗಿ ಈಗ ಎಲ್ಲರನ್ನೂ ನಂಬುವುದಿಲ್ಲ. ಹೀಗೆ ಸಂಭಾಷಣೆಗಳನ್ನು ಚಾನಲ್ ನಲ್ಲಿ ರಚಿತಾ ರಾಮ್ ಅವರು ನಡೆಸಿದರು.

Leave a Reply

Your email address will not be published. Required fields are marked *