ಭಾರತದಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಇವೆ ಅವುಗಳಲ್ಲಿ ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ದೆಹಲಿಯ ಕುತುಬ್ ಮಿನಾರ್ ಕೂಡ ಒಂದಾಗಿದ್ದು ಇದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚಾಗಿ ಕಾನಿಸುತ್ತಿದೆ. ಕುತ್ಬುದ್ದಿನ್ ಐಬಕ್ ಕಟ್ಟಿದ ಎಂದು ಹೇಳಲಾಗುವ ಈ ಕುತುಬ್ ಮಿನಾರ್ ನಲ್ಲಿ ಹಿಂದೂ ದೇವರ ಶಿಲ್ಪಗಳು ಕೆತ್ತಲ್ಪಟ್ಟಿರುವುದಾದರೂ ಯಾಕೆ ಎಂಬ ಪ್ರಶ್ನೆ ಕಾಡುತ್ತದೆ. ಹಾಗಾದರೆ ಕುತುಬ್ ಮಿನಾರ್ ಎಂಬ ಅದ್ಭುತ ಸ್ಮಾರಕದ ನಿರ್ಮಾಣ ಮಾಡಿದವರು ಯಾರು? ಇದರ ಹಿಂದಿನ ಚರಿತ್ರೆ ಎನು? ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇತಿಹಾಸದಲ್ಲಿ ಇರುವ ಪ್ರಕಾರ ಕುತುಬ್ ಮಿನಾರ್ ಅನ್ನು ಮಹಮದ್ ಘೋರಿಯ ಅತ್ಯಂತ ಪ್ರಿಯ ಗುಲಮನಾಗಿ ಕೆಲಸ ಮಾಡುತ್ತಿದ್ದ ಕುತ್ಬುದ್ದಿನ್ ಐಬಕ್ ಎಂಬ ಗುಲಾಮಿ ಸಂತತಿಯ ರಾಜ ಕಟ್ಟಿಸಿದ ಎಂದೇ ಹೇಳಲಾಗುತ್ತದೆ. ಮಹಮ್ಮದ್ ಘೋರಿಯು ಪೃಥ್ವಿರಾಜ್ ಚೌಹಾನ್ ಜೊತೆ ನಡೆದ ಯುದ್ಧದಲ್ಲಿ ಗೆದ್ದಾಗ, ಕುತ್ಬುದ್ದಿನ್ ಐಬಕ್ 1190 ರಲ್ಲಿ ಮಹಮದ್ ಘೋರೀಯ ಗೆಲುವಿನ ಖುಷಿಗೆ ಕುತುಬ್ ಮಿನಾರ್ ಅನ್ನು ಕಟ್ಟಿಸಿದನಂತೆ. ಆದರೆ ಇದರ ನಿರ್ಮಾಣ ಕುತ್ಬುದ್ದಿನ್ ಐಬಕ್ ಇರುವವರೆಗೂ ಸಂಪೂರ್ಣವಾಗಿ ಮುಗಿದಿರುವುದಿಲ್ಲ. 1210 ರಲ್ಲಿ ಕುತ್ಬುದ್ದಿನ್ ಐಬಕ್ ಮರಣ ಹೊಂದುತ್ತಾನೆ ಹಾಗಾಗಿ 1220 ವೇಳೆಯಲ್ಲಿ ಕುತ್ಬುದ್ದಿನ್ ಐಬಕ್ ನ ಅಳಿಯ ಶಮ್ಶುದ್ದಿನ್ ಅಲ್ತಮಶ್ 10 ವರ್ಷಗಳ ನಂತರ ಕುತುಬ್ ಮಿನಾರ್ ಅನ್ನು ಪೂರ್ಣ ಮಾಡಿಸುತ್ತಾನೆ. ಫಿರೋಜ್ ಷಾ ತುಘಲಕ್ 1369 ರಲ್ಲಿ ಕುತುಬ್ ಮಿನಾರ್ ನ ದುರಸ್ತಿ ಮಾಡುತ್ತಾನೆ. ಇದಕ್ಕೆ ಬಾಗಿಲುಗಳನ್ನು ಹ್ಯೂಮಯೂನ್ ನಿರ್ಮಿಸುತ್ತಾನೆ. ಬ್ರಿಟಿಷರು ಮೇಲೆ ಒಂದು ಗೋಪುರವನ್ನು ಕಟ್ಟಿಸುತ್ತಾರೆ. 72 ವರೆ ಮೀಟರ್ ಎತ್ತರವಿರುವ ಈ ಕುತುಬ್ ಮಿನಾರ್ ಇಟ್ಟಿಗೆಗಳಿಂದ ಕಟ್ಟಿದ ವಿಶ್ವದ ಅತಿ ಎತ್ತರದ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐದು ಅಂತಸ್ತುಗಳನ್ನು ಹೊಂದಿದ ಕುತುಬ್ ಮಿನಾರ್ ನ ಕೆಳಗಿನ ಭಾಗ 47 ಅಡಿ ಸುತ್ತಳತೆ ಹೊಂದಿದೆ. ಇದರ ಕೊನೆಯ ಭಾಗ 9 ಅಡಿ ಸುತ್ತಳತೆ ಹೊಂದಿದೆ. ಅಡಿಯಿಂದ ಮುಡಿವರೆಗೆ ಇಸ್ಲಾಮಿಕ್ ಶೈಲಿಯಲ್ಲಿ ಕಟ್ಟಲಾಗಿರುವ ಈ ಕುತುಬ್ ಮಿನಾರ್ 216 ಅಡಿ ಎತ್ತರವಿದೆ. ಕುರಾನ್ ಸಾಲುಗಳನ್ನು ಕುತುಬ್ ಮಿನಾರ್ ಗೋಡೆಗಳ ಮೇಲೆ ಕೆತ್ತಲಾಗಿದೆ ಎಂದು ಇತಿಹಾಸದ ಪುಟಗಳಲ್ಲಿ ಇವೆಲ್ಲವೂ ಸಿಗುತ್ತದೆ.

ಆದರೆ ಇತಿಹಾಸದ ಪುಟಗಳಲ್ಲಿ ದಾಖಲಾಗದ ಕೆಲವು ವಿಷಯಗಳ ಬಗ್ಗೆ ಯಾರಿಗೂ ತಿಳಿದಿಲ್ಲ ಅದನ್ನು ಯಾವ ಪಠ್ಯದಲ್ಲಿಯೂ ತಿಳಿಸಿಯೂ ಕೂಡ ಇಲ್ಲ ಅಂತಹ ವಿಷಯಗಳ ಬಗ್ಗೆ ತಿಳಿಯೋಣ. ಕುತುಬ್ ಮಿನಾರ್ ನ ಅಂಗಳದಲ್ಲಿ ಕೌವಾತ್-ಉಲ್-ಇಸ್ಲಾಂ ಎಂದು ಕರೆಯಲ್ಪಡುವ ಒಂದು ಮಸೀದಿ ಇದೆ. ಅದರ ಪ್ರವೇಶ ದ್ವಾರದಲ್ಲಿ ಇರುವ ಒಂದು ಶಾಸನ ಬೇರೆಯದೆ ಕಥೆ ಹೇಳುತ್ತದೆ. ಮಸೀದಿ ಕಟ್ಟುವಾಗ ಅಲ್ಲಿರುವ 27 ದೇವಾಲಯಗಳನ್ನು ಕೆಡವಲಾಗಿದೆ ಎಂದು ಶಾಸನ ಹೇಳುತ್ತದೆ. 19 ಶತಮಾನದಲ್ಲಿ ಇದ್ದ ಸಯ್ಯದ್ ಅಹಮದ್ ಖಾನ್ ಎನ್ನುವ ಮುಸ್ಲಿಂ ವಿದ್ವಾಂಸ ಅಸರ್-ಅಲ್-ಸಂದಿದ್ ಎಂಬ ಪುಸ್ತಕದಲ್ಲಿಯೂ ಹಿಂದೂ ದೇವಾಲಯಗಳ ಕೆಡವಿ ಮಸೀದಿ ಕಟ್ಟಿರುವುದರ ಬಗ್ಗೆ ಹೇಳುತ್ತಾರೆ. ಇದೆ ಕಾರಣದಿಂದ ಕುತುಬ್ ಮಿನಾರ್ ನಲ್ಲಿ ಗಂಟೆಗಳ ಶಿಲ್ಪ, ಕಮಲದಳಗಳ ಶಿಲ್ಪ, ಹಿಂದೂ ದೇವರ ವಿಗ್ರಹಗಳು ಕಾಣ ಸಿಗುತ್ತಿದೆ. ಪ್ರೊಫೆಸರ್ ಎಮ್ ಎಸ್ ಭಟ್ನಾಗರ್ ಪ್ರಕಾರ ಇತಿಹಾಸವು ಬೇರೆಯೆ ಇದೆ. ಇವರು 1977 ರ ಕುತುಬ್ ಮಿನಾರ್ ನ ಹಿಂದಿನ ಇತಿಹಾಸವನ್ನು ಹುಡುಕಿಕೊಂಡು ಹೊರಟಿದ್ದರು. ಪ್ರೊಫೆಸರ್ ಭಟ್ನಾಗರ್ ಅವರು ಕುತುಬ್ ಮಿನಾರ್ ನ ಮೇಲಿನಿಂದ ನೋಡಿದಾಗ ಆಶ್ಚರ್ಯಕ್ಕೊಳಗಾದರು. ಯಾಕೆಂದರೆ ಕುತುಬ್ ಮಿನಾರ್ ಮೇಲ್ಭಾಗ 24 ದಳಗಳ ಕಮಲದಂತೆ ಕಾಣಿಸುತ್ತದೆ. ಈ ಕಮಲದ ಒಂದೊಂದು ದಳವು ಗಡಿಯಾರದಲ್ಲಿ ಇರುವ 24 ಗಂಟೆಗಳನ್ನು ಪ್ರತಿನಿಧಿಸುತ್ತದೆ. ಹೋರಾ ಎಂದು ಕರೆಯಲ್ಪಡುವ ಈ 24 ದಳದ ವಿನ್ಯಾಸ ಹಿಂದೂ ಧರ್ಮದ ವಿನ್ಯಾಸ ಎನ್ನುವುದರಲ್ಲಿ ಯಾವುದೆ ಸಂದೇಶವಿಲ್ಲ.

ಭಟ್ನಾಗರ್ ಅವರ ಪ್ರಶ್ನೆಗಳು ಮತ್ತಷ್ಟು ಇವೆ. ಟೆರಾಯ್ನ್ ನಲ್ಲಿ ನಡೆದ ಯುದ್ಧ ಗೆದ್ದ ಘೋರಿ ಅಲ್ಲಿ ಗೆದ್ದ ಸಂಭ್ರಮದ ಸಂಕೇತ ಕಟ್ಟಬೇಕಿತ್ತು. ಆದರೆ ಅದನ್ನು ಬಿಟ್ಟು ದೆಹಲಿಯಲ್ಲಿ ಕಟ್ಟಿದ್ದು ಹೇಗೆ? ಮರಳು ಭೂಮಿಯಲ್ಲಿ ಬೆಳೆದವರಿಗೆ ಕಮಲದ ಕಲ್ಪನೆ ಬಂದಿದ್ದಾದರೂ ಹೇಗೆ? ಘೋರಿಯ ವಿಜಯಕ್ಕಾಗಿ ಕಟ್ಟಿದ ಮಿನಾರ್ ಗೆ ಘೋರಿ ಮೀನಾರ್ ಎಂದು ಯಾಕೆ ಕರೆಯಲಿಲ್ಲ? ಕುತ್ಬುದ್ದಿನ್ ಗುಲಾಮನಾಗಿದ್ದ, ಸ್ವತಂತ್ರ ರಾಜ ಎಂದು ಘೋಷಿಸಿಕೊಂಡಾಗ ಲಾಹೋರ್ ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿಂದ ಆಳ್ವಿಕೆ ನಡೆಸಿ ದೆಹಲಿಯಲ್ಲಿ ಇದ್ದ 3-4 ವರ್ಷಗಳು ಯುದ್ಧದಲ್ಲಿ ನಿರತನಾಗಿದ್ದ. ಹೀಗೆ ಹಲವಾರು ಪ್ರಶ್ನೆಗಳನ್ನು ಹಾಗೂ ಹಿಂದೂಗಳ 27 ದೇವಾಲಯಗಳ ವಿನ್ಯಾಸವನ್ನು ಹಾಗೂ ಕುತುಬ್ ಮಿನಾರ್ ನ ವಿನ್ಯಾಸವನ್ನು ಇಡುತ್ತಾರೆ. ಕುತ್ಬುದ್ದಿನ್ ಹುಟ್ಟುವುದರ ಎಷ್ಟೋ ವರ್ಷಗಳ ಮೊದಲೆ ಈ ಕುತುಬ್ ಮಿನಾರ್ ಇತ್ತು. ಜೊತೆಗೆ ಇದು ವಿಜಯದ ಸ್ತಂಭವಾಗಿರದೆ, ಖಗೋಳ ವಿಜ್ಞಾನದ ಸ್ತಂಭ ಧ್ರುವ ಸ್ತಂಭ ಎಂದು ಹೆಸರು ಎಂದು ಭಟ್ನಾಗರ್ ಹೇಳುತ್ತಾರೆ.

ವಿಷ್ಣುಧ್ವಜ ಆರ್ ಕುತುಬ್ ಮಿನಾರ್ ಎಂಬ ಮಾತುಗಳನ್ನು ಮಂಡಿಸಿದ ಇತಿಹಾಸ ತಜ್ಞ ಡಾಕ್ಟರ್ ಡಿ ಎಸ್ ತ್ರಿವೇದ ಅವರ ವಾದವನ್ನು ಚೌಕಂಬ ಸಂಸ್ಕೃತ್ ಸೀರಿಸ್ ವಾರಣಾಸಿ ಅವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಅವರು ಇದೊಂದು ಖಗೋಳ ವಿಜ್ಞಾನ ಸ್ತಂಭ ಮೆಹೆರೌಳಿ ಎಂದು ಕರೆಯುತ್ತಾರೆ. ಸಂಸ್ಕೃತ ಪದಗಳಾದ ಮಿಹರ ಹಾಗೂ ಆರಾವಳಿ ಇಂದ ಬಂದಮತಹ ಹೆಸರು ಎನ್ನುತ್ತಾರೆ. ಖಗೋಳಕ್ಕೆ ಸೂರ್ಯ ಅಧಿಪತಿ ಆಗಿದ್ದ ಕಾರಣ ಸೂರ್ಯನ ಹೆಸರೆ ಇಡಲಾಗಿತ್ತು ಎನ್ನುತ್ತಾರೆ. ವರಾಹ ಮಿಹಿರ ಹಾಗೂ ಅವನ ಅನುಯಾಯಿಗಳು ಇದ್ದಿರಬಹುದು ಈ ಸ್ತಂಭವನ್ನು ಖಗೋಳ ವಿಕ್ಷಣೆಗೆ ಬಳಸುತ್ತಿದ್ದಿರಬಹುದು ಆದ್ದರಿಂದ ಮಿಹಿರೌಳಿ ಎಂದು ಕರೆಯಲ್ಪಡುತ್ತಿರಬಹುದು ಎನ್ನುತ್ತಾರೆ. ಕುತುಬ್ ಮಿನಾರ್ ನ ಸುತ್ತಲೂ ರಾಶಿ ಚಕ್ರದಲ್ಲಿ ಬರುವ ಇಪ್ಪತ್ತೇಳ ನಕ್ಷತ್ರಗಳಿಗೆ ಸಂಬಂಧಿಸಿದಂತೆ ಮಂಟಪಗಳ ನಿರ್ಮಾಣ ಮಾಡಲಾಗಿತ್ತು. ಅಲ್ಲಿರುವ ಶಾಸನ ಈ ಮಂಟಪಗಳನ್ನು ನಾಶ ಮಾಡಿರುವುದರ ಬಗೆಗೆ ಮಾಹಿತಿ ಕೊಡುತ್ತದೆ. ಇದನ್ನು ಮಧ್ಯಕಾಲೀನ ಲೇಖಕರಾದ ಇಬನ್ ಬಟೂಟಾ, ಅಬ್ದುಲ್ ಫಿಧಾ ಹಾಗೆಯೆ ಆಧುನಿಕ ಲೇಖಕರಾದ ಸಯ್ಯದ್ ಅಹಮದ್ ಖಾನ್, ಅಲಿಘಟ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರೋಫೆಸರ್ ಆಗಿರುವ ಮೊಹಮ್ಮದ್ ಹಬೀಬ್ ಮುಂತಾದವರು ಕೂಡ ಉಲ್ಲೇಖ ಮಾಡುತ್ತಾರೆ. ನಕ್ಷತ್ರಗಳ ಗೋಪುರ ಇದ್ದಿದ್ದು ಖಚಿತ ಎಂಬುದು ಇವರ ಲೇಖನಗಳಿಂದ ತಿಳಿದು ಬರುತ್ತದೆ.

ಇದರ ಬಗ್ಗೆ ಸಾಕಷ್ಟು ಅಧ್ಯಯನ ಹಾಗೂ ಸಂಶೋಧನೆಯಿಂದ ತಿಳಿದು ಬಂದಿರುವುದು ಏನೆಂದರೆ ಎರಡು ಭಾರಿ ಭೂಮಧ್ಯ ರೇಖೆಯಲ್ಲಿ ಸೂರ್ಯನ ಪ್ರವೇಶವಾಗುತ್ತದೆ. ಅವತ್ತು ಕುತುಬ್ ಮಿನಾರ್ ನಲ್ಲಿ ಒಂದು ಸುಂದರ ನೋಟ ಕಂಡು ಬರುತ್ತದೆ. ಸೂರ್ಯ ನೆತ್ತಿಗೆ ಮೇಲೆ ಬಂದಾಗ ಕುತುಬ್ ಮಿನಾರ್ ನ ಮೇಲಿನ ಐದು ಗೋಪುರದ ನೆರಳು ಇಲ್ಲವಾಗಿ ಕೇವಲ ಮೇಲ್ಛಾವಣಿಗಳ ನೆರಳು ಮಾತ್ರ ಕಾಣ ಸಿಗುತ್ತವೆ. ಈ ನೆರಳು ಒಂದರ ಮೇಲೊಂದು ಜೋಡಿಸಿದ ಮಣ್ಣಿನ ಮಡಿಕೆಯ ಆಕಾರವನ್ನು ಹೊಂದಿರುತ್ತದೆ. ಚಾವಣಿಯ ಉದ್ದ 108 ಅಡಿಗಳಷ್ಟು ಇರುತ್ತದೆ. ಇದು ಮತ್ತೊಂದು ವಿಶೇಷ. ಇಪ್ಪತ್ತೇಳ ನಕ್ಷತ್ರಗಳ ಹಾಗೂ ನಾಲ್ಕು ಚರಣಗಳನ್ಬು ಗುಣಿಸಿದಾಗ 108 ಸಂಖ್ಯೆ ಬರುತ್ತದೆ. ಸೂರ್ಯನ ಕಿರಣಗಳನ್ನು ಬಳಸಿ, ನಕ್ಷತ್ರ ಗೋಪುರದ ಮೂಲಕ ಜ್ಯೋತಿಷ್ಯ ನೋಡುತ್ತಾರೆ. ಕುತುಬ್ ಮಿನಾರ್ ಒಂದು ಐತಿಹಾಸಿಕ ಸ್ಮಾರಕ ಒಂದೆ ಅಲ್ಲದೆ ಖಗೋಳ ವಿಜ್ಞಾನದ ಒಂದು ಮಾದರಿಯೂ ಹೌದು. ಕಮಲದ ಶಿಲ್ಪವೂ ಖಗೋಳಕ್ಕೆ ಸಂಬಂಧಿಸಿದ್ದಾಗಿದೆ. ಭೂಮಂಡಲವನ್ನು ಕಮಲದ ಆಕಾರದಲ್ಲಿ ಗುರುತಿಸಿದ ವಿಜ್ಞಾನಿಗಳು ಮೇರು ಪರ್ವತವನ್ನು ಭೂ ಮದ್ಯದಲ್ಲಿ ಗುರುತಿಸಿ ಸುಮೇರು ಹಾಗೂ ಉಮೇರು ಎನ್ನುವುದನ್ನು ಉತ್ತರ ಹಾಗೂ ದಕ್ಷಿಣ ಧ್ರುವವನ್ನಾಗಿ ಗುರುತಿಸಲಾಯಿತು.

ಪಶ್ಚಿಮದಲ್ಲಿ ಸಾಂಚಾ ಅಂದರೆ ಈಗಿನ ಮೆಕ್ಸಿಕೊ ಹಾಗೂ ಪೂರ್ವದಲ್ಲಿ ಭದ್ರಾಶ್ವ ಅಂದರೆ ಈಗಿನ ಚೀನಾದ ಭಾಗ ಎಂದು ಅಂದಾಜಿಸಲಾಗಿದೆ. ಭೂಮಿಯ ಸಮಭಾಜಕ ಪ್ರದೇಶಗಳಲ್ಲಿ ಒಂದೊಂದು ಬೃಹತ್ ಶಿವಲಿಂಗ ಪ್ರತಿಷ್ಟಾಪನೆ ಆಯಿತು. ಇದುವೆ ಜ್ಯೋತಿರ್ಲಿಂಗ ಎಂದು ಕರೆಯಲ್ಪಟ್ಟಿದೆ. ಗ್ರಹಗಳ ಚಲನೆಗಳನ್ನು ನೋಡಲು ಪದ್ದತಿಯ ಮಾಡಿಕೊಂಡರು. ಧ್ರುವ ನಕ್ಷತ್ರಗಳ ಸುತ್ತಲಿನ ನಕ್ಷತ್ರಗಳನ್ನು ಮೀನಿನ ಆಕಾರದಲ್ಲಿ ಗುರುತಿಸಿ, ಅದರ ಮುಖಭಾಗದ ಆಧಾರದ ಮೇಲೆ ಭೂಮಿ ಹಾಗೂ ಸೂರ್ಯನ ಚಲನೆಯನ್ನು ಗುರುತಿಸುತ್ತಿದ್ದರು. ಇವೆಲ್ಲವು ಶಕ ಪೂರ್ವಕ್ಕಿಂತ ಮೊದಲು. ಹದಿನಾಲ್ಕು ಸಾವಿರ ವರ್ಷಗಳ ಹಳೆಯದು ಎಂದು ಸೂರ್ಯ ಸಿದ್ದಾಂತವನ್ನು ಕರೆಯುತ್ತಾರೆ. ಇನ್ನೂ ಕುತುಬ್ ಮಿನಾರ್ ಕಟ್ಟಿಸಿದ್ದು ಯಾರು?, ಯಾಕೆ ಕಟ್ಟಿಸಿದ್ದು ಎಂಬ ಪ್ರಶ್ನೆಗಳಿಗೆ ಇತಿಹಾಸಕಾರರ ಮದ್ಯ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಕುತುಬ್ ಮಿನಾರ್ ಅನ್ನು ಇಲ್ತಮಶ್ ಕಟ್ಟಿದ, ಅಲ್ಲಾವುದ್ದೀನ್ ಖಿಲ್ಜಿ ಕಟ್ಟಿದ ಹೀಗೆಂದು ಕೆಲವರು ಹೇಳುತ್ತಾರೆ. ಈ ಕುತುಬ್ ಮಿನಾರ್ 379 ಮೆಟ್ಟಿಲು ಹೊಂದಿದೆ. ಇವತ್ತಿನ ಇಪ್ಪತ್ತು ಅಂತಸ್ತು ಹೊಂದಿರುವ ಕಟ್ಟಡ.

ಮೊದಲು ಇದು 360 ಮೆಟ್ಟಿಲು ಹೊಂದಿತ್ತು. ನಂತರ ಫಿರೋಜ್ ಷಾ ದುರಸ್ತಿ ಮಾಡುವಾಗ 19 ಮೆಟ್ಟಿಲುಗಳನ್ನು ಮತ್ತೆ ಕಟ್ಟಿದ. ಆದರೆ 360 ಮೆಟ್ಟಿಲುಗಳು 12 ತಿಂಗಳು, 30 ದಿನಗಳು ಅಂದರೆ ಎರಡು ಪಕ್ಷ ಹಾಗೂ ಹನ್ನೆರಡು ಮಾಸದ ಲೆಕ್ಕದಲ್ಲಿ ನಿರ್ಮಾಣ ಮಾಡಲಾಗಿತ್ತು ಎಂದು ತಿಳಿದು ಬರುತ್ತದೆ. ಕುತುಬ್ ಮಿನಾರ್ ಮುಂದೆ ಇರುವ ಉಕ್ಕಿನ ಸ್ತಂಭವನ್ನು ವಿಷ್ಣು ಧ್ವಜ ಎಂದು ಕರೆಯಲಾಗುತ್ತದೆ. ಇದರ ಮೇಲಿರುವ ಶಾಸನ ಗರುಡಸ್ಥಂಭ ಎಂದು ಕರೆಯಲ್ಪಡುತ್ತದೆ ಎಂದು ಹೇಳುತ್ತದೆ. ಇದು ವಿಷ್ಣುವಿನ ದೇಗುಲವಿತ್ತು ಎನ್ನುವುದಕ್ಕೆ ಸಾಕ್ಷಿ. ಮುಸ್ಲಿಂ ವಾಸ್ತು ಶಾಸ್ತ್ರದಲ್ಲಿ ಮಿನಾಸ್ ಎಂಬುವುದು 2, 4,6 ಅನುಪಾತದಲ್ಲಿ ಇರುತ್ತದೆ. ಒಂಟಿ ಮಿನಾಸ್ ನಿರ್ಮಾಣ ಮಾಡುವುದಿಲ್ಲ. ಮುಸ್ಲಿಂ ಯಾವುದೇ ಧಾರ್ಮಿಕ ಕ್ಷೇತ್ರದ ಪ್ರವೇಶ ಪಶ್ಚಿಮಮಾಭಿಮುಖವಾಗಿ ಇರುತ್ತದೆ. ಆದರೆ ಪಶ್ಚಿಮದ ಕಡೆ ಮೆಟ್ಟಿಲು ಇಡುವುದಿಲ್ಲ. ಕುತುಬ್ ಮಿನಾರ್ ಪಕ್ಕದಲ್ಲಿ ಇದ್ದ ಮಸೀದಿಯಲ್ಲಿ ಯಾವುದೇ ಪ್ರಾರ್ಥನೆ ನಡೆದ ಹಾಗೆ ಕಾಣಿಸುವುದಿಲ್ಲ ಎನ್ನುತ್ತಾರೆ ಪ್ರೊಫೆಸರ್ ಹಬೀಬ್. ಇಲ್ಲಿರುವ ಶಿಲ್ಪಗಳನ್ನು ಹಾಳುಗೆಡವಲಾಗಿದೆ. ಇದನ್ನು ಮುಸ್ಲಿಂ ಸಮುದಾಯದ ಸ್ಮಾರಕವೆನ್ನಲು ಯಾವುದೆ ಆಧಾರವು ಅವರ ಪದ್ದತಿಗೆ ಹೊಂದುತ್ತಿಲ್ಲ.

ಪ್ರೊಫೆಸರ್ ತ್ರಿವೇದಿ ಹಾಗೂ ಭಟ್ನಾಗರ್ ಹೇಳಿದ್ದು ನಿಜ ಎಂದು ಹೇಳಲಾಗುವುದಿಲ್ಲ. ಯಾವದು ಸರಿ ಎಂಬುದು ಅವರವರ ಭಾವಕ್ಕೆ ಬಿಟ್ಟಿದ್ದು. ಹಿಂದೂ ಧರ್ಮದ ಅದೆಷ್ಟೋ ದೇವಾಲಯಗಳು ದೇವರನ್ನು ಆರಾಧಿಸುವ ಸ್ಥಳಗಳು ಮಾತ್ರ ಆಗಿರದೆ ಖಗೋಳಶಾಸ್ತ್ರಕ್ಕೆ, ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಅಡಕವಾಗಿದ್ದವು ಎಂಬುದು ಆ ದೇವಾಲಯಗಳ ಮೂಲ ಇತಿಹಾಸ ಓದಿದಾಗ ತಿಳಿಯುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!