ನೀರೂ ಗಾಜಿನ ಹಾಗೇ ಇದ್ದರೆ ಎಷ್ಟು ಚೆನ್ನಾಗಿ ಇರುವುದು ನದಿ ಎಷ್ಟೇ ದೊಡ್ಡದಾಗಿ ಇದ್ದರೂ ನೀರು ಎಷ್ಟೇ ಇದ್ದರೂ ನೀರಿನಲ್ಲಿ ಇಳಿಯಬೇಕು ಎನಿಸುವುದು. ನೀರು ಎಷ್ಟೇ ಇದ್ದರೂ ಸಹ ಸ್ವಚ್ಛವಾಗಿ ಕ್ರಿಸ್ಟಲ್ ತರ ಇದ್ದರೆ ಎಷ್ಟು ಚೆನ್ನ ಅಂತಹ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಲೆಫ್ಕಾಂಡ ಐಲೆಂಡ್ ಬೀಚ್: ಇದು ಗ್ರೀಸ್ ನ ಪಶ್ಚಿಮ ಕರಾವಳಿಯ ಆಯೋನಿಯನ್ ಸಮುದ್ರದ ಗ್ರೀಕ್ ದ್ವೀಪ ಆಗಿದೆ. ಇಲ್ಲಿನ ನೀರು ಒಂದು ಅದ್ಭುತ ಆದರೆ , ಇಲ್ಲಿಗೆ ಹೋಗುವ ದಾರಿ ಇನ್ನೊಂದು ಅದ್ಭುತ ಎನ್ನಬಹುದು. ಇಲ್ಲಿ ಹೋಗಲು ಫ್ರೋಟಿಂಗ್ ಬ್ರಿಡ್ಜ್ ಮೇಲೆ ಹೋಗಿ ತಲುಪಬಹುದು. ಹೀಗೆ ಕಷ್ಟ ಪಟ್ಟು ಅಲ್ಲಿಗೆ ಹೋದಮೇಲೆ ಅಲ್ಲಿನ ವಾತಾವರಣ , ನೀರು ನಿಮ್ಮ ಕಷ್ಟವನ್ನು ಮರೆಸಿ ಮನಸ್ಸಿಗೆ ಆಹ್ಲಾದಕರ ಎನಿಸುತ್ತದೆ.
ಉಂಗೊಟ್ ರಿವರ್: ಇದು ನಮ್ಮ ಭಾರತದ ಅತೀ ಸ್ವಚ್ಛವಾದ ನಡಿ ಎಂದೇ ಹೇಳಬಹುದು. ಇದು ಮೇಘಾಲಯದ ದ್ವಾಕಿ ಹಳ್ಳಿಯಲ್ಲಿ ಇದೆ. ಇಲ್ಲಿ ವರ್ಷಕ್ಕೆ ಒಮ್ಮೆ ನಡೆಯುವ ಬೋಟ್ ರೇಸ್ ನೋಡುವುದೇ ಒಂದು ಇಲ್ಲಿನ ಆಕರ್ಷಣೆ ಎನ್ನಬಹುದು.
ಥಾಹೋ ಲೇಕ್: ಇದು ಅಮೇರಿಕಾದ ಈ ಸರೋವರವು ಸಿಯಾರಾನಿವಾಡ ಪ್ರದೇಶದಲ್ಲಿ ಇರುವ ಒಂದು ಸಿಹಿನೀರಿನ ಸರೋವರ. ಇದು ಬಹಳಷ್ಟು ಸ್ವಚ್ಛವಾದ ಸರೋವರ ಆಗಿದೆ. ಅಮೆರಿಕಾದ ನಂಬರ್ ಒನ್ ಕ್ಲೀನೆಸ್ಟ್ ಲೇಕ್ ಎನ್ನುವ ಹೆಸರಿಗೆ ಪಾತ್ರವಾಗಿದೆ. ಚಳಿಗಾಲದ ಸಮಯದಲ್ಲಿ ಈ ಪ್ರದೇಶಕ್ಕೆ ಹೋದರೆ ಇಲ್ಲಿ ಸಾಕಷ್ಟು ಅದ್ಭುತಗಳನ್ನು ನಾವು ಕಾಣಬಹುದು. ಇಲ್ಲಿನ ಸುತ್ತ ಮುತ್ತ ಮಂಜು ಬೀಳುತ್ತಾ ಇದ್ದರೆ ಈ ನೀರು ಮಾತ್ರ ನೀಲಿಯಾಗಿ ಸ್ವಚ್ಛವಾಗಿ ಇರುತ್ತದೆ.
ಮೆಲ್ಲಿಸೋನಿ ಲೇಕ್: ಗ್ರೀಕ್ ನ ಕೀಪೋಲಿನಿಯಾದಲ್ಲಿ ಇರುವ ಈ ಸರೋವರ ಅರಣ್ಯ ಆವರಿಸಿದ ಗುಹೆಗಳ ಮಧ್ಯೆ ಇದು ಇದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಆಕರ್ಷಣೆ ಎಂದರೆ ಗುಹೆಗಳ ಮಧ್ಯೆ ಇರುವ ಸ್ವಚ್ಛವಾಗಿ ಇರುವ ನೀರು. ಗುಹೆಗಳ ಮಧ್ಯೆ ಇರುವ ನೀರಿನಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬಿದ್ದು ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಗ್ರೀಕ್ ಪುರಾಣದಲ್ಲಿ ಈ ಗುಹೆಯನ್ನು ಅಪ್ಸರೆಯರು ಗುಹೆ ಎಂದು ಹೇಳಲಾಗುವುದಂತೆ ಇದು ಇಲ್ಲಿನ ಪೌರಾಣಿಕ ಹಿನ್ನೆಲೆ.
ದ ಬ್ಲೂ ರಿವರ್: ಗ್ರೀನ್ ಲ್ಯಾಂಡ್ ನಲ್ಲಿ ಇರುವ ಈ ನದಿ ಹಿಮಾವೃತ ದ್ವೀಪ ಆಗಿದೆ. ಪರಿಶೋಧಕರನ್ನು ಸಾಹಸಿಗರನ್ನು ತುಂಬಾ ಆಕರ್ಷಿಸುತ್ತದೆ. ಈ ನದಿಯ ನೀರು ಕೂಡಾ ಅಷ್ಟೇ ಕ್ರಿಸ್ಟಲ್ ಕ್ಲಿಯರ್ ಆಗಿ ಕಾಣಿಸುವುದು. ಈ ನದಿಯು ವಿವಿಧ ಆಕಾರಗಳನ್ನು ಹೊಂದಿರುತ್ತದೆ. ಇಲ್ಲಿ ಪ್ರವಾಸಿಗರಿಗೆ ಟ್ರೆಕಿಂಗ್ ಅಂತಹ ಹಲವಾರು ಚಟುವಟಿಕೆಗಳು ಇರುತ್ತವೆ. ಇಲ್ಲಿ ಹೋಗುವ ಪ್ರವಾಸಿಗರಿಗೆ ಹೊಸ ಅನುಭವ ಸಿಗುವುದರಲ್ಲಿ ಅನುಮಾನವಿಲ್ಲ. ಆದರೆ ಇಲ್ಲಿ ಬೇಸಿಗೆಯಲ್ಲಿ ಹೆಚ್ಚು ಸೊಳ್ಳೆಗಳು ಇರುವುದರಿಂದ ಹೆಚ್ಚಾಗಿ ಈ ಸಮಯದಲ್ಲಿ ಪ್ರವಾಸಿಗರು ಹೋಗುವುದಿಲ್ಲ.
ಬಂಗಾರಂ ಐಲ್ಯಾಂಡ್: ಇದನ್ನು ಲಕ್ಷದ್ವೀಪ್ ಐಲ್ಯಾಂಡ್ ಎಂದೂ ಕರೆಯುತ್ತಾರೆ. ಇದೊಂದು ಏಕಾಂತ ದ್ವೀಪ ಆಗಿದ್ದು ಇಲ್ಲಿನ ನೀರು ನೀಲಿಯಾಗಿ ಸ್ವಚ್ಛವಾಗಿ ಕಾಣುವುದು. ಬಿಳಿ ಮರಳು ಹಾಗೂ ಎತ್ತರದ ತಾಳೆ ಮರಗಳಿಂದ ಇದು ಆವೃತವಾಗಿದೆ. ಇದೂ ಅಗಟ್ಟಿ ದ್ವೀಪದಿಂದ ಸ್ವಲ್ಪ ದೂರದಲ್ಲಿದೆ. ನಮ್ಮ ಭಾರತದಲ್ಲಿ ಇದು ಇರುವುದು ಹೆಮ್ಮೆ.
ಬೈಕಲ್ ಲೇಕ್: ಇದು ರಷ್ಯಾದಲ್ಲಿ ಇದ್ದು ಅತೀ ದೊಡ್ಡ ಸಿಹಿ ನೀರಿನ ಸರೋವರ ಹಾಗೂ ವಿಶ್ವದ ಆಳವಾದ ಸರೋವರವೂ ಇದಾಗಿದೆ. ಚಂದ್ರಾಕಾರದಲ್ಲಿ ಇರುವ ಈ ಸರೋವರ ರಷ್ಯಾದ ದಕ್ಷಿಣ ಸೈಬೀರಿಯಾ ಪ್ರದೇಶದಲ್ಲಿ ಇದೆ. ೧೯೯೬ ರಲ್ಲೀ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಇಲ್ಲಿನ ವಿಶೇಷತೆ ಎಂದರೆ ನೀರು ಒಳಗಡೆ ಇದ್ದು , ಮೇಲಿನಿಂದ ಮಂಜು ಗಾಜಿನ ರೀತಿ ಆವರಿಸಿರುತ್ತದೆ. ಇದರ ಮೇಲೆ ನಾವು ನಡೆಯಬಹುದು ಹಾಗೂ ಸಣ್ಣ ವಾಹನಗಳನ್ನು ಸಹ ಚಲಿಸಬಹುದಂತೆ.