ಡಾ. ರಾಜ್‌ಕುಮಾರ್ ಮೇರುನಟನಾದರೂ ಅಭಿಮಾನಿಗಳ ಜತೆ ಬೆರೆಯುತ್ತಿದ್ದರು. ಅವರು ಎಂದಿಗೂ ತಾವು ದೊಡ್ಡ ನಟ ಎನ್ನುವ ಭಾವನೆಯನ್ನು ತೋರಿಸಿಲ್ಲ. ಪುನೀತ್ ರಾಜ್ಕುಮಾರ್ಗೂ ಇದೇ ಗುಣ ಬಂದಿದೆ. ಅವರು ಅಷ್ಟು ಎತ್ತರಕ್ಕೆ ಬೆಳೆದರೂ ಎಲ್ಲರ ಜತೆ ಬೆರೆಯುತ್ತಾರೆ. ಸಾಮಾನ್ಯರ ಜತೆ ತಾವು ಕೂಡ ಸಾಮಾನ್ಯರು ಎಂಬಂತೆ ಇದ್ದು ಬಿಡುತ್ತಾರೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಗುಡಿಸಲಲ್ಲಿ ಕುಳಿತು ಪುನೀತ್ ಊಟ ಮಾಡಿರುವ ಫೋಟೋ ಈಗ ವೈರಲ್ ಆಗುತ್ತಿದೆ.
ಕರುನಾಡಿನ ರಾಜಕುಮಾರ ಸರಳತೆಯ ಸದೃದಯಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಾಮಾನ್ಯರ ಜತೆ ತಾವು ಕೂಡ ಸಾಮಾನ್ಯರು ಎಂಬಂತೆ ಇದ್ದು ಬಿಡುತ್ತಾರೆ. ಅದು ಈಗ ಮತ್ತೊಮ್ಮೆ ಸಾಬೀತಾಗಿದೆ. ಜಮೀನಿನಲ್ಲಿ ಕುರಿಗಾಹಿಗಳ ಜತೆ ಕುಳಿತು ಊಟ ಮಾಡಿದ್ದಾರೆ.
ಅಲ್ಲದೇ ಕುರಿಗಾಯಿಯ ಒಂದು ಪುಟ್ಟ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಈ ಸರಳತೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಸೆಪ್ಟೆಂಬರ್ ಐದರಂದು ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದರು. ಆದರೆ, ಬೆಟ್ಟ ಬಂದ್ ಆಗಿತ್ತು.ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ.
ಈ ವೇಳೆ ಕಣ್ಣಿಗೆ ಬಿದ್ದ ಕುರಿಗಾಯಿಗಳನ್ನ ಭೇಟಿ ಮಾಡಿ ಅವರ ಜೊತೆ ಕೂತು ಊಟ ಮಾಡಿದ್ದಾರೆ. ಗಂಗಾವತಿಯಲ್ಲಿ ಸುತ್ತಾಟ ನಡೆಸಿ ಅವರು ವಿಜಯಪೂರಕ್ಕೆ ಹೋಗುವ ವೇಳೆಯಲ್ಲಿ ದಾರಿ ಪಕ್ಕದ ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಕುರಿ ಹಟ್ಟಿ ಪುನೀತ್ ಕಣ್ಣಿಗೆ ಬಿದ್ದಿದೆ. ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ. ಖುಷಿಯಿಂದಲೇ ಕುರಿಗಾಹಿಗಳ ಜೊತೆ ಪುನೀತ್ ಮಾತುಕತೆ ನಡೆಸಿದ್ದಾರೆ. ಕಂಬಳಿ ಮೇಲೆ ಕುಳಿತು, ಅವರು ಊಟ ಮಾಡುವ ರಾಗಿ ಮುದ್ದೆ, ಹಾಲು, ಮಜ್ಜಿಗೆ ಅನ್ನ ಊಟ ಮಾಡಿ ಸರಳತೆ ಮೆರೆದಿದ್ದಾರೆ.
ಹೊಸಪೇಟೆ ಕಮಲಾಪುರ ಹತ್ತಿರವಿರುವ ಆರೆಂಜ್ ಕೌಂಟಿ ಹೋಟೆಲ್ ನಲ್ಲಿ ಚಲನಚಿತ್ರ ಚಿತ್ರೀಕರಣ ಕಾರ್ಯದಲ್ಲಿ ತೊಡಗಿದ ಪುನೀತ್ ರಾಜ್ ಕುಮಾರ್ ಭಾನುವಾರ ಬಿಡುವು ಮಾಡಿಕೊಂಡು ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು. ಆದ್ರೆ, ಕೊರೋನ ಕಾರಣಕ್ಕೆ ಸರ್ವಜನಿಕರ ದರ್ಶನಕ್ಕೆ ನಿಷೇಧ ಇದ್ದಿದ್ದರಿಂದ ಅವರಿಗೆ ದರ್ಶನ ಭಾಗ್ಯ ಸಿಗಲಿಲ್ಲ. ಬಳಿಕ ಅಲ್ಲಿಯೇ ಕೆಲ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದ ವೇಳೆ ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಕುರಿ ಹಟ್ಟಿ ಪುನೀತ್ ಕಣ್ಣಿಗೆ ಬಿದ್ದಿದ್ದು, ಅಲ್ಲಿಗೆ ಭೇಟಿ ನೀಡಿದ್ದಾರೆ. ಖುಷಿಯಿಂದಲೇ ಕುರಿಗಾಹಿಗಳ ಜೊತೆ ಪುನೀತ್ ರಾಜಕುಮಾರ್ ಮಾತುಕತೆ ನಡೆಸಿದ್ದಾರೆ.
ಖುಷಿಯಿಂದಲೇ ಕುರಿಗಾಹಿಗಳ ಜೊತೆ ಮಾತುಕತೆ ನಡೆಸಿದ ಪುನೀತ್, ಕಂಬಳಿ ಮೇಲೆ ಕುಳಿತು, ಅವರು ಊಟ ಮಾಡಿದ್ದಾರೆ. ಬಳಿಕ ಕುರಿಗಾಯಿಯೊಬ್ಬರು ಮಗುವಿನ ಜೊತೆಯೂ ಸಹ ತುಂಟಾಟ ಮಾಡಿದ್ದಾರೆ. ಈ ಫೋಟೋಗಳು ಅವರ ಸರಳೆತಯನ್ನು ತೋರಿಸುತ್ತವೆ. ಸಾರ್ವಜನಿಕರ ಪ್ರವೇಶ ನಿಷಿದ್ಧ ನಾಮಫಲಕ ವೀಕ್ಷಿಸಿ ದೇವರ ದರ್ಶನ ಪಡೆಯದೇ ವಾಪಸ್ ಹನುಮನಹಳ್ಳಿ ವಿರುಪಾಪುರ ಗಡ್ಡೆ ಸಣಾಪೂರ ಅಲ್ಲಿಯ ಲೇಕ್ ಹಾಗೂ ತುಂಗಭದ್ರಾ ಫಾಲ್ಸ್ ನ್ನು ವೀಕ್ಷಣೆ ಮಾಡಿ ಅಲ್ಲಿಯ ರೆಸಾರ್ಟ್ ಗಳಲ್ಲಿ ಚಹಾ ಕುಡಿದು ಪ್ರಕೃತಿಯ ಸೌಂದರ್ಯವನ್ನು ಸವಿದು ಒಂದು ಗಂಟೆ ವಿರಮಿಸಿ ವಾಪಸ್ ಕಮಲಾಪುರದ ಆರೆಂಜ್ ಕೌಂಟಿ ಹೋಟೆಲಿಗೆ ತೆರಳಿದ್ದಾರೆ.
ಅದೇ ರೀತಿ ಸಣಾಪೂರ ಕೆರೆ, ಸಣಾಪೂರ ಫಾಲ್ಸ್, ಕಲ್ಲಿನ ಸೇತುವೆ ಸೇರಿದಂತೆ ಇತರ ಸ್ಥಳಗಳ ವೀಕ್ಷಣೆ ಮಾಡಿದ್ದಾರೆ. ಪುನೀತ್ ಆಗಮಿಸಿದ ವಿಚಾರ ತಿಳಿದ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ನೆಚ್ಚಿನ ನಟನ ಜತೆ ಫೋಟೋ ತೆಗೆಸಿಕೊಂಡು ಅವರು ಸಂಭ್ರಮಿಸಿದರು. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪೂರ, ಬಂಡಿ ಹರ್ಲಾಪೂರ, ನಾರಾಯಣ ಪೇಟೆಗಳಿಗೆ ಭೇಟಿ ನೀಡಿದ ಪುನೀತ್, ಹಾಗೇ ಸಿಕ್ಕ ಪೊಲೀಸ್ ಸಿಬ್ಬಂದಿಗಳ ಜೊತೆ ಫೋಟೋಗೆ ಫೋಸ್ ನೀಡಿದರು.
ಇವರು ದೊಡ್ಡ ಸೆಲೆಬ್ರೆಟಿ ಆಗಿದ್ರು ಅಭಿಮಾನಿಗಳಿಗೆ ಯಾವುದೇ ನಿರ್ಬಂಧ ವಹಿಸದೆ ಅವರೊಂದಿಗೆ ಸ್ನೇಹ ಜೀವಿಯಾಗಿ ಕಾಲ ಕಳೆಯುತ್ತಾರೆ ಇನ್ನು ಅಭಿಮಾನಿಗಳೊಂದಿಗೆ ಸರಳತೆಯಿಂದ ನಡೆದುಕೊಳ್ಳುತ್ತಾರೆ ಇದಕ್ಕೆ ನಾವುಗಳು ನಿಮ್ಮ ಫ್ಯಾನ್ಸ್ ಅನ್ನುತ್ತಾರೆ ಅಭಿಮಾನಿ ಬಳಗ ಇನ್ನು ಇವರ ಸರಳತೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ ಇದೀಗ ಆ ಫೋಟೋಸ್ ಸಕತ್ ವೈರಲ್ ಆಗಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430