ನಟ ಪುನೀತ್ ರಾಜಕುಮಾರ್ ಅವರ ಅಂತ್ಯಸಂಸ್ಕಾರದ ಬಗ್ಗೆ ಅವರ ಪತ್ನಿ ಅಶ್ವಿನಿ ಅವರ ಅಭಿಪ್ರಾಯ ಏನಿತ್ತು ಗೊತ್ತಾ

0 4

ನಟ ಪುನೀತ್ ಅವರ ಸಾವನ್ನು ಈ ಕ್ಷಣಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಅವರ ಸಾವಿನ ನಂತರ ಅವರ ಸಹಾಯದ ಬಗ್ಗೆ ಮಾತುಗಳು ಕೇಳಿಬರುತ್ತಿವೆ ಅಲ್ಲದೆ ಅಶ್ವಿನಿ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪುನೀತ್ ಅವರ ಅಂತ್ಯಸಂಸ್ಕಾರದ ಬಗ್ಗೆ ಅಶ್ವಿನಿ ಅವರು ಯಾವ ನಿರ್ಧಾರ ತೆಗೆದುಕೊಂಡಿದ್ದರು ಹಾಗೂ ಅಶ್ವಿನಿ ಅವರ ಬಗೆಗಿನ ಮೆಚ್ಚುಗೆಯ ಮಾತುಗಳನ್ನು ಈ ಲೇಖನದಲ್ಲಿ ನೋಡೋಣ.

ದಿನೇಶ್ ಅಮ್ಮಿನಮಟ್ಟು ಎಂಬ ಹಿರಿಯ ಪತ್ರಕರ್ತರು ಮಾಧ್ಯಮ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಅವರು ಅದ್ಭುತ ಬರಹವನ್ನು ಬರೆದಿದ್ದಾರೆ. ದಿನೇಶ್ ಅಮ್ಮಿನಮಟ್ಟು ಅವರು ನನ್ನ ಪ್ರಕಾರ ಸಾವು ಪೂರ್ಣ ವಿರಾಮ. ನಿಜವಾದ ಕಷ್ಟ ಸತ್ತವರ ಜೊತೆ ಬದುಕಿ ಈಗಲೂ ಜೀವಂತವಾಗಿ ಇರುವವರದ್ದು. ರಾಘಣ್ಣ ಹಾಗೂ ಶಿವಣ್ಣ ಅವರ ದುಃಖದ ಕಟ್ಟೆ ಒಡೆದಿರುವುದನ್ನು ಲೋಕ ನೋಡಿದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ಭಾವುಕರಾಗುತ್ತಾರೆ, ಕೂಗುವುದು, ಅಳುವುದು ಮಾಡುತ್ತಾರೆ.

ಅಪ್ಪು ಜೀವಕ್ಕೆ ಅಂಟಿಕೊಂಡ ಮೂರು ಹೆಣ್ಣು ಜೀವಗಳು ಮೌನದಲ್ಲಿಯೆ ಬದುಕುತ್ತಿವೆ. ಪುನೀತ್ ಅವರ ಹೆಂಡತಿ ಹಾಗೂ ಮಕ್ಕಳು ಇದುವರೆಗೂ ಗೋಳಾಡಲಿಲ್ಲ, ಚೀರಾಡಲಿಲ್ಲ. ಇಡಿ ಜಗತ್ತು ಕೊಂಡಾಡುತ್ತಿರುವ ಮನುಷ್ಯ ಮರೆಯಲು ಸಾಧ್ಯವೆ ಆಗದಂತ ನೆನಪುಗಳ ಸರಮಾಲೆ ಇಂತಹ ದುಃಖದ ಸಮಯದಲ್ಲಿ ಗಟ್ಟಿಗಿತ್ತಿ ಅಶ್ವಿನಿ ದುಃಖವನ್ನು ತಡೆದುಕೊಂಡು ಘನತೆಗೆ ತಕ್ಕಂತೆ ವರ್ತಿಸಿದ್ದಾರೆ.

ಅಶ್ವಿನಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಪುನೀತ್ ಅವರು ನಿಧನರಾದಾಗ ಅಂತ್ಯಸಂಸ್ಕಾರ ಎಲ್ಲಿ ನಡೆಯಬೇಕು ಎಂಬ ಮಾತುಗಳು ಕೇಳಿಬಂತು. ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟಿತು ಆದರೆ ಅಶ್ವಿನಿ ಅವರಿಗೆ ಪುನೀತ್ ಅವರ ಫಾರ್ಮ್ ಹೌಸ್ ನಲ್ಲಿ ನಡೆಸಬೇಕು ಎಂದು ನಿರ್ಧಾರ ಮಾಡಿದ್ದರು ಅದಕ್ಕಾಗಿ ಸಿದ್ಧತೆಯನ್ನು ಮಾಡಲಾಗಿತ್ತು

ಆದರೆ ಕೊನೆ ಕ್ಷಣದಲ್ಲಿ ಅಶ್ವಿನಿ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಫಾರ್ಮ್ ಹೌಸ್ ನಲ್ಲಿ ಅಂತ್ಯಸಂಸ್ಕಾರ ನಡೆದರೆ ಅದು ಖಾಸಗಿ ಸ್ಮಾರಕ ಆಗಿರುತ್ತಿತ್ತು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆದರೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ.

ಪುನೀತ್ ಅವರ ಫಾರ್ಮ್ ಹೌಸ್ ರಾಮನಗರ ಬಳಿ ಬಿಡದಿ ಹತ್ತಿರವಿದೆ. ಇದನ್ನು ರಾಜಕುಮಾರ್ ಅವರು ಖರೀದಿಸಿದ್ದಾರೆ. ಒಟ್ಟು 22ಎಕರೆ ಇರುವ ಫಾರ್ಮ್ ಹೌಸ್ ನಲ್ಲಿ 7ಎಕರೆ ಜಾಗವನ್ನು ಸಂಬಂಧಿಕರಿಗೆ ಕೊಡುತ್ತಾರೆ ಉಳಿದ ಜಾಗವನ್ನು ರಾಜಕುಮಾರ್ ಅವರು ನೋಡಿಕೊಳ್ಳುತ್ತಿದ್ದರು ನಂತರ ಪುನೀತ್ ಅವರು ನೋಡಿಕೊಳ್ಳುತ್ತಿದ್ದರು. ಅಲ್ಲಿ ಒಂದು ಮನೆಯನ್ನು ನಿರ್ಮಾಣ ಮಾಡಲಾಗಿತ್ತು ಪುನೀತ್ ರಾಜಕುಮಾರ್ ಅವರು ತಮಗೆ ಬೇಸರವಾದಾಗ ಅಶ್ವಿನಿ ಅವರೊಂದಿಗೆ ಆ ಮನೆಗೆ ಹೋಗಿ ಇರುತ್ತಿದ್ದರು.

ಇಡಿ ಫಾರ್ಮಹೌಸ್ ಅನ್ನು ರಾಜಕುಮಾರ್ ಅವರ ಎಲ್ಲ ಮಕ್ಕಳಿಗೆ ಪಾಲು ಮಾಡಲಾಗಿದೆ. ಪುನೀತ್ ರಾಜಕುಮಾರ್ ಅವರು ಹೆಚ್ಚು ಸಮಯ ಅಲ್ಲಿಯೆ ಕಳೆಯುತ್ತಿದ್ದರು. ಆ ಜಾಗದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಸಹೋದರ ಹಾಗೂ ತಾಯಿಯವರ ಸಮಾಧಿ ಇದೆ. ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರು ವಿಧಿವಶರಾದಾಗಲೂ ಫಾರ್ಮ್ ಹೌಸ್ ನಲ್ಲಿ ಸಮಾಧಿ ನಿರ್ಮಿಸಬೇಕೆಂದು ನಿರ್ಧಾರವಾಗಿತ್ತು ಆದರೆ ಕೊನೆ ಕ್ಷಣದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಾಣವಾಯಿತು.

ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಿಸಿದರೆ ಬೇಕಾದಾಗ ನೋಡಿಕೊಂಡು ಬರಲು ಸಾಧ್ಯವಾಗುವುದಿಲ್ಲ, ಫಾರ್ಮಹೌಸ್ ನಲ್ಲಿ ಸಮಾಧಿ ನಿರ್ಮಿಸಿದರೆ ಸಾರ್ವಜನಿಕರಿಗೆ ಅವಕಾಶ ಕೊಡಬಹುದು ಹಾಗೂ ನಮ್ಮ ಖಾಸಗಿತನಕ್ಕೆ ಧಕ್ಕೆ ಬರುವುದಿಲ್ಲ ಎನ್ನುವುದು ಅಶ್ವಿನಿ ಅವರ ಯೋಚನೆಯಾಗಿತ್ತು. ರಾಜ್ಯ ಸರ್ಕಾರ ಪುನೀತ್ ಅವರ ಸ್ಮಾರಕ ಖಾಸಗಿ ಸ್ಮಾರಕವಾಗದೆ ಸರ್ಕಾರದ ಸ್ಮಾರಕವಾಗಿ ಇರಬೇಕೆಂದು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ಮಾಡಿಕೊಟ್ಟಿತು.

Leave A Reply

Your email address will not be published.