ಕ್ರಿಕೆಟ್ ಪ್ರೇಮಿಗಳು ಎಲ್ಲಿ ನೋಡಿದರು ಸಿಗುತ್ತಾರೆ. ಕೆಲವರು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿಗಳಾದರೆ ಇನ್ನು ಕೆಲವರು ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಾಗಿರುತ್ತಾರೆ. ಅದೆ ರೀತಿ ಎಬಿಡಿ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಎಬಿ ಡಿವಿಲಿಯರ್ಸ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿಕೊಂಡಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಬ್ಯಾಟರ್ ಎಂದೆ ಖ್ಯಾತಿ ಪಡೆದ ಎಬಿ ಡಿವಿಲಿಯರ್ಸ್ 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದೆ ಸಂದರ್ಭದಲ್ಲಿ ದೇಶಿ ಪಂದ್ಯವನ್ನು ಹೊರತುಪಡಿಸಿ ಅಂತರರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್ ಆಟದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದಿದ್ದರು

ಅಂದರಂತೆ ಅವರು ಐಪಿಎಲ್ ಸೇರಿದಂತೆ ಇತರೆ ದೇಶೀಯ ಟೂರ್ನಿಯಲ್ಲಿ ಮಾತ್ರ ಆಟವಾಡುತ್ತಿದ್ದರು. ಆರ್​ಸಿಬಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಬಿಡಿ ಕೊಡುಗೆ ಅಪಾರವಾಗಿದೆ ಆದರೆ ಎಬಿಡಿ ಆರ್ ಸಿಬಿ ತಂಡ ಕಪ್ ಗೆಲ್ಲುವ ಮುನ್ನವೆ ವಿದಾಯ ಘೋಷಿಸಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಎಬಿಡಿ ಅವರು ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ಟೈಟಾನ್ಸ್, ಪ್ರೋಟೀಸ್ ಅಥವಾ ಆರ್ ಸಿಬಿ ಪ್ರಪಂಚದಾದ್ಯಂತ ಯಾವುದೆ ಆಟವಿರಲಿ ಆ ಆಟವು ನನಗೆ ಊಹಿಸಲಾಗದ ಅನುಭವಗಳನ್ನು ಮತ್ತು ಅವಕಾಶಗಳನ್ನು ನೀಡಿದೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ.

ಅದೆ ದಾರಿಯಲ್ಲಿ ಸಾಗಿದ ಪ್ರತಿಯೊಬ್ಬ ತಂಡದ ಸಹ ಆಟಗಾರ, ಪ್ರತಿ ಎದುರಾಳಿ, ಪ್ರತಿ ತರಬೇತುದಾರ, ಪ್ರತಿಯೊಬ್ಬ ಫಿಸಿಯೋ ಮತ್ತು ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ದಕ್ಷಿಣ ಆಫ್ರಿಕಾದಲ್ಲಿ ಹಾಗೂ ಭಾರತದಲ್ಲಿ ಎಲ್ಲೆ ಆಡಿದರೂ ನನಗೆ ದೊರೆತ ಬೆಂಬಲದಿಂದ ನಾನು ವಿನಮ್ರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ ಅಲ್ಲದೆ ಎಬಿಡಿ ಹಿಂದಿ ಭಾಷೆಯಲ್ಲೂ ಧನ್ಯವಾದ ಎಂದು ಬರೆದಿದ್ದಾರೆ.

37ರ ಹರೆಯದ ಎಬಿಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಈವರೆಗೆ 114 ಟೆಸ್ಟ್, 228 ಏಕದಿನ ಮತ್ತು 78 ಟಿ-20 ಪಂದ್ಯಗಳನ್ನಾಡಿದ್ದಾರೆ. ಸುಮಾರು 17 ವರ್ಷಗಳ ಕಾಲ ವೃತ್ತಿ ಬದುಕನ್ನು ಕ್ರಿಕೆಟ್ ಮೈದಾನದಲ್ಲಿ ಕಳೆದಿರುವ ಸ್ಫೋಟಕ ಬ್ಯಾಟ್ಸ್ ಮನ್ ಡಿವಿಲಿಯರ್ಸ್ ನಿವೃತ್ತಿ ನೀಡಲು ಇದು ಸಕಾಲ ಎಂದಿದ್ದಾರೆ.

ಡಿವಿಲ್ಲಿರ್ಸ್ ಅವರ ಈ ನಿರ್ಧಾರ ಪ್ರಪಂಚಾದ್ಯಂತ ಇರುವ ಅವರ ಅಭಿಮಾನಿ ಬಳಗಕ್ಕೆ ನಿಜಕ್ಕೂ ತುಂಬಾ ಬೇಸರದ ಸಂಗತಿ ಡಿವಿಲ್ಲಿರ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು ಕೂಡ ಈ MR 360 ಖ್ಯಾತಿಯ ಬ್ಯಾಟ್ಸಮನ್ ಐಪಿಎಲ್ ಅಲ್ಲಿ ಕಣಕ್ಕಿಳಿದು ತಮ್ಮ ಹೊಡಿ ಆಟದ ಮೂಲಕ ಪ್ರೇಕ್ಶಕರನ್ನು ರಂಜುಸಬೇಕಿತ್ತು ಎಂಬುದು ಅಭಿಮಾನಿಗಳ ಆಶಯವಾಗಿತ್ತು

ಐಪಿಎಲ್​ನಲ್ಲಿ ಇವರು 184 ಪಂದ್ಯಗಳನ್ನು ಆಡಿದ್ದು 5162 ರನ್ ಬಾರಿಸಿದ್ದಾರೆ. ಒಟ್ಟು ಮೂರು ಶತಕ ಮತ್ತು 40 ಅರ್ಧಶತಕ ಕೂಡ ಸಿಡಿಸಿದ್ದಾರೆ. 251 ಸಿಕ್ಸರ್, 413 ಬೌಂಡರಿ ಬಾರಿಸಿ ಸಾಧನೆ ಮಾಡಿದ್ದಾರೆ. ಅವರ ನಿವೃತ್ತಿ ಜೀವನ ಸಂತೋಷವಾಗಿರಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!