Ultimate magazine theme for WordPress.

ಅಪ್ಪು ನ್ಯಾಯಮಾರ್ಗದಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತೇ? ಸಂಪಾದನೆಯಲ್ಲೂ ಅಪ್ಪುಗಿತ್ತು ನಿಯತ್ತು

0 1

ಪುನೀತ್ ರಾಜಕುಮಾರ್ ಅವರು ವಯಸ್ಸಲ್ಲದ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಯಾರು ಕೂಡ ಪುನೀತ್ ರಾಜಕುಮಾರ್ ಅವರು ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಎಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ಪುನೀತ್ ರಾಜಕುಮಾರ್ ಅವರು ಇನ್ನೂ ಹತ್ತಾರು ಸಿನಿಮಾಗಳನ್ನು ಮಾಡುತ್ತಾರೆ ಅದರ ಮೂಲಕ ತಮ್ಮ ಅಭಿಮಾನಿಗಳನ್ನ ರಂಜಿಸುತ್ತಾರೆ

ಎಂದು ಎಲ್ಲರೂ ತಿಳಿದುಕೊಂಡಿದ್ದರು. ಆದರೆ ಅನಿರೀಕ್ಷಿತವಾಗಿ ಪುನೀತ್ ರಾಜಕುಮಾರ್ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಮಾಡಿರುವ ಎಲ್ಲಾ ಸಿನಿಮಾಗಳು ಒಂದು ಕುಟುಂಬ ಕುಳಿತು ನೋಡುವಂತಹ ಸಿನಿಮಾ ಹೀಗಾಗಿ ಅವರಿಗೆ ಅಪಾರ ಅಭಿಮಾನಿ ಬಳಗವಿತ್ತು. ಆಗಾಗ ಮಾಧ್ಯಮಗಳಲ್ಲಿ ಇವರು ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನುವ ವಿಷಯ ಹೊರಬರುತ್ತಿತ್ತು ಆದರೆ ಇವರು ಕೊನೆಯುಸಿರೆಳೆದಾಗ ಇವರು ಏನು ಸಂಪಾದಿಸಿದ್ದಾರೆ ಎನ್ನುವುದು ಜಗತ್ತಿಗೆ ತಿಳಿಯಿತು.

ಪುನೀತ್ ರಾಜಕುಮಾರ್ ಅವರು ಕೊನೆಯುಸಿರೆಳೆದ ಬಳಿಕ ಅವರ ಅಂತಿಮ ದರ್ಶನಕ್ಕಾಗಿ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದರು. ಹೊರ ರಾಜ್ಯಗಳಿಂದಲೂ ಬಂದಿದ್ದರು. ಅನೇಕ ಮೇರು ನಟರು ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆದರು.ಆಗಲೇ ಪುನೀತ್ ರಾಜಕುಮಾರ್ ಅವರು ಎಷ್ಟು ಅಭಿಮಾನಿ ಬಳಗ ಸಂಪಾದಿಸಿದ್ದರು ಎಂಬುದು ಗೊತ್ತಾಗಿದ್ದು. ಅಣ್ಣಾವ್ರು ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು ಅವರ ಕುಟುಂಬದವರು ಅದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ.

ಅಭಿಮಾನಿಗಳನ್ನ ದೇವರ ರೀತಿಯಲ್ಲಿ ಕಾಣುತ್ತಿದ್ದಾರೆ. ಇದು ಅಪ್ಪು ಅಗಲಿಕೆಯ ಸಮಯದಲ್ಲಿಯೂ ಸಾಬೀತಾಗಿದೆ. ಇಷ್ಟೆಲ್ಲಾ ಅಭಿಮಾನಿಗಳನ್ನ ಗಳಿಸಿರುವ ಅಂತಹ ಅಪ್ಪು ಹಿಟ್ ಚಿತ್ರಗಳನ್ನು ನೀಡಿರುವಂತಹ ಅವರು ಎಷ್ಟು ಆಸ್ತಿಯನ್ನು ಸಂಪಾದಿಸಿರಬಹುದು ಎಷ್ಟೆಲ್ಲಾ ಬಿಟ್ಟು ಹೋಗಿರಬಹುದು ಎಂದು ಕೆಲವರು ಯೋಚಿಸುತ್ತಿದ್ದಾರೆ. ಅದರ ಕುರಿತು ನಾನಾ ರೀತಿಯ ಊಹಾಪೋಹದ ಸುದ್ದಿಗಳು ಹರಿದಾಡುತ್ತಿದೆ.

ನಾವಿಂದು ನಿಮಗೆ ಅವರು ಎಷ್ಟು ಸಂಪಾದಿಸಿದ್ದಾರೆ ಯಾವ ರೀತಿಯಾಗಿ ಸಂಪಾದಿಸಿದ್ದಾರೆ ಅವರ ಆದಾಯದ ಮೂಲ ಏನು ಎಂಬುದರ ಬಗ್ಗೆ ನಾವು ಕೆಲವು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಕನ್ನಡದಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ನಟರು ಕೆಲವೇ ಕೆಲವರು ಹಾಗೆ ಸಿನಿಮಾ ಮೂಲಕ ನೂರಾರು ಕೋಟಿ ಸಂಪಾದಿಸಿದ ನಟರಲ್ಲಿ ದರ್ಶನ್ ಸುದೀಪ್ ಯಶ್ ಉಪೇಂದ್ರ ಪುನೀತ್ ರಾಜಕುಮಾರ್ ಶಿವರಾಜ್ ಕುಮಾರ್ ಹೀಗೆ ಕೆಲವೊಂದಿಷ್ಟು ನಟರ ಹೆಸರು ಮುನ್ನೆಲೆಯಲ್ಲಿ ಕೇಳಿಬರುತ್ತದೆ.

ಹಾಗಾದರೆ ಪುನೀತ್ ರಾಜಕುಮಾರ್ ಅವರು ಎಷ್ಟು ಆಸ್ತಿಯನ್ನು ಹೊಂದಿರಬಹುದು ಎಂಬ ಕುತೂಹಲ ಅನೇಕರಲ್ಲಿ ಇರುತ್ತದೆ ಅದು ಸಹಜ. ಅಪ್ಪು ಬಳಿಯಿದ್ದ ಹುಟ್ಟು ಆಸ್ತಿಯ ಮೌಲ್ಯ ಎರಡು ನೂರು ಕೋಟಿ ಎಂದು ಹೇಳಲಾಗುತ್ತದೆ. ಹಾಗಾದರೆ ಅದನ್ನ ಹೀಗೆ ಸಂಪಾದಿಸಿದರು ಕೇವಲ ಸಿನಿಮಾ ಮೂಲಕವೇ ಸಂಪಾದಿಸಿದರಾ ಒಂದು ಸಿನಿಮಾಗೆ ಅಪ್ಪು ಎಷ್ಟು ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದರು ಎಂಬ ಪ್ರಶ್ನೆ ಮೂಡುವುದು ಸಹಜ.

ಅಪ್ಪುವಿಗೆ ಹಣಗಳಿಕೆಯ ಮೂಲ ಹಲವಾರು ಇತ್ತು ಆದರೆ ಮುಖ್ಯವಾಗಿ ಹಣ ಬರುತ್ತಿದ್ದಿದ್ದು ಅವರ ಸಿನಿಮಾಗಳಿಂದ ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕೆಲವು ನಟರಲ್ಲಿ ಅಪ್ಪು ಕೂಡ ಒಬ್ಬರು. ಪುನೀತ್ ರಾಜಕುಮಾರ್ ಅವರು ಒಂದು ಸಿನಿಮಾಗೆ ಎಂಟರಿಂದ ಹತ್ತು ಕೋಟಿ ಸಂಭಾವನೆ ಪಡೆಯುತ್ತಿದ್ದರು. ಪುನೀತ್ ರಾಜಕುಮಾರ್ ಅವರು ಈವರೆಗೆ ನಾಯಕನಟನಾಗಿ ಇಪ್ಪತ್ತೊಂಬತ್ತು ಚಿತ್ರಗಳಲ್ಲಿ ನಟಿಸಿದ್ದಾರೆ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ ಯಾವ ಚಿತ್ರವೂ ನಷ್ಟ ಅನುಭವಿಸಿದೆ ಎಂದು ಯಾವ ನಿರ್ಮಾಪಕರು ಹೇಳುವುದಿಲ್ಲ.

ಅಷ್ಟರಮಟ್ಟಿಗೆ ಹಿಟ್ ಚಿತ್ರಗಳನ್ನು ನೀಡಿದವರು ಅಪ್ಪು. ಕನ್ನಡದ ನಟರುಗಳಲ್ಲಿ ಜಾಹೀರಾತುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವವರು ಪುನೀತ್ ರಾಜಕುಮಾರ್ ಅವರು. ನಂದಿನಿ ಹಾಲಿನಿಂದ ಹಿಡಿದು ಗೋಲ್ಡ ಲೋನ್ ವರೆಗೂ ಅಪ್ಪು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸರ್ಕಾರದ ಜಾಹೀರಾತುಗಳಿಗೆ ಪುನೀತ್ ರಾಜಕುಮಾರ್ ಅವರು ಸಂಭಾವನೆಯನ್ನು ಪಡೆಯುತ್ತಿರಲಿಲ್ಲ.

ಸರ್ಕಾರದವರು ಯಾವಾಗಲೇ ಕರೆದರೂ ಅಲ್ಲಿ ಹಾಜರಾಗುತ್ತಿದ್ದರು ಅವರ ಯೋಜನೆಗಳಿಗೆ ಪ್ರಮೋಟ್ ಮಾಡುತ್ತಿದ್ದರು ಅದಕ್ಕೆ ಯಾವುದೇ ಹಣವನ್ನು ಪಡೆಯುತ್ತಿರಲಿಲ್ಲ ಅದು ತನ್ನ ಸಾಮಾಜಿಕ ಜವಾಬ್ದಾರಿ ಎಂದು ಅವರು ತಿಳಿದಿದ್ದರು. ಖಾಸಗಿ ಕಂಪನಿಗಳ ಜಾಹೀರಾತುಗಳನ್ನು ಕೂಡ ಬಹಳ ಜವಾಬ್ದಾರಿಯುತವಾಗಿ ಒಪ್ಪಿಕೊಳ್ಳುತ್ತಿದ್ದರು ಜನರಿಗೆ ತೊಂದರೆಯಾಗುವ ಯಾವುದೇ ಜಾಹೀರಾತುಗಳನ್ನು ಪುನೀತ್ ರಾಜಕುಮಾರ್ ಒಪ್ಪಿಕೊಳ್ಳುತ್ತಿರಲಿಲ್ಲ.

ಹೀಗೆ ನ್ಯಾಯಯುತವಾಗಿ ಸಂಪಾದಿಸಿದ್ದ ಎರಡು ನೂರು ಕೋಟಿ ರೂಪಾಯಿ ಆಸ್ತಿಯನ್ನು ಪುನೀತ್ ರಾಜಕುಮಾರ್ ತಮ್ಮ ಒಡೆತನದಲ್ಲಿ ಹೊಂದಿದ್ದರು. ಪುನೀತ್ ರಾಜಕುಮಾರ್ ಅವರಿಗೆ ಕಾರ್ ಕ್ರೇಜ್ ಬಹಳ ಇತ್ತು. ಅವರ ಬಳಿ ಇದ್ದ ಅತ್ಯಂತ ದುಬಾರಿ ಕಾರು ಲಂಬೋರ್ ಗಿನಿ ಉರಸ್ ಅದರ ಬೆಲೆ ಮೂರು ಕೋಟಿ ಎಪ್ಪತ್ತೈದು ಲಕ್ಷ ರೂಪಾಯಿ. ಸದ್ಯ ಕನ್ನಡ ಚಿತ್ರರಂಗದಲ್ಲಿ ಇಬ್ಬರ ಬಳಿ ಮಾತ್ರ ಈ ಕಾರು ಇತ್ತು ಒಂದು ಪುನೀತ್ ರಾಜಕುಮಾರ್ ಇನ್ನೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಈ ಕಾರು ಇತ್ತು.

ಪುನೀತ್ ರಾಜಕುಮಾರ್ ಬಳಿ ಬಿ ಎಂ ಡಬ್ಲ್ಯೂ 730 ಎಲ್ ಡಿ ಕಾರ್ ಕೂಡ ಇತ್ತು ಅದರ ಬೆಲೆ ಒಂದು ಕೋಟಿ ಮೂವತ್ತೈದು ಲಕ್ಷ ರೂಪಾಯಿ. ಹಾಗೆ ಜಾಗ್ವಾರ್ ಎಕ್ಸ್ ಎಫ್ ಕಾರು ಇತ್ತು ಅದರ ಬೆಲೆ ಎಪ್ಪತ್ತು ಲಕ್ಷ ರೂಪಾಯಿ. ಇನ್ನೊಂದು ದುಬಾರಿ ಬೆಲೆಯ ಕಾರು ಯಾವುದೆಂದರೆ ಅದು ರೇಂಜ್ ರೋವರ ಒಕ್ ಇದರ ಬೆಲೆ ಎರಡು ಕೋಟಿ ಎಪ್ಪತ್ತೈದು ಲಕ್ಷ ರೂಪಾಯಿ ಇನ್ನು ಚಿಕ್ಕದಾದ ಮಿನಿ ಕೂಪರ್ ಅನ್ನು ಪುನೀತ್ ರಾಜಕುಮಾರ್ ಅವರು ಹೊಂದಿದ್ದರು ಅದರ ಬೆಲೆ ಮೂವತ್ತೆಂಟು ಲಕ್ಷ ರೂಪಾಯಿ ಜೊತೆಗೆ ಆಡಿ ಕ್ಯೂ 7 ಕೂಡ ಪುನೀತ್ ರಾಜಕುಮಾರ್ ಬಳಿ ಇತ್ತು ಇದಲ್ಲದೆ ಇನ್ನೂ ಕೆಲವು ಕಾರುಗಳು ಅವರ ಬಳಿ ಇದ್ದವು. ಒಟ್ಟು ಪುನೀತ್ ರಾಜಕುಮಾರ್ ಅವರ ಬಳಿ ಹನ್ನೆರಡು ಕೋಟಿ ಮೊತ್ತದ ಕಾರು ಹಾಗೂ ಬೈಕುಗಳಿದ್ದವು.

ಹೀಗೆ ಕನ್ನಡಿಗರ ಅಭಿಮಾನವನ್ನು ಸಂಪಾದಿಸುವುದರ ಜೊತೆಗೆ ಪುನೀತ್ ರಾಜಕುಮಾರ್ ಅವರು ಕೋಟ್ಯಂತರ ರೂಪಾಯಿ ಆಸ್ತಿಯನ್ನು ಕೂಡ ಸಂಪಾದಿಸಿದ್ದರು. ಆದರೆ ಅವರು ಎಂದು ಕೂಡ ಹಣಕ್ಕಾಗಿ ದುರಾಸೆಯನ್ನು ಪಡುತ್ತಿರಲಿಲ್ಲ. ಎಷ್ಟೇ ಕೋಟಿ ಸಂಪಾದನೆಯನ್ನು ಮಾಡಿದ್ದರು ಎಷ್ಟೇ ಅಭಿಮಾನಿಗಳನ್ನು ಗಳಿಸಿದ್ದರು ಎಲ್ಲರೂ ಕೂಡ ವಿಧಿಗೆ ಅಡಿಯಾಳು ವಿಧಿಯನ್ನು ಮೀರುವುದು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಪುನೀತ್ ರಾಜಕುಮಾರ್ ಸರ್ವಸ್ವವನ್ನು ಬಿಟ್ಟು ಚಿರನಿದ್ರೆಗೆ ಜಾರಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಹಣವನ್ನು ಕೂಡ ನ್ಯಾಯಮಾರ್ಗದಲ್ಲಿ ಸಂಪಾದಿಸಬಹುದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.