Ultimate magazine theme for WordPress.

ಪುನೀತ್ ರಾಜಕುಮಾರ್ ಗೆ ಮರುಹುಟ್ಟು ಇದೆಯಾ? ಶ್ರೀ ರಾಮಚಂದ್ರ ಗುರೂಜಿ ಹೇಳಿದ್ದೇನು ಗೊತ್ತೇ

0 3

ಸಾವು ಎನ್ನುವುದು ತಕ್ಷಣ ಆಗುವಂತದ್ದಲ್ಲ ಅದು ಒಂದು ಕ್ರಿಯೆ. ಯಾವುದೇ ವ್ಯಕ್ತಿಗೆ ಸಾವು ಘಟಿಸಬೇಕು ಎಂದರೆ ಅದು ಅವನ ರಾಶಿಗೆ ಆರು ತಿಂಗಳು ಮುಂಚಿತವಾಗಿ ಬಂದಿರುತ್ತದೆ ಬಂದು ಅನೇಕ ಸೂಚನೆಗಳನ್ನು ಕೊಡುತ್ತಿರುತ್ತದೆ. ಕಾಯಿಲೆಗಳ ಮೂಲಕವಾಗಿರಬಹುದು ಅಥವಾ ಅತೀಂದ್ರಿಯ ಸಂಜ್ಞೆಗಳ ಮೂಲಕವಾಗಿರಬಹುದು ಅದು ಸೂಚನೆಯನ್ನ ಕೊಡುತ್ತಿರುತ್ತದೆ. ಆ ಸಮಯದಲ್ಲಿ ವ್ಯಕ್ತಿಗೆ ಅನಿಸುತ್ತದೆ ನಾನು ಇನ್ನೂ ಹೆಚ್ಚಿನ ಸಮಯ ಇರಲಾರೆ ಎಂದು. ಎಷ್ಟೋ ಜನರು ಮುಂಚಿತವಾಗಿಯೇ ತಮ್ಮ ಸಾವನ್ನು ಗ್ರಹಿಸಿರುತ್ತಾರೆ

ನಾನು ಇಂತಹ ದಿನ ಇಂತಹ ಸಮಯದಲ್ಲಿ ದೇಹವನ್ನು ತ್ಯಜಿಸುತ್ತಿದ್ದೇನೆ ನೀವು ಸಿದ್ಧತೆ ಮಾಡಿಕೊಳ್ಳಿ ಎಂದು ಕೆಲವರು ಹೇಳಿರುತ್ತಾರೆ. ಸಾವು ಎನ್ನುವುದು ತಕ್ಷಣ ಬರುವುದಿಲ್ಲ ಅದು ಸೂಚನೆಯನ್ನು ನೀಡಿರುತ್ತದೆ. ಅಜ್ಞಾನಿಗಳಿಗೆ ಅದರ ಅರಿವೂ ಆಗುವುದಿಲ್ಲ ಯೋಗ ಸಾಧಕರಿಗೆ ಅದು ಮೊದಲೇ ಅರಿವಾಗಿರುತ್ತದೆ.

ಸಾವನ್ನು ಅರಿವು ಮಾಡಿಕೊಳ್ಳುವಂತಹ ವಿಧಾನವಿದೆ ಅದು ಪ್ರಾಚೀನ ಕಲೆ ಟಿಬೇಟಿಯನ್ ಬುಕ್ ಆಫ್ ಡೆತ್ ಎನ್ನುವ ಪುಸ್ತಕವಿದೆ ಅದು ಸಾವಿನ ಕುರಿತಾಗಿರುವಂತಹ ಗ್ರಂಥ. ಸಾವು ಹೇಗೆ ಮುನ್ಸೂಚನೆಯನ್ನು ನೀಡುತ್ತದೆ ಎಂದರೆ ಸಾವನ್ನ ಸುನಾಮಿಗೆ ಹೋಲಿಸಲಾಗುತ್ತದೆ ಸಾವನ್ನ ಭೂಕಂಪಕ್ಕೆ ಹೋಲಿಸಲಾಗುತ್ತದೆ ಸಾವನ್ನ ಕೋಪಕ್ಕೆ ಹೋಲಿಸಲಾಗುತ್ತದೆ. ಮೂರು ಕೂಡ ಸೂಚನೆಯನ್ನು ನೀಡುತ್ತವೆ. ಸುನಾಮಿ ಭೂಕಂಪ ಕೋಪ ಬರುವುದಕ್ಕಿಂತ ಮುನ್ನವೇ ಸೂಚನೆಯನ್ನು ನೀಡುತ್ತದೆ.

ಸಾವು ಎನ್ನುವುದು ಸೂಕ್ಷ್ಮ ಶರೀರದಲ್ಲಿ ಇರುತ್ತದೆ ಇಂತಿಷ್ಟು ಸಮಯ ಎಂದು ಅದು ಒಂದೊಂದೇ ಶರೀರವನ್ನ ಕತ್ತರಿಸಿ ಕೊಳ್ಳುತ್ತಾ ಬರುತ್ತದೆ ಹಾಗೆ ಕತ್ತರಿಸಿ ಕೊಳ್ಳುತ್ತಾ ಬಂದಹಾಗೆ ವ್ಯಕ್ತಿ ಸಾವಿಗೆ ಹತ್ತಿರವಾಗುತ್ತಾನೆ. ಅದನ್ನು ಆರು ತಿಂಗಳು ಮೊದಲೇ ಪತ್ತೆ ಹಚ್ಚಿದರೆ ಸೂಕ್ಷ್ಮ ಶರೀರದಿಂದ ಅದನ್ನ ಓಡಿಸಬಹುದು. ಅಕಾಲ ಮೃತ್ಯುವನ್ನು ವಾಸಿ ಮಾಡುವುದಕ್ಕೆ ಸಾಧ್ಯವಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗೆ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಅದು ಹೃದಯದ ಸಮಸ್ಯೆಯಿಂದ ಎಂದು ವೈದ್ಯರು ಜಗತ್ತಿಗೆ ತಿಳಿಸಿದರು. ಆದರೆ ಅದರ ಸೂಚನೆ ಪುನೀತ್ ರಾಜಕುಮಾರ್ ಅವರಿಗೆ ಆರು ತಿಂಗಳ ಮೊದಲೇ ತಿಳಿದಿತ್ತು. ಗೊತ್ತಿದ್ದು ಅವರು ಹೇಳಿಕೊಳ್ಳದೆ ಇರಬಹುದು ಅಥವಾ ಗೊತ್ತಿದ್ದು ಅದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿದ್ದರಿರಬಹುದು ಅಥವಾ ಗೊತ್ತಿಲ್ಲದೆ ಇರಬಹುದು.

ಗೊತ್ತಾದರೆ ಅದನ್ನ ಮುಂದೂಡಬಹುದು ಆದರೆ ಮೊದಲ ಹಂತದಲ್ಲಿ ತಿಳಿದುಬಂದರೆ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ನೀಡಬಹುದು. ನೂರು ವರ್ಷ ಮೇಲ್ಪಟ್ಟವರಿಗೆ ಈ ರೀತಿ ಮಾಡುವುದಕ್ಕೆ ಬರುವುದಿಲ್ಲ ಆದರೆ ನಲವತ್ತು ವರ್ಷದ ಒಳಗಿನವರಾದರೆ ಅವರ ಸಾವನ್ನು ಮುಂದೂಡಬಹುದು. ಪುನೀತ್ ರಾಜ್ ಕುಮಾರ್ ಅವರು ಮತ್ತೆ ಕರ್ನಾಟಕದಲ್ಲಿ ಹುಟ್ಟಿ ಬರಲಿ ಎಂದು ನಾವೆಲ್ಲರೂ ಬಯಸುತ್ತೇವೆ.

ಆದರೆ ನಮ್ಮ ಆಸೆ ಆತ್ಮದ ಇಷ್ಟಾರ್ಥಗಳು ಬೇರೆಯಾಗಿರುತ್ತವೆ. ಅಗಲಿರುವಂತಹ ಆತ್ಮ ಕುಟುಂಬದಲ್ಲಿಯೇ ಹುಟ್ಟಿಬರಬಹುದು ಅಥವಾ ಅವರ ಮಕ್ಕಳಲ್ಲಿ ಹುಟ್ಟಿಬರಬಹುದು ಅಥವಾ ಬೇರೆ ಪ್ರಾಂತ್ಯದಲ್ಲಿ ಹುಟ್ಟಿಬರಬಹುದು ಕರ್ಮಾನುಸಾರವಾಗಿ ಜನ್ಮ ಬರುತ್ತದೆ. ಅಕಾಲಿಕವಾಗಿ ಅಗಲಿ ಹೋದಂತಹ ಅನೇಕ ಆತ್ಮಗಳು ಅದೇ ಪ್ರಾಂತ್ಯದಲ್ಲಿ ಅದೇ ಕುಟುಂಬದಲ್ಲಿ ಅದೇ ವೃತ್ತಿ ಜೀವನದಲ್ಲಿ ಮುಂದುವರೆಯುವುದಕ್ಕಾಗಿ ಬರುತ್ತಾರೆ ಅಂತಹ ಸಾಧ್ಯತೆ ಇರುತ್ತದೆ.

ಪುನರ್ಜನ್ಮದಲ್ಲಿ ನಾವು ಮನುಷ್ಯರಾಗಿ ಹುಟ್ಟುತ್ತೇವೆ ಎಂಬುದಿರುವುದಿಲ್ಲ ಬುದ್ಧನ ಜಾತಕ ಕತೆಗಳಲ್ಲಿ ಬುದ್ಧ ತಾನು ಈ ಹಿಂದೆ ಆರು ನೂರಾ ನಲವತ್ತು ಬಾರಿ ಹುಟ್ಟಿ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಒಂದೊಂದು ಜನ್ಮದಲ್ಲಿ ತಾನು ಏನಾಗಿದ್ದೇನೆ ಎಂಬುದನ್ನು ಬರೆದುಕೊಂಡಿದ್ದಾನೆ. ಯಾವುದೋ ಒಂದು ಜನ್ಮದಲ್ಲಿ ಕಾಡುಕೋಣ ವಾಗಿದ್ದೇ ಎಂದು ಬರೆದುಕೊಂಡಿದ್ದಾನೆ.

ದಶಾವತಾರಗಳಲ್ಲಿ ಉಲ್ಲೇಖವಿದೆ ವಿಷ್ಣು ಮೀನಾಗಿ ಸಿಂಹವಾಗಿ ಹಂದಿಯಾಗಿ ಆಮೆಯಾಗಿ ಜನ್ಮತಳಿದ್ದ ಎಂದರೆ ಮನುಷ್ಯ ಯಾವ ಪ್ರಕಾರದ ಜೀವಿಯಾಗಿ ಕೂಡ ಹುಟ್ಟಿಬರಬಹುದು. ಮನುಷ್ಯನಾಗಿ ಹುಟ್ಟಿ ಬಂದರೆ ಅದನ್ನು ಮುಂಬಡ್ತಿ ಎಂದು ಹೇಳುತ್ತೇವೆ ಪ್ರಾಣಿಯಾಗಿ ಹುಟ್ಟಿ ಬಂದರೆ ಅದನ್ನ ಹಿಂಬಡ್ತಿ ಎಂದು ಹೇಳುತ್ತೇವೆ ಕೀಟಗಳಾಗಿ ಸರಿಸ್ರಪವಾಗಿ ಹುಟ್ಟಿ ಬಂದರೆ ಅದನ್ನ ದೊಡ್ಡ ಹಿನ್ನಡೆ ಎಂದು ಕರೆಯಬಹುದು

ಮನುಷ್ಯನಿಗಿಂತ ಹಿಂದೆ ಇನ್ನೂ ಏಳು ವಿಶೇಷವಾದ ಜನ್ಮ ಗಳಿವೆ ಅದು ಜನಸಾಮಾನ್ಯರಿಗೆ ಅಷ್ಟಾಗಿ ಅರ್ಥವಾಗುವುದಿಲ್ಲ. ಪುನೀತ್ ರಾಜಕುಮಾರ್ ಅವರು ಮರಣ ಹೊಂದಿದಾಗ ಅಪಾರ ಸಂಖ್ಯೆಯಲ್ಲಿ ಜನರು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಅವರು ಮಾಡಿರುವಂತಹ ಜೀವನ ಕೆಲಸ ಸಾಧನೆ ಅಷ್ಟೊಂದು ಅಭಿಮಾನಿಗಳನ್ನು ಹುಟ್ಟುಹಾಕಿತ್ತು.

ಪ್ರೇತ ಭೂತ-ಪಿಶಾಚ ಯಕ್ಷ ಬ್ರಹ್ಮರಾಕ್ಷಸ ಇವೆಲ್ಲಾ ಇದ್ದಾವೆ ಎಂದುಕೊಂಡರೆ ಇವೆ ಇಲ್ಲ ಎಂದುಕೊಂಡವರಿಗೆ ಇಲ್ಲ. ಸಾಧನೆ ಇಲ್ಲದೆ ಸತ್ತಂತಹ ವ್ಯಕ್ತಿಗಳು ಅಥವಾ ಅಪಘಾತದಿಂದ ಸತ್ತಂತಹ ವ್ಯಕ್ತಿಗಳು ಮತ್ತು ಅಕಾಲಿಕ ಮರಣ ಹೊಂದಿದಂತಹ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡವರು ಇವರೇ ಅತಿ ಹೆಚ್ಚು ಭಾಗ ಪ್ರೇತ ಪಿಶಾಚಗಳಾಗುತ್ತಾರೆ. video credit for Heggade studio

ಯಾಕೆ ಹಾಗಾಗುತ್ತದೆ ಎಂದರೆ ಸಾವು ಎನ್ನುವುದು ಒಂದು ಪ್ರಕ್ರಿಯೆ ಈ ರೀತಿಯಾಗಿ ಅಪೂರ್ಣ ಆತ್ಮವಾಗಿ ಹೋದಾಗ ಅದು ಇನ್ನೊಂದು ಶರೀರವನ್ನು ಬಯಸುತ್ತದೆ ಅವರ ಮನಸ್ಸಿನ ಮೂಲಕ ತಮಗೆ ಬೇಕಾದದ್ದನ್ನು ಸಾಧಿಸಿಕೊಂಡು ತೃಪ್ತಿಪಟ್ಟುಕೊಂಡು ಆ ದೇಹದೊಂದಿಗೆ ವಿಸರ್ಜನೆಯಾಗುತ್ತದೆ. ಈ ರೀತಿಯಾಗಿ ಮನುಷ್ಯನಿಗೆ ಸಾಯುವ ಮುನ್ಸೂಚನೆ ಸಿಗುತ್ತದೆ ಜೊತೆಗೆ ಸತ್ತ ನಂತರ ಆತ್ಮ ಇನ್ನೊಂದು ರೂಪದಲ್ಲಿ ಮತ್ತೆ ಜನ್ಮ ತಾಳಿಬರುತ್ತದೆ.

Leave A Reply

Your email address will not be published.