ಪುನೀತ್ ರಾಜ್‌ಕುಮಾರ್ ಪ್ರಥಮ ಪುತ್ರಿ ಧೃತಿ ನ್ಯೂಯಾರ್ಕ್‌ನಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ತಂದೆಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನ್ಯೂಯಾರ್ಕ್‌ನಿಂದ ಒಬ್ಬರೇ ದೀರ್ಘ ಅವಧಿಯ ಪ್ರಯಾಣ ಬೆಳೆಸಿ ಬೆಂಗಳೂರು ತಲುಪಿದ್ದರು. ಅಂದಿ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ ಸತತ 20 ಕ್ಕೂ ಹೆಚ್ಚು ಗಂಟೆ ಪ್ರಯಾಣದ ಬಳಿಕ ಬೆಂಗಳೂರಿಗೆ ಆಗಮಿಸಿದ್ದರು. ಪುನೀತ್‌ ನಿಧನದ ಸುದ್ದಿ ಹೊರಬಿದ್ದಾಗಿನಿಂದಲೂ ಅವರ ಕುಟುಂಬಕ್ಕೆ ದ್ರುತಿಯದ್ದೇ ಚಿಂತೆಯಾಗಿತ್ತು. ಆಕೆ ಒಬ್ಬರೇ 24 ಗಂಟೆ ಸುದೀರ್ಘ ಅವಧಿಯ ಪ್ರಯಾಣವನ್ನು ಇಂಥಹಾ ದುಃಖಕರ ಸನ್ನಿವೇಶದಲ್ಲಿ ಹೇಗೆ ಮಾಡುತ್ತಾರೆ ಎಂದು ಚಿಂತಿತರಾಗಿದ್ದರು.

ರಾಘವೇಂದ್ರ ರಾಜ್‌ಕುಮಾರ್ ಅಂತೂ, ಧೃತಿ ಬರುತ್ತಾಳೆ, ಪಪ್ಪ ಎಲ್ಲಿ ಎಂದು ನನ್ನನ್ನು ಪ್ರಶ್ನೆ ಮಾಡುತ್ತಾಳೆ, ಆ ಮಗುವಿಗೆ ಏನು ಹೇಳಲಿ’ ಎಂದು ಗದ್ಗದಿತರಾಗಿದ್ದರು. ಆದರೆ ಧೃತಿ ಧೃತಿಗೆಡದೆ ತನ್ನ ತಂದೆಯ ಸಾವನ್ನು ಒಪ್ಪಿಕೊಂಡು ತಂದೆ ನಡೆದ ಹಾದಿಯಲ್ಲೇ ಮಾಗಳೂ ಸಹ ತಂದೆ ಪುನೀತ್ ರಾಜಕುಮಾರ್ ಮಾಡುತ್ತಿದ್ದ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಮ್ಮ ಕರುನಾಡ ರತ್ನ ಪವರ್ ಸ್ಟಾರ್, ಸರಳತೆಯ ಸರದಾರ, ನಗುಮುಖದ ರಾಜಕುಮಾರ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ಅಕ್ಟೋಬರ್ 29 ರಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದಿದ್ದಾರೆ. ಪುನೀತ್ ಮತ್ತು ಅಶ್ವಿನಿ 21 ವರ್ಷಗಳ ಅತ್ಯುತ್ತಮ ದಾಂಪತ್ಯ ಜೀವನ ನಡೆಸಿದರು. ಒಂದು ದಿನವೂ ಇವರ ಕುಟುಂಬದ ಯಾವುದೇ ಒಂದು ಸುದ್ದಿ ಕೇಳಿಬರಲಿಲ್ಲ. ಅಪ್ಪು ಮತ್ತು ಅಶ್ವಿನಿ ಬಹಳ ಅನ್ಯೋನ್ಯವಾಗಿ, ಒಬ್ಬರನ್ನು ಮತ್ತೊಬ್ಬರು ಸಪೋರ್ಟ್ ಮಾಡುತ್ತಾ, ಸಂತೋಷವಾಗಿ ಲೈಫ್ ಎoಜಾಯ್ ಮಾಡುತ್ತಾ ಹಾಗೂ ಸಮಾಜ ಸೇವೆಗಳನ್ನು ಮಾಡುತ್ತಾ, ನಿರ್ಮಾಪಕರಾಗಿ ಹೊಸಬರಿಗೆ ಅವಕಾಶ ಕೊಡುತ್ತಾ, ಹಲವು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದವರು.

ಇವರ ಮಗಳು ಧೃತಿ ಸಹ ತಂದೆ ತಾಯಿಯ ಹಾದಿಯಲ್ಲೇ ನಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪುನೀತ್ ಅವರು ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ಸಾಮಾಜಿಕ ಕೆಲಸಗಳನ್ನು ಅಶ್ವಿನಿ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಅನೇಕ ಸಮಾಜಮುಖಿ ಕಾರ್ಯಗಳನ್ನು ಪುನೀತ್ ರಾಜ್ಕುಮಾರ್ ಮಾಡುತ್ತಿದ್ದರು. ಹಾಗಾಗಿ ಅವರನ್ನು ದೇವರು ಎಂದೇ ಗೌರವಿಸುತ್ತಾರೆ ಅನೇಕ ಅಭಿಮಾನಿಗಳು. ಇನ್ನು ಇವರ ಮೊದಲ ಮಗಳು ಧೃತಿ ಸಹ ತಂದೆ ತಾಯಿಯ ಹಾಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.

ತಂದೆಯ ಕಾರ್ಯವನ್ನು ಮುಗಿಸಿದ ಧೃತಿ ವಿದ್ಯಾಭ್ಯಾಸ ಮಾಡಲೇಂದು ನ್ಯೂಯಾರ್ಕ್‍ಗೆ ಹೋಗಿದ್ದಾರೆ. ದೃತಿ ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಹಿಂದೆ ಕಣ್ಣಿನ ಸಮಸ್ಯೆ ಎದುರಿಸುವ ವಯಸ್ಕರಿಗೆ ಹಣ ಸಂಗ್ರಹಿಸುವ ಮೂಲಕ ನೆರವಾಗಿದ್ದರು. ಧೃತಿ ಉನ್ನತ ವಿದ್ಯಾಭ್ಯಾಸಕ್ಕಾಗಿ ನ್ಯೂಯಾರ್ಕ್ ಗೆ ಹೋಗಿದ್ದರೂ ತಂದೆ ತಾಯಿ ಹೇಳಿಕೊಟ್ಟಿರುವ ಪಾಠವನ್ನು ಕಲಿತ ಧೃತಿ, ಸ್ವಾವಲಂಬಿಯಾಗಿ ಸ್ಕಾಲರ್ಶಿಪ್ ಪಡೆದು ಓದಲು ವಿದೇಶಕ್ಕೆ ಹೋದರು. ಇದು ನಿಜಕ್ಕೂ ಪುನೀತ್ ಮತ್ತು ಅಶ್ವಿನಿ ದಂಪತಿಗೆ ಹೆಮ್ಮೆಯ ವಿಚಾರ ಆಗಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಧೃತಿ ಸಮಾಜ ಸೇವೆಯ ಕೆಲಸಗಳನ್ನು ಮಾಡಿದ್ದಾಳೆ ಎನ್ನುವುದು ವಿಶೇಷ.

ಕೆಲ ತಿಂಗಳುಗಳ ಹಿಂದೆ ಧೃತಿ ಮಾಡಿರುವ ಕೆಲಸಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಅಂಧರಿಗಾಗಿ ಹಣ ಸಂಗ್ರಹಣೆ ಮಾಡಿದ್ದರು ಧೃತಿ. ಹಾಗೂ ಕೆಲವು ಅಂಧರನ್ನು ದತ್ತು ಪಡೆದು, ಅವರ ಓದು ಮತ್ತು ಇನ್ನಿತರ ಖರ್ಚುಗಳನ್ನು ಸಂಪೂರ್ಣವಾಗಿ ಭರಿಸುತ್ತಿದ್ದಾರೆ. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಇದ್ದ ಗುಣ ಮಕ್ಕಳಿಗೆ ಬಂದು, ಇದೀಗ ಅವರ ಮೊಮ್ಮಗಳು ಸಹ ಅದೇ ದಾರಿಯಲ್ಲಿ ಸಾಗುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ. ಪವರ್ ಸ್ಟಾರ್ ಅಪ್ಪು ಅವರು ಇದ್ದಾಗ ಲಕ್ಷಾಂತರ ಜನರಿಗೆ ಸಾಕಷ್ಟು ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ. ಈಗ ಈ ಸಮಾಜ ಸೇವೆಗಳನ್ನು ಅವರ ಪತ್ನಿ ಹಾಗು ಮಕ್ಕಳು ಮುಂದುವರಿಸುವ ನಿರ್ಧಾರ ಮಾಡಿದ್ದಾರೆ. ಅಪ್ಪು ಅವರ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!