ನಟ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ಒಂದು ತಿಂಗಳಾದರೂ ಕೂಡ ಈ ಕ್ಷಣಕ್ಕೂ ಆ ವಿಷಯವನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಈಗಲೂ ಕೂಡ ಟಿವಿಯಲ್ಲಿ ಯಾವುದಾದರೂ ಅವರ ಸಂದರ್ಶನವನ್ನು ಕಾರ್ಯಕ್ರಮವನ್ನು ನೋಡಿದಾಗ ಎಲ್ಲರಿಗೂ ಕೂಡ ಹೊಟ್ಟೆ ಉರಿಯುತ್ತದೆ ಇಂತಹ ಒಬ್ಬ ಅದ್ಭುತವಾದ ಮನುಷ್ಯನನ್ನು ಕಳೆದುಕೊಂಡೆವು ಎಂದು.

ಪುನೀತ್ ಅವರು ಅನಾಥಾಶ್ರಮ ಗೋಶಾಲೆ ಇವುಗಳಿಗೆ ಸಾಕಷ್ಟು ಸಹಾಯವನ್ನು ನೀಡಿದ್ದರು ಈಗ ಸಾಕಷ್ಟು ಜನ ತಾವಾಗಿಯೇ ಮುಂದೆ ಬಂದು ಅಪ್ಪು ಅವರು ತಮಗೆ ತಮ್ಮ ಮಕ್ಕಳಿಗೆ ಸಹಾಯ ಮಾಡಿರುವುದಾಗಿ ಹೇಳುತ್ತಿದ್ದಾರೆ ಹಾಗಾಗಿ ಅಂತಹ ಒಬ್ಬ ಅದ್ಭುತ ಮನುಷ್ಯ ಇನ್ನಿಲ್ಲ ಎನ್ನುವುದನ್ನು ಈ ಕ್ಷಣ ಕೂಡ ನಮಗ್ಯಾರಿಗೂ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಅವರ ಸಮಾಧಿಯ ಬಳಿ ಪ್ರತಿದಿನ ಸಾಕಷ್ಟು ಜನರು ಆಗಮಿಸುತ್ತಿದ್ದಾರೆ.

ಪುನೀತ್ ರಾಜಕುಮಾರ್ ಅವರ ಸಾವಿಗೆ ಸಂಬಂಧಿಸಿದಂತೆ ಈಗಲೂ ಕೂಡ ಚರ್ಚೆಗಳು ಆಗುತ್ತಿವೆ ಪುನೀತ್ ರಾಜಕುಮಾರ್ ಅವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಿತ್ತಾ ಅವರನ್ನು ಕಳೆದುಕೊಂಡಿದ್ದು ಹೇಗೆ ಯಾರ ಬೇಜವಾಬ್ದಾರಿಯಿಂದ ಈ ರೀತಿಯ ಸಾಕಷ್ಟು ವಿಚಾರಗಳು ಈಗಲೂ ಕೂಡ ಚರ್ಚೆಯಾಗುತ್ತಿವೆ. ಪುನೀತ್ ರಾಜಕುಮಾರ್ ಅವರ ಸಾವಿಗೆ ಸಂಬಂಧಿಸಿದಂತೆ ಈಗ ರಾಘವೇಂದ್ರ ರಾಜಕುಮಾರ್ ಅವರು ಇನ್ನೊಂದು ವಿಷಯವನ್ನು ಬಟ್ಟಬಯಲು ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಗುರುಕಿರಣ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಬೆಳಿಗ್ಗೆ ಎದ್ದು ಜಿಮ್ ನಲ್ಲಿ ಕೆಲಸ ಮಾಡಿದ್ದಾರೆ ಭಜರಂಗಿ ಟು ಸಿನಿಮಾಗೆ ಸಂಬಂಧಿಸಿದಂತೆ ಅಪ್ಡೇಟ್ ಗಳನ್ನು ಪಡೆದುಕೊಂಡಿದ್ದರು ಅನಂತರ ಟ್ವಿಟ್ಟರ್ನಲ್ಲೂ ಒಂದು ಪೋಸ್ಟ್ ಹಾಕುತ್ತಾರೆ ನಂತರ ಅವರಿಗೆ ಎದೆನೋವು ಕಾಣಿಸಿಕೊಳ್ಳುತ್ತದೆ ತನಗೇನೊ ಆಗುತ್ತಿದೆ ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿಯುತ್ತದೆ ಆ ಕಾರಣಕ್ಕಾಗಿ ಪುನೀತ್ ರಾಜಕುಮಾರ್ ಅವರು ಆಸ್ಪತ್ರೆಗೆ ತೆರಳುತ್ತಾರೆ.

ಹಿಂದಿನ ದಿನವೇ ಅವರಿಗೆ ಎದೆನೋವು ಸಣ್ಣದಾಗಿ ಕಾಣಿಸಿಕೊಂಡಿರುತ್ತದೆ ಇದಕ್ಕೂ ಒಂದು ವಾರ ಮೊದಲು ಅವರು ಫಿಸಿಯೋ ಥೆರಪಿಸ್ಟ್ ಬಳಿ ಹೋಗಿರುತ್ತಾರೆ. ಅಕ್ಟೋಬರ್ 29ರಂದು ಎದೆನೋವು ಕಾಣಿಸಿಕೊಂಡಾಗ ರಮಣರಾವ್ ಆಸ್ಪತ್ರೆಗೆ ಹೋಗುತ್ತಾರೆ ಅಲ್ಲಿ ಏನೇನು ವ್ಯವಸ್ಥೆ ಮಾಡಬೇಕು ಅದನ್ನೆಲ್ಲ ತಕ್ಷಣಕ್ಕೆ ಮಾಡಲಾಗುತ್ತದೆ ಇಸಿಜಿಯನ್ನು ಕೂಡ ಮಾಡಿರುತ್ತಾರೆ. ಇಸಿಜಿಯನ್ನು ಮಾಡುವುದಕ್ಕೂ ಮುನ್ನ ರಮಣರಾವ್ ಅವರಿಗೂ ಕೂಡ ಗೊತ್ತಾಗಿರಲಿಲ್ಲ.

ಪುನೀತ್ ರಾಜಕುಮಾರ್ ಅವರಿಗೆ ಸ್ವಲ್ಪ ಏನೊ ಆಗುತ್ತಿದೆ ಎನ್ನುವುದು ಅವರಿಗೆ ತಿಳಿದಿತ್ತು ಪುನೀತ್ ರಾಜಕುಮಾರ್ ಅವರು ಬೆವರುತ್ತಿದ್ದರು ಸುಸ್ತಾಗಿದ್ದರು ಪುನೀತ್ ರಾಜಕುಮಾರ್ ಅವರನ್ನು ಕೇಳಿದಾಗ ಅವರು ತಾವು ವರ್ಕೌಟ್ ಮಾಡಿ ಬಂದಿರುವುದರಿಂದ ಹೀಗಾಗುತ್ತಿದೆ ಎಂದು ಹೇಳಿದರು. ಪುನೀತ್ ರಾಜಕುಮಾರ್ ಅವರಿಗೆ ಏನೊ ಸ್ವಲ್ಪ ಹೆಚ್ಚು ಕಮ್ಮಿ ಆಗಿದೆ ಎಂದು ತಿಳಿದ ತಕ್ಷಣ ರಮಣರಾವ್ ಅವರು ಪುನೀತ್ ಅವರ ವಿಕ್ರಂ ಹಾಸ್ಪಿಟಲ್ ಗೆ ಕಳಿಸಿಕೊಡುತ್ತಾರೆ ಇದು ಎಲ್ಲರಿಗೂ ತಿಳಿದಿರುವ ವಿಷಯ ಈಗ ಹೊಸದೊಂದು ವಿಷಯ ಬಟ್ಟ ಬಯಲಾಗಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ರಮಣರಾವ್ ಅವರ ಆಸ್ಪತ್ರೆಗೆ ವಿಕ್ರಂ ಆಸ್ಪತ್ರೆಗೆ ಒಂದೂವರೆ ಕಿಲೋಮೀಟರ್ ಅಷ್ಟು ಅಂತರವಿದೆ ಅದನ್ನ ಒಂದು ಹತ್ತು ನಿಮಿಷದಲ್ಲಿ ತಲುಪಬಹುದು ಆದರೆ ಪುನೀತ್ ರಾಜಕುಮಾರ್ ಅವರನ್ನು ವಿಕ್ರಂ ಆಸ್ಪತ್ರೆಗೆ ತಲುಪಿಸಲು ಮುಕ್ಕಾಲು ಗಂಟೆ ಸಮಯವನ್ನು ತೆಗೆದುಕೊಂಡಿದ್ದರು ಎಂಬ ವಿಷಯವನ್ನು ರಾಘವೇಂದ್ರ ರಾಜಕುಮಾರ್ ಅವರು ಬಯಲು ಮಾಡಿದ್ದಾರೆ. ಇದನ್ನ ಎನ್ ಆರ್ ರಮೇಶ್ ಅವರ ಗಮನಕ್ಕೆ ತರುತ್ತಾರೆ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ.

ವಿಕ್ರಂ ಆಸ್ಪತ್ರೆಯನ್ನು ತಲುಪುವುದಕ್ಕೆ ಅವರು ಮುಕ್ಕಾಲುಗಂಟೆ ಸಮಯವನ್ನ ತೆಗೆದುಕೊಳ್ಳುವುದಕ್ಕೆ ಮುಖ್ಯಕಾರಣ ಟ್ರಾಫಿಕ್ ಜಾಮ್. ಇನ್ನೇನು ವಿಕ್ರಂ ಹಾಸ್ಪಿಟಲ್ ಗೆ ಹೋಗುವುದಕ್ಕೆ ಎರಡು ಮೂರು ನಿಮಿಷ ಇದೆ ಎನ್ನುವ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರ ತೊಡೆಯ ಮೇಲೆ ಪ್ರಾಣವನ್ನು ಬಿಟ್ಟಿದ್ದಾರೆ. ಇನ್ನು ನಾಲ್ಕರಿಂದ ಐದು ನಿಮಿಷ ಸಮಯ ಸಿಕ್ಕಿದರೆ ಪುನೀತ್ ರಾಜಕುಮಾರ್ ಅವರನ್ನು ಉಳಿಸಿಕೊಳ್ಳಬಹುದಿತ್ತು ಟ್ರಾಫಿಕ್ ಜಾಮ್ ಪುನೀತ್ ರಾಜಕುಮಾರ್ ಅವರ ಪ್ರಾಣವನ್ನು ಬಲಿ ಪಡೆಯಿತು ಎಂದರೆ ತಪ್ಪಾಗಲಿಕ್ಕಿಲ್ಲ.

ರಮಣರಾವ್ ಅವರ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ವ್ಯವಸ್ಥೆ ಇದ್ದಿದ್ದರೆ ಇನ್ನೂ ಸ್ವಲ್ಪ ಮೊದಲೇ ವಿಕ್ರಮ ಆಸ್ಪತ್ರೆಯನ್ನು ತಲುಪುವುದಕ್ಕೆ ಸಾಧ್ಯವಾಗುತ್ತಿತ್ತು. ಅಥವಾ ಪುನೀತ್ ರಾಜಕುಮಾರ್ ಅವರು ನೇರವಾಗಿ ವಿಕ್ರಮ ಆಸ್ಪತ್ರೆಗೆ ಹೋಗಿದ್ದರೆ ಬದುಕುಳಿಯುವ ಸಾಧ್ಯತೆ ಇರುತ್ತಿತ್ತು. ರಾಘಣ್ಣ ಅವರು ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ಏನಿದೆ ಎಂದರೆ ಇನ್ನು ಮುಂದೆ ಯಾರಿಗೂ ಟ್ರಾಫಿಕ್ ಜಾಮ್ ನಲ್ಲಿ ಪ್ರಾಣ ಬಿಡುವಂತಹ ಪರಿಸ್ಥಿತಿ ಎದುರಾಗಬಾರದು ಅಂಬುಲೆನ್ಸ್ ನಲ್ಲಿ ಹೋಗುವಂತಹ ಸಮಯದಲ್ಲಿ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಬೇಕು

ಯಾವ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಜೊತೆಗೆ ದೊಡ್ಡದಾದ ಮೈಕ್ ವ್ಯವಸ್ಥೆಯನ್ನು ಮಾಡಬೇಕು ಇಂತಹ ಆಸ್ಪತ್ರೆಗೆ ಹೋಗುತ್ತಿದ್ದೇವೆ ಅದಕ್ಕಾಗಿ ಅವಕಾಶ ಮಾಡಿಕೊಡಿ ಎಂದು. ಇದರಿಂದ ಮುಂದೆ ಇರುವಂತಹ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಅನ್ನು ನಿಯಂತ್ರಿಸುವುದಕ್ಕೆ ಸಹಾಯವಾಗುತ್ತದೆ ಎಂದು. ರಾಘವೇಂದ್ರ ರಾಜಕುಮಾರ್ ಅವರ ಕಳಕಳಿ ಈ ರೀತಿಯಾಗಿ ಮುಂದೆ ಯಾರಿಗೂ ಆಗಬಾರದು ಎನ್ನುವುದು. ಹಾಗಾಗಿ ಮುಖ್ಯಮಂತ್ರಿಯವರಿಗೆ ಅವರು ಮನವಿಯನ್ನು ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!