ಪುನೀತ್ ಪರ್ವ ಕಾರ್ಯಕ್ರಮಕ್ಕೆ ಅಪ್ಪು ಹಿರಿಯ ಮಗಳು ಧೃತಿ ಬರಲಿಲ್ಲ ಯಾಕೆ?

0 1

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಆಗಿರುವ ಗಂಧದ ಗುಡಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ಆಗಿರುವ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಇಡೀ ದಕ್ಷಿಣ ಭಾರತ ಚಿತ್ರರಂಗದ ಖ್ಯಾತನಾಮ ನಟರೆಲ್ಲ ಬಂದಿದ್ದರು. ಅಮಿತಾಬ್ ಬಚ್ಚನ್ ಹಾಗೂ ಕಮಲ್ ಹಾಸನ ಅವರು ಕೂಡ ಬರದ ಕಾರಣಕ್ಕಾಗಿ ವಿಡಿಯೋ ಬೈಟ್ಸ್ ಮಾಡಿ ಕಳಿಸಿದ್ದರು.

ಇನ್ನು ಇದೇ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಅವರು ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಕರ್ನಾಟಕದ 31 ಜಿಲ್ಲೆಗಳಲ್ಲಿ ಕೂಡ ಉಚಿತ ಆಂಬುಲೆನ್ಸ್ ಸೇವೆಯನ್ನು ರಾಕಿಂಗ್ ಸ್ಟಾರ್ ಯಶ್ ನಟಸೂರ್ಯ ಶಿವಣ್ಣ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಪಕರ ಜೊತೆ ಸೇರಿ ಕಾರ್ಯರೂಪಕ್ಕೆ ತರುವಂತಹ ಪ್ರಸ್ತಾವವನ್ನು ಕೂಡ ಯಶಸ್ವಿಯಾಗಿ ಮಾಡುವ ಕುರಿತಂತೆ ಹಸಿರು ಬಾವುಟವನ್ನು ತೋರಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

ಕೇವಲ ಎಷ್ಟು ಮಾತ್ರವಲ್ಲದೆ ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಹೋದರರು ಕುಟುಂಬಸ್ಥರು ಪತ್ನಿ ಹಾಗೂ ಕಿರಿಯ ಮಗಳು ವಂದಿತಾ ಸೇರಿದಂತೆ ಎಲ್ಲರೂ ಕೂಡ ಉಪಸ್ಥಿತರಿದ್ದರು ಆದರೆ ಅಪ್ಪು ಅವರ ಹಿರಿಯ ಮಗಳು ಆಗಿರುವ ಧೃತಿ ಮಾತ್ರ ಎಲ್ಲೂ ಕಾಣಿಸಲಿಲ್ಲ. ಎಲ್ಲೂ ಕಾಣಿಸಲಿಲ್ಲ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಅವರು ಭಾರತದಲ್ಲೇ ಇರಲಿಲ್ಲ ಎಂದು ಹೇಳಬಹುದಾಗಿದೆ.

ಹೌದು ಮಿತ್ರರೇ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳಾಗಿರುವ ದೃತಿ ಅವರು ಅಮೆರಿಕದಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದು ಪರೀಕ್ಷೆ ಇದ್ದ ಕಾರಣದಿಂದಾಗಿ ತಂದೆಯ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ ಎಂಬುದಾಗಿ ತಿಳಿದು ಬಂದಿದೆ. ಬಹುಶಃ ಗಂಧದಗುಡಿಯ ಬಿಡುಗಡೆ ದಿನಾಂಕದಂದು ಅಥವಾ ಅಕ್ಟೋಬರ್ 29 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ತಿಥಿಯ ದಿನದಂದು ಬರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

Leave A Reply

Your email address will not be published.