ಅಪ್ಪು ಸಾಕಿದ್ದ ಮುದ್ದಿನ ನಾಯಿಮರಿ, ಈಗ ರಾಘಣ್ಣನ ಜೊತೆಯಲಿ

0 0

ಕನ್ನಡ ಚಿತ್ರರಂಗದ ಅದ್ಭುತ ನಟ ಪುನೀತ್ ರಾಜಕುಮಾರ್ ಅವರು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿ ಪವರ್ ಸ್ಟಾರ್ ಎಂಬ ಬಿರುದನ್ನು ಪಡೆದಿದ್ದಾರೆ. ಪುನೀತ್ ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲುವುದಿಲ್ಲ. ಪುನೀತ್ ಅವರ ಮನೆಯಲ್ಲಿ ಸಾಕಿದ ನಾಯಿ ಮರಿ ಜೊತೆಗೆ ರಾಘವೇಂದ್ರ ರಾಜಕುಮಾರ್ ಅವರ ವೀಡಿಯೊ ಸಖತ್ ವೈರಲ್ ಆಗುತ್ತಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ ಆದರೆ ಅವರು ಮಾಡಿದ ಒಳ್ಳೆಯ ಕೆಲಸಗಳು ಅವರ ನೆನಪು ಸದಾ ನಮ್ಮೊಂದಿಗೆ ಇರುತ್ತದೆ. ಪುನೀತ್ ರಾಜಕುಮಾರ್ ಅವರು ಇರುವಷ್ಟು ದಿನ ಬಡವರಿಗೆ, ಹೆಣ್ಣು ಮಕ್ಕಳಿಗೆ ಸಹಾಯ ಮಾಡಿದ್ದಾರೆ. ವೃದ್ಧಾಶ್ರಮ, ಅನಾಥಾಶ್ರಮ, ಗೋಶಾಲೆಗಳನ್ನು ನಿರ್ಮಿಸಿ ಸಮಾಜಸೇವೆಯನ್ನು ಮಾಡಿದ್ದಾರೆ. ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ ತಮ್ಮ ರಿಯಲ್ ಜೀವನದಲ್ಲಿಯೂ ಜನಸೇವೆಯ ಕೆಲಸ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ದಾರಿಯಲ್ಲಿ ಅವರ ಮಕ್ಕಳು ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ರಾಜಕುಮಾರ್ ಅವರ ನಿಧನದ ಸಮಯದಲ್ಲಿ ಅವರ ಮೊದಲ ಮಗಳು ದೃತಿ ವಿದೇಶದಲ್ಲಿ ಓದುತ್ತಿದ್ದರು. ಅವರು ತಮ್ಮ ಸ್ಕಾಲರ್ಶಿಪ್ ಹಣದಿಂದಲೆ ಓದುತ್ತಿದ್ದಾರೆ ಅಲ್ಲದೆ ಅಪ್ಪನಂತೆ ಅವರು ಕೂಡ ಒಳ್ಳೆಯ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ಜನರಿಗೆ ಒಳ್ಳೆಯ ಕೆಲಸ ಮಾಡಿರುವುದರ ಜೊತೆಗೆ ಪ್ರಾಣಿಗಳ ಮೇಲೆಯೂ ಪ್ರೀತಿಯನ್ನು ಹೊಂದಿದ್ದರು. ಅವರು ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕಿದ್ದರು ಜೊತೆಗೆ ಆ ನಾಯಿಯನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು.

ನಟ ಪುನೀತ್ ರಾಜಕುಮಾರ್ ಅವರಿಗೆ ಪ್ರಾಣಿಗಳೆಂದರೆ ಬಹಳ ಇಷ್ಟ ಎಂಬುದನ್ನು ನಾವು ಈಗಾಗಲೆ ಹಲವು ವಿಡಿಯೋಗಳಲ್ಲಿ ನೋಡಿದ್ದೇವೆ. ಪುನೀತ್ ಅವರ ಮನೆಯಲ್ಲಿ ಮುದ್ದಿನ ಮೂರು ನಾಯಿಮರಿಗಳಿವೆ. ಮೂರು ನಾಯಿಗಳಲ್ಲಿ ಸೂಕ್ ನಾಯಿಮರಿ ಒಂದು. ಸೂಕ್ ನಾಯಿಮರಿ ಪುನೀತ್ ರಾಜಕುಮಾರ್ ಅವರ ಅಚ್ಚುಮೆಚ್ಚಿನ ನಾಯಿ ಆಗಿದೆ. ಗಂಡನಿಗೆ ತಕ್ಕ ಹೆಂಡತಿ ಎಂಬಂತೆ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಹ ಪ್ರಾಣಿಗಳನ್ನು ಇಷ್ಟಪಡುತ್ತಿದ್ದರು.

ಪುನೀತ್ ಹಾಗೂ ಅಶ್ವಿನಿ ಅವರ ಮುದ್ದಿನ ನಾಯಿಮರಿ ಸೂಕ್ ಜೊತೆ ರಾಘವೇಂದ್ರ ರಾಜಕುಮಾರ್ ಅವರು ಆಟವನ್ನು ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಒಟ್ಟಾರೆ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಬಿಟ್ಟು ಹೋದಂತಹ ಪ್ರೀತಿಯ ನೆನಪುಗಳು ನಮ್ಮೊಂದಿಗೆ ಹಾಗೆಯೇ ಉಳಿದಿವೆ. ಪುನೀತ್ ರಾಜಕುಮಾರ್ ಅವರು ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಿ ಬರಲಿ ಎಂದು ಆಶಿಸೋಣ.

Leave A Reply

Your email address will not be published.