ಮೇಘನಾ ರಾಜ್ ಅವರ ಹುಟ್ಟುಹಬ್ಬದ ದಿನ ಚಿರು ಸಮಾಧಿ ಬಳಿ ಬಂದು ಎಂತ ಕೆಲಸ ಮಾಡಿದ್ದಾರೆ ನೋಡಿ

0 2

ಮೇಘನರಾಜ ರವರಿಗೆ ಹಾಗೂ ಚಿರಂಜೀವಿ ಸರ್ಜಾ ರವರಿಗೆ ಮೇ ತಿಂಗಳು ಎಂದರೆ ಬಹಳ ವಿಶೇಷವಾದ ತಿಂಗಳು ಯಾಕೆಂದರೆ ಮೇ ತಿಂಗಳ ಎರಡನೇ ತಾರೀಖಿನಂದು ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ರವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಹಾಗೂ ಮೇ ತಿಂಗಳ ಮೂರನೇ ತಾರೀಕಿನಂದು ಮೇಘನಾ ರಾಜ್ ಅವರ ಹುಟ್ಟುಹಬ್ಬ.

ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಾಗೂ ಸುಂದರ ನಟಿಯರಲ್ಲಿ ಮೇಘನಾ ರಾಜ್ ಕೂಡ ಒಬ್ಬರು. ಹಿರಿಯ ನಟ ಸುಂದರ್ ರಾಜ್ ಹಾಗೂ ಹಿರಿಯ ನಟಿ ಪ್ರಮಿಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್. ಮೇಘನಾ ರಾಜ್ರವರು 1990ರ ಮೇ 3ರಂದು ಬೆಂಗಳೂರಿನಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಮೇಘನಾ ರಂಗಭೂಮಿ ಕಲಾವಿದೆಯಾಗಿ, ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಜೋಕುಮಾರಸ್ವಾಮಿ ಎಂಬ ನಾಟಕದಲ್ಲಿ ತಂದೆ ಸುಂದರ್ ರಾಜ್ ಅವರೊಂದಿಗೆ ನಟಿಸಿದ್ದರು. ಮೇಘನಾ ಕನ್ನಡ ಚಿತ್ರರಂಗಕ್ಕೆ ಬರುವ ಮುನ್ನವೇ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲೂ ಹೆಸರು ಮಾಡಿದ್ದರು.

ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ ಮದುವೆ ವಾರ್ಷಿಕೋತ್ಸವ ಕೂಡ ನಿನ್ನೆಯೇ ಇತ್ತು. ಮೇಘನಾ ಹಾಗೂ ಚಿರು ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಗೆಳೆಯರಾಗಿದ್ದ ಇಬ್ಬರು, 2018ರ ಏಪ್ರಿಲ್ 29 ಹಾಗೂ ಮೇ 2ರಂದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು. ಜೂನ್ 2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಸಾವನ್ನಪ್ಪಿದರು. ತೀವ್ರ ಹೃದಯಾಘಾತಕ್ಕೆ ಒಳಗಾದ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದರು. ಆಗ ಮೇಘನಾ ರಾಜ್ ಗರ್ಭಿಣಿಯಾಗಿದ್ದರು. ಚಿರಂಜೀವಿ ನಿಧನಕ್ಕೆ ಬರೀ ಕುಟುಂಬಸ್ಥರಷ್ಟೇ ಅಲ್ಲದೇ, ಇಡೀ ಕರುನಾಡೇ ಕಣ್ಣೀರು ಸುರಿಸಿತ್ತು. 2021 ಅಕ್ಟೋಬರ್ 22ರಂದು ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದರು. ಮೇಘನಾ ತಮ್ಮ ಮಗನಿಗೆ ರಾಯನ್ ರಾಜ್ ಅಂತ ಹೆಸರಿಟ್ಟಿದ್ದಾರೆ. ಸರ್ಜಾ ಫ್ಯಾಮಿಲಿಯ ಕನಸಿನ ಕೂಸಾದ ರಾಯನ್, ಈಗ ಮನೆಯವರೆಲ್ಲರ ಅಚ್ಚುಮೆಚ್ಚು. ಸಾಮಾಜಿಕ ಜಾಲತಾಣಗಳಲ್ಲೂ ರಾಯನ್ ಅಸಂಖ್ಯಾತ ಫ್ಯಾನ್ಸ್ ಹೊಂದಿದ್ದಾರೆ.

ಮದುವೆ ಬಳಿಕವೂ ಮೇಘನಾ ರಾಜ್ ಸಿನಿಮಾದಲ್ಲಿ ಅಭಿನಯಿಸುವುದನ್ನು ಮುಂದುವರೆಸಿದ್ದರು. ಮೇಘನಾ ಅವರ ಅಧಿಕೃತ ಫೇಸ್‌ಬುಕ್ ಪುಟವು 2.5 ದಶಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಕೇರಳದ ಪ್ರತಿಷ್ಠಿತ ಕೊಚ್ಚಿ ಟೈಮ್ಸ್ ಅತ್ಯಂತ ಅಪೇಕ್ಷಣೀಯ ಮಹಿಳೆ 2015 ಸಮೀಕ್ಷೆಯಲ್ಲಿ ಅವರು ನಂ 19ನೇ ಸ್ಥಾನ ಪಡೆದರು. ಬೆಂಗಳೂರು ಟೈಮ್ಸ್ನ ಅತ್ಯಂತ ಅಪೇಕ್ಷಣೀಯ ಮಹಿಳೆ 2015 ರ ಸಮೀಕ್ಷೆಯಲ್ಲಿ ಮೇಘನಾ ರಾಜ್ 10ನೇ ಸ್ಥಾನದಲ್ಲಿದ್ದಾರೆ.

ಮೇಘನಾ ಹಾಗೂ ಚಿರಂಜೀವಿ ಜೋಡಿ ಕೂಡ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿತ್ತು. ಮೇಘನಾ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಇವರಿದೆ 2021ರಲ್ಲಿ ಬ್ಯೂಟಿಫುಲ್ ಚಲನಚಿತ್ರದ ನಟನೆಗೆ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿ, 2011ರ ಕನ್ನಡದ ಪುಂಡಾ ಚಲನಚಿತ್ರದ ನಟನೆಗೆ ಸುವರ್ಣಾ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ, 2012ರಲ್ಲಿ ದಕ್ಷಿಣ ಭಾರತ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಬ್ಯೂಟಿಫುಲ್ ಚಲನಚಿತ್ರದ ನಟನೆಗೆ ಅತ್ಯುತಮ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಸದ್ಯ ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಡಾನ್ಸ್ ಶೋ ಡಾನ್ಸಿಂಗ್ ಚಾಂಪಿಯನ್ನಲ್ಲಿ ಮೇಘನಾ ರಾಜ್ ಬ್ಯುಸಿಯಾಗಿದ್ದಾರೆ. ಮೊದಲ ಶೋಗೆ ಅತಿಥಿ ಜಡ್ಜ್ ಆಗಿ ಬಂದ ಮೇಘನಾರನ್ನು ಖಾಯಂ ಜಡ್ಜ್ ಆಗಿ ಉಳಿಸಿಕೊಳ್ಳಬೇಕು ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಇದೀಗ ಮೇಘನಾ ಡಾನ್ಸಿಂಗ್ ಚಾಂಪಿಯನ್ನ ಮೂವರು ಜಡ್ಜ್ ಗಳಲ್ಲಿ ಒಬ್ಬರಾಗಿದ್ದಾರೆ.
ಇದೀಗ 32ನೇ ವಸಂತಕ್ಕೆ ಮೇಘನಾ ರಾಜ್ ಕಾಲಿಟ್ಟಿದ್ದಾರೆ. ಅಂದಹಾಗೆ ನಿನ್ನೆಯಷ್ಟೇ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮದುವೆ ಆ್ಯನಿವರ್ಸರಿ ಕೂಡ ಚಿರಂಜೀವಿಯಾಗಿರಿ ಅಂತ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಹಾರೈಸಿದ್ದಾರೆ.

ಹೀಗೆ ವಿಶೇಷವಾದ ದಿನದಲ್ಲಿ ಚಿರಂಜೀವಿ ಸರ್ಜಾ ಅವರ ಸಮಾಧಿಯ ಬಳಿ ತೆರಳಿದ ಮೇಘನ ರಾಜ ರವರು ದೊಡ್ಡದೊಂದು ಹಾರ ತೆಗೆದುಕೊಂಡು ಹೋಗಿ ಸಮರ್ಪಣೆ ಮಾಡಿದ್ದಾರೆ ಹಾಗೂ ಇದೇ ಸಂದರ್ಭದಲ್ಲಿ ನಿನ್ನ ಆಸೆಯಂತೆ ನಮ್ಮ ಮಗನನ್ನು ಬೆಳೆಸುತ್ತೇನೆ ನಿನ್ನ ಆಶೀರ್ವಾದ ಹಾಗೂ ಮಾರ್ಗದರ್ಶನ ಎರಡು ಕೂಡ ಚಿಂಟು ವಿನ ಮೇಲೆ ಇರಲಿ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಇದನ್ನು ನೆನೆಸಿಕೊಂಡರೆ ನಿಜಕ್ಕೂ ಕಣ್ಣಂಚಿನಲ್ಲಿ ಹನಿ ನೀರು ಬರುತ್ತದೆ, ಒಂದು ವೇಳೆ ಚಿರಂಜೀವಿ ಸರ್ಜಾ ರವರು ಇಂದು ನಮ್ಮ ಜೊತೆ ಇದ್ದರೆ ನಿಜಕ್ಕೂ ಪರಿಸ್ಥಿತಿ ಬೇರೆಯಾಗಿರುತ್ತಿತ್ತು, ಮಗನ ಜೊತೆ ಮೊದಲ ವಾರ್ಷಿಕೋತ್ಸವ ಹಾಗೂ ಮೇಘನರಾಜ ರವರ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದರು.

Leave A Reply

Your email address will not be published.