Ultimate magazine theme for WordPress.

ಪುನೀತ್ ರಾಜಕುಮಾರ್ ಅವರ ಕೊನೆ ಸಿನಿಮಾ ಜೇಮ್ಸ್ ಅಲ್ಲ, ಇನ್ನೊಂದ್ ಇದೆ ಯಾವುದು ಗೆಸ್ ಮಾಡಿ

0 2

ಕರುನಾಡ ಯುವರತ್ನ, ದೊಡ್ಮನೆ ಹುಡುಗ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಅಭಿನಯದ ಜೇಮ್ಸ್ ಸಿನೆಮಾ ಮಾರ್ಚ್ 17ರಂದು ಬಿಡುಗಡೆಯಾಗಿ ಎಲ್ಲಾ ಸಿನೆಮಾಗಳ ದಾಖಲೆಯನ್ನು ಹಿಂದಿಕ್ಕಿದೆ. ನೂರು ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಸಿನೆಮಾ ಎನಿಸಿಕೊಂಡಿದೆ. ತಮ್ಮ ನಲ್ಮೆಯ ಆರಾಧ್ಯ ದೈವ ಪುನೀತ್ ರಾಜಕುಮಾರ್ ಅಭಿನಯದ ಸಿನೆಮಾ ನೋಡಿದ ಅವರ ಬಾಡಿಗಾರ್ಡ್ ಚಲಪತಿ ಅವರು ತಮ್ಮ ಕುಟುಂಬ ಸಮೇತರಾಗಿ ಯಜಮಾನರ ಜೇಮ್ಸ್ ಸಿನೆಮಾ ವೀಕ್ಷಿಸಿದರು. ಅಪ್ಪು ನಟನೆಯ ಜೇಮ್ಸ್ ಸಿನೆಮಾದ ಕುರಿತು ತಮ್ಮ ಅಭಿಪ್ರಾಯವನ್ನು ಮೀಡಿಯಾದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಟ ಪುನೀತ್ ರಾಜಕುಮಾರ್ ಅವರು ಈಗಾಗಲೇ ಸಾಕಷ್ಟು ಜನರಿಗೆ ಆದರ್ಶದ ವ್ಯಕ್ತಿಯಾಗಿದ್ದಾರೆ. ಕೇವಲ ತೆರೆ ಮೇಲೆ ಮಾತ್ರವಲ್ಲದೆ ಅಪ್ಪು ಅವರು ಮಾಡಿದಂತಹ ಅದೇಷ್ಟೋ ಸಾಮಾಜಿಕ ಸೇವೆಗಳು, ಕಷ್ಟ ಎಂದವರಿಗೆ ಮುಂದೆ ಬರ್ತಿದ್ದ ಅವರ ಸಹಾಯದ ಕೈಗಳು, ಅವರ ಮನಸ್ಥಿತಿಗೆ ಅವರೇ ಸಾಟಿ. ನಟ ಪುನೀತ್ ಅವರ ಜೊತೆ ಕೆಲಸ ಮಾಡಿದ್ದ, ಅವರ ಜೊತೆಗಿದ್ದ ವ್ಯಕ್ತಿಗಳು ಅವರಲಿಲ್ಲದ ಬಳಿಕ, ಅವರ ಜೊತೆ ನಮಗೆ ಸಮಯ ಸಿಕ್ಕಿದ್ದೇ ಪುಣ್ಯ, ಹಾಗೂ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ನಮ್ಮ ದೊಡ್ಡ ಪುಣ್ಯ, ಅಂತಹ ಪುಣ್ಯ ವ್ಯಕ್ತಿಯ ಜೊತೆ ಸಮಯ ಕಳೆದಿರುವುದೇ ಅದೃಷ್ಟ ಎಂದರು.

ಹೌದು ಪುನೀತ್ ಅವರಿಗೆ ಬಾಡಿಗಾರ್ಡ್ ಆಗಿದ್ದ ಚಲಪತಿ ಅವರು ಪುನೀತ್ ಅವರು ಎಲ್ಲೇ ಹೋದರೂ, ಅವರ ಜೊತೆಯೇ ಇರುತ್ತಿದ್ದರು. ಚಲಪತಿಯವರು ಈ ಹಿಂದೆ ಮಿಲಿಟರಿಯಲ್ಲಿ ಕೆಲಸ ಮಾಡಿ ಬಂದವರಂತೆ. ಅಪ್ಪು ಅವರ ಜೊತೆ ಇದ್ದು ಅಪ್ಪು ಅವರಿಗೆ ಐದು ವರ್ಷಗಳಿಂದ ಚಲಪತಿ ಬಾಡಿಗಾರ್ಡ್ ಆಗಿದ್ದರು. ಪುನೀತ್ ಅವರು ಆರೋಗ್ಯದಿಂದ ಎಲ್ಲಾ ಕೆಲಸಗಳಲ್ಲಿಯೂ ಸದಾ ಮುಂದಿರುತ್ತಿದ್ದರು, ಹಾಗೆ ಯಾವುದೇ ಟೆನ್ಶನ್ ಇಲ್ಲದೆ ಹೆಚ್ಚು ಆರಾಮಾಗಿ ಇರುತ್ತಿದ್ದರು ಎಂದರೆ ಅದಕ್ಕೆ ಬಾಡಿಗಾರ್ಡ್ ಚಲಪತಿ ಅವರು ಕೂಡ ಒಂದು ಕಾರಣ ಎನ್ನಬಹುದು. ಅಂಥಹ ಪುಣ್ಯಾತ್ಮನ ಜೊತೆ ಛಲಪತಿ ಅವರು ಕೆಲ್ಸ ಮಾಡುತ್ತಿದ್ದರು ಎಂದರೆ ಅವರು ಪುಣ್ಯ ಮಾಡಿದವ್ರು ಎಂದು ಹೇಳಬಹುದು.

ನಟ ಪುನೀತ್ ರಾಜಕುಮಾರ್ ಚಿತ್ರಗಳನ್ನ ನೋಡೋದು ಒಂದು ಹಬ್ಬ. ಎಲ್ಲಾ ಅಭಿಮಾನಿಗಳ ಆರಾಧ್ಯ ದೈವ ಅವರು. ಹಬ್ಬಕ್ಕೂ ಮೀರಿದ ಸಂಭ್ರಮವನ್ನು ಎಲ್ಲಾ ಚಿತ್ರಮಂದಿರಗಳಲ್ಲಿ ಆಚರಿಸಲಾಗುತ್ತಿದೆ. ಈ ರೀತಿ ಹಬ್ಬ ಸಡಗರ ಸಂಭ್ರಮವನ್ನ ಆಚರಿಸಿ ಎಂದು ಅಪ್ಪು ಅವರು ಎಲ್ಲೂ ಹೇಳಿಲ್ಲ.ಇದನ್ನ ಅಭಿಮಾನಿಗಳು ತಮ್ಮ ಸ್ವ ಇಚ್ಛೆಯಿಂದ ಮಾಡುತ್ತಿರುವುದು ಎಂದರು. ಚಲಪತಿ ಅವರು ಪುನೀತ್ ಅವರನ್ನು ಯಜಮಾನರು ಎಂದೇ ಸಂಭೋಧಿಸೋದು.

ಯಜಮಾನರ ಮೇಲೆ ಅಭಿಮಾನಿಗಳು ಇಟ್ಟಿರೋ ಪ್ರೀತಿ ಕುರಿತು ಹೇಳೋಕೆ ಪದಗಳೇ ಇಲ್ಲ ಎಂದರು. ನಾನು ಯಜಮಾನರ ಅಭಿಮಾನಿ ಅವರ ಬಾಡಿಗಾರ್ಡ್ ಆಗಿದ್ದು ನನ್ನ ಪುಣ್ಯ. ಅಪ್ಪು ಅವರನ್ನ ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರ ಸರಳತೆ, ಸಜ್ಜನಿಕೆ, ಪ್ರೀತಿ ಬಗ್ಗೆ ಹೇಳೋಕೆ ಎರಡು ಮಾತಿಲ್ಲ. ಅವರ ಬಳಿ ಕೆಲಸಕ್ಕೆ ಸೇರೋ ಮೊದಲಿಂದ ನಾನು ಅವರ ಅಭಿಮಾನಿ ಈಗಲೂ ಸಹ ನಾನು ಅವರ ಅಭಿಮಾನಿಯೇ ಎಂದು ಹೇಳುತ್ತಾರೆ.

ಪುನೀತ್ ರಾಜಕುಮಾರ್ ಅಭಿನಯದ ಎಲ್ಲಾ ಸಿನೆಮಾಗಳು ದಾಖಲೆಯೇ ಆಗಿದೆ. ಅದರಲ್ಲಿ ಜೇಮ್ಸ್ ಸಿನೆಮಾ ಅದೆಲ್ಲವನ್ನೂ ಮೀರಿ ನಿಂತಿದೆ. ಎಲ್ಲರೂ ಹೇಳುವಂತೆ ಜೇಮ್ಸ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನೆಮಾ ಅಲ್ಲ. ಅಪ್ಪು ಅವರೇ ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ನಲ್ಲೇ ನಿರ್ಮಾಣಗೊಂಡ ಗಂಧದ ಗುಡಿ ಚಿತ್ರವಿದೆ. ಅದರಲ್ಲಿ ನಾವು ಯಜಮಾನರ ಧ್ವನಿಯನ್ನು ಸಹ ಕೇಳಬಹುದು. ಈ ಚಿತ್ರ ಜೇಮ್ಸ್ ಚಿತ್ರವನ್ನು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಈ ಚಿತ್ರ ತುಂಬಾ ಅದ್ಭುತವಾಗಿದ್ದು, ಗಂಧದ ಗುಡಿ ಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬರಲಿದೆ. ಗಂಧದ ಗುಡಿ ಚಿತ್ರ ಅಭಿಮಾನಿಗಳಿಗೆ ಮತ್ತೊಂದು ದೊಡ್ಡ ಹಬ್ಬ ಆಗಲಿದೆ ಎಂದರು.

Leave A Reply

Your email address will not be published.