Prem Gupta Ranchi News: ಕೆಲವು ತಂದೆತಾಯಿಯತು ಹೆಣ್ಣುಮಕ್ಕಳನ್ನು ಹೊರೆ ಎಂದೇ ಭಾವಿಸುತ್ತಾರೆ. ಮದುವೆ ಮಾಡಿ ಹೆಣ್ಣುಮಕ್ಕಳನ್ನು ಕಳಿಸಿಬಿಟ್ಟರೆ ಸಾಕು ಎಂದು, ಮದುವೆ ಮಾಡಿಬಿಡುತ್ತಾರೆ. ಆದರೆ ಮದುವೆ ನಂತರ ಹೆಣ್ಣುಮಗಳ ಜೀವನ ಏನಾಗಿದೆ ಎನ್ನುವುದನ್ನು ಯೋಚನೆ ಕೂಡ ಮಾಡುವುದಿಲ್ಲ. ಹಲವು ಸಾರಿ ಆ ಹೆಣ್ಣಿಗೆ ಗಂಡನ ಮನೆಯಲ್ಲಿ ಕಿರುಕುಳ ಕೊಟ್ಟು, ಹಿಂಸೆ ಮಾಡುತ್ತಿದ್ದರು ಕೂಡ, ಅದರ ಬಗ್ಗೆ ತಂದೆ ತಾಯಿ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲವು ತಂದೆ ತಾಯಿಯರು ಏನೇ ಕಷ್ಟ ಬಂದರು ಗಂಡನ ಮನೆಯಲ್ಲೇ ಇರಬೇಕು ಎನ್ನುತ್ತಾರೆ.

ಇನ್ನು ಕೆಲವರು ಗಂಡನ ಮನೆಯಲ್ಲೇ ಅಡ್ಜಸ್ಟ್ ಮಾಡಿಕೊಂಡಿರು ಎಂದು ಹೇಳುತ್ತಾರೆ. ಗಂಡನ ಮನೆಯಲ್ಲಿ ಮಗಳು ಕಷ್ಟಪಡುತ್ತಿದ್ದರೆ ಅವರಿಗೆ ಸಹಾಯ ಮಾಡುವುದು ಅಪರೂಪ ಎಂದರೆ ತಪ್ಪಲ್ಲ. ಪ್ರಪಂಚ ಹೀಗಿರುವಾಗ ಈ ಒಬ್ಬರು ತಂದೆ ತನ್ನ ಮಗಳು ಗಂಡನ ಮನೆಯಲ್ಲಿ ಹಿಂಸೆ ಪಡುತ್ತಿರುವುದು ಗೊತ್ತಾಗಿ, ಮಗಳನ್ನು ಯಾವ ರೀತಿ ಅಲ್ಲಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ ಗೊತ್ತಾ?

ಈ ವ್ಯಕ್ತಿಯ ಹೆಸರು ಪ್ರೇಮ್ ಗುಪ್ತ, ಇವರು ಮೂಲತಃ ಝಾರ್ಖಂಡ್ ನವರು. ಇವರ ಮಗಳ ಹೆಸರು ಸಾಕ್ಷಿ ಗುಪ್ತ, ಇವರು ರಾಂಚಿಯಲ್ಲಿರುವ ಸಚಿನ್ ಎನ್ನುವ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದರು. ಈ ವ್ಯಕ್ತಿ ಜಾರ್ಖಂಡ್ ನ ಎಲೆಕ್ಟ್ರಿಸಿಟಿ ಡಿಸ್ಟ್ರಿಬ್ಯುಶನ್ ಬೋರ್ಡ್ ನಲ್ಲಿ ಸೀನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಈತನಿಗೆ ಮದುವೆ ಮಾಡಿಕೊಟ್ಟರು, ಆರಂಭದಲ್ಲಿ ಸಾಕ್ಷಿಯನ್ನು ಗಂಡನ ಮನೆಯಲ್ಲಿ ತುಂಬಾ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು.

Prem Gupta Ranchi News

ನಂತರ ಸಚಿನ್ ಮತ್ತು ಅವನ ಮನೆಯವರ ಅಸಲಿ ಬಣ್ಣ ಗೊತ್ತಾಯಿತು. ಅವರೆಲ್ಲರೂ ಧನಪಿಶಾಚಿಗಳಾಗಿದ್ದರು. ಪದೇ ಪದೇ ವರದಕ್ಷಿಣೆ ಹಣ ಕೊಡಬೇಕು ಎಂದು ಆಕೆಯನ್ನು ಪೀಡಿಸುತ್ತಿದ್ದರು. ಆದರೆ ಈ ಯಾವ ವಿಷಯವನ್ನು ತಂದೆಗೆ ಹೇಳದೆ ಸಹಿಸಿಕೊಂಡಿದ್ದರು ಸಾಕ್ಷಿ, ಕೊನೆಗೆ ಹಣದ ವಿಚಾರಕ್ಕೆ ಜಗಳವಾಗಿ ಸಾಕ್ಷಿಯನ್ನು ಮನೆಯಿಂದ ಹೊರಗೆ ಹಾಕಿದರು. ಹಾಗಿದ್ದರೂ ಸಹ ಸಾಕ್ಷಿ ಧೈರ್ಯ ಕಳೆದುಕೊಳ್ಳಲಿಲ್ಲ. ಇದು ನನ್ನ ಮನೆ ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಗಂಡನ ಮನೆಯಲ್ಲೇ ಇದ್ದಳು.

ಆದರೆ ಗಂಡನ ಬಗ್ಗೆ ಆ ಒಂದು ವಿಷಯ ಗೊತ್ತಾಗುತ್ತಿದ್ದ ಹಾಗೆಯೇ ಅವಳ ಮನಸ್ಸೇ ಒಡೆದು ಹೋಗಿತ್ತು. ಆ ವಿಷಯ ಏನು ಎಂದರೆ, ಸಚಿನ್ ಗೆ ಅದಾಗಲೇ ಎರಡು ಬಾರಿ ಮದುವೆಯಾಗಿ, ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದ, ಆದರೆ ಈ ವಿಚಾರ ಮುಚ್ಚಿಟ್ಟು ಸಾಕ್ಷಿ ಜೊತೆಗೆ ಮದುವೆಯಾಗಿದ್ದ. ಈ ವಿಷಯ ಗೊತ್ತಾದ ನಂತರ ಸಾಕ್ಷಿ ತನ್ನ ತಂದೆ ಪ್ರೇಮ್ ಗುಪ್ತ ಅವರಿಗೆ ಗಂಡನ ಮನೆಯ ವಿಷಯವನ್ನು ತಿಳಿಸಿದಳು.

ಪ್ರೇಮ್ ಗುಪ್ತ ಅವರಿಗೆ ಮಗಳು ಅಲ್ಲಿರುವುದು ಸರಿ ಅನ್ನಿಸಲಿಲ್ಲ, ಕಾನೂನಿನ ಮೂಲಕ ಕ್ರಮಗಳನ್ನು ತೆಗೆದುಕೊಳ್ಳುವ ಕೆಲಸ ಇದ್ದೇ ಇರುತ್ತದೆ. ಆದರೆ ತಮ್ಮ ಮಗಳು ಆ ಮನೆಯಿಂದ ಹೊರಬರುವುದು ಎಲ್ಲಾ ಹೆಣ್ಣುಮಕ್ಕಳ ತಂದೆ ತಾಯಿಗೆ ಮಾದರಿ ಆಗಬೇಕು ಎಂದು ಒಂದು ಪ್ಲಾನ್ ಮಾಡಿ ತಮ್ಮ ಮಗಳನ್ನು ಯಾರು ಊಹಿಸಿರದ ರೀತಿಯಲ್ಲಿ ಮನೆಗೆ ಕರೆದುಕೊಂಡು ಬರುತ್ತಾರೆ. ಅದು ಹೇಗೆ ಎಂದರೆ, ತಮ್ಮ ಮಗಳನ್ನು ಬ್ಯಾಂಡ್ ಬಾಜಾ ಜೊತೆಗೆ ಡ್ಯಾನ್ಸ್ ಮಾಡುತ್ತಾ, ಖುಷಿಯಾಗಿ ಒಂದಷ್ಟು ಜನರು ನೋಡುವ ಹಾಗೆ ಕರೆದುಕೊಂಡು ಬರುತ್ತಾರೆ.

ಒಬ್ಬ ತಂದೆಯಾಗಿ ಪ್ರೇಮ್ ಗುಪ್ತ ಅವರು ಮಾಡಿರುವ ಈ ಒಂದು ಕೆಲಸ ಎಲ್ಲರಿಗೂ ಮಾದರಿ ಎಂದು ಹೇಳಬಹುದು. ಒಂದು ಸಾರಿ ಮದುವೆ ಮಾಡಿಕೊಟ್ಟುಬಿಟ್ಟರೆ, ಅವಳಿಗೂ ನಮಗೂ ಸಂಬಂಧವೆ ಇಲ್ಲ ಎಂದುಕೊಳ್ಳುವವರಿಗೆ ಇದು ಒಳ್ಳೆಯ ಪಾಠದ ರೀತಿ ಆಗಿದೆ ಎಂದರೆ ತಪ್ಪಲ್ಲ. ಇದನ್ನೂ ಓದಿ Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ಅನಾರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ, ಇವರಿಗೆಲ್ಲಾ 2000 ಸಿಗಲ್ಲ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!