Ganguly and Sachin Children School fees: ನಮ್ಮ ದೇಶದ ಸೆಲೆಬ್ರಿಟಿಗಳ ಮಕ್ಕಳಿಗೆ ಹೊರದೇಶದ ಯುನಿವರ್ಸಿಟಿಗಳಲ್ಲಿ ಓದುವುದಕ್ಕೆ ಹೆಚ್ಚು ಆಸಕ್ತಿ ಇರುತ್ತದೆ. ಅದೇ ರೀತಿ ಅಲ್ಲಿ ಕೂಡ ಭಾರತದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮತ್ತು ಇನ್ನಿತರ ಸೌಲಭ್ಯಗಳನ್ನು ಕೊಟ್ಟು ಕರೆಸಿಕೊಳ್ಳುತ್ತಾರೆ. ಬ್ರಿಟನ್ ಮತ್ತು ಅಮೆರಿಕಾ ಈ ಎರಡು ರಾಷ್ಟ್ರಗಳಲ್ಲಿ ಇಂಥ ಯುನಿವರ್ಸಿಟಿಗಳಿವೆ. ಉದಾಹರಣೆಗೆ ಆಕ್ಸ್ಫರ್ಡ್ ಯೂನಿವರ್ಸಿಟಿ, ಮ್ಯಾಂಚೆಸ್ಟರ್ ಯೂನಿವರ್ಸಿಟಿ.

ಇಲ್ಲಿ ಒಳ್ಳೆಯ ಶಿಕ್ಷಣ ಖಂಡಿತವಾಗಿ ಸಿಗುತ್ತದೆ. ಇದೇ ಸಾಲಿಗೆ ಲಂಡನ್ ನಲ್ಲಿರುವ ಮತ್ತೊಂದು ಪ್ರಖ್ಯಾತ ಯೂನಿವರ್ಸಿಟಿ ಕೂಡ ಸೇರುತ್ತದೆ. ಇದು ಕೂಡ ಸೆಲೆಬ್ರಿಟಿ ಮಕ್ಕಳ ಫೇವರೆಟ್, ಲಂಡನ್ ನ ಈ ಯೂನಿವರ್ಸಿಟಿಯಲ್ಲಿ ಭಾರತದ ಶ್ರೇಷ್ಠ ಕ್ರಿಕೆಟರ್ ಗಳಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಇವರಿಬ್ಬರ ಮಕ್ಕಳು ಸಾರಾ ತೆಂಡೂಲ್ಕರ್ ಮತ್ತು ಸನಾ ಗಂಗೂಲಿ ಇಬ್ಬರು ಓದುತ್ತಿದ್ದಾರೆ.

ಈ ಯೂನಿವರ್ಸಿಟಿ ವಿಶ್ವದ ಅತ್ಯಂತ ಶ್ರೇಷ್ಠ ಯೂನಿವರ್ಸಿಟಿ ಗಳಲ್ಲಿ ಒಂದು, ವಿದ್ಯಾಭ್ಯಾಸಕ್ಕೆ ತಗಲುವ ಶುಲ್ಕ ಕೂಡ ಅಷ್ಟೇ ಜಾಸ್ತಿ ಇರುತ್ತದೆ. ಸಾಮಾನ್ಯ ವರ್ಗಕ್ಕೆ ಸೇರಿದ ಭಾರತ ಕುಟುಂಬದ ಮಗು, ಏಳು ತಲೆಮಾರಿನ ಆಸ್ತಿ ಕೂಡ ಈ ಯೂನಿವರ್ಸಿಟಿಯಲ್ಲಿ ಓದಲು ಸಾಕಾಗುವುದಿಲ್ಲ. ಇದರ ಹೆಸರು ಯೂನಿವರ್ಸಿಟಿ ಕಾಲೇಜ್ ಲಂಡನ್ (UCL) ಇಡೀ ವಿಶ್ವದ QS ರೇಟಿಂಗ್ ನಲ್ಲಿ 8ನೇ ಸ್ಥಾನದಲ್ಲಿದೆ. ಬ್ರಿಟನ್ ನ ಪ್ರಸಿದ್ಧ ಯೂನಿವರ್ಸಿಟಿಗಳಲ್ಲಿ ಇದು ಅಗ್ರಸ್ಥಾನದಲ್ಲಿದೆ. ಈ ಲಿಸ್ಟ್ ನಲ್ಲಿ ಟಾಪ್ 150 ಯೂನಿವರ್ಸಿಟಿಗಳ ಒಳಗೆ ಭಾರತದ ಯಾವ ಯೂನಿವರ್ಸಿಟಿ ಕೂಡ ಇಲ್ಲ.

Ganguly and Sachin Children School fees

ಇಲ್ಲಿ ಪಾಠ ಮಾಡುವ ಶಿಕ್ಷಕರು 30 ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ ಎನ್ನುವುದು ಮತ್ತೊಂದು ಹೆಮ್ಮೆಯ ವಿಷಯ. ಸನಾ ಗಂಗೂಲಿ ಅವರು ಈ ಯುನಿವರ್ಸಿಟಿಯಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಡಿಗ್ರಿ ಓದುತ್ತಿದ್ದಾರೆ. 2020ರಲ್ಲಿ ಇವರು ಡಿಗ್ರಿಗೆ ಸೇರಿದ್ದು, ಈ ವರ್ಷ ಸನಾ ಅವರ ಕೋರ್ಸ್ ಮುಗಿಯಲಿದೆ. ಇಲ್ಲಿ ಓದುವ ಜೊತೆಗೆ ಸನಾ ಅವರು ಲಂಡನ್ ನ PWC ನಲ್ಲಿ ಇಂಟರ್ನ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.

ಇಂಟರ್ನ್ ಆಗಿ ಮಾಡುತ್ತಿರುವ ಕೆಲಸಕ್ಕೆ ವರ್ಷಕ್ಕೆ 30 ಲಕ್ಷ ಸಂಬಳ ಪಡೆಯುತ್ತಾರೆ ಸನಾ. ಇನ್ನು ಸಾರಾ ತೆಂಡೂಲ್ಕರ್ ಅವರು ಇದೇ ಯೂನಿವರ್ಸಿಟಿಯಲ್ಲಿ Clinical and Public Health Nutrition ಸಬ್ಜೆಕ್ಟ್ ನಲ್ಲಿ Msc ಮಾಡುತ್ತಿದ್ದಾರೆ. ಇವರ ಕೋರ್ಸ್ ಕೂಡ ಈ ವರ್ಷ ಮುಗಿಯಲಿದೆ. ಇಲ್ಲಿನ ಫೀಸ್ ನೋಡುವುದಾದರೆ, ಪದವಿ ಪೂರ್ವ ಕೋರ್ಸ್, 3 ರಿಂದ 4 ವರ್ಷಗಳ ಕೋರ್ಸ್ ಗೆ ಇಲ್ಲಿ 30 ರಿಂದ 35 ಲಕ್ಷ ಫೀಸ್ ಇರುತ್ತದೆ..

4 ವರ್ಷದ ಕೋರ್ಸ್ ಗಾಗಿ 1.40 ಕೋಟಿ ವರೆಗು ಶುಲ್ಕ ಕಟ್ಟಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಅಲ್ಲಿ ವಸತಿ, ಆಹಾರ ಇದಕ್ಕೆಲ್ಲ ಬೇರೆ ಖರ್ಚು ಇರುತ್ತದೆ. ಈ ಯೂನಿವರ್ಸಿಟಿಯಲ್ಲಿ MS ಮಾಡಲು 40 ಲಕ್ಷದವರೆಗು ಖರ್ಚಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಕೋಟಿಗಟ್ಟಲೇ ಖರ್ಚು ಮಾಡುತ್ತಿದ್ದಾರೆ ಕ್ರಿಕೆಟ್ ಸ್ಟಾರ್ ಗಳು.

By

Leave a Reply

Your email address will not be published. Required fields are marked *