ಗರ್ಭ ಧರಿಸುವುದು ಹೆಣ್ಣಿಗೆ ದೇವರು ಕೊಟ್ಟ ವರ. ಒಂಬತ್ತು ತಿಂಗಳು ಮಗುವನ್ನು ಗರ್ಭದಲ್ಲಿ ಜೋಪಾನ ಮಾಡಿ, ಇನ್ನೊಂದು ಜೀವಕ್ಕೆ ಜನ್ಮ ನೀಡುತ್ತಾಳೆ ಹೆಣ್ಣು. ಈ ಒಂಬತ್ತು ತಿಂಗಳು ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ಏನೆ ಮಾಡಿದರೂ, ತಿಂದರೂ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಗರ್ಭಿಣಿಯರು ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು ನೋಡುವ ಬನ್ನಿ.
ಗರ್ಭ ಧರಿಸಿದ ಸಮಯದಲ್ಲಿ ಏನೇನು ಮಾಡಬಹುದು ಮತ್ತು ಮಾಡಬೇಕು ಎಂಬುವುದರ ಕುರಿತು ಮೊದಲು ತಿಳಿಯೋಣ. ಗರ್ಭಿಣಿಯರು ಆದಷ್ಟು ಸಮಾಧಾನವಾಗಿ ಇರಬೇಕು. ಶಾಂತಿಯಿಂದ ಕೂಡಿರಬೇಕು. ಯಾವುದೇ ಗಾಬರಿ, ಚಿಂತೆಗಳಿಂದ ದೂರವಿರಬೇಕು. ಯಾಕೆಂದರೆ ಗಾಬರಿ ಮತ್ತು ಚಿಂತೆಯ ಪರಿಣಾಮ ಮಗುವಿನ ಮೇಲೆ ಆಗುತ್ತದೆ. ಹೆಚ್ಚಾಗಿ ದ್ರವ ಆಹಾರ ಅಧವ ನಾರಿನಾಂಶ, ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸುವುದು ಉಪಯುಕ್ತ. ಮಗುವಿನ ಸುತ್ತ ನೀರಿನ ಪದರು ಇರುವುದರಿಂದ ಅದರ ಸಮತೋಲನಕ್ಕೆ ಸಹಾಯಕ ಆಗುತ್ತದೆ. ಉದಾಹರಣೆಗೆ ಕಲ್ಲಂಗಡಿ ಹಣ್ಣು, ಯಾವುದೆ ಹಣ್ಣುಗಳ ತಾಜಾ ಹಣ್ಣಿನ ರಸ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಹೊರಗಿನ ಜ್ಯೂಸ್ ಬದಲು ಮನೆಯಲ್ಲಿ ಮಾಡುವುದು ಒಳ್ಳೆಯದು. ನೀರನ್ನು ಹೆಚ್ಚಾಗಿ ಕುಡಿಯುವುದು ಒಳ್ಳೆಯದು. ಗರ್ಭಿಣಿಯರಿಗೆ ಗ್ಯಾಸ್ ಹಾಗೂ ಅಜೀರ್ಣ ಸಮಸ್ಯೆಗಳು ಮಾಡಬಾರದು ಹಾಗಾಗಿ ಬಿಸಿ ಬಿಸಿಯ ಆಹಾರ ಊಟ ಮಾಡುವುದು ಒಳ್ಳೆಯದು. ರಾತ್ರಿ ಹಾಗೂ ಮಧ್ಯಾನ್ಹ ದ ಹೊತ್ತಿನಲ್ಲಿ ಆಗಷ್ಟೇ ತಯಾರಿಸಿದ ಆಹಾರವನ್ನೆ ಬಳಸುವುದು. ಗರ್ಭಿಣಿಯರು ಹಸಿರು ತರಕಾರಿ, ಹಣ್ಣು, ಸೊಪ್ಪುಗಳನ್ನು ಆಹಾರದಲ್ಲಿ ಹೆಚ್ಚು ಹೆಚ್ಚು ಬಳಸುವುದು ಉತ್ತಮ. ಯಾಕೆಂದರೆ ಇವುಗಳಲ್ಲಿ ಐರನ್, ಪೋಲಿಕ್ ಆ್ಯಸಿಡ್, ಕ್ಯಾಲ್ಸಿಯಂ ಅಂಶ ಸಿಗುತ್ತದೆ.
ಹಾಗೆಯೆ ಹಾಲು ಹಾಗೂ ಡ್ರೈ ಫ್ರೂಟ್ಸ್ ತಿನ್ನುವುದು ತುಂಬಾ ಒಳ್ಳೆಯದು. ಬೆಳಗ್ಗೆ ಹಾಗೂ ಸಂಜೆ ಹಾಲಿನ ಜೊತೆಗೆ ಡ್ರೈ ಫ್ರೂಟ್ಸ್ ಪೌಡರ್ ಮಾಡಿ ಬಳಸಿ, ರುಚಿಯ ಜೊತೆಗೆ ಆರೋಗ್ಯಕ್ಕು ಉತ್ತಮ.ಇನ್ನೂ ಪ್ರಯಾಣದ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ ಇರುವುದು ಉತ್ತಮ. ಸರಿಯಾದ ರೀತಿಯಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಪ್ರಯಾಣ ಮಾಡಬಾರದು ಎಂದು ಡಾಕ್ಟರ್ ಹೇಳಿದ್ದಲ್ಲಿ, ಆದಷ್ಟು ಪ್ರಯಾಣವನ್ನು ನಿಲ್ಲಿಸುವುದೆ ಉತ್ತಮ. ಗರ್ಭಿಣಿಯರು ರಾತ್ರಿ ಎಂಟರಿಂದ ಒಂಬತ್ತು ತಾಸು ನಿದ್ದೆ ಮಾಡಬೇಕು. ಬೆಳಗಿನ ಸಮಯದಲ್ಲಿ ಎರಡರಿಂದ ಮೂರು ತಾಸಿನ ನಿದ್ದೆ ಮಾಡಿದರೆ ಒಳ್ಳೆಯದು. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಹಾಗೆಯೆ ಗರ್ಭಿಣಿಯರು ವ್ಯಾಯಾಮ ಮಾಡಿದರೆ ಉತ್ತಮ. ಗರ್ಭಿಣಿಯರಿಗಾಗಿಯೆ ಬೇರೆ ರೀತಿಯ ವ್ಯಾಯಾಮ ಇರುತ್ತದೆ ಅದನ್ನು ನೋಡಿಕೊಂಡು ವ್ಯಾಯಾಮ ಮಾಡಬೇಕು. ಇದರ ಜೊತೆಗೆ ವಾಕಿಂಗ್ ಕೂಡ ಮಾಡಬಹುದು. ಡಾಕ್ಟರ್ ವ್ಯಾಯಾಮ ಮಾಡಬಾರದು ಹೇಳಿದ್ದರೆ ಮಾಡಬಾರದು. ಯಾಕೆಂದರೆ ಗರ್ಭಕೋಶದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವಿಷ್ಟು ಗರ್ಭಿಣಿಯರು ಮಾಡಬೇಕಾದ ಅಂಶಗಳು.
ಇನ್ನೂ ಗರ್ಭಿಣಿಯರು ಮಾಡಬಾರದ ಕೆಲವು ಅಂಶಗಳನ್ನು ನೋಡೋಣ. ಜ್ವರ, ನೆಗಡಿ, ತಲೆನೋವು ಯಾವುದೆ ಇದ್ದರೂ ಡಾಕ್ಟರ್ ಅಭಿಪ್ರಾಯ ಕೇಳದೆ ಬಳಸುವುದು ಒಳ್ಳೆಯದಲ್ಲ. ಡಾಕ್ಟರ್ ಕೊಟ್ಟ ಮಾತ್ರೆಗಳು ತೆಗೆದುಕೊಳ್ಳುವುದು ಉತ್ತಮ. ಗರ್ಭಿಣಿಯರು ಹೆಚ್ಚು ಬಾಗುವುದು ಹಾಗೂ ಭಾರ ಎತ್ತುವುದು ಮಾಡಬಾರದು. ಇದರಿಂದ ಮಗುವಿಗೆ ತೊಂದರೆಯಾಗುತ್ತದೆ. ಸ್ನಾನ ಮಾಡುವಾಗ ನೀರು ಹೆಚ್ಚು ಬಿಸಿ ಇರಬಾರದು. ಇದರಿಂದ ತಲೆಸುತ್ತು ಬರುವ ಸಾಧ್ಯತೆ ಇರುತ್ತದೆ. ಮಧ್ಯಮ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಗರ್ಭಿಣಿಯರು ಹೊರಗಿನ ತಿಂಡಿಗಳಿಂದ ದೂರವಿದ್ದರೆ ಒಳ್ಳೆಯದು. ಹೊರಗಿನ ತಿಂಡಿಗಳಲ್ಲಿ ಕರುಳಿಗೆ ತೊಂದರೆ ಆಗುವಂತಹ ಟೇಸ್ಟಿಂಗ್ ಪೌಡರ್ ಹಾಕಿರುತ್ತಾರೆ. ಆಲ್ಕೊಹಾಲ್, ಟೊಬ್ಯಾಕೊದಂತಹ ಹವ್ಯಾಸ ಇದ್ದವರು ಗರ್ಭಧರಿಸಿದಾಗ ಇದರ ಉಪಯೋಗ ಮಾಡದಿರುವುದು ಒಳ್ಳೆಯದು. ಗರ್ಭಿಣಿಯರು ರೇಡಿಯೇಷನ್ ಇರುವ ಕಡೆ ಹೋಗುವುದು ಮಗುವಿನ ಮೇಲೆ ಅಪಾಯಕಾರಿ ಪರಿಣಾಮ ಬೀರಬಹುದು. ಮಾಲ್ ಹಾಗೂ ಚಿತ್ರಮಂದಿರಗಳಲ್ಲಿ ಇರುವ ಚೆಕ್ಕಿಂಗ್ ಮಶಿನ್ ಅನ್ನು ಹಾದು ಹೋಗದೆ ಇರುವುದು ಉತ್ತಮ. ಹಾಗೆಯೆ ಮನೆಯ ಬಳಿ ಮೊಬೈಲ್ ಟವರ್ ಇದ್ದರೆ ಬೇರೆ ಕಡೆ ಉಳಿಯುವ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.
ಎಕ್ಸರೆ ಪದೆ ಪದೇ ಮಾಡುವುದು ಮಗುವಿನ ಬೆಳವಣಿಗೆಗೆ ಒಳ್ಳೆಯದಲ್ಲ. ಗರ್ಭಿಣಿಯರು ಕೆಲವು ಆಹಾರಗಳನ್ನು ತಿನ್ನಬಾರದು. ಅವುಗಳು ಯಾವುದೆಂದರೆ ಉಷ್ಣ ಹೆಚ್ಚಿರುವ ಹಣ್ಣು ಹಾಗೂ ತರಕಾರಿಗಳು, ವಸ್ತುಗಳನ್ನು ಬಳಸಬಾರದು. ಪಪ್ಪಾಯ, ಎಳ್ಳು, ಬದನೆ, ಅರ್ಧ ಬೆಂದ ಮೊಟ್ಟೆ, ಮೀನು ಇವುಗಳನ್ನು ಬಳಸಬಾರದು. ಮೊಟ್ಟೆಯನ್ನು ಪೂರ್ತಿಯಾಗಿ ಬೇಯಿಸಿ ತಿನ್ನಬಹುದು. ಗರ್ಭ ಧರಿಸಿದ ಮೊದಲ ಮೂರೂ ತಿಂಗಳಲ್ಲಿ ಮೀನು ತಿನ್ನಲೆಬಾರದು. ನಂತರದಲ್ಲಿ ತಿನ್ನುವುದಾದರೂ ಕೆಲವು ಆಯ್ದ ಮೀನುಗಳನ್ನು ಸರಿಯಾಗಿ ಬೇಯಿಸಿ ಉಪಯೋಗಿಸಿದರೆ ಉತ್ತಮ. ಯಾವುದೆ ಆಹಾರವನ್ನೂ ಪೂರ್ತಿಯಾಗಿ ಬೇಯಿಸಿಯೆ ಬಳಸುವುದು ಉತ್ತಮ.
ಇವಿಷ್ಟು ಗರ್ಭಿಣಿಯರು ಮಾಡಬೇಕಾದ ಹಾಗೂ ಮಾಡಬಾರದು ಎಂದು ಇರುವ ವಿಷಯಗಳು. ಗರ್ಭ ಧರಿಸಿದ ಸಮಯದಲ್ಲಿ ಎಷ್ಟು ಜಾಗರೂಕತೆಯಿಂದ ಇರುತ್ತಾರೆ ಅಷ್ಟು ಒಳ್ಳೆಯದು. ಮಗುವಿನ ಬೆಳವಣಿಗೆ ಸೂಕ್ಷ್ಮವಾಗಿ ಇರುವುದರಿಂದ ಸಣ್ಣ ಸಣ್ಣ ವಿಷಯಗಳು ಪರಿಣಾಮ ಬೀರುತ್ತದೆ.