ಮುದ್ರಾ ಯೋಜನೆಯ ಬಗ್ಗೆ ಯಾರಿಗೆಲ್ಲ ತಿಳಿದಿಲ್ಲ ಅವರಿಗೆಲ್ಲಾ ಮುದ್ರಾ ಯೋಜನೆ ಏನು? ಅದರ ಪ್ರಯೋಜನ ಏನು? ಹೇಗೆ ಅರ್ಜಿ ಸಲ್ಲಿಸಬಹುದು? ಎಂಬುದರ ಬಗ್ಗೆ ತಿಳಿಸಿಕೊಡುವ ಪ್ರಯತ್ನ. ಯಾರಾದರೂ ಹೊಸದಾಗಿ ಬ್ಯುಸನೆಸ್ ಮಾಡುವವರು ಇದ್ದರೆ ಅಥವಾ ಈಗಾಗಲೇ ಬ್ಯುಸನೆಸ್ ಮಾಡುತ್ತಾ ಇದ್ದವರೂ ತಮ್ಮ ಬ್ಯುಸನೆಸ್ ಅನ್ನು ಇನ್ನೂ ಹೆಚ್ಚು ಅಭಿವೃದ್ಹಿ ಮಾಡಬೇಕು ಅಂತ ಇರುವವರು ಈ ಮುದ್ರಾ ಯೋಜನೆಯ ಅಡಿಯಲ್ಲಿ ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದು. ಹಾಗಾದ್ರೆ ಈ ಲೋನ್ ಪಡೆಯೋಕೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಏನೆಲ್ಲ ದಾಖಲೆಗಳು ಬೇಕು ಅನ್ನೋದನ್ನ ಒಂದೊಂದೇ ಆಗಿ ವಿವರವಾಗಿ ನೋಡೋಣ.
ಮೊದಲಿಗೆ ಮುದ್ರಾ ಎಂದರೆ ಏನು ಅನ್ನೋದನ್ನ ನೋಡೋಣ
ಮುದ್ರಾ ಎಂದರೆ ಮೈಕ್ರೋ ಯುನಿಟ್ಸ್ ಡೇವಲಪಮೆಂಟ ಆಂಡ್ ರೀಫೈನಾನ್ಸ್ ಏಜೆನ್ಸಿ. ಈ ಯೋಜನೆಯು ಕೇಂದ್ರ ಸರ್ಕಾರದಿಂದ ಜಾರಿಗೆ ಬಂದಿದೆ. ದೇಶದ ಯುವ ಜನತೆಯನ್ನು ಉದ್ಯಮ ಶೀಲತೆಯತ್ತ ಆಕರ್ಷಣೆ ಮಾಡಲು, ಸಣ್ಣ ಹಾಗೂ ಅತೀ ಸಣ್ಣ ಉದ್ಯಮಗಳನ್ನು ನಡೆಸುತ್ತಿರುವ ಉದ್ಯಮ ಶೀಲರಿಗೆ ಹಣಕಾಸಿನ ನೆರವನ್ನು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಅಂದರೆ ಈಗಾಗಲೇ ಬ್ಯುಸನೆಸ್ ಮಾಡುತ್ತಾ ಇದ್ದವರೂ ಮತ್ತು ಹೊಸ ಬ್ಯುಸನೆಸ್ ಮಾಡುವವರಿಗೆ ಹಣಕಾಸಿನ ನೆರವು ನೀಡುವುದೇ ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ.
ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ತೊಡಗಳು ಇಚ್ಛಿಸಿದವರಿಗೆ 10 ಲಕ್ಷದವರೆಗೂ ಸಾಲ ಪಡೆಯಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಪಡೆಯಬಹುದು. ( PMMY – ಪ್ರಧಾನ ಮಂತ್ರಿ ಮುದ್ರಾ ಯೋಜನೆ). ಹಾಗಾಗಿ ಈ ಯೋಜನೆಯ ಅಡಿಯಲ್ಲಿ ಅತೀ ಹೆಚ್ಚು ಅಂದರೆ 10 ಲಕ್ಷದವರೆಗೂ ಸಾಲವನ್ನು ಪಡೆಯಬಹುದು. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಈ ಕೆಳಗಿನ ಸಾಲದ ಯೋಜನೆಗಳು ಲಭ್ಯ ಇರುತ್ತವೆ. ಇದರಲ್ಲಿ 3 ಯೋಜನೆಗಳು ಇದ್ದು ಮೊದಲನೆಯದಾಗಿ ಶಿಶು ಸಾಲ :- ಈ ಯೋಜನೆಯಲ್ಲಿ 50 ಸಾವಿರದವರೆಗೂ ಸಾಲವನ್ನು ಪಡೆಯಬಹುದು. ಎರಡನೆಯದಾಗಿ, ಕಿಶೋರ ಸಾಲ ಈ ಯೋಜನೆಯಲ್ಲಿ 50 ಸಾವಿರದಿಂದ 5 ಲಕ್ಷದವರೆಗೂ ಸಾಲವನ್ನು ಪಡೆಯಬಹುದು. ಮೂರನೆಯದಾಗಿ ತರುಣ್ ಸಾಲ :- ಈ ಯೋಜನೆಯ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷದವರೆಗೂ ಕೂಡ ಸಾಲವನ್ನು ಪಡೆಯಬಹುದು.
ಉದಾಹರಣೆಗೆ ಯಾರಾದರೂ ಸ್ವಂತವಾಗಿ ಯಾವುದಾದರೂ ಕೆಲಸ ಮಾಡಬೇಕು ಅಂತ ಇದ್ದರೆ ಅಂದರೆ, ಬ್ಯುಟಿ ಪಾರ್ಲರ್, ಸಲೂನ್, ಹೊಲಿಗೆ ಅಂಗಡಿ, ಡ್ರೈ ಕ್ಲಿನಿಂಗ್, ಅಂಗಡಿ, ಸೈಕಲ್ ಮತ್ತು ಮೋಟಾರ್ ರಿಪೇರಿ ಅಂಗಡಿ, DTP ಮತ್ತು ಜೆರಾಕ್ಸ್, ಮೆಡಿಕಲ್ ಅಂಗಡಿಗಳು, ಕೊರಿಯರ್ ಏಜೆಂಟ್ಸ್ ಹೀಗೆ ಹಲವಾರು ರೀತಿಯ ಸ್ವಂತ ಉದ್ಯೋಗವನ್ನು ಮಾಡಲು ಬಯಸುವವರು ಅಥವಾ ಈಗಾಗಲೇ ಮಾಡುತ್ತಾ ಇರುವವರೂ ಕೂಡಾ ತಮ್ಮ ಉದ್ಯೋಗವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಈ MUDRA ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಸಾರಿಗೆ ವಲಯದಲ್ಲಿ ಆಟೋ ರಿಕ್ಷಾ, ಸಣ್ಣ ಸರಕುಗಳ ಸಾರಿಗೆ ವಾಹನ 3 ಚಕ್ರದ ವಾಹನ, ಕಾರು, ಟ್ಯಾಕ್ಸಿ ಇಂತಹ ಸರಕು ಮತ್ತು ಸಾರಿಗೆ ವಾಹನಗಳನ್ನು ಖರೀದಿ ಮಾಡಲು ಸಹ ಅರ್ಜಿ ಸಲ್ಲಿಸಿ ಲೋನ್ ಪಡೆಯಬಹುದು. ಉತ್ಪಾದನಾ ವಲಯಗಳಾದ, ಹಪ್ಪಳ ತಯಾರಿಕೆ, ಉಪ್ಪಿನಕಾಯಿ ತಯಾರಿಕೆ, ಚಿಕ್ಕದಾದ ಕ್ಯಾಂಟೀನ್, ಗ್ರಾಮೀಣ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಸಂರಕ್ಷಣೆ, ಬಿಸ್ಕತ್, ಬನ್ ತಯಾರಿ ಮಾಡುವ ಘಟಕಗಳು ಇಂತವುಗಳನ್ನು ಆರಂಭಿಸಬೇಕು ಅಂದುಕೊಂಡರೆ ಹಣದ ಅವಶ್ಯಕತೆ ಇದ್ದಲ್ಲಿ ಪ್ರಧಾನ ಮಂತ್ರಿ ಅವರ ಮುದ್ರಾ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದು.
ಅರ್ಜಿಯನ್ನ ಎಲ್ಲಿ ಹೇಗೆ ಸಲ್ಲಿಸುವುದು ಅನ್ನೋ ಗೊಂದಲ ಬೇಡ. ಅರ್ಜಿಯನ್ನ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ (PMMY) ಹಣಕಾಸಿನ ನೆರವು ಪಡೆಯಲು ತಮ್ಮ ಹತ್ತಿರದಲ್ಲಿ ಇರುವ PSU ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಮತ್ತು ಸಹಕಾರಿ ಬ್ಯಾಂಕ್ ಗಳು ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಯಾವುದೇ ಸ್ಥಳೀಯ ಶಾಖೆಗೆ ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದು. ಆದರೆ ಈ ಯೋಜನೆಯನ್ನು ಪಡೆಯಲು ಮೊದಲು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಯಾವುದೇ ಒಂದು ಬ್ಯಾಂಕ್ ನಲ್ಲಿ ಒಂದು ಸೆವಿಂಗ್ ಬ್ಯಾಂಕ್ ಅಕೌಂಟ್ ಅಂತೂ ಕಡ್ಡಾಯವಾಗಿ ಇರಲೇಬೇಕು. ಯಾವ ಬ್ಯಾಂಕ್ ನಲ್ಲಿ ಅಕೌಂಟ್ ಇರತ್ತೋ ಅಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸೋದು ಎಲ್ಲಿ ಅನ್ನೋದನ್ನ ನೋಡಿ ಆಯ್ತು ಈಗ ಅರ್ಜಿ ಸಲ್ಲಿಸೋದು ಹೇಗೆ ಮತ್ತು ಏನೆಲ್ಲ ದಾಖಲೆಗಳನ್ನು ಕೊಡಬೇಕು ಅನ್ನೋದನ್ನ ನೋಡೋಣ. 50 ಸಾವಿರದಿಂದ 10 ಲಕ್ಷದವರೆಗೂ ಲೋನ್ ಪಡೆಯಬೇಕು ಅಂದರೆ ಈ ಕೆಳಗಿನ ಎಲ್ಲ ಮಾಹಿತಿಯನ್ನೂ ಒದಗಿಸಬೇಕು. ಆಧಾರ ಕಾರ್ಡ್ ಮತ್ತು ಆಧಾರ್ ನಂಬರ್, ಪಾನ್ ಕಾರ್ಡ್, ಸೆವಿಂಗ್ ಅಕೌಂಟ್ ನಂಬರ್ ಮತ್ತು ಸೆವಿಂಗ್ ಅಕೌಂಟ್ ನ ಪಾಸ್ ಬುಕ್ , ನೀವು ಮಾಡುವ ಬ್ಯುಸನೆಸ್ ನ ಪ್ರಾಜೆಕ್ಟ್ ರಿಪೋರ್ಟ್ ಮತ್ತು ಇತ್ತೀಚಿನ ಪಾಸ್ಪೋರ್ಟ್ ಸೈಜ್ ನ 5 ಫೋಟೋ, ರೆಡಿ ಮಾಡಿದ ಕೋಟೇಷನ್, ಏಜ್ ಪ್ರೂಫ್ ಗೆ SSLC ಮಾರ್ಕ್ಸ್ ಕಾರ್ಡ್ ಅಥವಾ TC, ವಿದ್ಯಾರ್ಹತೆಗೆ SSLC, PUC, ಡಿಗ್ರಿ ಅಥವಾ ಯಾವುದೇ ವ್ಯಾಸಂಗದ ಮಾರ್ಕ್ಸ್ ಕಾರ್ಡ್, ಹಾಗೂ ಚಾಲ್ತಿಯಲ್ಲಿ ಇರುವ ಇಮೈಲ್ ಐಡಿ ಹಾಗೂ ಮೊಬೈಲ್ ನಂಬರ್, ಡ್ರೈವಿಂಗ್ ಲೈಸೆನ್ಸ್, ಕೊನೆಯ 2 ವರ್ಷದ ಬೆಲನ್ಸ್ ಶೀಟ್, ಯಾವ ಬ್ಯುಸನೆಸ್ ಮಾಡಬೇಕು ಅಂದುಕೊಂಡಿರುತ್ತೀರೋ ಅದರ ಲೈಸೆನ್ಸ್ ಇವಿಷ್ಟು ದಾಖಲೆಗಳು ಬೇಕಾಗತ್ತೆ. 10 ಲಕ್ಷದವರೆಗೂ ಸಾಲ ಬೇಕಿದ್ದಲ್ಲಿ ಬ್ಯಾಂಕ್ ಬೆಲೆನ್ಸ್ ಶೀಟ್ ಸುಮಾರು 6 ತಿಂಗಳು ಆದರೂ ಸರಿಯಾಗಿ ನಿರ್ವಹಣೆ ಮಾಡಿರಬೇಕು. ಹಾಗೇ ತೆರಿಗೆಯನ್ನೂ ಸಹ ಸರಿಯಾಗಿ ಕಟ್ಟಿರಬೇಕು. ಇವಿಷ್ಟು ದಾಖಲೆಗಳನ್ನ ಒದಗಿಸಿ ನಿಮ್ಮ ಅಕೌಂಟ್ ಇರುವ ಬ್ಯಾಂಕ್ ನಲ್ಲಿ ಲೋನ್ ಪಡೆಯಬಹುದು.