ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿದ ರಾಷ್ಟ್ರ. ಸುಮಾರು ನುರಾಮುವತ್ತು ಕೋಟಿಗೂ ಅಧಿಕ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಪ್ರತೀ ದಿನ ಒಂದು ನಿಮಿಷಕ್ಕೆ ಎಷ್ಟೋ ಸಾವಿರ ಮಕ್ಕಳು ಜನಿಸುತ್ತಾ ಇರುತ್ತಾರೆ. ಭಾರತ ಸರ್ಕಾರ ಸ್ತ್ರೀ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಲ್ಲಿ ಗರ್ಭಿಣಿ ಮಹಿಳೆಯರು ಮತ್ತು ನವಜಾತ ಶಿಶುಗಳಿಗೆ ಪ್ರಯೋಜನ ಆಗುವಂತಹ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯ ಉದ್ದೇಶವೇನು? ಇದರ ಪ್ರಯೋಜನ ಪಡೆಯುವುದು ಹೇಗೆ? ಇದಕ್ಕೆ ಬೇಕಾದ ದಾಖಲೆಗಳು ಏನು? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ (ಪಿಎಂಎಂವಿವೈ) ಎಂಬುದು ಹೆರಿಗೆಗೆ ಹಾಗೂ ಬಾಣಂತಿಯರಿಗೆ ಲಾಭದ ಕಾರ್ಯಕ್ರಮವಾಗಿದ್ದು ಇದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಅನುಗುಣವಾಗಿ ದೇಶದ ಎಲ್ಲಾ ಜಿಲ್ಲೆಗಳಲ್ಲಿಭಾರತ ಸರ್ಕಾರದಿಂದ ಜಾರಿಗೆ ತರಲಾಗಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ಉಂಟಾಗುವ ತೊಂದರೆ, ಅನಾರೋಗ್ಯಗಳಾದ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣಗಳನ್ನು ತಡೆಯಲು ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿ ತಂದಿದೆ. ಇದು ನವೆಂಬರ್ ಒಂದು ೨೦೧೮ ರಲ್ಲಿ ಜಾರಿಗೆ ಬಂದಿದೆ. ಈ ಯೋಜನೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮೂರು ಹಂತಗಳಲ್ಲಿ ಐದು ಸಾವಿರ ರೂಪಾಯಿ ಹಣವನ್ನು ನೀಡಲಾಗುವುದು. ಅಂದರೆ ಗರ್ಭಿಣಿ ಆದಾ ಮಹಿಳೆಗೆ ಐದು ತಿಂಗಳು ತುಂಬಿದ ನಂತರ ಒಂದು ಸಾವಿರ ರೂಪಾಯಿ ಎರಡನೇ ಹಂತದಲ್ಲಿ ವೈದ್ಯರಿಂದ ತಪಾಸಣೆ ಆದ ನಂತರ ಅಗತ್ಯ ಚುಚ್ಚು ಮದ್ದುಗಳಿಗೆ ಎಂದು ಎರಡು ಸಾವಿರ ರೂಪಾಯಿ ಮತ್ತು ಮೂರನೇ ಹಂತದಲ್ಲಿ ಮಗುವಿನ ಜನನದ ನಂತರ ಪಿಸಿಜಿ ಹಾಕಿಸಿ ಅದರ ದಾಖಲೆಗಳನ್ನು ನೀಡಿದಾಗ ಉಳಿದ ಎರಡು ಸಾವಿರ ರೂಪಾಯಿ ಹಣವನ್ನು ನೀಡಲಾಗುವುದು.

ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ ಇದರ ಉದ್ದೇಶಗಳು ಏನು ಎಂದು ನೋಡುವುದಾದರೆ ,
ನಗದು ಪ್ರೋತ್ಸಾಹ ಧನ. ಹೆರಿಗೆ ಮೊದಲು ಮತ್ತು ಹೆರಿಗೆ ನಂತರ ತಿಂಗಳುಗಳಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯಬೇಕಾಗುತ್ತದೆ. ಹೀಗಾಗಿ ಕೂಲಿ ನಷ್ಟದ ಭಾಗವಾಗಿ ಸಹಾಯಧನ ನೀಡಲಾಗುತ್ತದೆ. ಮಗುವಿನ ಮತ್ತು ತಾಯಿಯ ಆರೋಗ್ಯ ಕಾಪಾಡಲು ಸಹಕರಿಸುವುದು. ಅಪೌಷ್ಟಿಕತೆ ಮತ್ತು ರಕ್ತಹಿನತೆ, ಶಿಶುಮರಣ ತಡೆಯುವುದು. ನಗದು ಸಹಾಯಧನ ಪ್ರೋತ್ಸಾಹವು ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರ (ಪಿಡಬ್ಲ್ಯೂ ಮತ್ತು ಎಲ್ಎಂ) ಆರೋಗ್ಯ ಸುಧಾರಿಸಿ ಉತ್ತಮ ವರ್ತನೆಗೆ ಕಾರಣವಾಗುತ್ತದೆ. ಇದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇನ್ನು ಗರ್ಭಿಣಿಯರು ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ ಎಂದು ನೋಡುವುದಾದರೆ, ಗರ್ಭಿಣಿ ಮಹಿಳೆಯರು ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಮೂರು ಹಂತಗಳಲ್ಲಿ ಅರ್ಜಿಗಳನ್ನು ಸಲ್ಲಿಸಿರಬೇಕು. ಮಹಿಳೆ ತಾನು ಗರ್ಭಿಣಿ ಎಂದು ತಿಳಿದು ಮೂರು ತಿಂಗಳ ಒಳಗೆ ಅಂಗನವಾಡಿಯಲ್ಲಿ ಹೆಸರು ನೋಂದಾವಣಿ ಮಾಡಬೇಕು. ಅದಕ್ಕೆ ಬೇಕಾಗುವ ದಾಖಲಾತಿಗಳು ಎನು ಎಂದು ನೋಡುವುದಾದರೆ ಆಧಾರ್ ಕಾರ್ಡ್ , ತಾಯಿ ಕಾರ್ಡ್ ಹಾಗೂ ಆಧಾರ್ ನಂಬರ್ ಲಿಂಕ್ ಮಾಡಿದ ಬ್ಯಾಂಕ್ ಅಕೌಂಟ್ ಇವುಗಳ ಜೆರಾಕ್ಸ್ ನೀಡುವ ಮೂಲಕ ಈ ಸೌಲಭ್ಯ ಪಡೆದುಕೊಳ್ಳಬಹುದು.

ಇನ್ನೂ ಈ ಯೋಜನೆ ಯಾರಿಗೆ ಲಭ್ಯ ಹಾಗೂ ಯಾರಿಗೆ ಲಭ್ಯ ಆಗುವುದಿಲ್ಲ ಎಂದು ನೋಡುವುದಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಕಾರಿ ಕೆಲಸದಲ್ಲಿ ಇರುವ ಮಹಿಳೆಯರಿಗೆ ಈ ಸೌಲಭ್ಯ ನೀಡಲಾಗುವುದಿಲ್ಲ. ಎಲ್ಲಾ ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು. (ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಅಥವಾ ಪಿಎಸ್ಯುಗಳಲ್ಲಿ ಉದ್ಯೋಗದಲ್ಲಿರುವ ಅಥವಾ ಯಾವುದೇ ಕಾನೂನಿನಡಿಯಲ್ಲಿ ಜಾರಿಯಲ್ಲಿರುವ ಸಮಯಕ್ಕೆ ಸಮಾನ ಪ್ರಯೋಜನಗಳನ್ನು ಪಡೆಯುತ್ತಿರುವವರನ್ನು ಹೊರತುಪಡಿಸಿ.) 01.01.2017 ರಂದು ಅಥವಾ ನಂತರ ಗರ್ಭಧಾರಣೆಯನ್ನು ಹೊಂದಿರುವ ಎಲ್ಲಾ ಅರ್ಹ ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು. ಎಂಸಿಪಿ ಕಾರ್ಡ್‌ನಲ್ಲಿ ಉಲ್ಲೇಖಿಸಿರುವಂತೆ ಫಲಾನುಭವಿಯ ಗರ್ಭಧಾರಣೆಯ ದಿನಾಂಕ ಮತ್ತು ಹಂತವನ್ನು ಅವಳ ಎಲ್‌ಎಂಪಿ ದಿನಾಂಕಕ್ಕೆ ಸಂಬಂಧಿಸಿದಂತೆ ಎಣಿಕೆ ಮಾಡಲಾಗುತ್ತದೆ. ಗರ್ಭಪಾತದ ಪ್ರಕರಣ/ಜನನ. ಫಲಾನುಭವಿಯು ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನಗಳನ್ನು ಪಡೆಯಲು ಅರ್ಹನಾಗಿರುತ್ತಾರೆ. ಗರ್ಭಪಾತ/ಇನ್ನೂ ಜನನದ ಸಂದರ್ಭದಲ್ಲಿ, ಭವಿಷ್ಯದ ಯಾವುದೇ ಗರ್ಭಧಾರಣೆಯ ಸಂದರ್ಭದಲ್ಲಿ ಫಲಾನುಭವಿಯು ಉಳಿದ ಕಂತುಗಳನ್ನು ಪಡೆಯಲು ಅರ್ಹನಾಗಿರುತ್ತಾರೆ. ಶಿಶು ಮರಣದ ಪ್ರಕರಣ ಫಲಾನುಭವಿಯು ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನಗಳನ್ನು ಪಡೆಯಲು ಅರ್ಹನಾಗಿರುತ್ತಾರೆ. ಅಂದರೆ, ಶಿಶು ಮರಣದ ಸಂದರ್ಭದಲ್ಲಿ, ಈ ಮೊದಲು ಪಿಎಂಎಂವಿವೈ ಅಡಿಯಲ್ಲಿ ಮಾತೃತ್ವ ಲಾಭದ ಎಲ್ಲಾ ಕಂತುಗಳನ್ನು ಅವಳು ಈಗಾಗಲೇ ಪಡೆದಿದ್ದರೆ, ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅವಳು ಅರ್ಹನಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!