ಪ್ರಧಾನ ಮಂತ್ರಿ ಅವರ ಶ್ರಮ ಯೋಗಿ ಮಾಂಧಾನ್ ಯೋಜನೆಯ ಬಗ್ಗೆ, ಹೇಗೆ? ಎಲ್ಲಿ ಯಾರು ಅರ್ಜಿಯನ್ನು ಸಲ್ಲುಸಬಹುದು ಎನ್ನುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಈ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ.
ಶ್ರಮ ಯೋಗಿ ಮಾಂಧಾನ್ ಯೋಜನೆಯು ಕೇಂದ್ರ ಸರ್ಕಾರದ ಒಂದು ಪೆನ್ಶನ್ ಯೋಜನೆ ಆಗಿದೆ. ಬಡ ಕುಟುಂಬದವರಿಗಾಗಿ, ಬಡ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಮೂಲಕ ಪ್ರತೀ ತಿಂಗಳು 3,000 ರೂಪಾಯಿ ಕೇಂದ್ರ ಸರ್ಕಾರದ ಕಡೆಯಿಂದ ಪೆನ್ಶನ್ ಬರತ್ತೆ.
ಮೊದಲಿಗೆ ಈ ಯೋಜನೆಯಿಂದ ಏನೆಲ್ಲ ಲಾಭಗಳು ಇವೆ ಅನ್ನೋದನ್ನ ನೋಡೋಣ. ಮೊದಲಿಗೆ ಈ ಯೋಜನೆಗೆ ಬಡವರು, ಬಡ ವ್ಯಾಪಾರಸ್ಥರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇದರಿಂದ ಪ್ರತೀ ತಿಂಗಳು 3,000 ರೂಪಾಯಿ ಹಣ ಪೆನ್ಶನ್ ರೂಪದಲ್ಲಿ ದೊರೆಯುತ್ತದೆ. ಹಾಗೆ ಯಾರೆಲ್ಲ ಬಡವರು 15,000 ರೂಪಾಯಿಗಿಂತಲೂ ಕಡಿಮೆ ಸಂಬಳವನ್ನು ಪಡೆಯುತ್ತಾರೋ ಅವರೆಲ್ಲ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಿದರು ಪ್ರತೀ ತಿಂಗಳು ಕಟ್ಟುವ ಹಣ ಅವರ ವಯಸ್ಸಿಗೆ ತಕ್ಕಂತೆ ಇರುತ್ತದೆ 55 ರೂಪಾಯಿ ಇಂದ 200 ರೂಪಾಯಿವರೆಗೆ ಕಟ್ಟಬಹುದು ಅದೂ ಅವರವರ ವಯಸ್ಸಿಗೆ ತಕ್ಕಂತೆ. ಈ ಯೋಜನೆಯಲ್ಲಿ ದುಡ್ಡು ದುಂಬಿದ ವ್ಯಕ್ತಿಗಳಿಗೆ 60 ವರ್ಷ ಆದ ನಂತರ ಪ್ರತೀ ತಿಂಗಳೂ ಪೆನ್ಶನ್ ರೂಪದಲ್ಲಿ 3,000 ರೂಪಾಯಿ ಸಿಗುತ್ತದೆ. ಒಂದುವೇಳೆ ಪೆನ್ಶನ್ ಪಡೆಯುತ್ತಿರುವ ವ್ಯಕ್ತಿ ಮರಣ ಹೊಂದಿದರೆ, ಆ ಪೆನ್ಶನ್ ಹಣ ಮರಣ ಹೊಂದಿದ ವ್ಯಕ್ತಿಯ ಹೆಂಡತಿಗೆ ಅರ್ಧ ಭಾಗ ಸೇರುತ್ತದೆ.
ಇನ್ನು ಎರಡನೆಯದಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸೋಕೆ ಏನೆಲ್ಲ ದಾಖಲೆಗಳು ಬೇಕು ಅನ್ನೋದನ್ನ ನೋಡೋಣ. ಮೊದಲಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 40 ವರ್ಷದ ಒಳಗೆ ಇರಬೇಕು. ಅರ್ಜಿ ಸಲ್ಲಿಸುವವರ ತಿಂಗಳ ಆದಾಯ 15,000 ದ ಒಳಗೆ ಇರಬೇಕು. ಅರ್ಜಿ ಸಲ್ಲಿಸುವವರು ಆದಾಯ ತೆರಿಗೆಯನ್ನು ಕಟ್ಟುತ್ತಾ ಇರಬಾರದು. EPF, NPS ಹಾಗೂ ESTC ಇವುಗಳಲ್ಲಿ ಮೆಂಬರ್ ಆಗಿರಬಾರದು. ಸೆವಿಂಗ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಹಾಗೂ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು. ಇವಿಅಹತು ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿ.
ಇನ್ನು ಮೂರನೆಯದಾಗಿ ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ, ಮನೆಯಲ್ಲಿಯೇ ಏನಾದರೂ ಸಣ್ಣ ಪುಟ್ಟ ವ್ಯಾಪರ ಮಾಡುವವರು, ಬೀದಿ ವ್ಯಾಪಾರಿಗಳು, ಮಧ್ಯಾಹ್ನದ ಊಟ ತಯಾರಿ ಮಾಡಿ ಮಾರುವವರು, ಕಮ್ಮಾರರು, ರಸ್ತೆ ಬದಿಯಲ್ಲಿ ಪೇಪರ್ ತೆಗೆದುಕೊಳ್ಳುವವರು, ಗ್ರಹ ಕಾರ್ಮಿಕರು, ಬಟ್ಟೆ ತೊಳೆಯುವವರು, ರಿಕ್ಷಾ ಎಳೆಯುವವರು, ಸ್ವಂತ ಭೂಮಿ ಇಲ್ಲದವರು, ಕೃಷಿ ಮಾಡುವವರು, ಬಿಲ್ಡಿಂಗ್ ಕಟ್ಟುವಲ್ಲಿ ಕೆಲಸ ಮಾಡುವವರು ಹೀಗೆ ಈ ಎಲ್ಲಾ ಜನಗಳು ಈ ಯೋಜನೆಯ ಲಾಭಾವನ್ನು ಪಡೆಯಬಹುದು.
ಇನ್ನು ಇದಕ್ಕೆ ಪ್ರತೀ ತಿಂಗಳು ಕಟ್ಟುವ ಹಣದ ಮೊತ್ತ ಹೇಗೆ ಇರುತ್ತದೆ. ಮೊದಲೇ ಮೇಲೆ ಹೇಳಿದ ಹಾಗೆ 18 ವರ್ಷ ಆದವರು ಹಾಗೂ 40 ವರ್ಷದ ಒಳಗಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ 18 ವರ್ಷದವರು ಪ್ರತೀ ತಿಂಗಳೂ ಕಟ್ಟಬೇಕಾದ ಹಣ 55 ರೂಪಾಯಿ ಇವರಿಗೆ ಕೇಂದ್ರ ಸರ್ಕಾರದಿಂದ 55 ರೂಪಾಯಿ ಸೇರಿಸಿ ತಿಂಗಳಿಗೆ 110 ರೂಪಾಯಿ ಸಿಗತ್ತೆ. ಓಂದುವೇಳೆ 25 ವರ್ಷದವರಾದರೆ ಪ್ರತೀ ತಿಂಗಳು 80 ರೂಪಾಯಿ ಕಟ್ಟಬೇಕು ಇದಕ್ಕೆ ಕೇಂದ್ರ ಸರ್ಕಾರದ ಕಡೆಯಿಂದ ಸಹ 80 ಋಒಆಯಿ ತುಂಬುತ್ತಾರೆ ಒಟ್ಟು 160 ರೂಪಾಯಿ ತಿಂಗಳುಗೆ ಉಳಿತಾಯ ಆಗುತ್ತದೆ. ಹೀಗೆ 40 ವರ್ಷದ ವ್ಯಕ್ತಿ ತುಂಬನೆಕಾದ ಹಣ 200 ರೂಪಾಯಿ ಹಾಗೂ ಕೇಂದ್ರ ಸರ್ಕಾರದಿಂದ 200 ರುಪಾಯಿ ತುಂಬಲಾಗುತ್ತದೆ ಒಟ್ಟು ಮೊತ್ತ 400 ರೂಪಾಯಿ ತಿಂಗಳಿಗೆ ಆಗುತ್ತದೆ. ಹೀಗೆ ಅವರವರ ವಯಸ್ಸಿಗೆ ಅನುಗುಣವಾಗಿ 55 ರೂಪಾಯಿಂದ 200 ರೂಪಾಯಿ ವರೆಗೂ ಕಟ್ಟಬೇಕಾಗುತ್ತದೆ. ಕೊನೆಗೆ 60 ವರ್ಷದ ಬಳಿಕ ಪ್ರತೀ ತಿಂಗಳು 3,000 ರಿಪಾಯಿ ಅಂತೆ ಬರುತ್ತದೆ.
ಇನ್ನು ಕೊನೆಯದಾಗಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಾನ್ ಕಾರ್ಡ್, ಉಳಿದ ದಾಖಲಾತಿಗಳು, ಪಾಸ್ಪೋರ್ಟ್ ಸೈಜ್ ಫೋಟೋ ಇವುಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ CSC ಸೆಂಟರ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು. CSC ಸೆಂಟರ್ ನಲ್ಲಿ ಅವರು ಕೇಳಿದ ಎಲ್ಲ ದಾಖಲೆಗಳನ್ನು ನೀಡಿ ಸಹಿ ಮಾಡಿಕೊಡಬೇಕು. ನಂತರ ಅವರು ಪ್ರಧಾನ ಮಂತ್ರಿ ಅವರ ಶ್ರಮ ಯೋಗಿ ಮಾಂಧಾನ್ ಯೋಜನೆಯ ಕಾರ್ಡ್ ಅನ್ನು ಒಂದು ಪ್ರಿಂಟ್ ತೆಗೆದುಕೊಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ https://sarkariyojana.com/pradhaan-mantri-shram-yogi-mandhan-yojana/ website ನೋಡತಕ್ಕದ್ದು.