ನಮ್ಮಲ್ಲಿ ಹಲವು ಜನರು ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಪಶು ಸಂಗೋಪನೆ, ಹೈನುಗಾರಿಕೆ ಈ ಕೆಲಸಗಳನ್ನು ಮಾಡಬೇಕು ಎಂದುಕೊಂಡಿರುತ್ತಾರೆ. ಇನ್ನು ಕೆಲವರು ಈಗಾಗಲೇ ಸಣ್ಣದಾಗಿ ಶುರು ಮಾಡಿ, ದೊಡ್ಡದಾಗಿ ಇದೇ ಉದ್ಯಮ ಮಾಡಬೇಕು ಎಂದುಕೊಂಡಿರುತ್ತಾರೆ. ಅಂಥವರಿಗೆ ಸರ್ಕಾರದಿಂದ ಅನುಕೂಲ ಆಗುವ ಹಾಗೆ ಸಾಲ ಸೌಲಭ್ಯ ನೀಡಲಾಗುತ್ತದೆ, ಸರ್ಕಾರ ಇವರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಮಾಹಿತಿಗಳ ಬಗ್ಗೆ ತಿಳಿದಿಕೊಂಡಿರಬೇಕು.
ಹೈನುಗಾರಿಕೆ, ಪಶು ಸಂಗೋಪನೆ ಮಾಡುವವರಿಗೆ ವಿಶೇಷವಾಗಿ ಕೆಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳಲ್ಲಿ ₹25 ಲಕ್ಷದವರೆಗು ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಒಂದು ವೇಳೆ ನೀವು ಕೂಡ ಕೋಳಿ ಸಾಕಾಣಿಕೆ ಮಾಡುತ್ತಿದ್ದರೆ, ಸರ್ಕಾರದ ಈ ಸೌಲಭ್ಯಗಳನ್ನು ನೀವು ಪಡೆದುಕೊಂಡಿದ್ದೀರಾ? ಇನ್ನು ಪಡೆದಿಲ್ಲ ಎಂದರೆ ಈಗಲೇ ಕಚೇರಿಗೆ ಹೋಗಿ ನಿಮ್ಮ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಿ.
ಸರ್ಕಾರವು ನಿಮಗಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿರುವವರಿಗೆ ಸಬ್ಸಿಡಿ ಪಡೆಯಲು ಅರ್ಹತೆ ಪಡೆಯುತ್ತೀರಿ, ಇದಕ್ಕಾಗಿ http://mudyamithra.com ಈ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ನಿಮಗಾಗಿ ಇರುವ ಅವಕಾಶವನ್ನು ಬಿಡಬೇಡಿ.
ಒಂದು ವೇಳೆ ರೈತರು ಪಶು ಸಂಗೋಪನೆ ಶುರು ಮಾಡಲು ಆಸಕ್ತಿ ಹೊಂದಿದ್ದು, ಹೇಗೆ ಮಾಡಬೇಕು ಎಂದು ತಿಳಿಯದೇ ಇದ್ದರೆ, ನಿಮ್ಮ ಹತ್ತಿರದ ಪಶು ಸಂಗೋಪನೆ ಇಲಾಖೆಯ ಕಚೇರಿಗೆ ಭೇಟಿ ನೀಡಿ, ಕೋಳಿ ಸಾಕಾಣಿಕೆ ಬಗ್ಗೆ ಮಾಹಿತಿ ತಿಳಿಯಬಹುದು.