ನಮ್ಮ ಸರ್ಕಾರವು ರೈತರಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ವಾಸ ಮಾಡುವ ಜನರಿಗೆ ಅನುಕೂಲ ಆಗಲಿ ಎಂದು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಗ್ರಾಮದಲ್ಲಿರುವ ಜನರು ತಮ್ಮಿಷ್ಟದ ಹಾಗೆ ಸ್ವಂತ ಉದ್ಯಮ ಶುರು ಮಾಡಲಿ, ಅದರಿಂದ ಅವರು ಉತ್ತಮವಾಗಿ ಹಣ ಗಳಿಸುವ ಹಾಗೆ ಆಗಲಿ ಎಂದು ಸರ್ಕಾರ ಹಳ್ಳಿಗರಿಗೆ ವಿಶೇಷವಾದ ಯೋಜನೆಗಳನ್ನು ಜಾರಿಗೆ ತರುತ್ತದೆ.

ಇಂಥದ್ದೊಂದು ಯೋಜನೆಯಲ್ಲಿ ಕುರಿ ಸಾಕಾಣಿಕೆ, ಕೋಳಿ, ಮೇಕೆ, ಮೀನು ಸಾಕಾಣಿಕೆ. ಜೇನು ಕೃಷಿ ಇಂಥ ಹಲವು ಚಟುವಟಿಕೆಗಳಿಗೆ ಸರ್ಕಾರ ಸಹಾಯ ಮಾಡಲಿದೆ. ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ 7 ಲಕ್ಷದವರೆಗೂ ಸಾಲ ಸೌಲಭ್ಯ ಸಿಗುವ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ಈ ಉದ್ಯಮವನ್ನು ದೊಡ್ಡದಾಗಿ ಕೂಡ ಶುರು ಮಾಡಬಹುದು. ಗ್ರಾಮೀಣ ಭಾಗದ ಜನರು ಕೆಲಸ ಶುರು ಮಾಡಲು ಈ ಸೌಲಭ್ಯವನ್ನು ನೀಡಲಾಗುತ್ತಿದೆ.

ಇನ್ನು ಕೆಲವು ಗ್ರಾಮೀಣ ಭಾಗದ ಜನರಿಗೆ ಸಹಾಯ ಆಗಲಿ ಎಂದು, ಈ ಕೆಲಸಗಳಿಗೆ ತರಬೇತಿಯನ್ನು ಕೂಡ ನೀಡುತ್ತಾರೆ. ತರಬೇತಿ ನೀಡುವ ಸಂಸ್ಥೆಗಳು ಸಹ ಇದೆ, ಸರ್ಕಾರೇತರ ಸಂಸ್ಥೆಗಳು ಕೂಡ ತರಬೇತಿ ನೀಡುತ್ತದೆ. ಇಂಥ ಸಂಸ್ಥೆಗಳಲ್ಲಿ ಒಂದು ಧಾರವಾಡದ ಸಮಗ್ರ ಕೃಷಿ ಪಶುಪಾಲನಾ ತರಬೇತಿ ಕೇಂದ್ರ, ಇದು ಸಚಿನ್ ಎನ್ನುವವರು ಶುರುಮಾಡಿರುವ ಕೇಂದ್ರ ಆಗಿದೆ. ಇವರು ಕುರಿ, ಕೋಳಿ, ಮೇಕೆ ಸಾಕಾಣಿಕೆ ಬಗ್ಗೆ ತರಬೇತಿ ನೀಡುತ್ತಾರೆ.

ಹಾಗೆಯೇ ಇವರ ಫಾರ್ಮ್ ಇದ್ದು, ಅದರಲ್ಲಿ 2000 ಕುರಿ ಮತ್ತು ಮೇಕೆಗಳನ್ನು ಸಾಕಿದ್ದಾರೆ. ನಮ್ಮ ದೇಶದ ಎಲ್ಲಾ ತಳಿಗಳು ಕೂಡ ಇವರ ಫಾರ್ಮ್ ನಲ್ಲಿ ಸಿಗುತ್ತದೆ. ಇವರು ತರಬೇತಿ ಕೊಡುವುದರ ಜೊತೆಗೆ ಲೋನ್ ಪಡೆಯುವುದು ಹೇಗೆ, ಯಾವ ದಾಖಲೆಗಳು ಬೇಕು, ಯಾರನ್ನು ಸಂಪರ್ಕಿಸಬೇಕು ಹೀಗೆ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. ಕೇಂದ್ರ ಸರ್ಕಾರವು ಸ್ವಂತ ಉದ್ಯಮ ಶುರು ಮಾಡಬೇಕು ಎಂದುಕೊಂಡಿರುವವರಿಗೆ PMEGP ಯೋಜನೆಯನ್ನು ಜಾರಿಗೆ ತಂದಿದ್ದು,ಅದರ ಮೂಲಕ 20 ಲಕ್ಷದವರೆಗೂ ಸಾಲ ಪಡೆಯಬಹುದು. ಘಟಕದ ಖರ್ಚಿಗಾಗಿ 5 ಇಂದ 10% ನೀಡಿದರೆ, ಇನ್ನು 90% ಇಂದ 95% ವರೆಗು ಬ್ಯಾಂಕ್ ನೀಡುತ್ತದೆ.

ಕೆಲಸವಿಲ್ಲ ಯುವಕರು ಸರ್ಕಾರದ ಈ ಯೋಜನೆಯ ಮೂಲಕ 10 ರಿಂದ 25 ಲಕ್ಷದವರೆಗು ಸಾಲ ಪಡೆಯಬಹುದು. ಈ ಮೊತ್ತಕ್ಕೆ 7 ಲಕ್ಷ ಸಬ್ಸಿಡಿ ಕೂಡ ಸಿಗುತ್ತದೆ. ಈ ಬಗ್ಗೆ ನಿಮಗೆ ಡೀಟೇಲ್ಸ್ ಬೇಕು ಎಂದರೆ, ಈ ವಿಡಿಯೋ ಪೂರ್ತಿಯಾಗಿ ನೋಡಿ..

Leave a Reply

Your email address will not be published. Required fields are marked *