ಕಾಸಿಗೆ ತಕ್ಕ ಕಜ್ಜಾಯ ಎನ್ನುವ ಮಾತನ್ನು ನೀವು ಕೇಳಿರುತ್ತೀರಿ ನೀವು ಎಷ್ಟು ಮೌಲ್ಯದ ವಸ್ತುವನ್ನು ಕೊಡುತ್ತೀರಿ ಅಷ್ಟೇ ಮೌಲ್ಯದ ಹಣ ನಿಮಗೆ ಸಿಗುತ್ತದೆ. ಕುಕುಟೋದ್ಯಮ ದಲ್ಲಿಯೂ ಈ ಮಾತನ್ನ ಹೊರತುಪಡಿಸಿ ನೋಡುವಂತಿಲ್ಲ ಯಾಕೆಂದರೆ ಸಾಮಾನ್ಯವಾಗಿ ನೀವು ಬಾಯ್ಲರ್ ಕೋಳಿಯನ್ನು ಸಾಕುತ್ತಿದ್ದೀರಿ ಎಂದರೆ ಕೆಜಿಗೆ ಎಷ್ಟು ರೂಪಾಯಿಯಂತೆ ವ್ಯಾಪಾರವಾಗುತ್ತದೆ ಎಂಬುದನ್ನು ನೀವು ಗಮನಿಸಿರುತ್ತಿರಿ.
ಅದೇ ನಾಟಿಕೋಳಿ ಆದರೆ ಗಿರಿರಾಜ ತಳಿಯಾದರೆ ವಿವಿತ್ರಿಎಟಿ ಎನ್ನುವ ಕೋಳಿಯನ್ನು ಸಾಕಿ ಮೊಟ್ಟೆಯಿಂದ ಲಾಭ ಮಾಡಬೇಕೆಂದು ಯೋಚನೆ ಮಾಡಿದರೆ ಹೀಗೆ ಅನೇಕ ರೀತಿಯ ಆಯ್ಕೆಗಳಿವೆ. ಇದೆಲ್ಲವನ್ನು ಹಿಮ್ಮೆಟ್ಟಿಸುವಂತಹ ಆಯ್ಕೆ ಯಾವುದೆಂದರೆ ಕಡಕ್ನಾಥ್ ಚಿಕನ್ ಫಾರ್ಮಿಂಗ್ ಯಾಕೆಂದರೆ ಮಟನ್ನಿಗು ಅಷ್ಟು ಬೆಲೆ ಇರುವುದಿಲ್ಲ. ಈ ಕಡಕ್ನಾಥ್ ಚಿಕನ್ ಕೆಜಿಗೆ ಎಂಟು ನೂರರಿಂದ ಒಂಬೈನೂರು ರೂಪಾಯಿಗಳ ತನಕ ಇರುತ್ತದೆ.
ಕಡಕ್ನಾಥ್ ಎನ್ನುವುದು ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಮೂಲದ್ದು ಅಲ್ಲಿನ ಬುಡಕಟ್ಟು ಜನಾಂಗದವರು ಇದನ್ನು ಹೆಚ್ಚಾಗಿ ಬೆಳೆಯುತ್ತಿದ್ದರು ಸರ್ಕಾರ ಇದನ್ನು ಮಾನ್ಯ ಮಾಡಿ ಇತರರು ಇದನ್ನು ಬೆಳೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಜಬುವಾ ಜಿಲ್ಲೆಯ ಈ ಕೋಳಿಗಳಿಗೆ ಜಿ ಐ ಟ್ಯಾಗ್ ಕೂಡ ಸಿಕ್ಕಿದೆ ಇದು ಅಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಇದು ಅಷ್ಟು ಪ್ರಾಮುಖ್ಯತೆ ಪಡೆದುಕೊಂಡಿರುವುದು ಯಾವಾಗ ಎಂದರೆ ವಿರಾಟ್ ಕೊಹ್ಲಿ ಅವರು ತಮ್ಮ ಡಯೆಟ್ ನಲ್ಲಿ ಕಡಕ್ನಾಥ್ ಚಿಕನ್ ಅನ್ನು ಸೇವಿಸುತ್ತಿದ್ದಾರೆ ಎಂಬುವುದು ತಿಳಿದುಬಂದಾಗ. ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ ಹಾಗೂ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮಹೇಂದ್ರ ಸಿಂಗ್ ಧೋನಿ ಅವರು ಕಡಕ್ನಾಥ್ ಚಿಕನ್ ಫಾರ್ಮನ್ನು ಆರಂಭ ಮಾಡುತ್ತಿದ್ದಾರೆ ಎಂಬ ವಿಚಾರ ಎಲ್ಲ ಕಡೆ ಕಾಡ್ಗಿಚ್ಚಿನಂತೆ ಹರಿದಾಡಿತ್ತು ಆಗಲೂ ಸಹ ಜನರು ಕಡಕ್ನಾಥ್ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವುದಕ್ಕೆ ಪ್ರಾರಂಭಿಸುತ್ತಾರೆ.
ಇದರ ನ್ಯೂಟ್ರಿಷಿಯನ್ ಕಪ್ಪುಬಣ್ಣ ಕಣ್ಣು ಕಪ್ಪು ನಾಲಿಗೆ ಕಪ್ಪು ಮೂಳೆ ಕಪ್ಪು ಈ ರೀತಿಯಾಗಿ ಇದು ಕಪ್ಪು ಚಿನ್ನ ಎಂದು ಕರೆಸಿಕೊಳ್ಳುವುದಕ್ಕೆ ಪ್ರಾರಂಭವಾಯಿತು. ಕಡಕ್ ನಾಥ್ ಕೋಳಿಯನ್ನು ನೀವು ಸಾಕಿದ್ದೆ ಆದರೆ ಸಾವಿರ ಕೋಳಿಗಳನ್ನು ಸಾಕಿದರೆ ಆರು ತಿಂಗಳಿಗೆ ಎಂಟು ಲಕ್ಷ ರೂಪಾಯಿ ಲಾಭವನ್ನು ಗಳಿಸಬಹುದು. ಅದನ್ನು ಈಗಾಗಲೇ ಫಾರ್ಮಿಂಗ್ ಮಾಡುತ್ತಿರುವವರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.
ಕಡಕ್ನಾಥ್ ಕೋಳಿ ಸಾಕುವುದರಿಂದ ಖಂಡಿತವಾಗಿ ಲಾಭವನ್ನು ಗಳಿಸಬಹುದು ಇದನ್ನು ಸಾಕುವುದಕ್ಕೆ ಹೆಚ್ಚಿಗೆ ಕರ್ಚು ಬರುವುದಿಲ್ಲ ಇವುಗಳನ್ನು ನೈಸರ್ಗಿಕವಾಗಿ ಸಾಕುವುದಕ್ಕೆ ಒಂದು ಕೋಳಿಗೆ ನೂರಾ ಐವತ್ತು ರೂಪಾಯಿಂದ ನೂರಾ ಅರವತ್ತು ರೂಪಾಯಿ ಖರ್ಚು ಬರುತ್ತದೆ. ಇದರಲ್ಲಿ ಹೆಣ್ಣು ಕೋಳಿ ಒಂದು ಕೆಜಿ ಇಂದ ಒಂದುವರೆ ಕೆಜಿ ತೂಕ ಬರುತ್ತದೆ ಗಂಡು ಕೊಳ್ಳಿ ಒಂದು.ಐದರಿಂದ ರಿಂದ ಒಂದು. ಎಂಟರವರೆಗೆ ಬರುತ್ತದೆ.
ಸಾವಿರ ಕೋಳಿಯಲ್ಲಿ ಒಂದು ನೂರು ಕೋಳಿಯನ್ನು ಬಿಟ್ಟರು ಒಂಬೈನೂರು ಕೋಳಿಗೆ ಸಾವಿರದ ಐದುನೂರು ರಿಂದ ಸಾವಿರದ ಆರುನೂರು ಕೆಜಿ ಬರುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಮರಾಟ ಮಾಡುವುದಕ್ಕೆ ಒಂದು ಕೆಜಿಗೆ ಮುನ್ನೂರ ಐವತ್ತರಂತೆ ಮಾರಾಟಮಾಡಿದರು ನಿಮಗೆ ಸಾವಿರದ ಮುನ್ನೂರು ಕೆಜಿಗೆ ನಾಲ್ಕು ಲಕ್ಷದ ಐವತ್ತೈದು ಸಾವಿರ ರೂಪಾಯಿ ಆದಾಯ ಸಿಗುತ್ತದೆ. ಇನ್ನು ನೀವು ಸ್ವಂತವಾಗಿ ವ್ಯಾಪಾರ ಮಾಡುತ್ತೀರಿ ದಲ್ಲಾಳಿಗಳ ಮೂಲಕ ಮಾರುವುದಿಲ್ಲ ಎಂದರೆ ಮಾರುಕಟ್ಟೆಯಲ್ಲಿ ಕೆಜಿಗೆ ಎಂಟು ನೂರು ರೂಪಾಯಿ ಬೆಲೆ ಇದೆ.
ನೀವು ಏಳುನೂರು ರೂಪಾಯಿಗೆ ಕೊಟ್ಟರು ಕೂಡ ನಿಮಗೆ ಹತ್ತು ಲಕ್ಷ ರೂಪಾಯಿ ಹತ್ತಿರ ಆದಾಯ ಬರುತ್ತದೆ. ಇನ್ನು ಇವುಗಳಿಗೆ ಆಹಾರವನ್ನು ಯಾವ ರೀತಿಯಾಗಿ ಒದಗಿಸಬಹುದು ಎಂದರೆ ತರಕಾರಿ ಮಾರುಕಟ್ಟೆಗಳಲ್ಲಿ ವ್ಯಾಪಾರವಾಗಿದೆ ಉಳಿದಂತಹ ತ್ಯಾಜ್ಯ ತರಕಾರಿಗಳನ್ನು ಕೊಂಡುಕೊಂಡು ತಂದು ಹಾಕಬಹುದು. ಹೋಟೆಲ್ಗಳಲ್ಲಿ ಉಳಿದಿರುವಂತಹ ಆಹಾರ ಪದಾರ್ಥಗಳನ್ನು ತ್ಯಾಜ್ಯಗಳನ್ನು ತಂದು ಇವುಗಳಿಗೆ ಹಾಕಬಹುದು ಇವುಗಳು ಸೊಪ್ಪುಗಳನ್ನು ಸಹ ತಿನ್ನುತ್ತವೆ ಅವುಗಳನ್ನು ತಂದು ಹಾಕಬಹುದು.
ಜೊತೆಗೆ ಹೊರಗಡೆ ಬಿಟ್ಟಾಗ ಮಣ್ಣಲ್ಲಿರುವ ಹುಳುಗಳನ್ನು ತಿನ್ನುತ್ತವೆ ಇದರ ಜೊತೆಗೆ ಇವುಗಳಿಗೆ ಹೈಡ್ರೋಪೋನಿಕ್ ಆಹಾರಗಳನ್ನು ಕೂಡಾ ನೀಡಬೇಕಾಗುತ್ತದೆ. ಜೋಳ ಆಗಿರಬಹುದು ಸಜ್ಜೆ ಆಗಿರಬಹುದು ರಾಗಿ ಗೋಧಿ ಮೊಳಕೆಕಾಳುಗಳನ್ನು ನೀಡುವುದರಿಂದ ಅವುಗಳ ತೂಕವನ್ನು ಹೆಚ್ಚಿಸಬಹುದು. ಇವುಗಳ ಮೊಟ್ಟೆಗೂ ಕೂಡ ಮಾರುಕಟ್ಟೆಯಲ್ಲಿ ಬೆಲೆ ಇದೆ ಒಂದು ಮೊಟ್ಟೆಗೆ ಹದಿನೈದು ರೂಪಾಯಿಯವರೆಗೂ ಮಾರುಕಟ್ಟೆಯಿದೆ. ಒಂದು ಕೋಳಿ ಜೀವಿತಾವಧಿಯಲ್ಲಿ ತೊಂಬತ್ತು ಮೊಟ್ಟೆಗಳನ್ನು ಇಡುತ್ತದೆ.
ಇವುಗಳ ಮೊಟ್ಟೆಯಿಂದಲೂ ಕೂಡ ಉತ್ತಮ ಆದಾಯ ನಿಮಗೆ ಸಿಗುತ್ತದೆ. ಈ ರೀತಿಯಾಗಿ ಒಬ್ಬ ರೈತ ಸಾವಿರ ಕೋಳಿಗಳಿಂದ ಐದು ತಿಂಗಳಿಗೆ ಎಂಟು ಲಕ್ಷ ರೂಪಾಯಿ ಆದಾಯ ಗಳಿಸುವ ಸಾಧ್ಯತೆ ಇರುತ್ತದೆ. ಈ ರೀತಿಯಾಗಿ ಯಾಗಿ ಕಡಕ್ನಾಥ್ ಕೋಳಿಯನ್ನು ಸಾಕುವುದರಿಂದ ಉತ್ತಮ ಆದಾಯವನ್ನು ಗಳಿಸಬಹುದು. ನೀವು ಕೂಡ ಕಡಕ್ನಾಥ್ ಚಿಕನ್ ಫಾರ್ಮಿಂಗ್ ಮಾಡುವ ಮೂಲಕ ಉತ್ತಮವಾದಂತಹ ಆದಾಯವನ್ನು ಗಳಿಸಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.