post office recruitment 2023: ಅಂಚೆ ಕಚೇರಿಯಲ್ಲಿ ಕೆಲಸ ಸಿಕ್ಕರೆ ಒಂದು ರೀತಿ ಜೀವನವೇ ಸೆಟ್ಲ್ ಆದ ಹಾಗೆ. ಇದೀಗ ಅಂಚೆ ಕಚೇರಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅರ್ಜಿ ಆಹ್ವಾನಿಸಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್, ಎಂಟಿಎಸ್ ಹುದ್ದೆಗಳು ಸೇರಿದಂತೆ ಒಟ್ಟು 1899 ಹುದ್ದೆಗಳು ಖಾಲಿ ಇವೆ. ನಿಮಗೆ ಆಸಕ್ತಿ ಮತ್ತು ಅರ್ಹತೆ ಇದ್ದರೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..
ಖಾಲಿ ಇರುವ ಹುದ್ದೆಗಳ ಮಾಹಿತಿ ಹೀಗಿದೆ.. ಪೋಸ್ಟಲ್ ಅಸಿಸ್ಟಂಟ್ 598 ಹುದ್ದೆಗಳು, ಸಾರ್ಟಿಂಗ್ ಅಸಿಸ್ಟಂಟ್ 143 ಹುದ್ದೆಗಳು, ಪೋಸ್ಟ್‌ಮ್ಯಾನ್ 585 ಹುದ್ದೆಗಳು, ಮೇಲ್ ಗಾರ್ಡ್ 03 ಹುದ್ದೆಗಳು,
ಎಂಟಿಎಸ್ 570 ಹುದ್ದೆಗಳು. ಈ ಕೆಲಸಕ್ಕೆ ಬರಬಹುದಾದ ಸಂಬಳ ಎಷ್ಟು ಎಂದರೆ, ಪೋಸ್ಟಲ್ ಅಸಿಸ್ಟಂಟ್ ಹುದ್ದೆಗೆ 25,500 ಇಂದ 81,000 ರೂಪಾಯಿಗಳು, ಸಾರ್ಟಿಂಗ್ ಅಸಿಸ್ಟಂಟ್ ಹುದ್ದೆಗೆ 25,500 ಇಂದ 81,000 ರೂಪಾಯಿಗಳು, ಪೋಸ್ಟ್‌ಮ್ಯಾನ್ ಹುದ್ದೆಗೆ 21,700 ಇಂದ 69,100 ರೂಪಾಯಿಗಳು, ಮೇಲ್ ಗಾರ್ಡ್ ಹುದ್ದೆಗೆ 21,700 ಇಂದ 69,100 ರೂಪಾಯಿಗಳು, ಎಂಟಿಎಸ್ ಹುದ್ದೆಗೆ 18,000 ಇಂದ 56,900 ರೂಪಾಯಿಗಳು.
ಯಾವ ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆ ಖಾಲಿ ಇದೆ ಎನ್ನುವ ಮಾಹಿತಿಯನ್ನು ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ ಬಗ್ಗೆ ನೋಡಿವುದಾದರೆ, ಪೋಸ್ಟಲ್ ಅಸಿಸ್ಟಂಟ್ ಹುದ್ದೆಗೆ ಯಾವುದೇ ಪದವಿ ಪಾಸ್ ಆಗಿರಬೇಕು, ಸಾರ್ಟಿಂಗ್ ಅಸಿಸ್ಟಂಟ್ ಹುದ್ದೆಗೆ ಯಾವುದೇ ಪದವಿ ಪಾಸ್ ಆಗಿರಬೇಕು, ಪೋಸ್ಟ್ ಮ್ಯಾನ್ ಹುದ್ದೆಗೆ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು, ಮೇಲ್ ಗಾರ್ಡ್ ಹುದ್ದೆಗೆ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು, ಎಂಟಿಎಸ್ ಹುದ್ದೆಗೆ 10ನೇ ತರಗತಿ ಪಾಸ್ ಆಗಿರಬೇಕು.
post office recruitment 2023
ಇದು ಕ್ರೀಡಾ ಕೋಟಾದಲ್ಲಿ ಬರುವ ಹುದ್ದೆ ಆಗಿದ್ದು, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟ,ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟ, ಅಂತರ ವಿಶ್ವವಿದ್ಯಾಲಯಗಳ ಮಟ್ಟದ ಕ್ರೀಡಾ ಕೂಟ, ಶಾಲಾ ಮಟ್ಟದ ಕ್ರೀಡಾ ಕೂಟ, ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಂದ್ಯಾವಳಿ ಇವುಗಳಲ್ಲಿ ಭಾಗವಹಿಸಿದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕುವುದಕ್ಕೆ ಮಿನಿಮಮ್ 18 ವರ್ಷ ವಯಸ್ಸಾಗಿರಬೇಕು, ಎಂಟಿಎಸ್ ಹುದ್ದೆಗೆ ಗರಿಷ್ಠ ವಯಸ್ಸು 27, ಬೇರೆ ಹುದ್ದೆಗಳಿಗೆ ಗರಿಷ್ಠ ವಯಸ್ಸು 25 ವರ್ಷಗಳು.
ಈ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸುವುದಕ್ಕೆ ಶುರುವಾಗಿರುವ ದಿನಾಂಕ ನವೆಂಬರ್ 10 ರಿಂದ 2023ರ ಡಿಸೆಂಬರ್ 9ರವರೆಗು ಅರ್ಜಿ ಸಲ್ಲಿಸಬಹುದು. ನಿಮ್ಮ ಅಪ್ಲಿಕೇಶನ್ ಗಳನ್ನು ತಿದ್ದುಪಡಿ ಮಾಡಲು ಕೊನೆಯ ದಿನಾಂಕ 2023ರ ಡಿಸೆಂಬರ್ 10 ಆಗಿದೆ. ಅಪ್ಲಿಕೇಶನ್ ಹಾಕುವುದಕ್ಕೆ ಅರ್ಜಿ ಶುಲ್ಕ ಎಷ್ಟು ಎಂದು ನೋಡುವುದಾದರೆ, ಜೆನೆರಲ್ ಕ್ಯಾಟಗರಿ ಅವರಿಗೆ 100 ರೂಪಾಯಿ ಅರ್ಜಿ ಶುಲ್ಕ, ಬೇರೆ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ, ಎಸ್.ಸಿ/ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಈ ಹುದ್ದೆಗೆ ವಿದ್ಯಾರ್ಹತೆ, ಅಂಕಗಳು ಮತ್ತು ಕ್ರೀಡಾಸಾಧನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಿಮಗೂ ಆಸಕ್ತಿ ಇದ್ದರೆ ಈ ಕೆಲಸಕ್ಕೆ ಅಪ್ಲೈ ಮಾಡಿ. ಇದನ್ನೂ ಓದಿ Bhoo Odetana Yojane: ಜಮೀನು ಇಲ್ಲದವರಿಗೆ ಗುಡ್ ನ್ಯೂಸ್, ಜಮೀನು ಖರೀದಿಗೆ ಸರ್ಕಾರದಿಂದ ಸಿಗಲಿದೆ 20 ಲಕ್ಷ ಸಹಾಯಧನ ಆಸಕ್ತರು ಇಂದೇ ಅಪ್ಲೈ ಮಾಡಿ