Staff nurse recruitment 2023: ಕರ್ನಾಟಕ ಸ್ಟಾಫ್ ನರ್ಸ್ ನೇಮಕಾತಿಯಲ್ಲಿ ನರ್ಸ್ ಆಫೀಸರ್ ಹುದ್ದೆಗೆ ನೇಮಕಾತಿ ಮಾಡಿಕೊಳಲು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಅಧಿಸೂಚನೆಯಲ್ಲಿ ಖಾಲಿ ಇರುವ 100 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6/11/2023 ಆಗಿದೆ. ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ, ಮಾಹಿತಿ, ದಾಖಲೆಗಳು ಎಲ್ಲದರ ಬಗ್ಗೆ ತಿಳಿಸುತ್ತೇವೆ ನೋಡಿ.

ಕೆಲಸ ಖಾಲಿ ಇರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ,
ಖಾಲಿ ಇರುವ ಹುದ್ದೆ ಸ್ಟಾಫ್ ನರ್ಸ್​, ಒಟ್ಟು 100 ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ಅಪ್ಲೈ ಮಾಡಲು ನರ್ಸಿಂಗ್ ಮಾಡಿರುವ ಸರ್ಟಿಫಿಕೇಟ್ ಇರಬೇಕು. ಈ ಕೆಲಸಕ್ಕೆ ಸಿಗಬಹುದಾದ ತಿಂಗಳ ವೇತನ ₹33,450 ಇಂದ ₹62,600 ರೂಪಾಯಿಗಳು. ಕೆಲಸ ಖಾಲಿ ಇರುವ ಸ್ಥಳ ಬೆಂಗಳೂರು, ಅರ್ಜಿ ಸಲ್ಲಿಕೆಗೆ 2023ರ ನವೆಂಬರ್ 6.

ಅರ್ಜಿ ಹಾಕುವವರು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆ ಇಂದ ನರ್ಸಿಂಗ್ ಮಾಡಿ, ಸರ್ಟಿಫಿಕೇಟ್ ಪಡೆದುಕೊಂಡಿರಬೇಕು. ಹಾಗೆಯೇ ರಿಜಿಸ್ಟರ್ ಮಾಡಿಸಿರುವ ನರ್ಸ್ ಸಹ ಆಗಿರಬೇಕು. ಕೆಲಸಕ್ಕೆ ವಯಸ್ಸಿನ ಮಿತಿ ಇದ್ದು, 18 ರಿಂದ 35ವರ್ಷಗಳ ಒಳಗೆ ಇರುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಇದರಲ್ಲಿ ವಯೋಮಿತಿ ಇದ್ದು, ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಪ್ರವರ್ಗ 2ಎ/2ಬಿ/3ಎ/3ಬಿ ವರ್ಗಕ್ಕೆ 3 ವರ್ಷ ವಯೋಮಿತಿ ಇದೆ.

Staff Nurse Recruitment

ಇನ್ನು ಅರ್ಜಿ ಶುಲ್ಕ ಎಷ್ಟು ಎಂದು ನೋಡುವುದಾದರೆ, ಎಸ್.ಸಿ/ಎಸ್.ಟಿ ಕ್ಯಾಟಗರಿಯವರಿಗೆ 500 ರೂಪಾಯಿ, ಓಬಿಸಿ ಮತ್ತು ಜೆನೆರಲ್ ಕ್ಯಾಟಗರಿಯವರಿಗೆ 750 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಅರ್ಜಿ ಶುಲ್ಕವನ್ನು ಇ ಪೋಸ್ಟ್ ಆಫೀಸ್ ಮೂಲಕ ಕಟ್ಟಬೇಕು. ಅರ್ಹತೆ ಇರುವ ಅಭ್ಯರ್ಥಿಗಳು ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಬೇಕು, ಇದರಲ್ಲಿ ಉತ್ತೀರ್ಣ ಆದವರನ್ನು ಆಯ್ಕೆ ಮಾಡಲಾಗುತ್ತದೆ.

ಒಂದು ವೇಳೆ ನಿಮಗೆ ಆಸಕ್ತಿ ಮತ್ತು ಅರ್ಹತೆ ಇದ್ದರೆ, ನೀವು ಈ ಹುದ್ದೆಗೆ ಅರ್ಜಿ ಹಾಕಬಹುದು. ಅರ್ಜಿ ಹಾಕಿ, ಅರ್ಜಿ ಶುಲ್ಕವನ್ನು ಎರಡು ದಿನಗಳ ಒಳಗೆ ಪಾವತಿ ಮಾಡಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, 080 23460460 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

By AS Naik

Leave a Reply

Your email address will not be published. Required fields are marked *