ಪಶ್ಚಿಮ ಬಂಗಾಲ ವೃತ್ತದಿಂದ ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗಾಗಿ (GDS) ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅಂಚೆ ಇಲಾಖೆಯಲ್ಲಿ ಒಟ್ಟೂ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 19 ಕೊನೆ ದಿನವಾಗಿದ್ದು ಅಭ್ಯರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳು ಬೇಕು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲಿಗೆ ಮುಖ್ಯವಾಗಿ ಗಮನಿಸಬೇಕಾದ ದಿನಾಂಕಗಳು ಯಾವುದು ಎಂದು ನೋಡುವುದಾದರೆ, ನೇಮಕಾತಿ ಪ್ರಕ್ರಿಯೆ ಆರಂಭವಾದ ದಿನಾಂಕ: ಜುಲೈ 20, 2021 ಆಗಿದೆ. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 19, 2021 ಆಗಿರುತ್ತದೆ. ಕೊನೆಯ ದಿನಾಂಕದ ನಂತರ ಅಂದರೆ ಅವಧಿ ಮುಗಿದ ಮೇಲೆ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹಾಗೂ ಅಭ್ಯರ್ಥಿಗಳು ಗಮನಿಸಬೇಕಾದ ಸಂಗತಿ ಏನೆಂದರೆ, ಬ್ರ್ಯಾಂಚ್ ಪೋಸ್ಟ್​ಮಾಸ್ಟರ್ (ಬಿಪಿಎಂ), ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್​ಮಾಸ್ಟರ್​ (ಎಬಿಪಿಎಂ) ಇವುಗಳಿಗೆ 2357 ಗ್ರಾಮೀಣ್ ಡಾಕ್​ ಸೇವಕ್, ಡಾಕ್​ ಸೇವಕ್ ಹುದ್ದೆಗಳಿವೆ ಎಂದು ಜುಲೈ 20, 2021ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಅನುಕೂಲವಾಗುವ ಹಾಗೆ ಹಂತಹಂತವಾಗಿ ಕೆಲವು ನಿಯಮಗಳನ್ನು ನಾವಿಲ್ಲಿ ಕಾಣಬಹುದು.

ಅರ್ಜಿ ಸಲ್ಲಿಸಲು ಇಲ್ಲಿ ನೀಡಿರುವ ವೆಬ್ಸೈಟ್ https://appost.in/gdsonline/ ಅಥವಾ https://indiapost.gov.in ಈ ಎರಡರಲ್ಲಿ ಒಂದು ಇಂಡಿಯಾ ಪೋಸ್ಟ್​ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ನಂತರ ಮೊದಲಿಗೆ ರಿಜಿಸ್ಟ್ರೇಷನ್ “Registration” ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಒಂದು ಸೈಕಲ್​ಗೆ ಒಮ್ಮೆ ರಿಜಿಸ್ಟ್ರೇಷನ್ ಮಾಡ್ಯುಲ್​ನಲ್ಲಿ ನೋಂದಣಿ ಮಾಡಬೇಕು ಹಾಗೂ ಅದರಿಂದ ದೊರೆತ ವಿಶಿಷ್ಟ ನೋಂದಣಿ ಸಂಖ್ಯೆಯನ್ನು ಸಹ ಪಡೆಯಬೇಕು. ನಂತರ ಕೊಟ್ಟಿರುವ ಸ್ಥಳದಲ್ಲಿ ಆಧಾರ್ ಕಾರ್ಡ್ ಮಾಹಿತಿ, ಫೋನ್ ನಂಬರ್, ಜನ್ಮದಿನಾಂಕ, ಕೆಟಗಿರಿ ಮತ್ತು ಇತರ ಕಲಂಗಳನ್ನು ಭರ್ತಿ ಮಾಡಬೇಕು. ಹಾಗೆಯೇ ನೀವು ಬೈಸಿಕಲ್ ಓಡಿಸಬಲ್ಲಿರಾ ಅಥವಾ ಉದ್ಯೋಗದಾತರ ನಿರಾಕ್ಷೇಪಣಾ ಪ್ರಮಾಣಪತ್ರ (NOC) ದೊರೆಯುತ್ತದೆಯೇ ಎಂಬಂಥ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. UR/OBC/EWS ಈ ಕೆಟಗರಿಯ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳು 100 ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಈ ಕೆಟಗರಿ ವಿಭಾಗದ ಅಡಿಯಲ್ಲಿ ಬಾರದ ಅಂದರೆ, ಈ ಕೆಟಗರಿಗಳನ್ನು ಹೊರತುಪಡಿಸಿ ಉಳಿದ ಕೆಟಗರಿಯ ಜನರಿಗೆ ಇಂಡಿಯಾ ಪೋಸ್ಟ್​ನಿಂದ ಯಾವುದೇ ಶುಲ್ಕ ಇರುವುದಿಲ್ಲ. ಹುದ್ದೆಯ ಆದ್ಯತೆಯನ್ನು ಸಲ್ಲಿಸಬೇಕು ಹಾಗೂ ಒಮ್ಮೆ ಪ್ರಿವ್ಯೂವ್ ಮಾಡಿ, ನಂತರ​ ರೆಫರೆನ್ಸ್​ಗಾಗಿ ಒಂದು ಪ್ರಿಂಟ್​ಔಟ್ ಸಹ ತೆಗೆದುಕೊಳ್ಳಬೇಕು. ಈ ಎಲ್ಲಾ ಈ ಹಂತಗಳನ್ನ ಯಶಸ್ವಿಯಾಗಿ ಮುಗಿಸಿದ ಮೇಲೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಂತಾಗುತ್ತದೆ.

ಇನ್ನೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು ಏನು ಎಂದು ನೋಡುವುದಾದರೆ, ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಿನ ಮಧ್ಯ ಇರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷದ ವಿನಾಯಿತಿ ನೀಡಲಾಗುವುದು. ಹಿಂದುಳಿದ ವರ್ಗದವರಿಗೆ ಮೂರು ವರ್ಷ ವಿನಾಯಿತಿ ನೀಡಲಾಗುವುದು ಹಾಗೂ ಅಂಗವಿಕಲರಿಗೆ (PwD) 10 ವರ್ಷದ ವಿನಾಯಿತಿ ನೀಡಲಾಗುವುದು. ಅಂಗವೈಕಲ್ಯ (PwD) +ಒಬಿಸಿ ಅಡಿ ಬರುವವರಿಗೆ 13 ವರ್ಷ ವಿನಾಯಿತಿ ಇರುವುದು. ಇನ್ನೂ ಅಭ್ಯರ್ಥಿಗಳು ಅಂಗವೈಕಲ್ಯರಿದ್ದು (PwD) +ಎಸ್ಸಿ/ಎಸ್ಟಿ ಅಡಿ ಬರುವವರಿಗೆ 15 ವರ್ಷ ವಿನಾಯಿತಿ ಸಿಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲಾ ಮಾನದಂಡಗಳನ್ನು ಗಮನದಲ್ಲಿ ಇಟ್ಟುಕೊಂಡು ಅರ್ಜಿ ಸಲ್ಲಿಸಬೇಕು.

Live Notification ಸೆಕ್ಷನ್ ಅಡಿಯಲ್ಲಿ ಪಶ್ಷಿಮ ಬಂಗಾಲ (2357 ಹುದ್ದೆಗಳು) ಕ್ಲಿಕ್ ಮಾಡಬೇಕು. ಸಂಪೂರ್ಣ ಮಾಹಿತಿಯೊಂದಿಗೆ ಪಿಡಿಎಫ್ ಡೌನ್​ಲೋಡ್ ಆಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್​ಸೈಟ್: https://appost.in/gdsonline/

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *