ಪೊಲೀಸ್ ಬ್ಯಾಡ್ಜ್ ಗಳ ಬಗ್ಗೆ ನಿಮಗೆಷ್ಟು ಗೊತ್ತು? ಓದಿ.

0 12

ನೀವು ಒಬ್ಬ ಪೊಲೀಸ್ ಆಫೀಸರ್ ಗಳನ್ನು ನೋಡಿದರೆ ಅವರು ಯಾವ ಪದವಿಯಲ್ಲಿ ಅಥವಾ ಹುದ್ದೆಯಲ್ಲಿ ಇದ್ದಾರೆ ಎಂಬುವುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಅವರ ಭುಜದ ಮೇಲಿನ ಸ್ಟಾರ್ಗಳಿಂದ ಅವರ ಹುದ್ದೆಯನ್ನು ಕಂಡುಹಿಡಿಯಲು ಸಾಧ್ಯ ಆಗುತ್ತದೆ. ಸರ್ಕಲ್ ಇನ್ಸ್ಪೆಕ್ಟರ್ ಇಂದ ಹಿಡಿದು ಅವರ ಮೇಲಿನ ಅಧಿಕಾರಿಗಳವರೆಗೂ ಅವರು ಯಾವ ಹುದ್ದೆಯಲ್ಲಿ ಇದ್ದಾರೆ ಎಂದು ಕಂಡುಹಿಡಿಯಲು ಎಲ್ಲರಿಗೂ ತಿಳಿದಿರಲ್ಲ ಹಾಗಾಗಿ ಕಷ್ಟ ಆಗಬಹುದು. ಯಾವ ಯಾವ ರೀತಿಯ ಬ್ಯಾಡ್ಜ್ ಇದ್ದರೆ ಅವರು ಯಾವ ಯಾವ ಹುದ್ದೆಯಲ್ಲಿ ಇದ್ದಾರೆ ಎಂದು ಕಂಡುಹಿಡಿಯಬಹುದು. ಅದು ಹೇಗೆ ಅನ್ನೋದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ.

ಮೊದಲನೆಯದಾಗಿ ಪೊಲೀಸ್ ಕಾನ್ಸ್ಟೇಬಲ್ : ಇವರಿಗೆ ಯಾವುದೇ ರೀತಿಯ ಬ್ಯಾಡ್ಜ್ ಇರಲ್ಲ. ಇವರಿಗೆ ಕಾಕಿಯ ಒಂದು ಪಟ್ಟಿ ಮಾತ್ರ ಇರತ್ತೆ. ನಂತರ ಇವರಿಗಿಂತ ಮೇಲೆ ಸೀನಿಯರ್ ಕಾನ್ಸ್ಟೇಬಲ್ : ಇವರಿಗೆ ಕಾಕಿ ಬಣ್ಣದ ಪಟ್ಟಿಯ ಮೇಲೆ ಎರಡು ಕೆಂಪು ಬಣ್ಣದ ಪಟ್ಟಿ ಕೂಡ ಇರತ್ತೆ. ಹಾಗೆ ಇವರಿಗಿಂತ ಮೇಲೆ ಹೆಡ್ ಕಾನ್ಸ್ಟೇಬಲ್ :ಇವರಿಗೆ ಕೆಂಪು ಬಣ್ಣದ 3 ಪಟ್ಟಿಗಳು ಇರುತ್ತವೆ.

ಕಾನ್ಸ್ಟೇಬಲ್ ಗಳ ನಂತರ ಅಸ್ಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ (ASI) : ಇವರಿಗೆ ಒಂದು ಸ್ಟಾರ್ ಹಾಗೂ ಕೆಂಪು ಮತ್ತು ನೀಲಿ ಬಣ್ಣದ ಎರಡು ಪಟ್ಟಿಗಳು ಇರುತ್ತವೆ. ನಂತರ ಸಬ್ ಇನ್ಸ್ಪೆಕ್ಟರ್(SI) ಇವರಿಗೂ ಸಹ ಎರಡು ಸ್ಟಾರ್ ಹಾಗೂ ಕೆಂಪು ಮತ್ತು ನೀಲಿ ಪಟ್ಟಿ ಇರತ್ತೆ. ಇವರ ನಂತರದ ಮೇಲಿನ ಹುದ್ದೆಯಲ್ಲಿ ಇನ್ಸ್ಪೆಕ್ಟರ್ ಅಥವಾ ಆ ಒಂದು ಸ್ಟೇಶನ್ ನ ಮುಖ್ಯ ಅಧಿಕಾರಿ ಇವರುಗು ಸಹ ಮೂರು ಸ್ಟಾರುಗಳನ್ನು ಹೊಂದಿರುವ ಜೊತೆಗೆ ಕೆಂಪು ಹಾಗೂ ನೀಲಿ ಬಣ್ಣದ ಪಟ್ಟಿಗಳು ಇರುತ್ತವೆ.

ಇನ್ಸ್ಪೆಕ್ಟರ್ ನಂತರದ ಮೇಲಿನ ಹುದ್ದೆಯಲ್ಲಿ DIG : ಇವರಿಗೂ ಸಹ ASI, SI ಹಾಗೂ ಇನ್ಸ್ಪೆಕ್ಟರ್ ತರ ಮೂರು ಸ್ಟಾರ್ ಇರತ್ತೆ ಆದರೆ ಕೆಂಪು ಮತ್ತು ನೀಲಿ ಬಣ್ಣದ ಪಟ್ಟಿಗಳು ಇರುವುದಿಲ್ಲ. ನಂತರದ ಸ್ಥಾನದಲ್ಲಿ ಅಡಿಷನಲ್ ಸುಪ್ರಿಂಡೆಂಟ್ ಆಫ್ ಪೊಲೀಸ್ (ASP) :- ಇವರಿಗೆ ಯಾವುದೇ ಸ್ಟಾರ್ ಇರಲ್ಲ ಅದರ ಬದಲು ಅಶೋಕ ಸ್ತಂಭ ಮಾತ್ರ ಇರುತ್ತದೆ. ನಂತರದ ಸ್ಥಾನದಲ್ಲಿ SP ಇವರಿಗೆ ಒಂದು ಸ್ಟಾರ್ ಹಾಗೂ ಒಂದು ಅಶೋಕ ಸ್ತಂಭ ಇರತ್ತೆ. ನಂತದರದ ಸ್ಥಾನಲ್ಲಿ ASSP ಇವರಿಗೆ ಎರಡು ಸ್ಟಾರ್ ಹಾಗೂ ಒಂದು ಅಶೋಕ ಸ್ತಂಭವನ್ನು ಕೊಟ್ಟಿರುತ್ತಾರೆ.

ನಂತರ ನಾವು IPS ಆಫೀಸರ್ ಗಳ ರ್ಯಾಂಕ್ ಗಳನ್ನು ನೋಡುವುದಾದರೆ, ಸುಪ್ರಿಂಡೆಂಟ್ ಆಫ್ ಪೊಲೀಸ್ ಇವರಿಗೆ ಒಂದು ಸ್ಟಾರ್ ಕೊಟ್ಟಿರುತ್ತಾರೆ ಹಾಗೂ ಕೆಳಗಡೆ IPS ಎಂದು ಬರೆದಿರುತ್ತೆ. ನಂತರದ ಸ್ಥಾನದಲ್ಲಿ ಅಸ್ಸಿಸ್ಟಂಟ್ ಸುಪ್ರಿಂಡೆಂಟ್ ಆಫ್ ಪೊಲೀಸ್ ಇವರಿಗೂ ಸಹ ಎರಡು ಸ್ಟಾರ್ ಹಾಗೂ ಕೆಳಗಡೆ IPS ಎಂದು ಬರೆದಿರುತ್ತೆ. ನಂತರ ಅಸ್ಸಿಸ್ಟಂಟ್ ಪೊಲೀಸ್ ಕಮಿಷನರ್/ ಡೆಪ್ಯೂಟಿ ಸುಪ್ರಿಂಡೆಂಟ್ ಆಫ್ ಪೊಲೀಸ್ ಇವರಿಗೆ ಸಹ ಮೂರು ಸ್ಟಾರ್ ಹಾಗೂ ಕೆಳಗಡೆ IPS ಎಂದು ಬರೆದಿರುತ್ತೆ. ನಂತರದ ಸ್ಥಾನದಲ್ಲಿ ಅಡಿಷನಲ್ ಡೆಪ್ಯೂಟಿ ಕಮೀಷನರ್ ಇವರಿಗೆ ಇವರಿಗೆ ಯಾವುದೇ ಸ್ಟಾರ್ ಇರಲ್ಲ ಅದರ ಬದಲು ಒಂದು ಅಶೋಕ ಸ್ತಂಭವನ್ನು ಕೊಟ್ಟಿರುತ್ತಾರೆ ಹಾಗೂ ಕೆಳಗಡೆ IPS ಎಂದು ಬರೆದಿರುತ್ತೆ. ನಂತರ ಡೆಪ್ಯೂಟಿ ಕಮಿಷನರ್ ಇವರ ರ್ಯಾಂಕ್ ನೋಡೋದಾದ್ರೆ, ಇವರಿಗೆ ಒಂದು ಅಶೋಕ ಸ್ತಂಭ, ಒಂದು ಸ್ಟಾರ್ ಹಾಗೂ ಕೆಳಗಡೆ IPS ಎಂದು ಬರೆದಿರುತ್ತೆ. ನಂತರದ ಸ್ಥಾನದಲ್ಲಿ DIG ಇವರಿಗೆ ಸಹ ಮೂರು ಸ್ಟಾರ್ ಮತ್ತು ಒಂದು ಅಶೋಕ ಸ್ತಂಭ, ಹಾಗೂ ಕೆಳಗಡೆ IPS ಎಂದು ಬರೆದಿರುತ್ತೆ. ನಂತರದ ಸ್ಥಾನದಲ್ಲಿ ಪೊಲೀಸ್ ಕಮಿಷನರ್ ಸ್ಟೇಟ್ /

DG : ಇವರಿಗೆ ಒಂದು ಅಶೋಕ ಸ್ತಂಭ, ಒಂದು ಕ್ರಾಸ್ ಅಲ್ಲಿ ಇರುವ ತಳವಾರ ಹಾಗೂ ಕೆಳಗಡೆ ಇವರಿಗೂ ಸಹ IPS ಎಂದು ಬರೆದಿರುತ್ತೆ. ನಂತರದ ಸ್ಥಾನದಲ್ಲಿ ಡೈರೆಕ್ಟರ್ ಆಫ್ ಇಂಟೆಲಿಜೆಂಟ್ ಬ್ಯುರೋ ಇವರಿಗೆ ಸಹ ಒಂದು ಅಶೋಕ ಸ್ತಂಭ, ಒಂದು ತಳವಾರ ಹಾಗೂ ಒಂದು ಬಾಟನ್ ಇದನ್ನು ಕೂಡ ಕ್ರಾಸ್ ನಲ್ಲಿ ಹಾಕಿರುತ್ತಾರೆ ಹಾಗೂ ಕೆಳಗಡೆ IPS ಎಂದು ಬರೆದಿರುತ್ತೆ. ಈ ಲೇಖನದ ಮೂಲಕ ಯಾವ ಯಾವ ಪೊಲೀಸ್ ಆಫೀಸರ್ಸ್ ಯಾವ ಯಾವ ಬ್ಯಾಡ್ಜ್ ಗಳನ್ನು ಹಾಗೂ ರ್ಯಾಂಕ್ ಗಳನ್ನು ಹೊಂದಿರುತ್ತಾರೆ ಎಂದು ತಿಳಿಸುವ ಪುಟ್ಟ ಪ್ರಯತ್ನ.

Leave A Reply

Your email address will not be published.