ಅದ್ದೂರಿ, ಭರ್ಜರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡ ಧ್ರುವ ಸರ್ಜಾ ಅವರು ಪೊಗರು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಪೊಗರು ಸಿನಿಮಾದಲ್ಲಿ ಬಹಳಷ್ಟು ಜನರು ಕೆಲಸ ಮಾಡುತ್ತಿದ್ದು ಸಿನಿಮಾ ಬಗ್ಗೆ ಹಾಗೂ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಧ್ರುವ ಸರ್ಜಾ ಅವರು ನಾಯಕನಾಗಿ, ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸಿರುವ ಪೊಗರು ಸಿನಿಮಾವನ್ನು ಮೂರುವರೆ ವರ್ಷದಿಂದ ಶೂಟಿಂಗ್ ಮಾಡಿದ್ದಾರೆ. ನಂದಕಿಶೋರ್ ಅವರ ನಿರ್ದೇಶನದಲ್ಲಿ ಪೊಗರು ಸಿನಿಮಾ ಮೂಡಿಬರುತ್ತಿದೆ. ಗಿರಿಜಾ ಲೊಕೇಶ್, ತಬಲಾ ನಾಣಿ, ಚಿಕ್ಕಣ್ಣ, ರವಿಶಂಕರ ಹೀಗೆ ಮೊದಲಾದ ಹೆಸರಾಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮಾಸ್ ಮೂವಿ ಅಲ್ಲದೇ ಸೆಂಟಿಮೆಂಟ್, ಎಮೋಷನಲ್ ಮೂವಿಯಾಗಿದೆ. ಈ ಸಿನಿಮಾದಲ್ಲಿ ಅಜ್ಜಿ ಮೊಮ್ಮಗನ ಪ್ರೀತಿ, ತಂದೆ ಮಗನ ಪ್ರೀತಿ, ಫೈಟಿಂಗ್ ನೋಡಬಹುದು. ಈ ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿದೆ ಖರಾಬು, ಪೊಗರು ಹಾಡುಗಳನ್ನು ಈ ಸಿನಿಮಾದಲ್ಲಿ ನೋಡಬಹುದು ಅಲ್ಲದೆ ಹಾಡಿಗೆ ತಕ್ಕಂತೆ ಡ್ಯಾನ್ಸ್ ಕೂಡ ನೋಡಬಹುದು. ಮುರಳಿ ಮಾಸ್ಟರ್, ಹರ್ಷ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಈ ಸಿನಿಮಾದ ಡ್ಯಾನ್ಸ್ ಅನ್ನು ಗದ್ದೆ, ಟ್ರಾಕ್ಟರ್ ಮಿಲ್ ಗಳಲ್ಲಿ ಶೂಟಿಂಗ್ ಮಾಡಿದ್ದಾರೆ. ಚಂದನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹರಿಕೃಷ್ಣ ಸರ್ ರಿ ರೆಕಾರ್ಡಿಂಗ್ ಮಾಡಿದ್ದಾರೆ. ವಿಜಯ್ ಮಿಲ್ಟನ್, ಚಂದ್ರು ಸರ್ ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾಕ್ಕಾಗಿ ಹಲವು ಕಲಾವಿದರು ಕೆಲಸ ಮಾಡಿದ್ದಾರೆ. ಪ್ರವೀಣ್ ಅವರು ಆನ್ಲೈನ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಫ್ಯಾಷನ್ ಡಿಸೈನರ್ ಆಗಿ ಪವಿತ್ರ ರೆಡ್ಡಿ ಅವರು ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಇಂಟರ್ನ್ಯಾಷನಲ್ ಬಾಡಿ ಬಿಲ್ಡರ್ಸ್ ಸಹ ವರ್ಕ್ ಮಾಡಿದ್ದಾರೆ.

ಬಹಳಷ್ಟು ಜನರು ಶ್ರಮವಹಿಸಿ ಮತ್ತು ಸಮಯ ತೆಗೆದುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಅಭಿಮಾನಿಗಳು ಈ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕೊರೋನ ಹಾವಳಿಯಿಂದ ಸಿನಿಮಾ ಬಿಡುಗಡೆಗೆ ವಿಳಂಬವಾಗಿತ್ತು ಈಗ ಚಿತ್ರತಂಡದೊಂದಿಗೆ ಮಾತನಾಡಿ ಫೆಬ್ರವರಿ 19, 2021 ರಂದು ಪೊಗರು ಸಿನಿಮಾವನ್ನು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದಾರೆ. ಪೊಗರು ಸಿನಿಮಾ ಒಳ್ಳೆಯ ಕಥೆಯನ್ನು ಹೊಂದಿದ್ದು ಎಲ್ಲರೂ ಥಿಯೇಟರಿಗೆ ಬಂದು ನೋಡುವಂತೆ ಧ್ರುವ ಸರ್ಜಾ ಅವರು ಕೇಳಿಕೊಂಡಿದ್ದಾರೆ. ಈ ಸಿನಿಮಾವನ್ನು ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಧ್ರುವ ಸರ್ಜಾ ಅವರು ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ. ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಈ ಮೂಲಕ ಧ್ರುವ ಸರ್ಜಾ ಅವರು ತಿಳಿಸಿದ್ದಾರೆ. ಧ್ರುವ ಸರ್ಜಾ ಅವರು ನಟಿಸಿದ ಪೊಗರು ಸಿನಿಮಾ ನಿರೀಕ್ಷೆಗಳಿಂದ ಕೂಡಿದ್ದು ಯಶಸ್ಸು ತಂದು ಕೊಡಲಿ ಎಂದು ಆಶಿಸೋಣ.