ಜಮೀನಿನ ಪೋಡಿ ಅಳತೆ ಮತ್ತು ಹದ್ದು ಬಸ್ತಿನ ಅಳತೆಗೆ ವ್ಯತ್ಯಾಸ ಏನು?. ತತ್ಕಾಲ್ ಪೋಡಿ ಮತ್ತು ಹದ್ದು ಬಸ್ತಿನ ಅರ್ಜಿ? ಯಾವ ಕಾಲದಲ್ಲಿ ಯಾವ ಸರ್ವೇ ಮಾಡಿಸಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ
ಮೊದಲಿಗೆ ಪೋಡಿ ಅಳತೆ ಎಂದರೆ ಏನು ಎಂದು ತಿಳಿಯೋಣ :- ಜಮೀನಿನ ಖರೀದಿ ಮಾಡುವವರು ಎಂದರೆ ಒಂದು ಪೂರ ಜಮೀನಿನ ಒಂದು ಭಾಗವನ್ನು ಮಾತ್ರ ಪ್ರತ್ಯೇಕಗೊಳಿಸಿ ಮಾರಾಟ ಮಾಡುವಾಗ, ಅಥವಾ ಜಮೀನನ್ನು ಭಾಗ ಮಾಡುವಾಗ ಮಾಡಿಸಲಾಗುವ ಒಂದು ಅಳತೆಯನ್ನು ಪೋಡಿ ಎಂದು ಕರೆಯುವರು. ಇದನ್ನು ರೆವೆನ್ಯೂ ಸ್ಕೆಚ್ (revenue sketch) ಎಂದು ಸಹ ಕರೆಯಲಾಗುತ್ತದೆ. ದಾನ, ವಿಭಾಗ ಮತ್ತು ಕ್ರಯ (sale deed) ಸಂದರ್ಭವನ್ನು ಜಮೀನಿಗೆ ಅಳತೆ ಮಾಡಿ ನಕ್ಷೆ ತಯಾರಿಕೆ ಮಾಡುವುದು.
ಹದ್ದು ಬಸ್ತು ಅಳತೆ ಎಂದರೆ ಏನು :- ಸ್ವಂತ ಜಮೀನನ್ನು ಅಕ್ಕ ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದು ಅದು, ಜಮೀನಿನ ಮಾಲೀಕರ ಗಮಕ್ಕೆ ಬಂದಾಗ, ಜಮೀನಿಗೆ ರಕ್ಷಣೆ ಮಾಡಲು ಅಳತೆ ಮಾಡುವುದನ್ನು ಹದ್ದು ಬಸ್ತು ಅಳತೆ ಎಂದು ಕರೆಯಲಾಗುತ್ತದೆ. ಜಮೀನಿನ ಗಡಿ ರೇಖೆ ಗುರುತಿಸಿ ಬೌಂಡರಿ ಹಾಕುವುದನ್ನು ಸಹ ಹದ್ದು ಬಸ್ತು ಎಂದು ಕರೆಯಲಾಗುತ್ತದೆ.
ಪೋಡಿ ಮತ್ತು ಹದ್ದು ಬಸ್ತು ಇವುಗಳ ನಡುವೆ ಇರುವ ವ್ಯತ್ಯಾಸವನ್ನು ತಿಳಿಯೋಣ :-
ಪೋಡಿ ಅಳತೆ ಮಾಡುವಾಗ ಅಕ್ಕ-ಪಕ್ಕದ ಜಮೀನಿನ ಮಾಲೀಕರಿಗೆ ನೋಟಿಸ್ ಚೀಟಿ ಕೊಡುವ ಅವಶ್ಯಕತೆ ಇರುವುದಿಲ್ಲ. ಹದ್ದು ಬಸ್ತು ಅರ್ಜಿ ಸಲ್ಲಿಕೆ ಮಾಡಬೇಕು ಎಂದಾಗ ಅಕ್ಕ ಪಕ್ಕದ ಮಾಲೀಕರಿಗೆ ಅಳತೆ ಮಾಡುವ ಮುನ್ನವೇ ಚೀಟಿ ಕೊಡಬೇಕು ಮತ್ತು ಅಳತೆ ಮಾಡುವ ಸಮಯದಲ್ಲಿ ಅವರ ಹಾಜರಾತಿ ಕಡ್ಡಾಯವಾಗಿ ಇರಬೇಕು. ಪೋಡಿ ಅಳತೆ ದೃಢಪಡಿಸಿಕೊಳ್ಳಲು ಹದ್ದುಬಸ್ತು ಅಳತೆಯನ್ನು ಖಚಿತವಾಗಿ ಮತ್ತೊಮ್ಮೆ ಮಾಡಿಸಬೇಕು.
ಹದ್ದುಬಸ್ತು ಅಳತೆಯನ್ನು ಮೂಲ ದಾಖಲೆಗಳ ಸಹಾಯದಿಂದ ಅಳತೆ ಮಾಡಲಾಗುತ್ತದೆ.
ಪೋಡಿ ಅಳತೆಯನ್ನು ಪರವಾನಿಗೆ ಪಡೆದ ಅಥವಾ ಸರ್ಕಾರಿ ಭೂ-ಮಾಪಕರಿಂದ ಅಳತೆ ಮಾಡಿಸಲಾಗುತ್ತದೆ.ಆದರೆ, ಹದ್ದುಬಸ್ತು ಅಳತೆಯನ್ನು ಕೇವಲ ಸರ್ಕಾರಿ ಭೂ-ಮಾಪಕರಿಂದ ಮಾತ್ರ ಮಾಡಿಸಬೇಕು. ಈ ಎರಡು ಅಳತೆಯಲ್ಲಿ ತಕರಾರು ಮಾಡಲು ಮತ್ತು ಮರು ಅಳತೆ ಮಾಡಲು ಅವಕಾಶ ಇದ್ದೇ ಇರುತ್ತದೆ. ದಾನ, ವಿಭಾಗ ಮತ್ತು ಪೂರ್ಣ ಜಮೀನಿನ ಒಂದು ಭಾಗ ಮಾರಾಟ ಮಾಡುವ ಸಂದರ್ಭದಲ್ಲಿ ಪೋಡಿ ಅಳತೆ ಮಾಡುವರು.
ಹದ್ದು ಬಸ್ತು ಅಳತೆ ಮಾಡುವುದು ಎಂದರೆ ಅಕ್ರಮವಾಗಿ ವಶ ಮಾಡಿಕೊಂಡಿರುವ ಜಮೀನನ್ನು ತಿರುಗಿ ಪಡೆದುಕೊಳ್ಳುವುದು ಆಗಿರುತ್ತದೆ. ಒಂದೇ ಪಹಣಿಯಲ್ಲಿ ಇಬ್ಬರು ರೈತರ ಹೆಸರು ಇದ್ದು ಪ್ರತ್ಯೇಕ ಮಾಡಿಕೊಳ್ಳಬೇಕು ಅಂದ್ರೆ ಅದಕ್ಕೆ, ಪೋಡಿ ಅಳತೆ ಮಾಡಬೇಕು. ಹದ್ದು ಬಸ್ತು ಅಳತೆಗೆ ಏಕ ಮಾಲಿಕತ್ವದ ಪಹಣಿ ಇದ್ರೆ ಮಾತ್ರ ಅಳತೆ ಮಾಡಲು ಸಾಧ್ಯ ಇರುವುದು. ಪೋಡಿ ಅಳತೆಗೆ ಅದಕ್ಕೆ, ಒಳಪಡುವ ಯಾರಾದ್ರೂ ತಕರಾರು ಹಾಕಿದರೆ, ಕೆಲವು ಬಾರಿ ಪೋಡಿ ಅಳತೆ ಕಾರ್ಯ ಸ್ಥಗಿತ ಆಗುವ ಸಾದ್ಯತೆ ಇರುತ್ತದೆ.
ಹದ್ದು ಬಸ್ತು ಅಳತೆ ಮಾಡುವ ಸಮಯದಲ್ಲಿ ಯಾರೆ ಅಕ್ಕ ಪಕ್ಕದ ಜಮೀನಿನ ಮಾಲೀಕರು ಅಥವಾ ರೈತರು ತಕರಾರು ಮಾಡಲು ಬರುವುದಿಲ್ಲ ಇದು ಏಕ ಮಾಲೀಕತ್ವದ ಪಹಣಿ ಆಗಿರುವ ಕಾರಣ ಬೇರೆಯವರು ಇದಕ್ಕೆ, ತಲೆ ಹಾಕುವ ಆಗಿಲ್ಲ ಎನ್ನುವ ನಿಯಮಗಳು ಇದೆ. ಆದರೆ, ಒಂದು ರೀತಿಯಲ್ಲಿ ಕಾರ್ಯ ನಿಲ್ಲಿಸಬಹುದು ಅದು ಯಾವುದು ಎಂದರೆ ಅಳತೆ ಮಾಡಬಾರದು ಎಂದು ಕೋರ್ಟಿನಿಂದ ತಡೆಯಾಜ್ಞೆ ತಂದರೆ ಮಾತ್ರ ತಕರಾರಿಗೆ ಅವಕಾಶ ಎನ್ನುವುದು ಇರುತ್ತದೆ.