Ultimate magazine theme for WordPress.

Pisces today Horoscope: ಮೀನ ರಾಶಿಯವರ ಪಾಲಿಗೆ ಗ್ರಹಣ ಮುಗಿದ ನಂತರ ಮೇ ತಿಂಗಳು ಹೇಗಿರತ್ತೆ ಗೊತ್ತಾ

0 21

Pisces today Horoscope Online Prediction: ಮೀನ ರಾಶಿಯು ಗುರುವಿನ ಒಡೆತನದ ಸಾಮಾನ್ಯ ರಾಶಿಯಾಗಿದೆ ಈ ರಾಶಿಯಲ್ಲಿ ಜನಿಸಿದವರು ಹೆಚ್ಚು ಶಿಸ್ತು ಮತ್ತು ವಿಶಾಲ ಮನಸ್ಸಿನವರಾಗಿರುತ್ತಾರೆ. ಹಾಗೆ ಇವರ ಸ್ವಭಾವತಃ ತುಸು ಅಹಂಕಾರವನ್ನು ಸಹ ಹೊಂದಿರುತ್ತಾರೆ. ಮೀನ (Pisces) ರಾಶಿಯಲ್ಲಿ ಜನಿಸಿದವರ 2023ನೇ ಮೇ ತಿಂಗಳ (May Month) ಭವಿಷ್ಯ ಹೇಗಿದೆ? ಅನ್ನೋದನ್ನ ನೋಡೋಣ.

ಮೀನ ರಾಶಿಯಲ್ಲಿ ಜನಿಸಿದವರು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಆಲೋಚಿಸುವ ಅಂತಃಪ್ರಜ್ಞ ಶಕ್ತಿಯನ್ನು ಹೊಂದಿರುತ್ತಾರೆ. ಅಂದರೆ ಸರಿ ತಪ್ಪುಗಳನ್ನು ಗುರುತಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ತುಂಬಾ ಶ್ರದ್ಧೆ ಹೊಂದಿರುತ್ತಾರೆ. ಹಾಗೆ ಆಧ್ಯಾತ್ಮಿಕ ಗುಣಲಕ್ಷಣಗಳನ್ನು ಸಹ ಹೊಂದಿರುತ್ತಾರೆ. ಅಂದರೆ ಈ ರಾಶಿಯವರಿಗೆ ದೇವರ ಮೇಲೆ ಪ್ರೀತಿ, ಭಕ್ತಿ ಕೂಡ ಸ್ವಲ್ಪ ಹೆಚ್ಚೇ ಇರುತ್ತದೆ. ಮೀನ (Pisces) ರಾಶಿಯವರು ಪ್ರಯಾಣ ಪ್ರಿಯರು. ಅಂದರೆ ಇವರು ತಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಮೀನ ರಾಶಿಗೆ ಸೇರಿದವರು ರಾಹು, ಕೇತು ಹಾಗೂ ಶನಿ (Shani) ಗ್ರಹಗಳ ಪ್ರತಿಕೂಲ ಸ್ಥಾನದಿಂದಾಗಿ ವ್ಯಾಪಾರವನ್ನು ಮುಂದುವರಿಸಲು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.

ಮೀನ ರಾಶಿಗೆ ಸೇರಿದವರು ಆರೋಗ್ಯ, (Health) ಹಣ ವೃತ್ತಿ ಹಾಗೂ ಸಂಬಂಧಗಳ ಮೇಲೆ ಹೆಚ್ಚು ಗಮನಹರಿಸಬೇಕಾಗಿರುತ್ತದೆ. ಮೀನ (Pisces) ರಾಶಿಯಲ್ಲಿ ಜನಿಸಿದವರು ಕ್ರಮವಾಗಿ 2ನೇ ಮತ್ತು ಎಂಟನೇ ಮನೆಯಲ್ಲಿ ರಾಹು ಮತ್ತು ಕೇತುಗಳ ಸ್ಥಾನದಿಂದಾಗಿ ಸವಾಲಿನ ಸಮಯವನ್ನು ಎದುರಿಸಬೇಕಾಗುತ್ತದೆ. ಶನಿಯು 12ನೇ ಮನೆಯಲ್ಲಿ ಇರುವುದರಿಂದ ಶನಿಯ ಸ್ಥಾನದಿಂದಾಗಿ ಈ ರಾಶಿಯವರು ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳಿಂದ ಕೆಲವು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ (Business ) ಉದ್ಯೋಗಸ್ಥರು, ಸಹೋದ್ಯೋಗಿಗಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಸಂಸ್ಥೆಯಿಂದ ನಿಮಗೆ ಗೌರವ ಕೂಡ ಸಿಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಕೃಷಿ (Agriculture) ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ ಆದರೆ ವ್ಯಾಪಾರದಲ್ಲಿ ಈ ಸಮಯದಲ್ಲಿ ಸ್ವಲ್ಪ ಆರ್ಥಿಕ ಸ್ಥಿತಿಯಲ್ಲಿ ಏರಿಳಿತಗಳು ಉಂಟಾಗುತ್ತದೆ.

ಪ್ರಮುಖ ಗ್ರಹವಾದ ಬುಧನು ರಾಹು ಜೊತೆ ಸೇರಿರುವುದರಿಂದ ಪರಿಸ್ಥಿತಿಗಳು ಸ್ವಲ್ಪ ನಿಮಗೆ ಅನುಕೂಲಕರವಾಗಿರುವುದಿಲ್ಲ. ಕೇತು ಎಂಟನೇ ಮನೆಯಲ್ಲಿ ಮತ್ತು ರಾಹು 2ನೇ ಮನೆಯಲ್ಲಿದ್ದಾರೆ ಮತ್ತು ಇದು ಉತ್ತಮವಾಗಿ ಕಾರ್ಯನಿರ್ವಹಿಸಲು ಸ್ವಲ್ಪ ಅಡೆತಡೆ ಉಂಟುಮಾಡುತ್ತದೆ. ಅಂದರೆ ಕೆಲಸ ಕಾರ್ಯಗಳನ್ನು ಮಾಡಲು ಬಿಡುವುದಿಲ್ಲ. ಅಮಾವಾಸ್ಯೆಯ ನಂತರ ಹಣದ ಒಳಹರಿವು ನಿಮಗೆ ಹೆಚ್ಚಾಗುತ್ತದೆ. ಒಂದು ವೇಳೆ ನೀವು ಅನಿರೀಕ್ಷಿತ ಖರ್ಚುಗಳನ್ನು ಎದುರಿಸಿದರೆ ಹಿಂಜರಿಕೆ ಅಥವಾ ಹಣಕಾಸಿನ ಚಿಂತನೆಗಳಿಲ್ಲದೆ ಬದುಕಲು ನಿಮ್ಮ ಬಳಿ ಹಣ ಇರುತ್ತದೆ. ಅಂದರೆ ಇದ್ದಕ್ಕಿದ್ದಂತೆ ಆಸ್ಪತ್ರೆಯ ಖರ್ಚು ಅಥವಾ ಮಕ್ಕಳ ಸ್ಕೂಲಿನ ಖರ್ಚು ಹೀಗೆ ಏನಾದರೂ ಖರ್ಚುಗಳು ಬಂದಾಗಲೂ ಸಹ ನಿಮಗೆ ಅಂತಹ ದೊಡ್ಡ ಚಿಂತೆ ಉಂಟಾಗುವುದಿಲ್ಲ.

ನಿಮ್ಮ ಹತ್ತಿರ ಅನಿರೀಕ್ಷಿತ ಖರ್ಚಿನ ನಂತರವೂ ಇನ್ನೂ ಹಣ ಉಳಿದಿರುತ್ತದೆ. ಸಮಸ್ಯೆ ಇಲ್ಲ. ಈ ಹಣವನ್ನು ನೀವು ಬೇಸಿಗೆ ಅಂತ್ಯದವರೆಗೂ ಕೂಡ ಕಾಪಾಡಿಕೊಂಡು ಹೋಗಬೇಕಾಗಿರುತ್ತದೆ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಆದಷ್ಟು ಹುಷಾರಾಗಿರಿ. ಯಾಕೆಂದರೆ ಖರ್ಚು ಮಾಡುವಾಗ ಯೋಚನೆ ಮಾಡಿ ಖರ್ಚು ಮಾಡಿ. ಆದರೂ ಕೂಡ ನೀವು ಮಾಡೋ ಕೆಲಸ ಕೊನೆವರೆಗೂ ನಿಮ್ಮ ಕೈ ಹಿಡಿಯುತ್ತದೆ. ಮೇ ತಿಂಗಳಿನಲ್ಲಿ ಕುಟುಂಬದಲ್ಲಿ ಕಡಿಮೆ ಸಂತೋಷವನ್ನು ಹೊಂದಿರುತ್ತಾರೆ. ಇರೋದೇ ಇಲ್ಲ ಅಂತಲ್ಲ, ಆದರೆ ಸ್ವಲ್ಪ ಇರುತ್ತೆ. ಗ್ರಹಗಳ ಸ್ಥಾನದಿಂದಾಗಿ ಇದು ಸಾಧ್ಯವಾಗುತ್ತದೆ. ಶನಿ ರಾಹು ಕೇತು ಪ್ರತಿಕೂಲವಾಗಿರುವಂತಹ ಸ್ಥಾನದಲ್ಲಿ ಇರುವುದರಿಂದ ಅನಗತ್ಯ ಘರ್ಷಣೆಗಳಿಗೆ ಅವಕಾಶ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ.

ಅಂದರೆ ಸುಮ್ ಸುಮ್ನೆ, ಸಣ್ಣ ಸಣ್ಣ ವಿಚಾರಕ್ಕೆ ಜಗಳ ಆಗುವಂತಹದ್ದು ಆಗಬಹುದು. ಕ್ರಮವಾಗಿ 2ನೇ ಮತ್ತು ಎಂಟನೇ ಮನೆಯಲ್ಲಿ ರಾಹು ಮತ್ತು ಕೇತುಗಳ ಸ್ಥಾನದಿಂದಾಗಿಯೂ ಸಹ ಈ ಸಮಯ ಬಹಳ ಕಠಿಣವಾಗಿರುತ್ತದೆ. ಇದು ನಿಮಗೆ ಸವಾಲಿನ ಸಮಯ ಆಗಿರುತ್ತದೆ. ಶನಿಯು ಮೊದಲನೇ ಮನೆಯಲ್ಲಿದ್ದಾರೆ, ಶುಕ್ರನು ಪ್ರೀತಿಯ ಗ್ರಹವಾಗಿದೆ. ಮತ್ತು ಆರನೇ ಮನೆಯಲ್ಲಿ ಶುಕ್ರ ಮೂರನೇ ಮತ್ತು ಎಂಟನೇ ಮನೆಯಲ್ಲಿ ಅಧಿಪತಿ ಆಗಿರುವುದರಿಂದ ಅನುಕೂಲಕರವಾಗಿ ಇರುವುದಿಲ್ಲ ಹಾಗಾಗಿ ಈ ಕಾರಣದಿಂದಾಗಿ ಪ್ರೇಮಿಗಳ ನಡುವೆ ಕೆಲವು ವಾಗ್ವಾದ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜಗಳ ಮನಸ್ತಾಪಗಳು ಉಂಟಾಗಬಹುದು

ಇನ್ನು ಮದುವೆಯಾಗದಿರುವಂತವರು ಸಹ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಇರುವವರು ಕಡಿಮೆ ಸಾಮರಸ್ಯ ಹೊಂದಿರುತ್ತಾರೆ ಅಂದರೆ 50% ಅಷ್ಟು ಕೂಡ ಸಾಮರಸ್ಯ ಇರುವುದಿಲ್ಲ. ಆ ತರಹದ ವಾತಾವರಣ ಇರುತ್ತದೆ. ಇನ್ನು ಮನೆಯಲ್ಲಿ ಅಶಾಂತಿಯ ವಾತಾವರಣಕ್ಕೆ ನೀವು ಅವಕಾಶವನ್ನು ಕೊಡಬೇಡಿ. ಆದಷ್ಟು ಶಾಂತರಾಗಿರಿ, ತಾಳ್ಮೆಯಿಂದಿರಿ. ಯಾರೊಟ್ಟಿಗೆ ವಾದ ಮಾಡೋಕೆ ಹೋಗ್ಬೇಡಿ. ಈ ಬಾರಿ, ಕುಟುಂಬದ ಜೊತೆ ಉತ್ತಮ ಸಮಯವನ್ನು ನೀವು ಕಳೆಯುತ್ತೀರಿ. ಇದನ್ನು ಹೆಚ್ಚಿಗೆ ಬಳಸಿಕೊಳ್ಳಿ ಈ ಮೀನ ರಾಶಿಯಲ್ಲಿ ಜನಿಸಿದವರು ಉತ್ತಮ ಹಣವನ್ನು ಉಳಿಸುವುದಕ್ಕೆ, ಗಳಿಸುವುದಕ್ಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುಮ್ ಸುಮ್ನೆ ನಿಮಗೆ ಹಣ ಬರುವುದಿಲ್ಲ ಅದಕ್ಕಾಗಿ ನೀವು ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಆಗ ಮಾತ್ರ ನಿಮಗೆ ಹಣ ಒದಗಿ ಬರುತ್ತದೆ.

ಮೀನ ರಾಶಿಯವರು ರೋಗನಿರೋಧಕ ಶಕ್ತಿಯ ಕೊರತೆ ಹಾಗೂ ಮುಖ್ಯವಾಗಿ ಆತ್ಮವಿಶ್ವಾಸದ ಕೊರತೆಯಿಂದಾಗಿ ಆರೋಗ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತೀರಿ. ಈಗಾಗಲೇ ಹೇಳಿದ ಹಾಗೆ ನಿಮಗೆ ಆತ್ಮವಿಶ್ವಾಸದ ಕೊರತೆ ಇದೆ. ಆದ್ದರಿಂದ ಸಮಸ್ಯೆ ಉಂಟಾಗುತ್ತದೆ ಅದರ ಜೊತೆಗೆ ರೋಗನಿರೋಧಕ ಶಕ್ತಿ ಕಡಿಮೆ ಇರೋದ್ರಿಂದ ಈ ಸಂದರ್ಭದಲ್ಲಿ ಬೇಸಿಗೆ ಕೂಡ ಆಗಿರೋದ್ರಿಂದ ನೀವು ಹೆಚ್ಚಿನ ಆಹಾರ ಪದಾರ್ಥಗಳನ್ನು ಅಂದರೆ ರೋಗನಿರೋಧಕವನ್ನು ಹೆಚ್ಚು ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.

ಇನ್ನು ಮೀನ ರಾಶಿಯವರಿಗೆ ಧರ್ಮದಲ್ಲಿ ಅಂದರೆ ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇದು ನಿಮ್ಮ ಆತ್ಮಾವಲೋಕನಕ್ಕೆ ಅವಕಾಶವನ್ನು ಕೂಡ ನೀಡುತ್ತದೆ. ನಿಮ್ಮನ್ನು ನೀವು ಏನು ಅಂತ ತಿಳಿದುಕೊಳ್ಳುವುದಕ್ಕೆ ನಿಮಗೆ ಒಂದು ಹೊಸ ಮಾರ್ಗವನ್ನು ಕೂಡ ಕೊಡುತ್ತದೆ. ಇನ್ನು ಪರಿಹಾರ ಅಂದ್ರೆ ಆಂಜನೇಯನನ್ನು ಪ್ರಾರ್ಥನೆ ಮಾಡುವುದರಿಂದ, ಆರಾಧನೆ ಮಾಡುವುದರಿಂದ ನೀವು ಮುಂದೆ ಬರುವಂತಹ ಕಷ್ಟಗಳಿಂದ ದೂರವಾಗಬಹುದು ಏನೇ ಸಮಸ್ಯೆಗಳು ಅಡೆತಡೆಗಳು ಬರುವುದಿದ್ದರೂ ಅವೆಲ್ಲಾ ನಿವಾರಣೆ ಆಗುತ್ತದೆ.

Leave A Reply

Your email address will not be published.