Pisces Horoscope today: ಇನ್ನೇನು ಈವರ್ಷದ ಯುಗಾದಿ ಹಬ್ಬ ಮುಗಿತು ಮೀನ (Pisces) ರಾಶಿಯರಿಗೆ ದೈವಬಲ ಇರುವುದರಿಂದ ಇವರ ಲೈಫ್ (Life) ಹೇಗೆ ನಡೆಯುತ್ತೆ ಅನ್ನೋದನ್ನ ಇಲ್ಲಿ ವಿವರಿಸಲಾಗಿದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು (Astrology) ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಮೀನ (Pisces) ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹದ ಅನುಗ್ರಹವನ್ನು ಮೀನ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ.
Pisces Horoscope today
ಇಷ್ಟು ದಿನ ನಿಮ್ಮ ಲಾಭ ಸ್ಥಾನದಲ್ಲಿ ಶನಿ (Shani) ಇದ್ದನು. ಜನವರಿಗೆ ಶನಿ ಮೀನ (Pisces) ರಾಶಿಯವರ ಹನ್ನೆರಡನೆ ಮನೆಗೆ ಪ್ರವೇಶ ಮಾಡಿ ಆಗಿದೆ. ಸಾಡೇಸಾತ್ನ ಮೊದಲ ಹಂತದಲ್ಲಿ ಮೀನರಾಶಿಯವರು ಇದ್ದಾರೆ. ನಿಮಗೆ ಸಾಡೇಸಾತ್ ಪ್ರಾರಂಭವಾಗಿದೆ. ಆದರೆ ಮೀನ (Pisces) ರಾಶಿಯವರನು ಗುರು ಗ್ರಹ ಕಾಪಾಡಲಿದೆ. ಎರಡನೇ ಮನೆಗೆ ಹೋಗುವಂತ ಗುರು ನಿಮ್ಮ ಮುಂದೆ ಇರುತ್ತಾನೆ. ನಿಮ್ಮ ಹಿಂದೆ ಶನಿ (Shani)ಇರುತ್ತಾನೆ. ಮುಂದೆ ಗುರು (Guru)ಮೀನ ರಾಶಿಯವರನ್ನು ಕೈ ಹಿಡಿದು ನಡೆಸುತ್ತಾನೆ. ದಾರಿ ಗೊತ್ತಿಲ್ಲದ ಸಂದರ್ಭದಲ್ಲಿ ದಾರಿಯನ್ನು ತೋರಿಸುತ್ತಾನೆ.
ಶನಿ ಸಾಡೇಸಾತ್ (Shani Sadesat) ಶುರುವಾಗಿರುವುದರಿಂದ ನಿಮ್ಮ ಕೆಲಸದಲ್ಲಿ ನಿಧಾನವಾಗುತ್ತದೆ. ಕೊಟ್ಟ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗದೇ, ಕೊಟ್ಟ ಕೆಲಸದಲ್ಲಿ ಆಸಕ್ತಿ ಇಲ್ಲದಂತಾಗುತ್ತದೆ. ತುಂಬಾ ಕೆಲಸದ ಒತ್ತಾಡ ಇರುತ್ತದೆ ಎನ್ನುವಂತ ಸ್ಥಿತಿಗೆ ಮೀನ (Pisces) ರಾಶಿಯವರು ತಲುಪುತ್ತೀರಿ. ಉದ್ಯೋಗ ವಿಚಾರದಲ್ಲಿ ಏನಾದರು ಒಂದು ಭಾದೆ ನಿಮ್ಮನ್ನು ಕಾಡಲಿದೆ. ಈ ವರ್ಷದಲ್ಲಿ ಹಣಕಾಸಿನ ಸಮಸ್ಯೆಗಳು ಆಗುವುದಿಲ್ಲ. ಆದರೆ ಈ ವರ್ಷ ಹಣಕಾಸಿನ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ವರ್ಷ ಸಮಸ್ಯೆಯನ್ನು ಹುಟ್ಟುಹಾಕುತ್ತದೆ.
ಇದನ್ನೂ ಓದಿ..ಮೀನ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ? ಮದುವೆ ಯೋಗ ಯಾವಾಗ..
ಯಾರಿಗಾದರೂ ಹಣ ಕೊಟ್ಟರೆ ಅದು ವಾಪಸ್ಸು ಬರುವುದಿಲ್ಲ. ಕೆಲಸದಲ್ಲೂ ಪರಿಶ್ರಮ ಮಾತ್ರ ಇರುತ್ತದೆ. ಅದಕ್ಕೆ ತಕ್ಕಂತೆ ಲಾಭವಾಗುವುದಿಲ್ಲ. ಆದರೆ ಮೀನ ರಾಶಿಯವರಿಗೆ ಗುರು ಗ್ರಹ ಕೆಲಸದಲ್ಲಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಎಲ್ಲರೂ ಮೀನ ರಾಶಿಗೆ ಸಾಡೇಸಾತ್ ಶುರುವಾಯ್ತು ಎಂದು ಆತಂಕವನ್ನು ಪಡುತ್ತಿದ್ದೀರಾ. ಆದರೆ ಮೀನ (Pisces) ರಾಶಿಗೆ ಧನ ಸ್ಥಾನಕ್ಕೆ ಗುರು ಬಂದಿರುವುದರಿಂದ ತುಂಬಾನೇ ಶುಭದಾಯಕ ಸಂದರ್ಭವಾಗಿದೆ ಗುರು ಎರಡನೇ ಮನೆಯಲ್ಲಿ ಇರುವುದರಿಂದ ಇಷ್ಟು ದಿನ ಯಾರೆಲ್ಲಾ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೋ ಯಾರೆಲ್ಲಾ ಸಾಲದಭಾದೆಯಿಂದ ಬಳಲುತ್ತಿದ್ದಿರೋ ಅಂತವರಿಗೆಲ್ಲ ಗುರು ಒಳ್ಳೆಯದನ್ನೇ ಮಾಡುತ್ತಾನೆ.
ಮೀನ ರಾಶಿಯವರಿಗೆ ಈ ಹಿಂದೆ ಕುಟುಂಬದಲ್ಲಿ ಇದ್ದ ಸಾಕಷ್ಟು ತೊಂದರೆಗಳು, ಮನಸ್ತಾಪಗಳು, ಕಲಹಗಳು, ತಪ್ಪಾಗಿ ತಿಳಿದುಕೊಳ್ಳುವುದು ಈತರಹದ ಸಮಸ್ಯೆಗಳು ಇತ್ತು. ಆದರೆ ಗುರು ಯಾವಾಗ ಮೇಷ ರಾಶಿಗೆ ಹೋಗುತ್ತಾನೋ ಆಗ ಎಲ್ಲಾ ಸಮಸ್ಯೆಗಳನ್ನು ಸರಿ ಮಾಡುತ್ತಾನೆ. ಕುಟುಂಬದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುತ್ತಾನೆ. ಹತ್ತನೆ ಮನೆಯಲ್ಲಿ ಗುರು ದೃಷ್ಟಿ ಇರುವುದರಿಂದ ಕೆಲಸದಲ್ಲಿ ಏನೇ ಸಮಸ್ಯೆ ಬಂದರೂ ಅದನ್ನು ನಿವಾರಣೆ ಮಾಡುವ ಶಕ್ತಿಯನ್ನು ಗುರು ದಯಪಾಲಿಸುತ್ತಾನೆ.
ಇದನ್ನೂ ಓದಿ..ವೃಷಭ ರಾಶಿ ಹಾಗೂ ವೃಶ್ಚಿಕ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ ತಿಳಿದುಕೊಳ್ಳಿ
ಭಗವಂತನನ್ನು ತೋರಿಸುವವನೇ ಗುರು. ಹೀಗಾಗಿ ಗುರು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾನೆ ಮೀನ (Pisces) ರಾಶಿಯವರು ಈ ವರ್ಷ ಊಟ- ತಿಂಡಿ ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಉದ್ಯೋಗ ವಿಚಾರಕ್ಕೆ ಹೆಚ್ಚು ಲಕ್ಷ್ಯ ನೀಡಬೇಕು. ನೀರು ಬದಲಾಗುವುದರಿಂದ, ಟ್ರಾವೆಲ್ (Travel) ಮಾಡುವುದರಿಂದ ಇನ್ಫೆಕ್ಷನ್ ಆಗಬಹುದು. ಹೀಗಾಗಿ ಈ ವರ್ಷ ನಿಮ್ಮ ಆರೋಗ್ಯ ಕಡೆಗೆ ನೀವು ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ