ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಒಬ್ಬ ಉತ್ತಮ ನಟ ತನ್ನ ಅಭಿಮಾನಿಗಳಿಂದ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದರು ಇವರನ್ನು ಕರ್ನಾಟಕದ ಮರೆಯದ ಮಾಣಿಕ್ಯ ಎಂದು ಕರೆಯಬಹುದು. ವ್ಯಾಯಾಮ ಜಿಮ್ ಎನ್ನುತ್ತಾ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿದ್ದ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ ಇಪ್ಪತ್ತೊಂಬತ್ತರಂದು ವಯಸ್ಸಲ್ಲದ ವಯಸ್ಸಿನಲ್ಲಿ ನಮ್ಮನ್ನ ಆಗಲಿರುವುದು ಪ್ರತಿಯೊಬ್ಬರಿಗೂ ತುಂಬಾ ನೋವನ್ನುಂಟು ಮಾಡಿದೆ.

ಇವರ ಸಾವಿನ ಸುದ್ದಿ ಕೇಳಿದ ಪ್ರತಿ ಕನ್ನಡಿಗರ ಮನೆ ಮನಗಳಲ್ಲಿಯೂ ದುಃಖ ಆವರಿಸಿತ್ತು. ಪ್ರತಿಯೊಬ್ಬರಿಗೂ ತಮ್ಮ ಮನೆಯ ಮಗನನ್ನ ಕಳೆದುಕೊಂಡಷ್ಟೇ ದುಃಖ ಎಲ್ಲರನ್ನೂ ಆವರಿಸಿತ್ತು. ಸ್ವಲ್ಪವು ಆರೋಗ್ಯದ ಸಮಸ್ಯೆ ಇರದ ಪುನೀತ್ ಅವರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವುದನ್ನು ಕೇಳಿದ ಪ್ರತಿಯೊಬ್ಬರೂ ಆ ವಿಷಯವನ್ನು ಅರಗಿಸಿಕೊಳ್ಳಲಾರದೆ ತಬ್ಬಿಬ್ಬಾಗಿದ್ದರು.

ಪುನೀತ್ ರಾಜಕುಮಾರ್ ಅವರು ಯಾವಾಗಲೂ ನಗು ನಗುತ್ತಾ ಜೀವನವನ್ನು ಕಳೆದವರು ಯಾವಾಗಲೂ ನಗುನಗುತ್ತಲೇ ತಮ್ಮ ಸುತ್ತಮುತ್ತಲಿನವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಪ್ರತಿಯೊಬ್ಬರನ್ನು ಗೌರವಿಸುತ್ತಿದ್ದರು ತಮ್ಮ ಜೀವಮಾನದಲ್ಲಿ ಯಾರೊಂದಿಗೂ ದ್ವೇಷವನ್ನು ಕಟ್ಟಿಕೊಂಡಿರಲಿಲ್ಲ ಆದರೆ ವಿಧಿ ಅವರ ಜೀವನದಲ್ಲಿ ಬೇರೆ ಬರೆದಿತ್ತು.

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಪ್ರತಿಯೊಬ್ಬರು ಅಪ್ಪುವನ್ನು ಮೆಚ್ಚಿಕೊಂಡಿದ್ದರು ಅವರ ಬಹುಮುಖ ಪ್ರತಿಭೆಗೆ ಅಭಿಮಾನಿಗಳು ಸಾಗರೋಪಾದಿಯಲ್ಲಿದ್ದರು. ಚಿಕ್ಕವಯಸ್ಸಿನಲ್ಲಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಇಡೀ ಕರ್ನಾಟಕದ ಜನರನ್ನು ಅಗಲಿರುವ ಅಪ್ಪು ಅವರನ್ನು ಮರೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅಪ್ಪು ಅವರು ತಾವು ಸಾಯುವ ಮೊದಲು ಪ್ರವೀಣ್ ಎನ್ನುವವರಿಗೆ ಫೋನ್ ಕರೆಯನ್ನು ಮಾಡಿ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸುವುದರ ಜೊತೆಗೆ ಅವರಿಗೆ ಯಾವಾಗಲೂ ಒಳ್ಳೆಯದಾಗಲಿ ಎಂದು ಹೇಳುವುದರ ಜೊತೆಗೆ ತಮ್ಮ ಮನೆಗೂ ಕೂಡ ಆಹ್ವಾನಿಸಿದ್ದರು.

ಅಪ್ಪು ಅವರನ್ನು ಕಳೆದುಕೊಂಡ ಅವರ ಅಭಿಮಾನಿಗಳು ಅವರ ಒಳ್ಳೆಯ ವ್ಯಕ್ತಿತ್ವವನ್ನು ಗುಣವನ್ನ ನೆನಪಿಸಿಕೊಂಡು ಸಂಕಟ ಪಡುತ್ತಿದ್ದಾರೆ ಹೃದಯವಂತನಿಗೆ ಹೃದಯಾಘಾತ ಆಗಿರುವುದನ್ನೂ ನಂಬುವುದಕ್ಕೆ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಜಿಮ್ ನಲ್ಲಿ ವರ್ಕೌಟ್ ಮಾಡುವ ಸಮಯದಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆದರೆ ಅವರಿಗೆ ತೀವ್ರ ಹೃದಯಾಘಾತವಾಗಿರುವ ಕಾರಣ ಅವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.

ಅಪ್ಪು ಅವರು ಇನ್ನಿಲ್ಲ ಎನ್ನುವ ವಿಷಯವನ್ನು ನೆನಪಿಸಿಕೊಳ್ಳುವುದಕ್ಕೆ ಪ್ರತಿಯೊಬ್ಬರಿಗೂ ಕಷ್ಟವಾಗುತ್ತಿತ್ತು. ಒಳ್ಳೆಯ ಗುಣ ವ್ಯಕ್ತಿತ್ವ ನಡತೆಯನ್ನು ಹೊಂದಿದ್ದ ಒಬ್ಬ ಉತ್ತಮ ಬಹುಮುಖ ಪ್ರತಿಭೆಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ದುಃಖ ಸಾಗರದಲ್ಲಿ ಮುಳುಗಿದೆ. ಕರ್ನಾಟಕದ ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಮನೆಯ ಮಗನನ್ನೇ ಕಳೆದುಕೊಂಡಷ್ಟು ವ್ಯಥೆಯನ್ನ ಪಡುತ್ತಿದ್ದಾರೆ. ಒಟ್ಟಾರೆಯಾಗಿ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನ ಅಗಲಿರುವುದು ಇಡೀ ಕರ್ನಾಟಕಕ್ಕೆ ತುಂಬಲಾರದ ನಷ್ಟ ಎಂದು ಹೇಳಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!