ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಸಾಮಾನ್ಯ. ಈಗಿನ ಕಾಲದ ಇತಿ ಮಿತಿ ಇಲ್ಲದ ಊಟ ತಿಂಡಿ ಇವುಗಳಿಂದಾಗಿ ದೇಹದ ಜೀರ್ಣ ವ್ಯವಸ್ಥೆ ಅಸ್ಥ ವ್ಯಸ್ಥ ಆಗಿರುತ್ತದೆ. ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಊಟ ತಿಂಡಿ ಸಮಯದಲ್ಲಿ ಆಗುವ ವ್ಯತ್ಯಯ ಇದರಿಂದ ಅಜೀರ್ಣ ಆಗಿ ಗ್ಯಾಸ್ಟ್ರಿಕ್ ಮಲಬದ್ಧತೆ ಅಂತಹ ಸಮಸ್ಯೆಗಳು ಉಂಟಾಗುತ್ತವೆ. ಈ ಎಲ್ಲಾ ಸಮಸ್ಯೆಗಳಿಗೆ ನಮ್ಮ ಪುರಾತನ ಕಾಲದ ಆಯುರ್ವೇದ ಪದ್ಧತಿಯಲ್ಲಿ ಮನೆಯಲ್ಲಿಯೇ ಸುಲಬವಾಗಿ ಮಾಡಿಕೊಳ್ಳುವಂತಹ ಔಷಧಿಗಳು ಇವೆ. ಅವುಗಳನ್ನ ನಿಮಗೆ ತಿಳಿಸಿಕೊಡುತ್ತೇವೆ.
ಜೇನುತುಪ್ಪವನ್ನು ಪ್ರತಿ ದಿನವೂ ಕನಿಷ್ಟ ಪ್ರಮಾಣದಲ್ಲಿ ಸೇವಿಸುವುದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ. ಪ್ರತಿ ದಿನ ಸೇಬು ಹಣ್ಣನ್ನು ಸಿಪ್ಪೆ ಸಮೇತವಾಗಿ ತಿನ್ನುವುದರಿಂದ ಸಹ ಮಲಬದ್ಧತೆ ನಿವಾರಣೆ ಆಗುತ್ತದೆ. ಸ್ವಲ್ಪ ಉಪ್ಪು ಮತ್ತು ಜೇನು ತುಪ್ಪದ ಜೊತೆ ಹೀಚು ಮಾವಿನ ಕಾಯಿಯನ್ನು ನಂಚಿಕೊಂಡು ತಿನ್ನುವುದರಿಂದ ಸಹ ಮಲಬದ್ಧತೆ ರೋಗ ಕಡಿಮೆ ಆಗುತ್ತದೆ. ಊಟದ ನಂತರ ಮಾವಿನ ಹಣ್ಣನ್ನು ತಿನ್ನುವುದರಿಂದ ಹಾಗೂ ಬಾಳೆ ಹಣ್ಣನ್ನು ಮೊಸರಿನಲ್ಲಿ ಕಿವುಚಿ ತಿನ್ನುವುದರಿಂದ ಸಹ ಮಲಬದ್ಧತೆಯನ್ನು ಹೋಗಲಾಡಿಸಬಹುದು. ಊಟ ಆದ ನಂತರ ಬಾಳೆ ಹಣ್ಣನ್ನು ತಿಂದು ಒಂದು ಲೋಟ ಬಿಸಿ ನೀರನ್ನು ಕುಡಿಯುವುದರಿಂದ ಮಲ ವಿಸರ್ಜನೆ ಆಗುತ್ತದೆ.
ಬಿಳಿ ದ್ರಾಕ್ಷಿಯನ್ನು ದಿನ ಬಿಡದೆ ಎರಡು ಮೂರು ದಿನ ತಿನ್ನುತ್ತಿದ್ದರೆ ಮಲಬದ್ಧತೆ ಕಾಡುವುದಿಲ್ಲ. ಆಲೂಗಡ್ಡೆಯನ್ನು ಕೆಂಡದ ಮೇಲೆ ಇಟ್ಟು ಸುಟ್ಟು ತಿನ್ನುವುದರಿಂದ ಮಲ ಬದ್ಧತೆ ಬೇಗ ನಿವಾರಣೆ ಆಗುತ್ತದೆ. ಪ್ರತಿ ದಿನವೂ ಬಾಳೆ ಹಣ್ಣಿನ ಜೊತೆ ಏಲಕ್ಕಿಯನ್ನು ಸೇರಿಸಿ ತಿಂದರೆ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಇದು ಸಹ ಮಲಬದ್ಧತೆಯನ್ನು ನಿವಾರಿಸುತ್ತದೆ. ಮಕ್ಕಳಿಗೆ ಮಲ ಕಟ್ಟಿದ್ದರೆ, ಒಂದು ಟಿ ಸ್ಪೂನ್ ಅಷ್ಟು ಸೊಂಪು ಕಾಳಿನ ಕಷಾಯವನ್ನು ಹಾಲಿನಲ್ಲಿ ಬೆರೆಸಿ ಕುಡಿಸಿದರೆ ಸುಲಭವಾಗಿ ಮಲ ವಿಸರ್ಜನೆ ಆಗುತ್ತದೆ. ನಿಂಬೆ ಹಣ್ಣಿನ ರಸದ ಜೊತೆ ಸ್ವಲ್ಪ ಹರಳೆಣ್ಣೆಯನ್ನು ಬೆರೆಸಿ ಕುಡಿದರೆ ಮಲ ವಿಸರ್ಜನೆ ಆಗುತ್ತದೆ. ಇವಿಷ್ಟು ಮಲಬದ್ಧತೆಗೆ ಇರುವಂತಹ ಸುಲಭವಾದ ಮನೆ ಮದ್ಧುಗಳು. ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.