Ultimate magazine theme for WordPress.

ಮೂಲವ್ಯಾಧಿಯಿಂದ ಕೂಡಲೇ ಮುಕ್ತಿ ನೀಡುವ ಮನೆಮದ್ದು

0 68

ಮೂಲವ್ಯಾಧಿ ಸಮಸ್ಯೆ ಸುಮಾರು 50% ಜನರಿಗೆ ಸಾಮಾನ್ಯವಾಗಿ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಈಗಿನ ಆಹಾರ ಪದ್ಧತಿ ಮತ್ತು ಜನರ ಜೀವನ ಅಭ್ಯಾಸ. ಮೂಲವ್ಯಾಧಿ ಸಮಸ್ಯೆಗೆ ಹಲವಾರು ಮನೆಮದ್ದು ಇದೆ ಅವುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

1) ಮೂಲಂಗಿ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿ ಅಥವಾ ಒಂದು ಚಮಚ ಮೂಲಂಗಿ ರಸವನ್ನು ಒಂದು ಗ್ಲಾಸ್ ಮಜ್ಜಿಗೆಯೊಂದಿಗೆ ಸೇವಿಸಿ. 2) ಮೂಲಂಗಿ ಸೊಪ್ಪನ್ನು ಕೊಬ್ಬರಿ ಎಣ್ಣೆಯಲ್ಲಿ ಬಾಡಿಸಿ ಊಟದೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಸೇವಿಸಬೇಕು.

3) ದಿನನಿತ್ಯದ ಊಟದಲ್ಲಿ ದಂಟು ಸೊಪ್ಪು, ಬಸಳೆ ಮತ್ತು ಸಬ್ಬಸಿಗೆ ಸೊಪ್ಪನ್ನು ಪಲ್ಯ ಅಥವಾ ಸಾಂಭಾರಿನ ರೂಪದಲ್ಲಿ ಸೇವಿಸಬೇಕು. 4) ಎಳ್ಳನ್ನು ತುಪ್ಪದಲ್ಲಿ ಹುರಿದು ಮಲಗುವ ಮುನ್ನ ಕಾಲು ಚಮಚ ಪುಡಿಯನ್ನು ಅರ್ಧ ಚಮಚ ಬೆಣ್ಣೆಯೊಂದಿಗೆ ಚೆನ್ನಾಗಿ ಬೆರೆಸಿ ತಿನ್ನಬೇಕು ನಂತರ ಬೆಚ್ಚಗಿನ ನೀರನ್ನು ಕುಡಿದು ಮಲಗಬೇಕು. 5) ಒಂದು ಗ್ಲಾಸ್ ಉಗುರು ಬೆಚ್ಚನೆಯ ನೀರಿಗೆ 2-3 ಚಮಚ ತುಪ್ಪ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಬೇಕು.

6) ಮುಟ್ಟಿದರೆ ಮುನಿ ಸೊಪ್ಪನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು ಒಂದು ಚಮಚ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಊಟದ ಮೊದಲು ಸೇವಿಸಬೇಕು.

7) 1-2 ಚಮಚ ಲೋಳೆಸರವನ್ನು ದಿನಕ್ಕೆ 2-3ಬಾರಿ ಸೇವಿಸಬೇಕು. 8) ಒಣ ಖರ್ಜೂರ ಅಂದರೆ ಉತ್ತತ್ತಿ ಇದನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. 9) ಅರ್ಧ ಚಮಚ ತುಳಸಿ ಬೀಜದ ಪುಡಿಗೆ ಒಂದು ಚಮಚ ಬೆಣ್ಣೆ ಹಾಗೂ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.

10) ಒಂದು ಚಮಚ ಕೊತ್ತಂಬರಿ ಕಾಳನ್ನು 2-3ಲೋಟ ನೀರಿನಲ್ಲಿ ಕುದಿಸಿ ಬೆಳಿಗ್ಗೆ ಮತ್ತು ಸಂಜೆ ಕುಡಿಯುತ್ತಾ ಬರಬೇಕು. 11) ಪ್ರತಿದಿನ ರಾತ್ರಿ ಚುಕ್ಕಿ ಬಾಳೆಹಣ್ಣನ್ನು ತಿನ್ನಬೇಕು ಅಥವಾ ಈ ಬಾಳೆಹಣ್ಣಿಗೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ತಿಂದರೆ ಹೆಚ್ಚು ಉಪಯುಕ್ತ. 12) ಒಂದು ಗ್ಲಾಸ್ ತಾಜಾ ಹಾಲಿಗೆ 2-3ಹನಿ ನಿಂಬೆರಸ ಹಾಕಿ ಒಂದು ಬಾರಿ ಕುಡಿಯಬೇಕು.

13) ಬಿಲ್ವಪತ್ರೆಯ ರಸವನ್ನು 2-3ಚಮಚ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಬೇಕು. 14) ಮಾವಿನ ಗೊರಟೆಯನ್ನು ಪುಡಿ ಮಾಡಿ ಈ ಪುಡಿಗೆ ಅರ್ಧ ಚಮಚ ಜೇನುತುಪ್ಪ ಬೆರೆಸಿ ಬೆಳಿಗ್ಗೆ ಸೇವಿಸಬೇಕು. ಮೂಲವ್ಯಾಧಿ ಇರುವವರು ಬಟಾಟೆ, ಗೆಣಸು, ಸಿಹಿಗುಂಬಳ, ಬದನೆ, ಮೊಟ್ಟೆಯ ಹಳದಿ ಭಾಗ, ಮೀನು ತಿನ್ನಬಾರದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.