ಅನಾನಸ್ ಇದು ಹಣ್ಣುಗಳಲ್ಲಿ ಒಂದು. ಪ್ರಪಂಚದಲ್ಲಿ ಬೆಳೆಯುವ ಹಣ್ಣುಗಳಲ್ಲಿ ಇದು ಬಹಳ ಜನಪ್ರಿಯವಾಗಿದೆ. ಇದನ್ನು ನಾವು ಸಂತೆಗಳಲ್ಲಿ ಕಾಣುತ್ತೇವೆ. ಹಳ್ಳಿಗಳಲ್ಲಿ ತೋಟಗಳಲ್ಲಿ ಇದನ್ನು ಬೆಳೆಯುತ್ತಾರೆ. ಹಳ್ಳಿಯ ಕಡೆ ಇದನ್ನು ಪರಂಗಿಹಣ್ಣು ಎಂದು ಕರೆಯುತ್ತಾರೆ. ನಾವು ಇಲ್ಲಿ ಅನಾನಸ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಅನಾನಸ್ ಮೂಲವಾಗಿ ಬ್ರೆಜಿಲ್ ದೇಶದಿಂದ ಬಂದಿದೆ. ಇದನ್ನು ಇಂಗ್ಲೀಷಿನಲ್ಲಿ ಪೈನಾಪಲ್ ಎಂದು ಕರೆಯುತ್ತಾರೆ. ಇದು ಹೆಚ್ಚಾಗಿ ಉಷ್ಣವಲಯಕ್ಕೆ ಹೊಂದಿಕೊಂಡು ಬದುಕುತ್ತದೆ. ಇದು ಶಕ್ತಿವರ್ಧಕ ಆಗಿದೆ. ಹಾಗೆಯೇ ಇದು ಬಾಯಾರಿಕೆಯನ್ನು ನಿಯಂತ್ರಿಸುತ್ತದೆ. ಅನಾನಸ್ ರಸಕ್ಕೆ ಸಕ್ಕರೆಯನ್ನು ಹಾಕಿ ಕುಡಿಯುವುದರಿಂದ ದೇಹಕ್ಕೆ ಬಹಳ ತಂಪಿನ ಅನುಭವ ಆಗುತ್ತದೆ. ಹಣ್ಣನ್ನು ಹೋಳು ಮಾಡಿ ಬೀಸಿ ಅದನ್ನು ಜ್ಯೂಸ್ ಮಾಡಿ ಕುಡಿದರೆ ಹಣ್ಣಿನ ಎಲ್ಲಾ ಸತ್ವಗಳು ದೇಹಕ್ಕೆ ಸೇರುತ್ತವೆ.
ಈ ಹಣ್ಣಿನಿಂದ ಲೇಹ ಮತ್ತು ಜ್ಯಾಮ್ ಗಳನ್ನು ತಯಾರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ಅನಾನಸ್ ಹಣ್ಣಿನ ರಸಾಯನ ಸಾಮಾನ್ಯವಾಗಿದೆ. ಇದರಲ್ಲಿ ಇರುವ ಪೊಟ್ಯಾಶಿಯಂ ಅಂಶ ಮೂತ್ರದೋಷದ ನಿವಾರಣೆ ಮಾಡುತ್ತದೆ. ಆನೆಕಾಲುರೋಗ, ಕಜ್ಜಿ, ಕುಷ್ಠ ಮುಂತಾದ ರೋಗಗಳಿಗೆ ಇದು ರಾಮಬಾಣವಾಗಿದೆ. ಮಕ್ಕಳು ಅನಾನಸ್ ಹಣ್ಣನ್ನು ತಿಂದರೆ ಗಂಟಲುರೋಗ ನಿವಾರಣೆ ಆಗುತ್ತದೆ. ಹಾಗೆಯೇ ಗಂಟಲಿನ ಧ್ವನಿ ಪೆಟ್ಟಿಗೆ ಸ್ವಚ್ಛವಾಗುತ್ತದೆ. ಧೂಮಪಾನದ ತೊಂದರೆಗಳಿಗೆ ಈ ಹಣ್ಣನ್ನು ಉಪಯೋಗಿಸಿದರೆ ಒಳ್ಳೆಯದು.
ಕಾಮಾಲೆ, ಮೂತ್ರಕೋಶದ ತೊಂದರೆಗಳು, ಆಸ್ತಮಾ ಇನ್ನೂ ಹಲವಾರು ರೋಗಗಳಿಗೆ ಇದು ಒಳ್ಳೆಯದು. ವಾಂತಿ, ಶೀತ, ರಕ್ತಹೀನತೆ, ಪಿತ್ತವಾಂತಿ ಉಂಟಾದರೆ ಅನಾನಸ್ ಹಣ್ಣಿನ ರಸಕ್ಕೆ ಒಂದು ಚಿಟಿಕೆ ಕಾಳು ಮೆಣಸಿನಪುಡಿ ಮತ್ತು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ನಿವಾರಣೆ ಆಗುತ್ತದೆ. ಆದ್ದರಿಂದ ಕೊನೆಯದಾಗಿ ಹೇಳುವುದೇನೆಂದರೆ ಅನಾನಸ್ ಹಣ್ಣನ್ನು ತಿಂಗಳಿಗೆ ಒಮ್ಮೆಯಾದರೂ ತಿಂದು ಅದರ ಪ್ರಯೋಜನ ಪಡೆದುಕೊಳ್ಳಿ.