ಸಾಮಾನ್ಯ ಜ್ಞಾನವು ವಿವಿಧ ಮಾಧ್ಯಮಗಳು ಮೂಲಗಳ ಮೂಲಕ ಸಂಗ್ರಹವಾದ ಮಾಹಿತಿಯಾಗಿದೆ ಸಾಮಾನ್ಯ ಜ್ಞಾನ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ನಾವಿಂದು ನಿಮಗೆ ಕೆಲವು ಸಾಮಾನ್ಯ ಜ್ಞಾನ ವಿಷಯದ ಕುರಿತು ಕೆಲವು ವಿಷಯಗಳನ್ನು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿವೆ ಎಂದರೆ ಮಾನವನ ದೇಹದಲ್ಲಿ ಒಟ್ಟು ಎರಡು ನೂರಾ ಆರು ಮೂಳೆಗಳಿವೆ. ಎರಡನೆಯದಾಗಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತದ ಮಹಿಳೆ ಯಾರು ಎಂದರೆ ರೀಟಾ ಫರಿಯಾ ಇವರು ಸಾವಿರದ ಒಂಬೈನೂರಾ ಅರವತ್ತಾರರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮೂರನೆಯದಾಗಿ ಜೈಸಲ್ಮೇರ್ ಅನ್ನು ಭಾರತದ ಗೋಲ್ಡನ್ ಸಿಟಿ ಎಂದು ಕರೆಯಲಾಗುತ್ತದೆ ಇದು ರಾಜಸ್ಥಾನದ ಥಾರ್ ಮರುಭೂಮಿಯ ಮಧ್ಯದಲ್ಲಿದೆ. ನಾಲ್ಕನೆಯದಾಗಿ ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು ಎಂದರೆ ಹಾಕಿ. ಐದನೆಯದಾಗಿ ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ ಎಂದರೆ ಮೇಘಾಲಯದಲ್ಲಿ ಅತಿ ಹೆಚ್ಚು ಮಳೆ ಉಂಟಾಗುತ್ತದೆ. ಮೇಘಾಲಯದ ಮಾಸಿನ್ ರಾಮ್ ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವಂತಹ ಪ್ರದೇಶವಾಗಿದೆ. ಆರನೆಯದಾಗಿ ಭಾರತೀಯ ಸಂವಿಧಾನದಲ್ಲಿ ಒಟ್ಟು ಇಪ್ಪತ್ತೆರಡು ಅಧಿಕೃತ ಭಾಷೆಗಳಿವೆ.

ಏಳನೆಯದಾಗಿ ನಮ್ಮ ದೇಶದಲ್ಲಿ ಲೋಕಸಭೆಯ ಮೊದಲ ಸ್ಪೀಕರ್ ಯಾರು ಎಂದರೆ ಗಣೇಶ್ ವಾಸುದೇವ್ ಮವಲಂಕರ್ ಅವರು. ಎಂಟನೇಯದಾಗಿ ಜಗತ್ತಿನ ಯಾವ ದೇಶದಲ್ಲಿ ಬಿಳಿ ಆನೆಗಳು ಕಂಡುಬರುತ್ತವೆ ಎಂದರೆ ಥೈಲ್ಯಾಂಡ್ ನಲ್ಲಿ ಹೆಚ್ಚು ಬಿಳಿ ಆನೆಗಳು ಕಂಡುಬರುತ್ತವೆ. ಥೈಲ್ಯಾಂಡ್ ನ್ನು ಬಿಳಿ ಆನೆಗಳ ನಗರ ಎಂದು ಕರೆಯಲಾಗುತ್ತದೆ ಅವುಗಳನ್ನು ಅಲ್ಲಿ ಪವಿತ್ರ ಎಂದು ಕರೆಯಲಾಗುತ್ತದೆ ಈ ಆನೆಗಳನ್ನು ರಾಜ ಶಕ್ತಿಯ ಸಂಕೇತವೆಂದು ಪರಿಗಣಿಸಿ ಥೈಲ್ಯಾಂಡ್ ನಲ್ಲಿ ಕಂಡುಬರುವ ಬಿಳಿ ಆನೆಯನ್ನು ರಾಜನಿಗೆ ನೀಡಲಾಗುತ್ತದೆ.

ಎಂಟನೆಯದಾಗಿ ಕೇವಲ ಎರಡು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ದೊರೆಯುವ ದೇಶ ಯಾವುದೆಂದರೆ ಅದು ವೆನಿಜುವೆಲಾ. ಪ್ರಸ್ತುತ ಪ್ರಪಂಚದಲ್ಲಿ ಅತಿ ಕಡಿಮೆ ಬೆಲೆಗೆ ಪೆಟ್ರೋಲ್ ದೊರೆಯುವ ದೇಶ ಯಾವುದೆಂದರೆ ಅದು ವೆನಿಜುವೆಲಾ ಆಗಿದೆ ಎರಡನೇ ಸ್ಥಾನದಲ್ಲಿ ಇರಾನ್ ದೇಶವಿದೆ. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಕೆಲವು ಸಾಮಾನ್ಯ ಜ್ಞಾನದ ವಿಷಯಗಳು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗು ಇತಿಳಿಸಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!